Yuvavahini

ಸಿಂಚನ

ಯುವಸಿಂಚನ ಪತ್ರಿಕೆ ಬಿಡುಗಡೆ

ಯುವವಾಹಿನಿಯ ಮುಖವಾಣಿ ಯುವಸಿಂಚನ‌ ಪತ್ರಿಕೆಯ ಫೆಬ್ರವರಿ ತಿಂಗಳ ಆವೃತ್ತಿಯನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಟಪಾಡಿ ಶಂಕರ ಪೂಜಾರಿ ಬಿಡುಗಡೆಗೊಳಿಸಿದರು, ಈ ಸಂದರ್ಭದಲ್ಲಿ ಕಾಪು ಕ್ಷೇತ್ರದ ಶಾಸಕರಾದ ವಿನಯ ಕುಮಾರ್ , ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಹಾಗೂ ಯುವಸಿಂಚನ ಪತ್ರಿಕೆಯ ಗೌರವ ಸಂಪಾದಕರಾದ ಯಶವಂತ ಪೂಜಾರಿ, ಯುವಸಿಂಚನ ಪತ್ರಿಕೆಯ ಸಂಪಾದಕರಾದ ಶುಭ ರಾಜೇಂದ್ರ, ಸಂಪತ್ ಬಿ.ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ , ಯುವವಾಹಿನಿ ಕಾಪು ಘಟಕದ ಅಧ್ಯಕ್ಷರಾದ ದೀಪಕ್ ಕುಮಾರ್ […]

Read More

ಕಲ್ಪನಾ- ವಿಶುಕುಮಾರ್ ಜಗಳ

ಸುಮಾರು 450 ವರ್ಷಗಳ ಹಿಂದೆ ನಡೆದ ಐತಿಹಾಸಿಕ ‘ ಕೋಟಿ- ಚೆನ್ನಯ‘ ಅವಳಿ ವೀರ ಪುರುಷರ ಸ್ವಾಭಿಮಾನದ ಬದುಕಿನ ನೈಜ ಕಥೆ- ವಿಶುಕುಮಾರ್ ಅವರಿಗೆ ಆ ವೀರ ಪುರುಷರು ತುಂಬಾ ಪ್ರಭಾವ ಬೀರಿದ್ದರು. ಅವರ ವ್ಯಕ್ತಿತ್ವ, ನಡೆ-ನುಡಿ ,ಅವರು ಅನ್ಯಾಯದ ವಿರುದ್ಧ ಹೋರಾಡುವುದು ಇತ್ಯಾದಿ. ಇದನ್ನು ವಿಶುಕುಮಾರ್ ಅವರು ತಮ್ಮ ಜೀವನುದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು. ಆ ವೀರಪುರುಷರನ್ನು ‘ ಮಾದರಿ’ಯಾಗಿಟ್ಟುಕೊಂಡರು.ಆ ಕಥೆ ಹಿಡಿಸಿದ್ದರಿಂದಲೇ ಮೊದಲು ಅವರು ನಾಟಕ ಬರೆದು, ನಿರ್ದೇಶನ ಮಾಡಿದರು. ಅದರಲ್ಲಿ ಯಶಸ್ವಿ ಕೂಡ ಪಡೆದರು. […]

Read More

ಅನ್ಯಾಯಗಳ ವಿರುದ್ಧ ಬರವಣಿಗೆ

ಕಳೆದ ಸಂಚಿಕೆಗಳಲ್ಲಿ ವಿಶುಕುಮಾರ್ ಅವರು ತನ್ನ 30 ರ ಹರೆಯದ ಒಳಗಿನ ಅಂದರೆ 1965 ರ ಮೊದಲು ಬರೆದ ಲೇಖನ, ಕಾದಂಬರಿ, ನಾಟಕಗಳ ಬಗ್ಗೆ ಬರೆದಿದ್ದೇವು. ಮುಂದಿನ ಸಂಚಿಕೆಗಳಲ್ಲಿ 1975 ರ ಒಳಗೆ ಅವರ ಬರವಣಿಗೆ, ಯೋಚನಾ ಮಟ್ಟ, ಸಾಧನೆಗಳ ಕುರಿತು ಬರೆಯುತ್ತೇವೆ. 1965 ರಲ್ಲಿ ವಿಶುಕುಮಾರ್ ಅವರು ರಾಜ್ಯ ಸರಕಾರದ ಮುಜರಾಯಿ ಇಲಾಖೆಗೆ ಅಧಿಕಾರಿಯಾಗಿ ನೇಮಕಗೊಂಡರು. ಅವರು ಕುಂದಾಪುರದಲ್ಲಿ ಕೆಲಸ ಮಾಡತೊಡಗಿದರು. ‘ ಎಂಡೋಮೆಂಟ್ ‘ ಆಗಿರುವ ದೇವಾಲಯಗಳ ಲೆಕ್ಕ ಪರಿಶೋಧನೆ ಮಾಡುವುದೇ ಇವರ ಕೆಲಸ. […]

