04-11-2012, 6:15 AM
ಕರ್ನಾಟಕ ರಾಜ್ಯ ಭಾರತದ ಒಂದು ಅಂಗ. ಈ ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ’ತುಳುನಾಡೆಂದೇ’ ಪ್ರಖ್ಯಾತಿ. ಅರಬ್ಬೀ ಸಮುದ್ರದ ತಡಿಯಿಂದ ಪಶ್ಚಿಮ ಘಟ್ಟಗಳ ತುದಿಯ ತನಕ ಹಬ್ಬಿಕೊಂಡಿರುವ ಕೃಷಿ ಪ್ರಧಾನವಾದ, ಪ್ರಾಕೃತಿಕ ಚೆಲುವಿನ ಹಸಿರನ್ನು ತುಂಬಿಸಿಕೊಂಡ ಶ್ರೀಮಂತ ಜಿಲ್ಲೆ. ತುಂಬಿ ಹರಿಯುತ್ತಿರುವ ನದಿಗಳು, ಜಗತ್ಪ್ರಸಿದ್ಧ ಪುಣ್ಯ ಕ್ಷೇತ್ರಗಳು, ಇಂತಹ ಸುಂದರ ನಾಡಿನಲ್ಲಿ ಗೇಣಿದಾರನಾಗಿ, ಒಕ್ಕಲಾಗಿ, ಮೂರ್ತೆದಾರನಾಗಿ, ಕಾರ್ಮಿಕನಾಗಿ, ದೈವಗಳ ಪೂಜಾರಿಯಾಗಿ ಬದುಕಿ ಬಾಳಿದ ಬಹು ದೊಡ್ಡ ಜನ ಸಮುದಾಯ ಬಿಲ್ಲವರದ್ದು. ಶೋಷಣೆ, ದಬ್ಬಾಳಿಕೆ, ಜೀತ ಪದ್ಧತಿಯ […]
Read More
04-11-2012, 6:10 AM
ತುಳುನಾಡಿನ ಬಿಲ್ಲವ ಸಮಾಜ ಪ್ರಾಚೀನತೆಯಲ್ಲಿ, ಜನ ಸಂಖ್ಯೆಯಲ್ಲಿ, ಗುತ್ತು ಬರ್ಕೆ, ಭಾವ, ನಟ್ಟಿಲ್‌ಗಳ ಸ್ಥಾನಮಾನದೊಂದಿಗೆ ಆಳರಸರ ದಂಡನಾಯಕರಾಗಿ ಕ್ಷಾತ್ರ ತೇಜದಲ್ಲಿ ಮೆರೆದ ಸಮಾಜವಾಗಿತ್ತು. ಕಾಲಕ್ರಮೇಣ ಅಧೋಗತಿಗಿಳಿದು ಅಸ್ಪೃಶ್ಯತೆ ಶೋಷಣೆಗಳ ಹೊಡೆತದಿಂದ ಜರ್ಜರಿತವಾದ ಈ ಸಮಾಜ 1908 ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ತುಳುನಾಡಿಗೆ ಪಾದಾರ್ಪಣೆ ಮಾಡಿ ಕುದ್ರೋಳಿ ಗೋಕರ್ಣನಾಥನ ಸ್ಥಾಪನೆ ಮಾಡಿದ ಮೇಲೆ ಸಮಾಜ ಅಭಿವೃದ್ಧಿಯ ಕಡೆ ಮುಖ ಮಾಡಿತು. ಅನಕ್ಷರಸ್ಥರಾಗಿ, ಇತರರ ಮೋಸದಿಂದ ಎಲ್ಲವನ್ನು ಕಳಕೊಂಡ ಈ ಸಮಾಜ ಶಿಕ್ಷಣದ ಮಹತ್ವವನ್ನು ತಿಳಿದು ಶಿಕ್ಷಣವನ್ನು ತಮ್ಮ […]
Read More
04-11-2012, 6:05 AM
ಬಿಲ್ಲವರ ಚರಿತ್ರೆಯ ಗುತ್ತು, ಬರ್ಕೆ, ಗುರಿಕಾರ ಮನೆತನಗಳ ಕುರಿತ ಅಧ್ಯಯನವು ಕಳೆದ 2-3 ವರ್ಷಗಳಿಂದ ಮುಂಬಯಿ ’ಗುರುತು’ ಮಾಸಿಕ ಸಂಪಾದಕ, ಸಂಶೋಧಕ ಶ್ರೀ ಬಾಬು ಶಿವ ಪೂಜಾರಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಾ ಬಂದಿದೆ. ಬಿ.ಎಂ.