Yuvavahini

NOV 04, 2012 6.23 AM IST

ವಿಶುಕುಮಾರ್ - ರಜತ ರಶ್ಮಿ -2012

ಬಿಲ್ಲವರ ಎರಡು ಮುಖ

ಸ್ಥಿತಿ-ಗತಿ – ವಿಶುಕುಮಾರ್
(1979 ರಲ್ಲಿ ಬೆಳ್ತಂಗಡಿ ಬಿಲ್ಲವ ಸಂಘವು ಹೊರತಂದ  ’ಕೋಟಿ- ಚೆನ್ನಯ’ ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ  ಖ್ಯಾತ ಸಾಹಿತಿ ದಿ| ವಿಶುಕುಮಾರ್ ಅವರ ಇಂದಿಗೂ ಪ್ರಸ್ತುತವೆನಿಸುವ ಒಂದು ಲೇಖನ…)

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಜನಾಂಗಕ್ಕೆ ಬಿಲ್ಲವ, ಪೂಜಾರಿ, ಬೈದ, ಹಳೇಪೈಕ ಇತ್ಯಾದಿ ಹೆಸರುಗಳು. ಉತ್ತರ ಕನ್ನಡದಲ್ಲಿ ನಾಮಧಾರಿಗಳು. ಶಿವಮೊಗ್ಗ, ಸಾಗರ ಕಡೆ ದೀವರು. ಹಳೇ ಮೈಸೂರು ಕಡೆ ಈಡಿಗರು. ಗುಲ್ಬರ್ಗ, ಬೀದರ್ ಕಡೆ ಈಳಿಗರು, ಕೇರಳದಲ್ಲಿ ತೀಯಾ, ತಮಿಳ್‌ನಾಡಿನಲ್ಲಿ ನಾಡಾರ್ ಹೀಗೆ ಬೇರೆ ಬೇರೆ ಹೆಸರುಗಳಿಂದ ಇದೊಂದು ಜನಾಂಗ ಕುಲಕಸುಬಿನ ಆಧಾರದ ಮೇಲೆ ದಕ್ಷಿಣ ಭಾರತದಲ್ಲಿ ಒಟ್ಟಾಗಲು ಪ್ರಯತ್ನಿಸುತ್ತಿದೆ.

ಒಗ್ಗಟ್ಟಿನಿಂದ ಶ್ರೇಯಸ್ಸಿದೆ. ಅನಾದಿ ಕಾಲದಿಂದಲೂ ಮುಂದುವರಿದ ವರ್ಗಗಳವರು ಒಂದೇ ಶಕ್ತಿಯಾಗಿ ಈ ದೇಶವನ್ನು ಆಳುತ್ತಾ ಕಬಳಿಸುತ್ತಾ ಬಂದಿದ್ದಾರೆ. ಈಗ ರಾಜಕೀಯ ಬೆಳವಣಿಗೆಯಿಂದಾಗಿ ದಲಿತರು ಒಗ್ಗಟ್ಟಿನ ರುಚಿಯನ್ನು ಕಂಡಿದ್ದಾರೆ ಹಾಗೂ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಒಗ್ಗಟ್ಟಿನಲ್ಲೇ ಹೋರಾಡುತ್ತಾರೆ. ಯಾವ ಒಗ್ಗಟ್ಟೂ ಇಲ್ಲದೆ ಚೆಲ್ಲಾಪಿಲ್ಲಿಯಾಗಿರುವವರು ಹಿಂದುಳಿದ ವರ್ಗಗಳವರು ಮಾತ್ರ. ಈ ಹಿಂದುಳಿದ ವರ್ಗಗಳಲ್ಲಿ ಬಿಲ್ಲವ ಯಾ ಈಡಿಗ ಜನಾಂಗವೂ ಒಂದು. ಬಿಲ್ಲವರು ಒಟ್ಟಾಗುವುದಿಲ್ಲ ಏಕೆ ಎಂಬ ಪ್ರಶ್ನೆಗೆ ಇಲ್ಲಿನ ಎರಡು ಮುಖಗಳ ಮುಖಾಂತರ ಸಮಾಧಾನ ಗಳಿಸಲು ಪ್ರಯತ್ನಿಸುತ್ತಿದ್ದೇನೆ.