Read More

ಕರಾವಳಿ : ಸತ್ಯ ಘಟನೆಗಳ ಚಿತ್ರಣ

ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ವಿಶುಕುಮಾರ ಅವರ ಹೆಸರನ್ನು ಸ್ಥಿರವಾಗಿ ನಿಲ್ಲುವಂತೆ ಮಾಡಿದ ಕಾದಂಬರಿ ‘ ಕರಾವಳಿ’. ಕನ್ನಡನಾಡಿನ ಕರಾವಳಿ ಜಿಲ್ಲೆಗಳಲ್ಲಿ ಸಂಚಲನೆ ಮೂಡಿಸಿದ ಕಾದಂಬರಿ. ಕರಾವಳಿ ಬೆಸ್ತರ( ಮೊಗವೀರರ) ಜನಜೀವನವನ್ನು ಅನಾವರಣಗೊಳಿಸಿದ ಕಾದಂಬರಿಯದು. 1966 ರಲ್ಲಿ ವಿಶುಕುಮಾರ ಅವರು ಕಾದಂಬರಿಯನ್ನು ಬರೆದಿದ್ದಾರೆ. ಮೊಗವೀರ ಹೆಣ್ಣು ಮಗಳೊಬ್ಬಳು ಅನ್ಯಕೋಮಿನ ( ಮುಸ್ಲಿಂ) ಯುವಕನನ್ನು ಪ್ರೇಮಿಸಿ, ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದುವ ಕತಾಹಂದರ. ಈ ಘಟನೆಯನ್ನು ಆಧರಿಸಿ ವಿಶುಕುಮಾರ ಕಾದಂಬರಿ ಹೆಣೆದಿದ್ದಾರೆ. ವಿಶುಕುಮಾರ ಅವರು ಕಾದಂಬರಿ ಬರೆದ ಹಿನ್ನಲೆ […]

Read More

ವಿಶುಕುಮಾರ್ ನಿಧನ : 04.10.1986

ವಿಶುಕುಮಾರ್ ಸಾಯುವಾಗ 6 ತಿಂಗಳ ಹಸುಕೂಸು… ಶ್ರವಣಕುಮಾರ್ ಈಗ ಬಿ. ಇ. ಪದವೀಧರ. ಸ್ವಂತ ಉದ್ಯೋಗಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ವಿಶುಕುಮಾರ್ ಅವರು ವಕಲಾತು ನಡೆಸುತ್ತಿದ್ದಾರೆ. ಅಲ್ಲೋಲಕಲ್ಲೋಲವಾಗಿದ್ದ ಸಂಸಾರ ಒಂದು ಹಿಡಿತಕ್ಕೆ ಬಂದಿದೆ. ಕನ್ನಡ ಸಾಹಿತ್ಯರಂಗದಲ್ಲಿ ಏನೇನೊ ಬದಲಾವಣೆಗಳಾಗಿವೆ. ಚಿತ್ರರಂಗದಲ್ಲೂ ಹಾಗೇ- ನಾಟಕರಂಗ- ರಾಜಕೀಯರಂಗದಲ್ಲೂ ಕೂಡ- ಈ ನಾಲ್ಕೂ ರಂಗದಲ್ಲೂ ವಿಶುಕುಮಾರ್ ತನ್ನದೇ ಛಾಪವನ್ನು ಒತ್ತಿದವರು. ಮುಂದಿನ ಕಂತುಗಳಲ್ಲಿ ಅದರ ಅವಲೋಕನ ನಡೆಯಲಿದೆ. ಕನ್ನಡ ಜನತೆ- ಅದರಲ್ಲೂ ಕರಾವಳಿ ಅವಳಿ ಜಿಲ್ಲೆ ( ಉಡುಪಿ- ಮಂಗಳೂರು) […]