ರೋಹಿಣಿ, ಮುದ್ದು ಮೂಡುಬೆಳ್ಳೆ ಹಾಗೂ ರಮಾನಾಥ್ ಕೋಟೆಕಾರ್‌ರ ತಂಡ ಕ್ಷೇತ್ರಾಧ್ಯಯನ ನಡೆಸುತ್ತಾ ಬಂದಿದೆ. ಅದರಲ್ಲಿ ಒಂದು ಗುತ್ತುಮನೆ ಅಧ್ಯಯನದ ಮಾದರಿ ಇಲ್ಲಿದೆ: ಸಾಂತ್ಯ ಗುತ್ತು ಸಾಂತ್ಯ ಬಂಟ್ವಾಳ ತಾಲೂಕಿನಲ್ಲಿದೆ. ಬಿ.ಸಿ.ರೋಡ್, ಪುತ್ತೂರು ಮಾರ್ಗದಲ್ಲಿ ಮಾಣಿ ಕಳೆದು, ಕರುವೇಲ್‌ಲ್ಲಿ ಶಾಲಾ ಬಳಿ ಉತ್ತರದ ಮಣ್ಣಿನ ರಸ್ತೆಯಲ್ಲಿ ಮುಂದುವರಿದು […]
Read More
04-11-2012, 5:45 AM
ಯುವವಾಹಿನಿ ಸಂಘಟನೆಯು ಅಮೃತವಾಹಿನಿಯಾಗಿ ಹರಿಯುತ್ತಾ ಬಂದು ಇದೀಗ ರಜತ ಮಹೋತ್ಸವಕ್ಕೆ ಕಾಲಿರಿಸಿದ ಈ ಶುಭ ಸಮಯದಲ್ಲಿ ನನ್ನ ಮನದಾಳದ ಮಾತನ್ನು ಅಕ್ಷರ ರೂಪದಲ್ಲಿ ಬರೆಯುವಾಗ ಮನತುಂಬಿ ನಿಲ್ಲುತ್ತದೆ. ಉಕ್ಕೇರುವ ಸಂತಸದಿಂದ ಲೇಖನಿ ಒಂದು ಕ್ಷಣ ನಿಂತು ಮತ್ತೆ ಮುನ್ನಡೆಯುತ್ತಿದೆ. ಅಂದರೆ ಸಂಘಟನೆ ಒಂದು ಸಾಮಾಜಿಕ ಶಕ್ತಿ ಹೌದು. ಆದರೆ ಒಂದು ಸಂಘಟನೆ ಇಪ್ಪತ್ತೈದು ವರ್ಷದ ಯೌವನಕ್ಕೆ ಕಾಲಿರಿಸುವುದೆಂದರೆ ಅದು ಅಷ್ಟು ಸುಲಭದ ಮಾತೇನೂ ಅಲ್ಲ. ಅಷ್ಟೊಂದು ಸಾಮಾಜಿಕ ಚಿಂತನೆಯ ಮನಸ್ಸು, ನಿಷ್ಠೆ, ಒಗ್ಗಟ್ಟು, ಆತ್ಮಬಲ, ಮಾನವೀಯ ಗುಣ […]
Read More
04-11-2012, 5:24 AM
ಆಧುನಿಕತೆಯನ್ನು ನಾವು ಪರಿಭಾವಿಸುವ ಬಗೆಯೇ ಸಂಕೀರ್ಣವಾದುದು. ಆಧುನಿಕತೆ ಎಂದರೇನು ಎಂಬುದನ್ನು ವ್ಯಾಖ್ಯಾನದ ಚೌಕಟ್ಟಿನ ಒಳಗೆ ತರುವ ಪ್ರಯತ್ನ ಚಿಂತಕ ವಲಯದಲ್ಲಿ ಸಾಕಷ್ಟು ನಡೆದಿವೆ. ಸರಳವಾಗಿ ನಾವು ’ಆಧುನಿಕತೆ’ ಎಂಬ ಪರಿಕಲ್ಪನೆಯನ್ನು ಗ್ರಹಿಸುವಾಗ ವರ್ತಮಾನದಲ್ಲಿ ನಡೆಯುತ್ತಿರುವ ಸ್ಥಿತ್ಯಂತರಗಳು, ಪಲ್ಲಟಗಳು ನಮ್ಮ ಅರಿವಿಗೆ ಬರುತ್ತವೆ. ಆದರೆ ವಿಶಾಲವಾದ ಅರ್ಥದಲ್ಲಿ ’ಆಧುನಿಕತೆ’ ಎಂಬುದು ಎಲ್ಲಾ ಕಾಲಕ್ಕೂ ಸಂಬಂಧಿಸಿದ್ದು. ಕಲ್ಲಿನಿಂದ ಬೆಂಕಿಯ ಸೃಷ್ಠಿಯ ಸಾಧ್ಯತೆಯನ್ನು ಗುರುತಿಸಿದ್ದೂ ಒಂದು ಕಾಲದ ಆಧುನಿಕತೆಯಾಗಿದೆ. ಚಕ್ರದ ಸೃಷ್ಟಿಯಂತೂ ಆಧುನಿಕತೆಯ ಮೂಲ ಬೇರು. ಜೈವಿಕ ವಿಕಾಸದ ಜೊತೆಗೆ ಬೌದ್ಧಿಕ […]
Read More
04-11-2012, 5:12 AM