ಮುಖ ಒಂದು
ನಮಗೆ ಯಾವ ಚರಿತ್ರೆಯ ದಾಖಲೆಗಳೂ ಇಲ್ಲ. ಆದರೆ ನಮ್ಮ ಚರಿತ್ರೆಯನ್ನು ನಾವು ಊಹಿಸಬಲ್ಲೆವು. ಈ ಜನ ಅಂದರೆ ನಾವು ಮೂಲತಃ ಇದೇ ಜಿಲ್ಲೆಯವರು. ಬ್ರಾಹ್ಮಣರು, ಕ್ಷತ್ರಿಯರು ಇವರನ್ನು ಆಳುತ್ತಿದ್ದ ಕಾಲದಲ್ಲಿ ಈ ಜನಾಂಗದ ಕಸುಬು ಸಾಗುವಳಿ ಮಾಡುವುದು, ಕಳ್ಳು ತೆಗೆಯುವುದು ಮತ್ತು ಆಳುವವರ ಪ್ರಾಣ ಉಳಿಸಲು ರಣರಂಗದಲ್ಲಿ ಹೋರಾಡುವುದು. ಇದರಲ್ಲಿ ಕಳ್ಳು ತೆಗೆಯುವ ಕಸುಬು ಒಂದನ್ನು ಬಿಟ್ಟರೆ ಉಳಿದ ಕಸುಬುಗಳಿಗಾಗಿ ನಾವು ಹೆಮ್ಮೆ ಪಡಬೇಕು. ಇಷ್ಟೇ ಅಲ್ಲ, ಅನಾದಿ ಕಾಲದಿಂದಲೂ ಆಯುರ್ವೇದ ವೈದ್ಯಕೀಯ ವೃತ್ತಿಯಲ್ಲಿ ಬಿಲ್ಲವರದ್ದು ಅವಿಭಾಜ್ಯ ಅಂಗ. ಆದ್ದರಿಂದ ಇವರಿಗೆ ಬೈದ್ಯರು ಎಂಬ ಹೆಸರು. ಭೂತಸ್ಥಾನಗಳಲ್ಲಿ ಪ್ರಧಾನ ಅರ್ಚಕರಾದ್ದರಿಂದ ಇವರು ಪೂಜಾರಿಗಳು, ಬಿಲ್ಲು ವಿದ್ಯೆಯಲ್ಲಿ ನಿಪುಣರಾದ್ದರಿಂದ ಬಿಲ್ಲವರು.

ಬಿಲ್ಲವರು ಒಟ್ಟಾಗುತ್ತಿದ್ದುದು ಯುದ್ಧರಂಗದಲ್ಲಿ ಮಾತ್ರ. ಇದೊಂದು ಸಂದರ್ಭ ಬಿಟ್ಟರೆ ಬೇರೆ ಅವಕಾಶ ಕೋಳಿ ಅಂಕ ಅಥವಾ ಭೂತದ ಕೋಲ ನಡೆದಾಗ ಇವರು ಒಟ್ಟಾಗುತ್ತಿದ್ದರು. ಇವರಿಗೆ ರಾಜಕೀಯ ಪ್ರಜ್ಞೆ ಇಲ್ಲದ್ದರಿಂದ ಇವರು ಧನಿಗಳ ನೌಕರಿ ಮಾಡುವ ಶೂದ್ರರಾಗಿ ಉಳಿದರೇ ಹೊರತು ಬೌದ್ಧಿಕ ಬೆಳವಣಿಗೆ ಎಂದೂ ಉಂಟಾಗಲಿಲ್ಲ.

ಈ ಜನ ಬಹು ಪ್ರಾಮಾಣಿಕರು, ಒಡೆಯನ ಮಾತಿಗೆ ಎಂದೂ ತಪ್ಪುವವರಲ್ಲ. ಕೃತಘ್ನತೆ ಎಂದರೆ ಏನೆಂದೇ ಗೊತ್ತಿಲ್ಲದ ಮುಗ್ಧರು. ಇವರು ಎಷ್ಟು ಮುಗ್ಧರು ಎಂದರೆ ಕಾಮರಾಜ ನಾಡಾರರ ಕಾಲದಲ್ಲಿ ಈ ಜಿಲ್ಲೆಗೆ ರಾಜಕೀಯ ಅಧಿಕಾರದ ಪ್ರಸಾದ ಬಂದಾಗ ಅಧಿಕಾರ ಲಾಲಸೆ ಇಲ್ಲದೆ ತಮಗೆ ಬಂದ ಅವಕಾಶವನ್ನು ಬಂಟ ಜನಾಂಗಕ್ಕೆ ಮತ್ತು ಗೌಡ ಸಾರಸ್ವತರಿಗೆ ಬಿಟ್ಟು ಕೊಟ್ಟ ಮುಗ್ಧ ಬಿಲ್ಲವರು (ಅಥವಾ ಮೂಢ ಬಿಲ್ಲವರು, ಮೂರ್ಖ ಬಿಲ್ಲವರು). ಕಾಮರಾಜ ನಾಡರರು ಪ್ರಸಾದ ಕೊಟ್ಟಾಗ ಅಂದು ಅದನ್ನು ಸ್ವೀಕರಿಸಿದ್ದರೆ ಇಂದು ಕನ್ನಡ ಜಿಲ್ಲೆಯ ರಾಜಕೀಯ ಸ್ವಾಮ್ಯ ಬಿಲ್ಲವರ ಕೈಯಲ್ಲಿರುತ್ತಿತ್ತು.

