ರವಿರಾಜ್ ಅಜ್ರಿ :-ವಿಶುಕುಮಾರ್ ಎಂಬ ಬರಹಗಾರನ ಕಥೆ-10

ವಿಶುಕುಮಾರ್ ನಿಧನ : 04.10.1986

ವಿಶುಕುಮಾರ್ ಸಾಯುವಾಗ 6 ತಿಂಗಳ ಹಸುಕೂಸು… ಶ್ರವಣಕುಮಾರ್ ಈಗ ಬಿ. ಇ. ಪದವೀಧರ. ಸ್ವಂತ ಉದ್ಯೋಗಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ವಿಶುಕುಮಾರ್ ಅವರು ವಕಲಾತು ನಡೆಸುತ್ತಿದ್ದಾರೆ. ಅಲ್ಲೋಲಕಲ್ಲೋಲವಾಗಿದ್ದ ಸಂಸಾರ ಒಂದು ಹಿಡಿತಕ್ಕೆ ಬಂದಿದೆ. ಕನ್ನಡ ಸಾಹಿತ್ಯರಂಗದಲ್ಲಿ ಏನೇನೊ ಬದಲಾವಣೆಗಳಾಗಿವೆ. ಚಿತ್ರರಂಗದಲ್ಲೂ ಹಾಗೇ- ನಾಟಕರಂಗ- ರಾಜಕೀಯರಂಗದಲ್ಲೂ ಕೂಡ- ಈ ನಾಲ್ಕೂ ರಂಗದಲ್ಲೂ ವಿಶುಕುಮಾರ್ ತನ್ನದೇ ಛಾಪವನ್ನು ಒತ್ತಿದವರು. ಮುಂದಿನ ಕಂತುಗಳಲ್ಲಿ ಅದರ ಅವಲೋಕನ ನಡೆಯಲಿದೆ. ಕನ್ನಡ ಜನತೆ- ಅದರಲ್ಲೂ ಕರಾವಳಿ ಅವಳಿ ಜಿಲ್ಲೆ ( ಉಡುಪಿ- ಮಂಗಳೂರು) ವಿಶುಕುಮಾರ್ ಅವರನ್ನು ಮರೆತರೇ ..? ಖಂಡಿತ ಇಲ್ಲ! ಜನಮಾಸದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿದಿದೆ. ಮಂಗಳೂರಿನ ‘ ಯುವವಾಹಿನಿ’ ಕೇಂದ್ರ ಸಮಿತಿಯವರು 2002 ರಿಂದ ಪ್ರತೀ ವರ್ಷ ” ವಿಶುಕುಮಾರ್ ಪ್ರಶಸ್ತಿ ” ಪ್ರದಾನ ಮಾಡುತ್ತಿದ್ದಾರೆ. ಸಾಹಿತ್ಯ, ನಾಟಕ, ಕಲಾಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುತ್ತಿದ್ದಾರೆ.

ನಾನು ವಿಶುಕುಮಾರ್ ಅವರ ಬಗ್ಗೆ ‘ ಫೇಸ್ ಬುಕ್ ‘ ನಲ್ಲಿ ಕಂತುಗಳ ಮೂಲಕ ಬರೆಯಲು ಪ್ರಾರಂಭಿಸಿದ ನಂತರ- ಅವರ ಬದುಕಿನ ಹಾದಿಯನ್ನು ಹುಡುಕಲು ಹೊರಟಾಗ- 3 ಮಂದಿ ಅವರ ಹೆಸರಿನಲ್ಲಿ ಪಿ.ಎಚ್ ಡಿ ಪದವಿ ಪಡೆದಿದ್ದಾರೆಂದು ತಿಳಿದು ಬಂತು! ಇದು ನನಗೆ ತುಂಬಾ ಆಶ್ಚರ್ಯ ತಂದಿತು! ಪಿ.ಎಚ್ ಡಿ ಪದವಿ ಪಡೆಯುವಷ್ಟು ವಿಶುಕುಮಾರ್ ಸಾಧನೆ ಮಾಡಿದ್ದಾರೆಂದು ಆಯಿತಲ್ಲ? ( ನರೇಂದ್ರ ರೈ ದೇರ್ಲ, ಈಶ್ವರ ಅಲೆವೂರು ಮತ್ತು ಹನುಮಂತಪ್ಪ) . ಮಧ್ಯಮ ವಯಸ್ಸಿನವರನ್ನು ಬಿಟ್ಟರೇ, ಈ ಪೀಳಿಗೆಯ ಹುಡುಗರ ಬಾಯಿಯಲ್ಲೂ ವಿಶುಕುಮಾರ್ ಅವರ ಹೆಸರು ಕೇಳಿಬರುತ್ತಿದೆ. ಅಂಥ ‘ ಛಾಪ್ ‘ ವಿಶುಕುಮಾರ್ ಒತ್ತಿ ಹೋಗಿದ್ದಾರೆ.

