30-01-2022, 2:46 PM
ನಮಗೆಲ್ಲರಿಗೂ ತಿಳಿದಿರುವಂತೆ ವಿಶುಕುಮಾರ್ ಓರ್ವ ಧೀಮಂತ ವ್ಯಕ್ತಿ. ಆಡು ಮುಟ್ಟದ ಸೊಪ್ಪಿಲ್ಲ. ವಿಶುಕುಮಾರ್ ಕೈಯಾಡಿಸದ ಕ್ಷೇತ್ರವಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಈ ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸಿ ಛಾಪನ್ನು ಒತ್ತಿದವರು. ಕೋಟಿ ಚೆನ್ನಯ, ಕರಾವಳಿ ಯಂತಹ ಅದ್ಭುತ ಸಿನೆಮಾ ನಿರ್ಮಾಣ ಮಾಡಿದವರು. ಒಂದರ್ಥದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟವರು. ಅವರ ನಾಟಕ ಡೊಂಕು ಬಾಲದ ನಾಯಕರು ಭ್ರಷ್ಟರಿಗೆ ನುಂಗಲಾರದ ತುತ್ತಾಗಿ ಮೈಪರಚಿಕೊಂಡದ್ದು ಇಂದು ಇತಿಹಾಸ. ನನ್ನ ಅಭಿಪ್ರಾಯದಂತೆ ನಮ್ಮ ಸಮಾಜದಲ್ಲಿ ಕತೆ, ಕವನ, ಕಾದಂಬರಿಗಳು ಮಾತ್ರ ಸಾಹಿತ್ಯದ ಪ್ರಕಾರಗಳು ಎನ್ನುವ ತಪ್ಪು […]
Read More
30-01-2022, 2:00 PM
ಮಂಗಳೂರು : ದಿನಾಂಕ 30.01.2022 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯ 34ನೇ ವಾರ್ಷಿಕ ಸಮಾವೇಶದಲ್ಲಿ 2021ನೇ ಸಾಲಿನ ಯುವವಾಹಿನಿ ಮುಖವಾಣಿ ಯುವಸಿಂಚನ ವಿಷೇಶಾಂಕವನ್ನು ಹೈಕೋರ್ಟ್‌ನ ಪದಮಿತ್ತ ಹಿರಿಯ ವಕೀಲರಾದ ಐ. ತಾರನಾಥ ಪೂಜಾರಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಎಚ್ ಎಸ್ […]
Read More
11-08-2019, 3:56 PM
ಪುತ್ತೂರು : ದಿನಾಂಕ 11.08.2019 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ವಿಶಾಲ ಗದ್ದೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ ಸಂಸ್ಥೆಯ 32ನೇ ವಾರ್ಷಿಕ ಸಮಾವೇಶದಲ್ಲಿ 2019 ನೇ ಸಾಲಿನ ಯುವವಾಹಿನಿ ಮುಖವಾಣಿ ಯುವಸಿಂಚನ ವಿಶೇಷಾಂಕವನ್ನು ಐಪಿಎಸ್ ಅಧಿಕಾರಿ `ಕರ್ನಾಟಕದ ಸಿಂಗಂ’ ಖ್ಯಾತಿಯ ಅಣ್ಣಾಮಲೈ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ ಕೃಷ್ಣಮೂರ್ತಿ, ಸಾಗರೋತ್ತರ ಉದ್ಯಮಿ ಮಸ್ಕತ್‍ನಲ್ಲಿನ ಡಾ|ಸಿ.ಕೆ ಅಂಚನ್, ತುಳುರಂಗದ ಚಿತ್ರನಟಿ ನವ್ಯಾ ಪೂಜಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ […]
Read More
16-06-2019, 9:24 AM