Read More

ಯುವ ಜನತೆಗೆ ನಾರಾಯಣಗುರುಗಳ ಚಿಂತನೆ ಪ್ರೇರಣೆಯಾಗಲಿ : ಮಟ್ಟು

ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಬಡತನ, ಕಂದಾಚಾರ, ಮೂಢನಂಬಿಕೆ, ಹಾಗೂ ದುಂದುವೆಚ್ಚದ ಸಮಾರಂಭ ಮುಂತಾದ ಸಮಸ್ಯೆಗಳಿಂದ ಮುಕ್ತವಾದ ಸಮಾಜವೊಂದರ ನಿರ್ಮಾಣದ ಗುರುತರ ಹೊಣೆಗಾರಿಕೆ ಯುವ ಸಮುದಾಯದ ಮೇಲಿದ್ದು ಈ ಕಾರ್ಯಕ್ಕೆ ಶ್ರೀ ನಾರಾಯಣಗುರುಗಳ ಚಿಂತನೆಗಳನ್ನು ಪ್ರೇರಣೆಯಾಗಿ ಸ್ವೀಕರಿಸಿಕೊಂಡು ಕಾರ್ಯೋನ್ಮುಖರಾಗಬೇಕು ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು ಹೇಳಿದರು ನಾರಾಯಣಗುರು ವಿಚಾರ ಕಮ್ಮಟ (ನಾವಿಕ) ಮಂಗಳೂರು ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜನ್ಮದಿನಾಚರಣೆ ಅಂಗವಾಗಿ ಯುವಜನರ ಗುರು ಮತ್ತು ಗುರಿ – ನಾರಾಯಣಗುರು ವಿಷಯದ ಕುರಿತು […]

Read More

ವೃದ್ಧಾಪ್ಯದ ಸುತ್ತಮುತ್ತ

ವೃದ್ಧಾಪ್ಯ ಅಥವಾ ಮುದಿತನ ಎನ್ನುವುದು ಒಂದು ಪ್ರಾಯ ಸಹಜ ಸ್ಥಿತಿ. ಮೂವತ್ತರಾಚೆ ಮುಪ್ಪು’ ಎನ್ನುವ ಮಾತೊಂದಿದೆ. ಆದರೆ ಅದನ್ನು ತಕ್ಷಣ ಒಪ್ಪಿಕೊಳ್ಳದಿರುವುದೇ ಕ್ಷೇಮ. ಮುಪ್ಪು ಎನ್ನುವುದು ಒಂದು ಮನಸ್ಥಿತಿ. ಹಾಗಾಗಿ ಮೂವತ್ತಕ್ಕೇ ಮುಪ್ಪು ಎಂದುಕೊಂಡರೆ ಅದು ಆಗಲೇ ಹತ್ತಿರವಾಗಬಹುದು. ಮನಸ್ಸಿನಲ್ಲಿ ಸದುದ್ದೇಶವಿದ್ದು ಸನ್ಮಾರ್ಗದಲ್ಲಿ ಸದಾ ಪ್ರಯತ್ನಶೀಲರಾದರೆ ಮುಪ್ಪನ್ನು ಮುಂದೂಡ ಬಹುದೆನ್ನುವ ಅಭಿಪ್ರಾಯವೂ ಇದೆ. ಆದರೂ ನಮ್ಮ ದೇಹವೆನ್ನುವ ರಕ್ತ ಮೂಳೆ ಮಾಂಸಯುಕ್ತ ಜಟಿಲಾತಿಜಟಿಲ ಯಂತ್ರ ದಿನದಿನವೂ ಸವೆಯುತ್ತಾ ದುರ್ಬಲಗೊಳ್ಳುತ್ತಾ ಮುಪ್ಪಿನೆಡೆಗೆ ನಿಧಾನವಾಗಿಯಾದರೂ ಸಾಗುತ್ತಲೇ ಇರುತ್ತದೆ. ದೀರ್ಘಾಯುಷ್ಯದ ಯೋಗವಂತರಿಗೆ […]

Read More

ಸ್ತ್ರೀ ವಸ್ತ್ರ ವಾದ

ಪರಿವರ್ತನೆ ಜಗದ ನಿಯಮ ಎಂದು ಶ್ರೀಕೃಷ್ಣ ಗೀತೆಯಲ್ಲ್ಲಿ ಸಾರಿದ ಮಾತು ಪ್ರಸಕ್ತ ದಿನದಲ್ಲೂ ಉಲ್ಲೇಖನೀಯ. ಒಂದು ಯುಗವಿತ್ತು ಅಲ್ಲಿ ದೇವತೆಗಳಿಗೊಂದು ಲೋಕ, ರಾಕ್ಷಸರಿಗೊಂದು ಲೋಕವಿತ್ತು. ಅದೇ ಸ್ವರ್ಗ ಮತ್ತು ನರಕ. ಬಳಿಕ ಯುಗ ಪರಿವರ್ತನೆಯಾಯಿತು. ಇಲ್ಲ್ಲಿ ದೇವಮಾನವರೂ ರಾಕ್ಷಸರು ಒಂದೇ ಲೋಕದಲ್ಲಿದ್ದರು. ಆದರೆ ದೂರದೂರವಿದ್ದರು. ಅದೇ ರಾಮ ಮತ್ತು ರಾವಣರಿದ್ದಂತೆ. ಬಳಿಕ ಮತ್ತೊಂದು ಯುಗ ಪರಿವರ್ತನೆಯಾಯಿತು. ಇಲ್ಲಿ ದೇವಮಾನವ ರಾಕ್ಷಸ ಒಂದೇ ಕುಟುಂಬಕ್ಕೆ ಬಂದರು. ಅಂದರೆ ಶ್ರೀಕೃಷ್ಣ-ಕಂಸ ಇದ್ದಂತೆ. ಇದೀಗ ಮತ್ತೊಂದು ಯುಗ ಪರಿವರ್ತನೆಯಾಯಿತು. ಇಲ್ಲಿ ದೇವ […]