ಮುಖ ಎರಡು
ಬಿರುವೆ ಕೆರುವೆ ಇದು ಮಾಮೂಲಿ ಉಕ್ತಿ ತುಳು ಭಾಷೆಯಲ್ಲಿ. ಅಂದರೆ ಬಿಲ್ಲವ ಕೊಲ್ಲುವ. ಬಿಲ್ಲವರೆಂದರೆ ಉಳಿದವರ ದೃಷ್ಟಿಯಲ್ಲಿ ಕೊಲೆಗಾರರು. ಅಲ್ಲ ಎಂದು ಹೇಳಲು ನಮಗೂ ಧೈರ್ಯವಿಲ್ಲ. ಪತ್ರಿಕೆಗಳಲ್ಲಿ ಏನಾದರೂ ಕೊಲೆ ಸುದ್ದಿ ಬಂದರೆ ಅದು ಯಾರಾದರೊಬ್ಬ ಪೂಜಾರಿ ಕೊಲೆ ಮಾಡಿದ್ದು ಎಂದು ಕಣ್ಮುಚ್ಚಿ ಹೇಳಬಹುದು. ಬಿಲ್ಲವರು ಕಳವು ಮೋಸ ಮಾಡುವುದಿಲ್ಲ. ಸುಳ್ಳು ಹೇಳುವುದಿಲ್ಲ. ಈ ಎರಡು ಕೆಲಸಗಳನ್ನು ಬೇರೆ ಜಾತಿಗಳವರು ಮಾಡುತ್ತಾರೆ. ಆದ್ದರಿಂದ ಇವರು ಬರೀ ಕೊಲೆ ಕೆಲಸ ಮಾಡುತ್ತಾರೆ.

ಇಲ್ಲಿ ಸಾಮಾಜಿಕ ಮೋಸವಿದೆ. ಯಾವುದೇ ಕೇಸಿನಲ್ಲಿ ಬಿಲ್ಲವ ಕೊಲೆ ಮಾಡಿದರೂ ಅದರಲ್ಲಿ ಕೈವಾಡ ಬೇರೆಯವರದ್ದು ಇರುತ್ತದೆ. ಬಿಲ್ಲವ ಹಿಂದಿನಿಂದಲೂ ಪ್ರಾಮಾಣಿಕ ಮತ್ತು ಹೆಚ್ಚಿನ ಧೀರನಲ್ಲವೇ? ಅದಕ್ಕೆ ನಮ್ಮ ದಕ್ಷಿಣ ಕನ್ನಡದ ಪ್ರತಿಯೊಬ್ಬ ಧನಿಯೂ, ಶ್ರೀಮಂತನೂ ಹೊಡೆದಾಟಕ್ಕೆ ಉಪಯೋಗಿಸಿಕೊಳ್ಳುವುದು ಬಿಲ್ಲವರನ್ನೇ! ಧನಿ ಹೇಳಿದ ಅಂತ ಇವನೇನೋ ಹೊಡೆದು ಕೊಲ್ಲುತ್ತಾನೆ. ಅನಂತರ ಕೋರ್ಟಿನಲ್ಲಿ ಧನಿ ತಪ್ಪಿಸಿಕೊಳ್ಳುತ್ತಾನೆ. ಇವ ಜೇಲಿಗೆ ಹೋಗುತ್ತಾನೆ.

ಹಿಂದೆ ರಣರಂಗದಲ್ಲಿ ಹೋರಾಡುತ್ತಿದ್ದ ಈ ಬಿಲ್ಲವರಿಗೆ ಈಗ ಹೋರಾಡುವುದಕ್ಕೆ ಒಳ್ಳೇ ಯುದ್ಧಗಳೇ ಸಿಗುವುದಿಲ್ಲವಾದ್ದರಿಂದ ಇವರೆಲ್ಲಾ Excise Contractor ಗಳಾಗಿ ಪರಸ್ಪರ ಹೋರಾಡುತ್ತಿದ್ದಾರೆ. ಜಾತಿಗೆ ಜಾತಿ ಹಗೆ! ಈ ಜನಾಂಗದ ಕೆಲವು ಪ್ರಮುಖ ಅಬಕಾರಿ ಕಂಟ್ರಾಕ್ಟರುಗಳ ಅಹಂ ಮತ್ತು ಪರಸ್ಪರ ವೈಮನಸ್ಯದಿಂದಾಗಿ ಇಡೀ ಜಾತಿ ಚೆಲ್ಲಾಪಿಲ್ಲಿಯಾಗಿ ಹೋಗಿದೆ. ಇವರ ಜಗಳದ ಉಪಯೋಗವನ್ನು ಮೂರನೇ ವ್ಯಕ್ತಿಗಳು ಚೆನ್ನಾಗಿ ಮಾಡಿಕೊಳ್ಳುತ್ತಾರೆ. ಬಿಲ್ಲವರ ಜಗಳದಿಂದಾಗಿ ಈಗ ಬ್ರಾಹ್ಮಣರು, ಕೊಂಕಣಿಗರು, ಬಂಟರು ಎಲ್ಲರೂ ಗಡಂಗು ನಡೆಸುವ ಹಾಗಾಯ್ತು.

