ಬಂಟ್ವಾಳ: ಬಂಟ್ವಾಳದ ಬೆಂಜನಪದವು ಶುಭಲಕ್ಷೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ ನಾರ್ದನ್ ಸ್ಕೈ ಪ್ರಾಪಟೀಸ್ ನಿರ್ದೇಶಕಿ ಕೃತಿನ್ ಅಮೀನ್ ಇವರು ಯುವಸಿಂಚನ ವಾರ್ಷಿಕ ವಿಶೇಷಾಂಕದ ಅನಾವರಣ ಮಾಡಿದರು.
ಸಮಾವೇಶದ ಜನಸ್ತೋಮದ ನಡುವಣ ಬಂಟ್ವಾಳ ಅತಿಥ್ಯ ಘಟಕದ ಸಹಯೋಗದ ಸದಸ್ಯರ ಭವ್ಯ ಸ್ವಾಗತದೊಂದಿಗೆ ವಾದ್ಯ ಕೊಂಬುಗಳ ಅಬ್ಬರದ ನಿನಾದಗಳು, ಜ್ಯೋತಿ ರೂಪಕವಾಗಿ ಬೆಳಗುತ್ತಿದ್ದ ಜೋಡಿ ದೀಪಗಳು, ಪೂರ್ಣ ಕಳಸ ಹಾಗೇ ವಿವಿಧ ಹೂಗಳಿಂದ ತುಂಬಿದ್ದ ಬೃಹತ್ ಹರಿವಾಣದೊಳಗೆ ಸಜ್ಜಾಗಿದ್ದ ವರ್ಣಮಯ ಯುವಸಿಂಚನ ಹೊತ್ತಗೆಯನ್ನು ಸಮವಸ್ತ್ರಧಾರಿ ನಾರಿಮಣಿಗಳ ದಿಬ್ಬಣದೊಂದಿಗೆ ಬೃಹತ್ ವೇದಿಕೆಯಲ್ಲಿ ಅನಾವರಣವು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿ, ನವ ಇತಿಹಾಸಕ್ಕೆ ಮುನ್ನುಡಿ ಬರೆದಂತಿತ್ತು.
ಯುವಸಿಂಚನ ಕಾರ್ಯ ನಿರ್ವಾಹಕ ಸಂಪಾದಕ ಜಗದೀಶ್ಚಂದ್ರ ಡಿ.ಕೆ, ಯುವಸಿಂಚನ ಸಂಪಾದಕ ದಿನಕರ್ ಡಿ. ಬಂಗೇರ, ಯುವಸಿಂಚನ ಕಾರ್ಯದರ್ಶಿ ರೋಹಿತ್ ಬಂಗೇರ, ಯುವಸಿಂಚನ ಸಂಪಾದಕ ಮಂಡಳಿ ಸದಸ್ಯೆ ಅರ್ಚನಾ ಎಂ. ಬಂಗೇರ, ಸಮಾವೇಶ ಉದ್ಘಾಟಕರಾದ ಪದ್ಮರಾಜ್ ಆರ್, ಕೇಂದ್ರ ಸಮಿತಿ ಅಧ್ಯಕ್ಷರಾದ ರಾಜೇಶ್ ಬಿ, ಪ್ರದಾನ ಭಾಷಣಕಾರರಾದ ಡಾ. ತುಕಾರಾಮ ಪೂಜಾರಿ, ಮುಖ್ಯ ಅತಿಥಿಗಳಾದ ನಿರ್ಮಲ್ ಜಗನ್ನಾಥ ಬಂಗೇರ, ನಟೇಶ್ ಪೂಜಾರಿ, ಲೋಕೇಶ್ ಪೂಜಾರಿ ಕಲ್ಲಡ್ಕ, ವಾರ್ಷಿಕ ಸಮಾವೇಶದ ಸಂಚಾಲಕರು ಹರೀಶ್ ಕೋಟ್ಯಾನ್ ಕುದನೆ, ವಾರ್ಷಿಕ ಸಮಾವೇಶದ ನಿರ್ದೇಶಕರಾದ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲ ಹಾಗೂ 33 ಘಟಕದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.