ಮೂಡುಬಿದಿರೆ : ವಿದ್ಯಾರ್ಥಿಗಳು ಸಾಹಿತ್ಯದ ಅಬಿರುಚಿ ಬೆಳೆಸಿಕೊಳ್ಳಬೇಕು, ಕಥೆ, ಕವನ, ಲೇಖನಗಳನ್ನು ಓದುವ ಹವ್ಯಾಸ ನಮ್ಮನ್ನು ಪ್ರಬುದ್ದರನ್ನಾಗಿಸುತ್ತದೆ ಎಂದು ಮುಲ್ಕಿ-ಮೂಡಬಿದಿರೆಯ ಜನಪ್ರಿಯ ಶಾಸಕರಾದ “ಉಮನಾಥ್ ಎ. ಕೋಟ್ಯಾನ್ ತಿಳಿಸಿದರು ಅವರು ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ಆಶ್ರಯದಲ್ಲಿ ದಿನಾಂಕ 16-06-2019ನೇ ಆದಿತ್ಯವಾರದಂದು ಮೂಡುಬಿದಿರೆ ಬ್ರಹ್ಮಶ್ರೀ ನಾರಾಯಣಗುರು ಸಂಘದಲ್ಲಿ ನಡೆದ “ಯುವಸ್ಪಂದನ” ಸೇವಾ ಯೋಜನೆಯ ಉದ್ಘಾಟನೆ ಹಾಗೂ ವಿದ್ಯಾರ್ಥಿ ವೇತನ” ದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ […]
Read More
15-06-2019, 2:19 PM
ಚಿಂತಕರೊಬ್ಬರ ಆಶಯವಿದೆ, ಸಾಧ್ಯವಾದಷ್ಟು ಓಡು, ಓಡಲು ಸಾದ್ಯವಾಗದೇ ಹೋದರೆ ನಡಿ, ನಡೆಯಲು ಆಗದೇ ಇದ್ದರೆ ತೆವಳಿಕೊಂಡಾದರೂ ಸಾಗು, ಆದರೆ ನಿಲ್ಲಬೇಡ ಎಲ್ಲೂ, ಹೌದು ಹರಿಯುವ ನದಿಯಾಗಲಿ, ಬೆಳೆಯುವ ಸಿರಿಯಾಗಲಿ ನಡೆಯುವ ಮನುಜನೇ ಆಗಲಿ ಎಲ್ಲಿ ತನ್ನ ನಡಿಗೆಯನ್ನು ನಿಲ್ಲಿಸುತ್ತವೆಯೋ ಅಲ್ಲಿ ಜಡತ್ವ ಅಡರಿಕೊಳ್ಳುತ್ತದೆ. ಎಲ್ಲಿಯವರೆಗೆ ನದಿಗೆ ಕ್ರಿಯಾಶೀಲ ಹರಿವು ಇರುತ್ತದೋ, ಎಲ್ಲಿ ಬೆಳೆಯುವ ಸಿರಿಯಲ್ಲಿ ಸೂರ್ಯ ರಶ್ಮಿಯತ್ತ ಮುಖ ಮಾಡುವ ಚಿಂತನೆ ಇರುತ್ತದೋ, ಎಲ್ಲಿಯವರೆಗೆ ಮನುಜನಲ್ಲಿ ದುಡಿಯುವ ಸಕ್ರೀಯವಾಗುವ ಹಂಬಲವಿರುತ್ತದೋ ಅಲ್ಲಿಯ ತನಕ ಆತ ತನ್ನ ಬೆಲೆಯನ್ನು […]
Read More
15-06-2019, 2:09 PM
ಅಕ್ಷಯದ ಮನೆಯಿಂದ ಅಕ್ಷರದವರೆಗೆ, ಪುತ್ತೂರಿನಿಂದ ಹತ್ತೂರವರೆಗೆ, ನನ್ನವರು ಎನ್ನುವುದರಿಂದ ನಮ್ಮವರು ಎನ್ನುವವರೆಗೆ ಒಂದು ಅದ್ಭುತ ಯುವ ಪ್ರಪಂಚದಲ್ಲಿ 365 ದಿನಗಳ ನಡಿಗೆ ಆರಂಭಿಸಿದ್ದೆ. ಇನ್ನು 60 ದಿನ ಮಾತ್ರ ಅಷ್ಟರಲ್ಲಿ ನನ್ನ ನಡಿಗೆ ಗುರಿ ಸೇರಬೇಕಿದೆ. ಸಾಕಷ್ಟು ಅನುಭವದೊಂದಿಗೆ, ಸಾಕಷ್ಟು ಮಂದಿಯ ಸ್ನೇಹವನ್ನು ಗಳಿಸಿಕೊಂಡು ಯುವವಾಹಿನಿಯಲ್ಲಿ 10 ತಿಂಗಳ ಪಯಣ ಮುಗಿಸಿದೆ. ಯುವವಾಹಿನಿ ನನ್ನನ್ನು ಎತ್ತರಕ್ಕೆ ಏರಿಸಿದೆ, ಹರಿತಗೊಳಿಸಿದೆ, ಸಾವಿರಾರು ಜನರ ಪ್ರೀತಿ ನೀಡಿದೆ, ಮರೆಯಲಸಾಧ್ಯವಾದ ಒಂದು ಹೊಸ ಅನುಭವವನ್ನು ನೀಡಿದೆ. ಯುವವಾಹಿನಿ ಎಲ್ಲರಿಗೂ ಸಮಾನವಾದ ಅವಕಾಶ […]
Read More
17-02-2019, 3:49 PM
ಮಂಗಳೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ ಫೆಬ್ರವರಿ ತಿಂಗಳ ಸಂಚಿಕೆಯನ್ನು ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ, ವಕೀಲರಾದ ವಿಜಯಲಕ್ಷ್ಮಿ ವಿಶುಕುಮಾರ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಂ ಪೂಜಾರಿ, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್, […]