ಸುಮಾರು ಎಂಟು ಲಕ್ಷ ಜನ ಬಿಲ್ಲವರು ದ.ಕ. ಜಿಲ್ಲೆಯಲ್ಲಿದ್ದಾರೆ ಎಂದು ನಾವು ಹೇಳುತ್ತೇವೆ. ಇಷ್ಟು ಜನಸಂಖ್ಯೆ ಇದ್ದು ನಮಗೇನು ಪ್ರಯೋಜನವಾಯಿತು? ಪ್ರಯೋಜನ ಆದದ್ದು ಬೇರೆ ಜನಾಂಗಕ್ಕೆ. ಓಟು ಹಾಕಿದ್ದು ಬಿಲ್ಲವರು. ಶಾಸಕರೂ, ಮಂತ್ರಿಗಳೂ, ಎಂ.ಪಿ., ಆದದ್ದು ಬೇರೆಯವರು. ನೀವು ಎಂಟು ಲಕ್ಷ ಜನ ಇರುವುದು ಹೌದಾದರೆ ಈ ಜಿಲ್ಲೆಯಲ್ಲಿ ನಿಮ್ಮ ಜನಾಂಗದ ಮೂರು ನಾಲ್ಕು ಶಾಸಕರಾಗಲೀ, ಒಬ್ಬ ಮಂತ್ರಿಯಾಗಲೀ ಆಗಬೇಕಿತ್ತಲ್ಲ? ಈಗ ಯಾರಿದ್ದಾರೆ? ಎಷ್ಟಿದ್ದಾರೆ? ಎಂಟು ಲಕ್ಷ ಜನಕ್ಕೆ ಒಬ್ಬ ಶಾಸಕ, ಒಬ್ಬ ಎಂ.ಪಿ. ಇದ್ದಾರೆ ಸಾಕೇನು?

ಸಂಖ್ಯಾಬಲ ದನಗಳಿಗೂ ಇರುತ್ತದೆ. ಕುರಿಗಳಿಗೂ ಇರುತ್ತದೆ. ನಮ್ಮಲ್ಲಿ ಎಂಟು ಲಕ್ಷ ಸಂಖ್ಯಾ ಬಲ ಇದ್ದು ಯಾರಿಗೇನು ಪ್ರಯೋಜನ?

ಉಪಸಂಹಾರ

ಒಟ್ಟಿನಲ್ಲಿ ನನ್ನ ಉದ್ದೇಶ ಇಷ್ಟು: ಜಾತೀಯ ನಿರ್ಮೂಲನಕ್ಕಾಗಿ ಭಾಷಣ ಬಿಗಿದವರೆಲ್ಲಾ ತಮ್ಮ ಜಾತಿಗಳನ್ನು ಭದ್ರ ಮಾಡಿಕೊಂಡು ನಮಗೆ ಮಾತ್ರ ಉಪದೇಶ ನೀಡಿದ್ದಾರೆ ನೀವೆಲ್ಲಾ ಅಂದರೆ ಹಿಂದುಳಿದ ವರ್ಗಗಳೆಲ್ಲಾ ಒಟ್ಟಾಗಿ, ಒಗ್ಗಟ್ಟಾಗಿ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳದೆ ಇದ್ದರೆ ಮುಂದುವರಿದ ಜನಾಂಗಗಳವರು ನಿಮ್ಮನ್ನು ಗಡಂಗು ನಡೆಸುವುದಕ್ಕೆ, ಡೋಲು ಬಾರಿಸುವುದಕ್ಕೆ, ಮೀನು ಹಿಡಿಯುದಕ್ಕೆ ಮತ್ತು ಗ್ಲಾಸು ತೊಳೆಯುವುದಕ್ಕೆ ಮಾತ್ರ ಉಪಯೋಗಿಸಿಕೊಳ್ಳುತ್ತಾರೆ. ಆದ್ದರಿಂದ ಪರಸ್ಪರ ವೈಮನಸ್ಸು ತೊರೆದು, ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟು, ರಾಜಕೀಯ ಪ್ರಜ್ಞೆ ಬೆಳೆಸಿ.

One thought on “ಬಿಲ್ಲವರ ಎರಡು ಮುಖ

  1. Billlawara dhurantha kathe oggattilladha baallve.koti chennayere oggatt g shakti korle….

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!