ನಾವು ವಿಶುಕುಮಾರ್ ಅವರು 30 ರ ಹರೆಯದ ಒಳಗೆ ಬರೆದ ಕಥೆಗಳ ಬಗ್ಗೆ, ತುಳು ನಾಡಿನ ಇತಿಹಾಸಗಳ ಬಗ್ಗೆ ಲೇಖನ, ನಾಟಕಗಳ ಬಗ್ಗೆ ಬರೆದಿದ್ದೇವು. ಮುಂದಿನ ದಿನಗಳಲ್ಲಿ ಅವರ ಆಲೋಚನೆಗಳು, ಬರವಣಿಗೆಯ ಶೈಲಿ ಬದಲಾಗುತ್ತ ಹೋಗುತ್ತವೆ. ಅವುಗಳ ಬಗ್ಗೆ ನಾವು ವಿಶ್ಲೇಷಿಸುವ ಮೊದಲು ಅವರು ಹುಟ್ಟಿದ ಸ್ಥಳ , ಆ ಪರಿಸರ ಇವರ ಲೇಖನಿಗೆ ಯಾವ ರೀತಿ ಪ್ರೇರಣೆ ನೀಡಿತೆಂಬುದರ ಕುರಿತು ಇಲ್ಲಿ ನಾವು ಹೇಳಲು ಇಚ್ಛೆ ಪಡುತ್ತಿದ್ದೇವೆ.

ಸುಲ್ತಾನ್ ಬತ್ತೇರಿ ಪಕ್ಕದಲ್ಲಿ ಸಣ್ಣ ಹೋಟೆಲ್ ಅನ್ನು ನಡೆಸಿಕೊಂಡು ಬರುತ್ತಿದ್ದರು ವಿಶುಕುಮಾರ್ ತಂದೆ ದೋಗ್ರ ಪೂಜಾರಿ ಅವರು. ಆ ಹೋಟೆಲ್ ಜಾಗ ಹಂಚಿನ ಕಾರ್ಖಾನೆಗೆ ಸೇರಿರುತ್ತದೆ. ಈಗ ಅಲ್ಲಿ ಹಂಚಿನ ಕಾರ್ಖಾನೆ ಇಲ್ಲ. ಕಾರ್ಖಾನೆ ಮಾಲೀಕರು ‘ ಗೆಸ್ಟ್ ಹೌಸ್ ‘ ಮಾಡಿಕೊಂಡಿದ್ದಾರೆ. ಸಭೆ- ಸಮಾರಂಭಗಳು ಅಲ್ಲಿ ನಡೆಯುತ್ತಿವೆ. ಹೋಟೆಲ್ ಅನ್ನು ಅವರು ಸಣ್ಣ ಆಫೀಸ್ ಮಾಡಿಕೊಂಡಿದ್ದಾರೆ. ನದಿ- ಕುದುರು- ಸುಲ್ತಾನ್ ಬತ್ತೇರಿ ಕೋಟೆ- ತೆಂಗಿನ ತೋಟ- ಇವುಗಳನ್ನು ನೋಡಿದಾಗ ಪ್ರಕೃತಿಯ ಸಿರಿ ಅಲ್ಲಿ ತುಂಬಿದೆ. ಇದನ್ನು ನೋಡಿ ಮೆಚ್ಚಿಕೊಂಡೆ ವಿಶುಕುಮಾರ್ ತಂದೆ ನಡೆಸುತ್ತಿದ್ದ ಹೋಟೆಲ್ ಗೆ ” ನಿಸರ್ಗ” ಎಂದು ಹೆಸರಿಟ್ಟಿದ್ದಾರೆ. ಮುಂದೆ ಆ ಹೆಸರು ಮರೋಳಿಯಲ್ಲಿರುವ ಮೂಲ ಮನೆಗೂ ಅಂಟಿಕೊಂಡಿತು. ನಿಸರ್ಗ’ ಹೋಟೆಲ್ ಈಗ’ ಆಫೀಸ್ ರೂಂ’ ಆಗಿದೆ.  ನಿಸರ್ಗ’ ಹೋಟೆಲ್ ನ ಹಿಂಬದಿ ದೃಶ್ಯ