Read More
15-02-2019, 2:49 PM
ಸಾದ್ವಿಯೊಬ್ಬರ ಮಾತು ನೆನಪಾಗುತ್ತಿದೆ, ಎಲೆಯೊಂದು ಉದುರುತ್ತಾ ಹೇಳಿತು ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಅರಿತು ನಡೆಯುವುದೇ ಜೀವನ’ ಹೌದು, ಒಂದು ಮರಕ್ಕೆ ಮಣ್ಣಿನಿಂದ ಪೋಷಕಾಂಶಗಳು ಯಾವತ್ತಿನವರೆಗೆ ದೊರೆಯುತ್ತದೊ ಅಲ್ಲಿಯವರೆಗೆ ಮರ ಸುದೃಡವಾಗಿ ಬೆಳೆಯುತ್ತದೆ, ನಮ್ಮ ಸಮಾಜದ ನೊಂದ ಮನಕ್ಕೆ ಸಾಂತ್ವಾನದ ನೆರಳ ನೀಡಲು ಬಿತ್ತಿದ ಬೀಜ ಗಿಡವಾಗಿ, ಮರವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದೆಷ್ಟೋ ವರುಷದಿಂದ ಎಲ್ಲರೂ ಜೊತೆಯಾಗಿ ಧಾರೆ ಎರದ ನೀರಿನಿಂದ ನಳನಳಿಸುತ್ತಿದೆ. ನಮಗಿರುವುದು ಒಂದೇ ಬಳಲಿದವರಿಗೆ ನೆರಳು, ಹಸಿದವರಿಗೆ ಹಣ್ಣು, ಸಮಾಜದ ಯುವಕರು […]
Read More
15-02-2019, 2:39 PM
ಒಮ್ಮೆ ಸೂರ್ಯ ಕೇಳಿದನಂತೆ ನಾನು ಮಾಡುವ ಕೆಲಸ ಯಾರು ಮಾಡ ಬಲ್ಲಿರಿ’ ಎಂದು, ಆಗ ಭೂಮಿಯೂ ಸೇರಿ ಎಲ್ಲವೂ ಸ್ತಬ್ದವಾಗಿತ್ತು ಚಿತ್ರಪಟದಂತೆ. ಅಷ್ಟರಲ್ಲಿ ಭೂಮಿಯಲ್ಲಿದ್ದ ಪುಟ್ಟ ಹಣತೆಯೊಂದು ಹೇಳಿತು. ಸೂರ್ಯ ನೀನು ಮಾಡುವ ಕೆಲಸ ನಾನು ಮಾಡಬಲ್ಲೆನು ಎಂದು. ಹೌದು ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಇದೆ, ಯುಗಯುಗಗಳು ಸೇರಿ ಮಹಾಯುಗವಾಗುವಂತೆ ಶಕ್ತಿಗಳ ಕ್ರೋಡೀಕರಣ ಅಶ್ವಶಕ್ತಿಯ ಹುಟ್ಟಿಗೆ ಕಾರಣವಾಗುತ್ತದೆ. ಇಂದು ಯುವವಾಹಿನಿಯಲ್ಲೂ ಇದೇ ನಡೆದು ಹೋಗಿದೆ. ಸೂರ್ಯನೇ ನಾಚುವಂತಹ ಸೇವಾ ದೀವಿಗೆಯನ್ನು ನಮ್ಮ ಘಟಕಗಳು ಹಚ್ಚಿದೆ. ಯಡ್ತಾಡಿಯಿಂದ ಬೆಂಗಳೂರಿನವರೆಗೆ […]
Read More
15-11-2018, 2:10 PM
1987ರಲ್ಲಿ ಜನ್ಮತಾಳಿದ ಬಿಲ್ಲವ ಸಮಾಜದ ಯುವಶಕ್ತಿಯ ಸಂಚಯವಾದ ಯುವವಾಹಿನಿ ಇಂದು 31ರ ಹರೆಯದಲ್ಲಿ ರಾಜ್ಯಾದ್ಯಂತ 32 ಘಟಕಗಳನ್ನು ಸ್ಥಾಪಿಸುವ ಮೂಲಕ ಬಿಲ್ಲವ ಸಮಾಜದ ಭರವಸೆಯಾಗಿ ಬೆಳೆಯುತ್ತಿರುವುದು ಸಮಾಜದ ಬಂಧುಗಳೆಲ್ಲರೂ ಸಂತೋಷ ಮತ್ತು ಅಭಿಮಾನ ಪಡುವಂತಾಗಿದೆ. ನಮ್ಮ ಸಮಾಜದಲ್ಲಿ 1908ರ ವರೆಗೆ ಸಂಘಟನೆಯೆಂಬುದು ಇರಲಿಲ್ಲ. ಊರಲ್ಲಿ ಪರಂಪರಾಗತವಾಗಿ ಬಂದ ಗುರಿಕಾರರೇ ಆಯಾಯ ಊರು, ಗ್ರಾಮಗಳಲ್ಲಿನ ಸಮಾಜದಲ್ಲಿನ ಸಮಸ್ಯೆಗಳನ್ನು ಅಧಿಕಾರಯುತವಾಗಿ ಪರಿಹರಿಸುತ್ತಿದ್ದರು. ಇಂತಹ ಗುರಿಕಾರರ ಗುತ್ತು ಬರ್ಕೆ ಮನೆಗಳು ಸಾಮಾಜಿಕ ಮತ್ತು ಧಾರ್ಮಿಕ ವ್ಯಾಜ್ಯಗಳಿಗೆ ನ್ಯಾಯದಾನವನ್ನು ಮಾಡುತ್ತಿದ್ದರು. ಆಚಾರ, ವಿಚಾರ, […]
Read More