ಮೂಡುಬಿದಿರೆ : ವಿದ್ಯಾರ್ಥಿಗಳು ಸಾಹಿತ್ಯದ ಅಬಿರುಚಿ ಬೆಳೆಸಿಕೊಳ್ಳಬೇಕು, ಕಥೆ, ಕವನ, ಲೇಖನಗಳನ್ನು ಓದುವ ಹವ್ಯಾಸ ನಮ್ಮನ್ನು ಪ್ರಬುದ್ದರನ್ನಾಗಿಸುತ್ತದೆ ಎಂದು ಮುಲ್ಕಿ-ಮೂಡಬಿದಿರೆಯ ಜನಪ್ರಿಯ ಶಾಸಕರಾದ “ಉಮನಾಥ್ ಎ. ಕೋಟ್ಯಾನ್ ತಿಳಿಸಿದರು
ಅವರು ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ಆಶ್ರಯದಲ್ಲಿ ದಿನಾಂಕ 16-06-2019ನೇ ಆದಿತ್ಯವಾರದಂದು ಮೂಡುಬಿದಿರೆ ಬ್ರಹ್ಮಶ್ರೀ ನಾರಾಯಣಗುರು ಸಂಘದಲ್ಲಿ ನಡೆದ “ಯುವಸ್ಪಂದನ” ಸೇವಾ ಯೋಜನೆಯ ಉದ್ಘಾಟನೆ ಹಾಗೂ ವಿದ್ಯಾರ್ಥಿ ವೇತನ” ದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಯುವವಾಹಿನಿ ಮುಖವಾಣಿ ಯುವಸಿಂಚನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್, ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ನ ಗೌರವ ವಿಶ್ವಸ್ಥರು ಚಂದ್ರಶೇಖರ್ ಎಸ್.ಎಡಪದವು , ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಬ್ರಹ್ಮಶ್ರೀ ಗುರುನಾರಯಣ ಸೇವಾ ಸಂಘ ರಿ. ಮೂಡುಬಿದಿರೆ ಇದರ ಮಾಜಿ ಅಧ್ಯಕ್ಷರಾದ ಪೂವಪ್ಪ ಕುಂದರ್. ಸುವಿಧ್ ಬಜಾಜ್ ಮೂಡುಬಿದಿರೆ ಇದರ ಮಾಲಕರು ಸನ್ಮತ್ ಸುವರ್ಣ, ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ ರಿ. ಮೂಡುಬಿದಿರೆ ಇದರ ಅಧ್ಯಕ್ಷರಾದ ರವೀಂದ್ರ ಎಂ.ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಮೂಡುಬಿದಿರೆ ಘಟಕದ ಸಲಹೆಗಾರರಾದ ಟಿ.ಶಂಕರ್ ಸುವರ್ಣ, ನಾರಾಯಣ ಸಾ ಮಿಲ್ ಮೂಡಬಿದಿರೆ ಮಾಲಕರಾದ ಭಾನುಮತಿ ಶೀನಪ್ಪ, ಪುರಸಭೆ ಸದಸ್ಯರುಗಳಾದ ಸುರೇಶ್ ಕೋಟ್ಯಾನ್, ನಾಗರಾಜ್ ಪೂಜಾರಿ, ರಾಜೇಶ್ ನಾಯ್ಕ್ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ , ಸದಸ್ಯರಾದ ಸುದೀಪ್ ಬುನ್ನಣ್, ಶಂಕರ್ ಕೋಟ್ಯಾನ್ ಕಾರ್ಯದರ್ಶಿ ನವಾನಂದ ಮತ್ತಿತರರು ಉಪಸ್ಥಿತರಿದ್ದರು