Yuvavahini

FEB 15, 2018 4.18 PM IST

ಸಂಪಾದಕರ ಮಾತು : ಶುಭ ರಾಜೇಂದ್ರ

 

              ಶುಭ ರಾಜೇಂದ್ರ

ಯುವಸಿಂಚನದ ಓದುಗ ಮಿತ್ರರಿಗೆ ನಮಸ್ಕಾರಗಳು
ಕತ್ತಲಾಯಿತು ರಾತ್ರಿಯಾಗುತ್ತದೆ ಎನ್ನುವ ಭಯ ಬೇಡ ನಾಳೆ ಮತ್ತೆ ಸೂರ್ಯೋದಯವಿದೆ ಮತ್ತೆ ಹೊಸ ದಿನ ನಿಮ್ಮನ್ನು ಎದುರುಗೊಳ್ಳುತ್ತದೆ ಸಾಧಿಸಬೇಕೇÉ ಅನಿಸಿದರೆ ನಾಳಿನ ಅವಕಾಶÀವನ್ನು ಬಳಸಿಕೋ ಎಂದು ಲೇಖಕರ ಮಾತೊಂದು ನೆನಪಿಗೆ ಬರುತ್ತಿದೆ. ಯುವ ಸಿಂಚನಕ್ಕೆ ಹೊಸ ರೂಪ ನೀಡಬೇಕು ಎಂದು ಸಾಕಷ್ಟು ಪ್ರಯತ್ನದ ನಡುವೆಯೂ ಇನ್ನೂ ಚೆಂದವಾಗಿಸುವ ನಿಮ್ಮ ಅನಿಸಿಕೆಗಳು ನಮ್ಮನ್ನು ಪ್ರೇರೆಪಿಸುತ್ತದೆ ಆದರೆ ಅಷ್ಟರಲ್ಲಿ ಸಿಂಚನ ಅಚ್ಚಾಗಿರುತ್ತದೆ ಆಗ ನಮಗೆ ಸಮಾಧಾನ ಮಾಡುವುದು ಈ ಮೇಲಿನ ಮಾತು, ಮತ್ತೆ ನಾವು ನಾಳಿನ ಹೊಸತನಕ್ಕೆ ನಮ್ಮನ್ನು ಹೊಂದಿಸಿಕೊಳ್ಳುತ್ತೇವೆ. ಸ್ನೇಹಿತರೇ ಕಳೆದ ನಾಲ್ಕು ತಿಂಗಳಲ್ಲಿ ನೀವು ಏನೆಲ್ಲ ಸಲಹೆ ನೀಡಿದ್ದೀರೋ ಅದೆಲ್ಲವನ್ನೂ ಕೃತಜ್ಞತಾಪೂರ್ವಕವಾಗಿ ಸೇರಿಸಿಕೊಂಡು ಅಳವಡಿಸಿಕೊಂಡಿದ್ದೇವೆ. ಇದು ನಮ್ಮ ಯುವಸಿಂಚನ. ಇದನ್ನು ರೂಪಿಸುವವರೂ ನಾವೇ ಪ್ರತಿಯೊಬ್ಬರÀ ಸಲಹೆಯನ್ನೂ ಮಂಥಿಸಿ ನಿರ್ಮಾಣಗೊಂಡ ಮೂರ್ತರೂಪ ಈ ಬಾರಿಯ ಯುವಸಿಂಚನ.
ಯುವ ಸಿಂಚನದ ಜವಾಬ್ದಾರಿಯನ್ನು ನೀವು ಪಡೆದುಕೊಳ್ಳಬೇಕು ಎಂದು ಅಧ್ಯಕ್ಷರು ಹೇಳಿದಾಗ ಹಿಂಜರಿದಿದು ನಿಜ, ಆದರೆ ಯುವಸಿಂಚನ ಎರಡು ತಿಂಗಳಿಗೊಮ್ಮೆ ಎಂದಾಗ ನಿರಾಳವಾಗಿದ್ದೆ ಎರಡು ತಿಂಗಳ ಅವಕಾಶ ಇದೆಯಲ್ಲವೇ ಎಂದು, ಆದರೆ ಎರಡು ತಿಂUಳು ಬಿಡಿ ಎರಡು ದಿನದ ವಿಶ್ರಾಂತಿಯೂ ಇಲ್ಲದಂತೆ ಯುವಸಿಂಚನದ ಕೆಲಸ ಇದೆ, ಎಲ್ಲಾ ಘಟಕಗಳು ನಿರೀಕ್ಷೆಗೂ ಮೀರಿ ಸ್ಪಂದನೆ ನೀಡುತ್ತಿದ್ದಾರೆ ಹೀಗಿದ್ದರೂ ಕೆಲಸಗಳಿವೆ ಒಂದು ವೇಳೆ ಸ್ಪಂದನೆ ಕಡಿಮೆ ಇದ್ದರೆ ಈ ಜವಾಬ್ದಾರಿ ನಿಭಾಯಿಸುವುದು ಕಷ್ಟವೇ ಸರಿ.