ಬೋಳೂರಿನಲ್ಲಿ ಈಗಲೂ 60 ದಾಟಿದ ವಯಸ್ಸಾದವರನ್ನು ಯಾರನ್ನಾದರೂ ಕೇಳಿದರೂ ದೋಗ್ರ ಪೂಜಾರಿಯವರ ಬಗ್ಗೆ ಬಹಳ ಮೆಚ್ಚುಗೆ ಮಾತಾಡುತ್ತಾರೆ. ವಿಶುಕುಮಾರ್ ಅವರು, ಬಿಡುವು ಸಮಯದಲ್ಲಿ ‘ ಸುಲ್ತಾನ್ ಬತ್ತೇರಿ’ಕೋಟೆಯ ಮೇಲೆ ಕೊಳಲು ನುಡಿಸುತ್ತಿದ್ದನ್ನು ಕೇಳಿದವರಿದ್ದಾರೆ.

” ವಿಶು , ಒಬ್ಬ ಉತ್ತಮ ಕಲಾವಿದ- ಬಹಳ ಚೆನ್ನಾಗಿ ಚಿತ್ರ ಬಿಡಿಸುತ್ತಿದ್ದ- ಇಂಪಾಗಿ ಹಾಡುವವ- ಆತ ಬರೆಯುತ್ತಿದ್ದ ಎಲ್ಲಾ ಲೇಖನಗಳನ್ನು ಓದಲು ನನಗೆ ಕೊಡುತ್ತಿದ್ದ” ಎನ್ನುತ್ತಾರೆ ವಿಶುಕುಮಾರ್ ಅವರ ಸಮವಯಸ್ಕರಾದ ಸೀತಮ್ಮ ಟೀಚರ್. ಅವರು ಬೋಳೂರಿನಲ್ಲಿ ವಿಶುಕುಮಾರ್ ಅವರ ನೆರೆ ಮನೆಯವರೇ ಆಗಿದ್ದರು. ವಿಶುಕುಮಾರ್ ಅವರ ಏಳು- ಬೀಳು ಎಲ್ಲವನ್ನು ಚೆನ್ನಾಗಿ ಬಲ್ಲವರು ಸಣ್ಣ ವಯಸ್ಸಿನಲ್ಲಿ, ಪ್ರಾರಂಭದ ದಿನಗಳಲ್ಲಿ ವಿಶುಕುಮಾರ್ ಅವರು ನಾಡು, ನುಡಿಯ ಬಗ್ಗೆ ಅಭಿಮಾನದಿಂದ ಬರೆದರು. ಆ ನಂತರದ ದಿನಗಳಲ್ಲಿ ಅವರ ಬರವಣಿಗೆ ಶೈಲಿ ,ಆಲೋಚನೆ ಮಟ್ಟಗಳು ಬದಲಾದವು. ಅವೆಲ್ಲವೂ ೬೦ ದಶಕದ ಒಳಗಿನ ಚಿತ್ರಣಗಳು.