ಕಾನೂನು ಮಾಹಿತಿ ಮಾನವ ಹಕ್ಕುಗಳ ರಕ್ಷಣಾ ಕಾನೂನು – 1993 (Protection of Human Rights Act) 1994 ರಲ್ಲಿ ಜಾರಿಗೆ ಬಂತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ಅನುಷ್ಠಾನಕ್ಕೆ ಬಂದು ಮಾನವ ಹಕ್ಕುಗಳ ರಕ್ಷಣೆ ಹೊಣೆ ಹೊತ್ತು ಕೊಂಡಿತು. ಮಾನವ ಹಕ್ಕುಗಳು (Human Rights) ಒಬ್ಬ ಪ್ರಜೆಗೆ ಸಂವಿಧಾನದಲ್ಲಿ ಕೊಡ ಮಾಡಲ್ಪಟ್ಟ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು ಹಾಗೂ ಘನತೆಯ ಹಕ್ಕು ಇದಕ್ಕೆ ಮಾನವ ಹಕ್ಕು ಎನ್ನುತ್ತಾರೆ. […]
Read More
04-11-2012, 5:09 AM
ಚಿಂತನ ಈ ವಿಶಾಲ ಜಗತ್ತು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹವಾಗುಣ, ಪ್ರಾಕೃತಿಕ ಲಕ್ಷಣ, ಮಣ್ಣಿನ ಗುಣ ಹೊಂದಿದೆ. ಹಾಗೆಯೇ ಈ ಜಗತ್ತಿನ ಸೃಷ್ಟಿಯಲ್ಲಿ ಮಾನವನ ಸೃಷ್ಟಿಯು ಅತ್ಯಂತ ಶ್ರೇಷ್ಟವಾದುದು. ಮಾನವ ಕುಲದ ವಿಕಾಸವಾದಂತೆ ಕಾಲಕ್ರಮೇಣ ನಾಗರಿಕತೆ ಬೆಳೆಯಿತು. ಮಾನವ ಅನ್ಯನ್ಯ ಕಾರಣಗಳಿಗಾಗಿ ತಂಡ ತಂಡವಾಗಿ ಬದುಕಲು ಆರಂಭಿಸಿದ. ವಿಭಿನ್ನ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿರುವ ಜಗತ್ತಿನಲ್ಲಿ ಮಾನವರು ಅವರವರು ಬದುಕುವ ನೆಲ ಜಲದ ಗುಣಗಳಿಗೆ ಅನುಗುಣವಾಗಿ ಬದುಕಬೇಕಾಯಿತು. ಇದರಿಂದ ವಿಭಿನ್ನ ಜೀವನ ರೀತಿ ಬೆಳೆಯಿತು. ಒಂದು […]
Read More
04-11-2012, 4:45 AM
ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ದ.ಕ.ಜಿಲ್ಲೆಯ ಪ್ರಪ್ರಥಮ ಮಹಿಳೆ ಹಾಗೂ ಬಸವ ರತ್ನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಗೊಂಡ ಪ್ರಮೀಳಾ ಮೂಲತಃ ಬಂಟ್ವಾಳ ತಾಲೂಕು, ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲ್ ಕಾಪಿಕಾಡ್ ಕೃಷ್ಣಪ್ಪ ಪೂಜಾರಿ ಹಾಗೂ ದೇವಕಿ ಕೃಷ್ಣಪ್ಪ ಪೂಜಾರಿಯವರ ಸುಪುತ್ರಿ . ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆಗೆ ಒಪ್ಪುವ ವ್ಯಕ್ತಿತ್ವದ ಅಗಾಧ ಸಾಹಿತ್ಯ ಪ್ರತಿಭೆಯ ಪ್ರಮೀಳಾ ಎಳವೆಯಲ್ಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿದವರು. ಯುವ ಸಾಹಿತಿಯಾಗಿ ಬಿಡುಗಡೆಗೊಂಡ ಇವರ ಚೊಚ್ಚಲ ಕೃತಿ ’ಸುಪ್ತ’ […]
