ಓದುಗ ಮಿತ್ರರಿಗೆ ನಮಸ್ಕಾರಗಳು
ಬರೆಯಬೇಕು ಎಂದು ಅನಿಸುತ್ತಿದೆ ಆದರೆ ಪದಗಳು ಸಿಗುತ್ತಿಲ್ಲ, ಹೇಳಬೇಕು ಅನಿಸುತ್ತಿದೆಆದರೆ ಮಾತುಗಳು ಬರುತ್ತಿಲ್ಲ, ಮೂರು ಸಂಚಿಕೆ ಹೊರಬರುವಷ್ಟರಲ್ಲಿ ನೂರಾರು ಕರೆಗಳು ಅಭಿನಂದನೆಯ ಮಹಾಪೂರಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತಲೇ ಸಾಗುತ್ತಿದೆ.
ನಾವು ನಿವೆಲ್ಲ ಬದಲಾವಣೆ ಬಯಸುತ್ತಿದ್ದೇವೆ ಎನ್ನುವುದಕ್ಕೆ ನಿಮ್ಮ ಪ್ರತಿಕ್ರಿಯೇಗಳೇ ಸಾಕ್ಷೀ. ಹಲವಾರು ಮಂದಿ ಪತ್ರದ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದರೆ ಇನ್ನು ನೂರಾರು ಮಂದಿ ಕರೆ ಮಾಡಿ ಯುವಸಿಂಚನವನ್ನು ಅಭಿನಂದಿಸಿದ್ದಾರೆ. ಇದು ಸಂಪಾದಕ ಮಂಡಳಿಯ ಸಾಧನೆಯಲ್ಲ ಬದಲಾಗಿ ಪ್ರತಿಯೊಂದು ಘಟಕದ, ಕೇಂದ್ರ ಸಮಿತಿಯ ಪದಾಧಿಕಾರಿಗಳ ಮತ್ತು ಮಾಜಿ ಅಧ್ಯಕ್ಷರುಗಳ ಸಹಕಾರದ ಫಲ. ನಾವೆಲ್ಲ ಒಂದುಗೂಡಿ ಚಿಂತಿಸಿದ ಫಲ, ಇಂದು ಅಭಿನಂದನೆಯ ಮೂಲಕ ನಮಗೆ ಮರು ಸಂದಾಯವಾಗುತ್ತಿದೆ. ಬರವಣಿಗೆಯಲ್ಲಿ ಪಳಗದ ನನ್ನ ಕೈ ಇಂದು ಹತ್ತಕ್ಷರ ಬರೆಯುವಷ್ಟರ ಮಟ್ಟಿಗೆ ಪಳಗಿದೆ. ಯುವವಾಹಿನಿ ನನ್ನನ್ನು ಈ ಹಂತಕ್ಕೆ ತಂದಕಾರಣದಿಂದ ನನ್ನಲ್ಲೂ ಸುಪ್ತವಾಗಿದ್ದ ಪ್ರತಿಭೆ ಇಂದು ಹೊರ ಬರುವಂತಾಯಿತು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅತಿಥಿಯೊಬ್ಬರು ಹೇಳುತ್ತಿದ್ದರು, ಉಳ್ಳವನನ್ನೂ ಇಲ್ಲದವನನ್ನೂ ಸಮಾನವಾಗಿ ಕಾಣುವ, ತಳಮಟ್ಟದವರಿಗೆ ಮೊದಲ ಆದ್ಯತೆ ನೀಡುವ, ಎಲ್ಲರಿಗೂ ಸಮಾನ ಅವಕಾಶ ನಿಡುವ, ಪ್ರತಿಭೆಗೆ ತಕ್ಕ ಮನ್ನಣೆ ನೀಡುವ ಒಂದು ಸಂಘಟನೆ ಇದ್ದರೆ ಅದು ಯುವವಾಹಿನಿ ಎಂದು. ಹೌದು ಈ ಮಾತು ನೂರಕ್ಕೆ ನೂರರಷ್ಟು ನಿಜ. ಯುವವಾಹಿನಿ ತನ್ನೊಳಗೆ ಮತ್ತು ಯುವಸಿಂಚನದ ಮೂಲಕ ಪ್ರತಿಯೊಬ್ಬರಿಗೂ ಒಂದು ಉತ್ತಮವಾದ ಅವಕಾಶವನ್ನು ನೀಡಿದೆ, ನೀಡುತ್ತಿದೆ. ಯುವವಾಹಿನಿ ಎಂಬ ವರ್ತುಲದೊಳಗೆ ಒಮ್ಮೆ ಬಂದು ಇಲ್ಲಿನ ಸವಿಯನ್ನು ಅನುಭವಿಸಿದರೆ ಮಾತ್ರ ಇದು ಅನುಬವಕ್ಕೆ ಬರಲು ಸಾಧ್ಯ.