ನಾವು ವಿಶುಕುಮಾರ್ ಅವರ ಬರವಣಿಗೆ ಶೈಲಿ ಬದಲಾಗಲು ಅವರು ಬೆಳೆದ ಸಮಾಜವನ್ನು ಗಮನಿಸಬೇಕಾಗಿದೆ. ‘ ಬಿಲ್ಲವ’ ಸಮಾಜದಲ್ಲಿ ಹುಟ್ಟಿದವರು ವಿಶುಕುಮಾರರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುಂಚೆ, ೧೯೪೭ ರ ಮೊದಲು, ‘ ಬಿಲ್ಲವ’ ರಿಗೆ ಸಮಾಜದಲ್ಲಿ ಅಂಥ ಬೆಲೆಯಿರಲಿಲ್ಲ. ದೇವಾಲಯಗಳಿಗೆ, ಮೇಲ್ವರ್ಗದ ಜನಗಳ ಮನೆಗಳಿಗೆ ಬಿಲ್ಲವರಿಗೆ ಪ್ರವೇಶವಿರಲಿಲ್ಲ. ಮನೆಯ ಹೆಬ್ಬಾಗಿಲ ಬುಡದಲ್ಲಿ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಆ ಸಮಾಜಕ್ಕೆ ಆ ಕಾಲದಲ್ಲಿತ್ತು. ಇದನ್ನು ನೋಡಿದವರು ವಿಶುಕುಮಾರ್. ಸಮಾಜದ ‘ ಧ್ವನಿ’ ಯಾಗಿ ನಿಲ್ಲ ಬಯಸಿದವರು. ಅದನ್ನು ತನ್ನ ಬರವಣಿಗೆ ಮೂಲಕ ತೋರಿಸತೊಡಗಿದರು. ಇಲ್ಲೊಂದು ಅವರ ಅಪ್ರಕಟಿತ ಕವನದ ಕೆಲವು ಸಾಲುಗಳನ್ನು ಉದಾಹರಿಸುತ್ತಿದ್ದೇನೆ.

ಒಂದು ಕಾಲ ಬರುತ್ತೆ …( ಕವನ)
ಶತಶತಮಾನಗಳಿಂದ ದಲಿತರನ್ನು ಹಿಂದುಳಿದ
ವರ್ಗದವರನ್ನು ಹಳಿದು ತುಳಿದು ನಮ್ಮ
ಬೆವರಿನಲ್ಲಿ ಸ್ನಾನ ಮಾಡಿದವರೇ
ನಿಮ್ಮ ಮನೆಯಂಗಳದಲ್ಲಿ ಉಂಡ ಅತಿಥಿ
ಗಳ ಬಟ್ಟಲು ತೊಳೆದು ಎಲೆ ತೆಗೆದು
ಸೆಗಣಿ ಸಾರಿಸಿದವರು ನಾವು
ಒಂದು ಕಾಲ ಬರುತ್ತೆ …

ಆಗ ನಮ್ಮ ಮನೆಯಂಗಳದಲ್ಲಿ ಉಂಡ
ಎಲೆಗಳನ್ನು ತೆಗೆದು
ಸೆಗಣಿ ಸಾರಿಸಬೇಕು ನೀವು!
ಸಮಾನತೆ ಎಂದರೇನೆಂದು ಆಗ
ಗೊತ್ತಾಗುವುದು ನಿಮಗೆ!
ನಮ್ಮ ಮಣ್ಣಿನಲ್ಲಿ ನಾವು ಎತ್ತಿ ಬಿತ್ತಿ
ಬೆಳೆಸಿದ ಭತ್ತದಿಂದ
ದೆವ್ವ ದೇವರುಗಳ ನೆಪಹೇಳಿ ಅನ್ನ
ಸಂತರ್ಪಣೆ ಮಾಡಿ ಉಂಡು ತೇಗಿ
ನಿಮ್ಮ ಎಂಜಲೆಲೆಗಳನ್ನು ನಮ್ಮ
ಬುಟ್ಟಿಗೆ ಎಸೆದವರು ನೀವು
ಒಂದು ಕಾಲ ಬರುತ್ತೆ…