Read More

ಸಂಪಾದಕರ ಮಾತು : ಶುಭ ರಾಜೇಂದ್ರ

ಬರೆಯಲು ಪದಗಳಿಗಾಗಿ ತಡಕಾಡುತ್ತಿದ್ದೇನೆ, ಮನದಲ್ಲಿ ಅವ್ಯಕ್ತವಾದ ಭಯ ಕಾಡುತ್ತಿದೆ ವಿವಿಧ ಸಂಘಟನೆಗಳಲ್ಲಿ ಸಾಕಷ್ಟು ಜವಬ್ದಾರಿಗಳನ್ನು ವಹಿಸಿಕೊಂಡಿದ್ದೇನೆ, ಆದರೆ ಈ ಜವಬ್ದಾರಿ ಎಲ್ಲಕ್ಕಿಂತಲೂ ಬೇರೆಯಾದುದು, ಅದಕ್ಕಿಂತಲೂ ಮುಖ್ಯವಾಗಿ ಇದು ಯುವವಾಹಿನಿ ಎನ್ನುವ ಮಹಾ ಸಾಗರದಲ್ಲಿ ನಾವೆಯನ್ನು ಮುನ್ನಡೆಸುವ ಯತ್ನ. ಯುವವಾಹಿನಿಯಲ್ಲಿ ಎಲ್ಲವೂ ಒಂದು ವರುಷದ ಅಧಿಕಾರ, ಆದರೆ ಈ ಒಂದು ವರುಷದಲ್ಲಿ ನಾನು ಮಾಡುವ ಕೆಲಸ ಒಂದು ಶತಮಾನದ ವರೆಗೂ ದಾಖಲೆಯಾಗಿ ಉಳಿದಿರುತ್ತದೆ. ಇದು ಯುವವಾಹಿನಿಯನ್ನು ಹೊರ ಜಗತ್ತಿನ ಜೊತೆ ನಿರಂತರ ಸಂಪರ್ಕದಲ್ಲಿರಿಸುವ ಮಾಧ್ಯಮ. ಹೀಗಾಗಿ ಇದರ ಬಗ್ಗೆ […]

Read More

ಯುವಸಿಂಚನ ಪತ್ರಿಕೆ ಬಿಡುಗಡೆ

ವಿಶಿಷ್ಟ ವಿನ್ಯಾಸದೊಂದಿಗೆ ವರ್ಣರಂಜಿತ ಪುಟಗಳನ್ನು ಒಳಗೊಂಡ ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆ ಎಲ್ಲರ ಮನಸ್ಸು ಗೆಲ್ಲಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅನುಷ್ಠಾನ ಸಮಿತಿಯ ಸಂಚಾಲಕರಾದ ಅಶೋಕ್ ಕುಮಾರ್ ತಿಳಿಸಿದರು ಅವರು ದಿನಾಂಕ 10.09.2017 ರಂದು ಯುವವಾಹಿನಿ ಸಸಿಹಿತ್ಲು ಘಟಕದ ಆಶ್ರಯದಲ್ಲಿ ಸಸಿಹಿತ್ಲು ವೈಶಾಲಿ ರೆಸಾರ್ಟ್ ಇಲ್ಲಿ ಜರುಗಿದ ಯುವವಾಹಿನಿಯ 26 ಘಟಕಗಳ ಸಮನ್ವಯತೆ ಸ್ನೇಹಾನುಬಂಧ ಕಾರ್ಯಕ್ರಮದಲ್ಲಿ ಯುವಸಿಂಚನ ಪತ್ರಿಕೆ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಎಲ್ಲರ ಸಲಹೆ ಸೂಚನೆ, ಮಾರ್ಗದರ್ಶನ ಹಾಗೂ ಸಹಕಾರದಿಂದ ಹೊಸ ವಿನ್ಯಾಸದಲ್ಲಿ ಯುವಸಿಂಚನ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!