ಪರಿವರ್ತನೆಯ ಹಾದಿಗೆ ನಾವೆಲ್ಲ ತುಂಬಾ ಹೊಂದಿಕೊಂಡಿದ್ದೇವೆ. ಎಲ್ಲಾ ಘಟಕಗಳು ಬಿಡುವಿಲ್ಲದ ಕೆಲಸದಲ್ಲಿದೆ, ಕೇಂದ್ರ ಸಮಿತಿಯ ಅಧ್ಯಕ್ಷರು ಗ್ರಾಮ ವಾಸ್ತವ್ಯ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎನ್ನುವಷ್ಟು ಘಟಕಗಳು ಕಾರ್ಯಕ್ರಮ ನೀಡುತ್ತಿದೆ. ಸೂರ್ಯ ಮೂಡುವ ಮುನ್ನ ಹೊರಟರೇ ಮತ್ತವರು ಮನೆ ಸೇರುವುದು ಸೂರ್ಯ ಅಸ್ತಮಿಸಿದ ಮೇಲೆಯೇ ಅಲ್ಲೂ ಅವರದ್ದು ಯುವವಾಹಿನಿಯದ್ದೇ ಚಿಂತನೆ, ಅವರು ಯುವವಾಹಿನಿಯ ಪಾದರಸ. ಈ ಕಾರಣದಿಂದ ಯುವವಾಹಿನಿ ಇಂದು ಎಲ್ಲರ ಮನದಲ್ಲಿ ಭದ್ರವಾಗಿದೆ.
ಕಳೆದ ಬಾರಿಯ ಯುವಸಿಂಚನದ ಆರ್ಥಿಕ ಭಾರ ತಗ್ಗಿಸಿದವರು ಯುವವಾಹಿನಿ ಮೂಲ್ಕಿ ಘಟಕದವರು. ಬಹುಷಃ ಮೂಲ್ಕಿಯವರ ಸಹಕಾರದಿಂದ ಆರ್ಥಿಕ ಹೊರೆಯ ಬಿಸಿ ಇಲ್ಲದೆ ನಿರಾಳವಾಗಿ ಸಿಂಚನ ರೂಪಿಸುವಂತಾಯಿತು.. ನಿರೀಕ್ಷೆಯಂತೆ ಕೇಂದ್ರ ಸಮಿತಿಯ ಎಲ್ಲಾ ಘಟಕದ ವರದಿಯೂ ಕಾರ್ಯಕ್ರಮದ ವಿವರವೂ ಯುವ ಸಿಂಚನದಲ್ಲಿ ದಾಖಲಾಗಿದೆ. ಕೇಂದ್ರ ಸಮಿತಿಯ ಚತುರ್ಮುಖ ಮತ್ತು ಬಂಟ್ವಾಳ ಘಟಕದ ಅನ್ವೇಷಣಾ, ಪುತ್ತೂರು ಘಟಕದ ಕೆಸರುಗದ್ದೆ ಕ್ರೀಡಾಕೂಟ, ಮಹಿಳಾ ಘಟಕದ ವಧುವರಾನ್ವೇಷಣಾ ಕಾರ್ಯಕ್ರಮ, ಬಂಟ್ವಾಳ ಘಟಕದ ಡೆನ್ನಾನ ಡೆನ್ನನ-2018 ಯುವಸಿಂಚನದ ಅಂದ ಹೆಚ್ಚಿಸಿದೆ. ಈ ಬಾರಿಯ ಯುವ ಸಿಂಚನಕ್ಕೆ ಕಥೆ, ಕವನ, ಲೇಖನ, ಆಶಯ ನೀಡಿದ ಎಲ್ಲರಿಗೂ ನನ್ನ ಮನದಾಳದ ವಂದನೆಗಳು. ನಿಮ್ಮ ಸಹಕಾರ ಎಂದಿಗೂ ಇರಲೆಂದು ಆಶಿಸುತ್ತಾ ಮಾತಿನಿಂದ ವಿರಮಿಸುತ್ತೇನೆ.
– ಸಂಪಾದಕರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!