ಅಂಗಡಿಯೊಂದರಲ್ಲಿ ದ್ರಾಕ್ಷಿ ಖರೀದಿಸಲು ಹೋದೆ, ದ್ರಾಕ್ಷಿ ಕೆ.ಜಿ ಎಂಭತ್ತು ಎಂದ ಅಂಗಡಿಯಾತ, ಕಡಿಮೆ ಮಾಡಲು ಚರ್ಚೆ ಮಾಡಿದೆ, ಕಡಿಮೆಗೆ ಬೇಕಾದರೆ ಇಲ್ಲಿದೆ ಮೇಡಂ ಎಂದ. ಅಲ್ಲಿ ಗೊಂಚಲಿನಿಂದ ಚದುರಿದ್ದ ದ್ರಾಕ್ಷಿ ಇದ್ದವು. ತಕ್ಷಣ ನಾನು ಕೇಳಿದೆ ಅಲ್ಲಿರುವ ಎರಡೂ
ಬುಟ್ಟಿಯಲ್ಲಿರುವುದು ದ್ರಾಕ್ಷಿಯೇ ಆದರೂ ದರದಲ್ಲೇಕ್ಕೆ ವ್ಯತ್ಯಾಸ ಎಂದು. ಅಂಗಡಿಯಾತ ಹೇಳಿದ ಎಂಭತ್ತು ರೂಪಾಯಿ ದ್ರಾಕ್ಷಿ ಗೊಂಚಲಿನಲ್ಲಿದೆ ಅದಕ್ಕೆ ಬೆಲೆ ಜಾಸ್ತಿ ಇನ್ನೊಂದು ಬುಟ್ಟಿಯಲ್ಲಿರುವುದು ಉದುರಿದೆ ಹಾಗಾಗಿ ದರ ಕಡಿಮೆ ಎಂದು. ಹೌದು ಬಂದುಗಳೇ,
ಯಾವಾಗ ನಾವು ಒಟ್ಟಿಗೆ ಇರುತ್ತೇವೆಯೋ ಅಲ್ಲಿ ಬೆಲೆ ಜಾಸ್ತಿ,ಸಿಹಿಯೂ ಜಾಸ್ತಿ. ಅದೇ ನಾವು ಉದುರಿ ಚದುರಿ ಹೋದರೆ ನಮ್ಮ ಬದುಕಿಗೆ ಬೆಲೆಯೇ ಇರುವುದಿಲ್ಲ. ಯುವಸಿಂಚನ ನೀವೆಲ್ಲ ಒಪ್ಪುವ ಮಾದರಿಯಲ್ಲಿ ನಿಮ್ಮ ಕೈಯಲ್ಲಿದೆಎಂದರೆ ಅದರ ಹಿಂದೆ ನಿಮ್ಮೆಲ್ಲರ ಪರಿಶ್ರಮವಿದೆ, ಸಲಹೆ ಸೂಚನೆಸಹಕಾರ ಇದೆ ಎನ್ನುವುದನ್ನು ಮರೆಯಲಾರೆ. ಎಂದಿನಂತೆ ಈ ಬಾರಿಯೂ ಎಲ್ಲಾ ಘಟಕಗಳು ಸಕಾಲದಲ್ಲಿ ವರದಿಗಳನ್ನು ನೀಡಿದೆ. ಎಲ್ಲಾ ಘಟಕಗಳನ್ನೂ ಈ ಸಂದರ್ಭ ಅಭಿನಂದಿಸುತ್ತೇನೆ. ಅದೇ ರೀತಿ ಲೇಖನ ನೀಡಿ ಸಹಕರಿಸಿದ
ಲೇಖಕರಿಗೂ ವಂದನೆಗಳು.ಜಾಹೀರಾತು ನೀಡಿ ನಮ್ಮ ಆರ್ಥಿಕ ಹೊರೆ ತಗ್ಗಿಸಿದ ಬಂಧುಗಳಿಗೆ ಕೃತಜ್ಞತೆಗಳು. ಎಂದಿನಂತೆ ಈ ಬಾರಿಯ ಸಿಂಚನದ ಬಗ್ಗೆಯೂ ನಿಮ್ಮ ಅಭಿಪ್ರಾಯಗಳಿಗೆ ಕಾಯುತ್ತೇವೆ. ಸರಿ ತಪ್ಪುಗಳನ್ನು ತಿಳಿಸಿ ಮುಂದಿನ ದಿನದಲ್ಲಿ ಬದಲಾವಣೆಯೊಂದಿಗೆ ಮತ್ತೊಂದು ಹೊಸ ಹೆಜ್ಜೆ ಇಡುತ್ತೇವೆ.
– ಸಂಪಾದಕರು
Congratulations madam super