Read More
04-11-2012, 4:37 AM
ತುಳುನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಕೋಟಿ- ಚೆನ್ನಯರ ಹೆಸರು ಅಮರವಾದುದು. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಹೋರಾಡಿದ ಅವರು ಇಂದು ಪೂಜ್ಯನೀಯರಾಗಿದ್ದಾರೆ. ಅವರ ನೆನಪನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಸುವ ಯತ್ನವಾಗಿ ಕೋಟಿ-ಚೆನ್ನಯ ಥೀಂ ಪಾರ್ಕನ್ನು ನಿರ್ಮಿಸಲಾಗಿದೆ. ಕೋಟಿ- ಚೆನ್ನಯರ ಸಂಕ್ಷಿಪ್ತ ಬದುಕು ಮತ್ತು ಸಾಧನೆಗಳನ್ನು ಹೀಗೆ ಸಂಗ್ರಹಿಸಬಹುದು. ಸುಮಾರು 450 ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಪವಿತ್ರವಾದ ದೇಯಿಬೈದೆತಿಯ ಗರ್ಭದಲ್ಲಿ ಜನ್ಮ ತಳೆದ ಕೋಟಿ- ಚೆನ್ನಯರು ಎಳೆಯ ಪ್ರಾಯದಲ್ಲೇ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತಾವು ಕೂಡಾ ಬಲಿಷ್ಠರಾಗಬೇಕು ಎನ್ನುವಂತಹ […]
Read More
04-11-2012, 4:32 AM
ಪೀಠಿಕೆ: ನಾಗರೀಕತೆ ಬೆಳೆಯುವಲ್ಲಿ ಭೌಗೋಳಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಅಂಶಗಳ ಪಾತ್ರ ಗಮನೀಯ. ಅದರಲ್ಲೂ ರಾಜಕೀಯ ಅಂಶ ಅತೀ ಪ್ರಧಾನವಾದುದು. ಏಕೆಂದರೆ ಉಳಿದೆಲ್ಲವುಗಳು ಭದ್ರವಾದ ರಾಜಕೀಯ ರಕ್ಷಣೆಯ ತಳಹದಿಯ ಮೇಲೆಯೇ ಬೆಳೆಯತಕ್ಕಂತವುಗಳು. ಆದುದರಿಂದಲೇ ಪ್ರಾದೇಶಿಕ ಮಟ್ಟದಿಂದ ರಾಜ್ಯ ಸಾಮ್ರಾಜ್ಯದ ಮಟ್ಟದವರೆಗೆ ರಕ್ಷಣಾ ಕಲೆಗೆ ಮನುಷ್ಯ ವಿಶೇಷ ಆದ್ಯತೆ ನೀಡುತ್ತಾ ಬಂದಿರುವುದು. ಮನುಷ್ಯನನ್ನು ಶೂನ್ಯದಿಂದ ಅಸಾಮಾನ್ಯಗೊಳಿಸುವ ಸಾಧನಗಳೇ ಕಲೆಗಳು ಎನ್ನಬಹುದು. ರಕ್ಷಣಾ ಕಲೆ ಇವುಗಳಲ್ಲೊಂದು. ರಾಜ್ಯ ರಾಷ್ಟ್ರದ ಕಲ್ಪನೆಗಳಿಲ್ಲದ ಆ ದಿನಗಳಲ್ಲಿಯೇ ಮಾನವ ತನ್ನ ಜನರ ಮಾನ- […]
Read More