ಹೀಗೆ ಸುಮಾರು 49 ಸಾಲುಗಳ ನವ್ಯ ಪದ್ಯ. ಈ ಪದ್ಯದ ಸಾಲುಗಳನ್ನು ಓದುವಾಗ ನನಗೆ ದಲಿತ ಸಾಹಿತಿ ದೇವನೂರು ಮಹಾದೇವ ಅವರ ‘ ಎದೆಗೆ ಬಿದ್ದ ಅಕ್ಷರ ‘ ಪುಸ್ತಕದ ನೆನಪಾಗುತ್ತದೆ. ಅದರಲ್ಲಿ ದೇವನೂರು ಒಂದು ಕಡೆ – ನಮ್ಮ ಸಮಾಜದಲ್ಲಿರುವ ಜಾತಿ, ಧರ್ಮದವರ ನೀತಿ ಬಗ್ಗೆ ಕಿಡಿ ಕಾರುತ್ತಾರೆ . ಬಸ್ಸಿನಲ್ಲಿ ಹೋಗುವಾಗ ನಾವು ಎಲ್ಲಾ ಜಾತಿ, ಧರ್ಮದವರು ಒಟ್ಟಿಗೆ ಕುಳಿತು ಹೋಗುತ್ತೇವೆ. ಬಸ್ಸಿನಿಂದಿಳಿದು ಮನೆಗೆ ಹೋದ ನಂತರ ಅಂಥ ಭಾವನೆ ನಮ್ಮಲ್ಲಿರುವುದಿಲ್ಲ. ಮನೆಯೊಳಗೆ ಪ್ರವೇಶವಿರುವುದಿಲ್ಲ ” ಎನ್ನುತ್ತಾರೆ.
ಹಾಗೇ ಇಲ್ಲೊಂದು ಮೇಲ್ವರ್ಗದವರ ಆರೋಪವೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಸರಕಾರದ ಮೀಸಲಾತಿ ಬಗ್ಗೆ ಆಗಾಗ ಕೇಳಿ ಬರುತ್ತಿರುವ ಧ್ವನಿ :  ಮೀಸಲಾತಿ ಇನ್ನೂ ಬೇಕೇ? ” ಎಂಬ ಪ್ರಶ್ನೆ. ಮೇಲ್ವರ್ಗದಲ್ಲೂ ಬಡವರಿದ್ದಾರಲ್ವೇ? ಮೀಸಲಾತಿ ನೀತಿಯಿಂದ ಅವರಿಗೂ ಅನ್ಯಾಯವಾಗಿದೆಯಲ್ಲವೇ?
ಇಲ್ಲಿ ಯಾಕೆ ಈ ಪ್ರಶ್ನೆ ಬಂತೆಂದರೆ : ಯಾವ ಜಾತಿ, ವರ್ಗದಲ್ಲಾಗಲಿ, ಯಾರು ನೋವು- ಅವಹೇಳನ ಪಟ್ಟಿರುತ್ತಾರೋ ಅದು ಅಂಥವರಿಗೆ ಮಾತ್ರ ನೋವು ಗೊತ್ತಾಗಿರುತ್ತದೆ. ಬೇರೆ ಜಾತಿ- ವರ್ಗದವರಿಗೆ ಗೊತ್ತಾಗುವುದಿಲ್ಲವೆಂಬುದಷ್ಟೇ ಲೇಖಕನ ಅಭಿಪ್ರಾಯ. ಕೆಲವರು ಓಟ್ ಬ್ಯಾಂಕಿಗೆ ರಾಜಕೀಯ ಮಾಡುತ್ತಾರೆ. ಯಾರೂ ‘ನೋವು ‘ ಅನ್ನು ಅರ್ಥ ಮಾಡಿಕೊಳ್ಳುತ್ತಾರೋ ,ಅವರು ಈ ಸಮಸ್ಯೆಯನ್ನು ಅರಿಯಲು ಸಾಧ್ಯ. ವಿಶುಕುಮಾರ್ ಅವರಿಗೆ ಮೇಲ್ವರ್ಗದವರ ಮೇಲೆ ಅಸಮಾಧಾನವಿರುವುದು ಅವರು ರಚಿಸಿದ ಕಾದಂಬರಿಗಳನ್ನು ಓದಿದಾಗ ನಮಗೆ ಅರಿವಾಗುತ್ತದೆ. ಹಾಗೇ ಸಮಾಜದಲ್ಲಿ ನಡೆಯುವ ಅನ್ಯಾಯ, ಅನಾಚಾರ, ನಡವಳಿಕೆ, ಸಂಪ್ರದಾಯ- ಇಂಥ ವಿಷಯಗಳ ಬಗ್ಗೆಯೂ ಕಾದಂಬರಿಗಳಲ್ಲಿ ಬರೆದಿರುತ್ತಾರೆ( ಈ ಬಗ್ಗೆ ಮುಂದಿನ ಕಂತುಗಳಲ್ಲಿ ವಿಶ್ಲೇಷಣೆ ಮಾಡಲಾಗುವುದು). ಕೆಲವೊಮ್ಮೆ ವಿಶುಕುಮಾರ್ ಅವರಲ್ಲಿ ಅತಿಯಾದ ವ್ಯಕ್ತಿ, ಅಥವ ಕುಟುಂಬ ದ್ವೇಷವೂ ಎದ್ದು ಕಾಣುತ್ತದೆ.

         ರವಿರಾಜ್ ಅಜ್ರಿ

One thought on “ವಿಶುಕುಮಾರ್ ನಿಧನ : 04.10.1986

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!