14-03-2018, 3:56 PM
ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ ಮತ್ತು ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಉಚಿತ ಮಕ್ಕಳ ದಂತ ಚಿಕಿತ್ಸೆ ಮತ್ತು ತಪಾಸಣಾ ಶಿಬಿರವು ಯೆನಪೊಯ ಮೆಡಿಕಲ್ ಮತ್ತು ದಂತ ವೈದ್ಯಕೀಯ ಕಾಲೇಜು, ದೇರಳಕಟ್ಟೆ ಇಲ್ಲಿಯ ತಜ್ಞ ವೈದ್ಯರ ತಂಡದೊಂದಿಗೆ ದಿ.14.03.2018 ರಂದು ಇಳಂತಿಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಸುಬುರವರು ದೀಪ ಬೆಳಗಿಸಿ ನೆರವೇರಿಸಿ ಮಾತನಾಡಿ ಸಮಾಜದ ಜನರಲ್ಲಿ ಉತ್ತಮ ಆರೋಗ್ಯವಿದ್ದಾಗ ಬಲಿಷ್ಠ ಸಮಾಜ ನಿರ್ಮಾಣ ಆಗುತ್ತದೆ ಈ ನಿಟ್ಟಿನಲ್ಲಿ […]
Read More
11-03-2018, 1:53 PM
ಯುವವಾಹಿನಿ (ರಿ) ಕೂಳೂರು ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ ಕೂಳೂರು ಇದರ ಸಹಯೋಗದಲ್ಲಿ ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಜರ್ ಲಿಮಿಟೆಡ್ ಮಂಗಳೂರು ಇದರ ಸಹಕಾರದೊಂದಿಗೆ ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇಲ್ಲಿಯ ತಜ್ಞ ವೈದ್ಯರ ತಂಡದೊಂದಿಗೆ ದಿನಾಂಕ 11-03-2018 ರಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ದಿ! ಶ್ರೀಮತಿ ಜಾನಮ್ಮ ಸೂಡಪ್ಪ ಪೂಜಾರಿ ಸಭಾಭವನದಲ್ಲಿ “ಉಚಿತ ನೇತ್ರ ತಪಾಸಣಾ ಶಿಬಿರ” ಏರ್ಪಡಿಸಲಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ […]
Read More
25-02-2018, 2:13 PM
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ, ಎ1 ಫ್ರೆಂಡ್ಸ್ ಆಕಾಶಭವನ ಹಾಗೂ ಶ್ರೀನಿವಾಸ ಹಾಸ್ಪಿಟಲ್ ಮುಕ್ಕ ಇದರ ಸಹಯೋಗದೊಂದಿಗೆ ದಿನಾಂಕ 25.02.2018 ರಂದು ಪರಪಾದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಕಾಶಭವನದಲ್ಲಿ ಉಚಿತ ವೈದ್ಯಕೀಯ ಶಿಬಿರ ಜರುಗಿತು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ದೀಪಕ್ ಕೆ.ಪೂಜಾರಿ ಶಿಬಿರ ಉದ್ಘಾಟಿಸಿ ಶುಭ ಹಾರೈಕೆ ಮಾಡಿದರು.ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಎ1 ಫ್ರೆಂಡ್ಸ್ ಅಧ್ಯಕ್ಷರಾದ ಲೋಹಿತ್ ಕುಮಾರ್, ಪರಪಾದೆ ಸರಕಾರಿ […]
Read More
18-02-2018, 4:24 PM
ಯುವವಾಹಿನಿ (ರಿ.) ಉಪ್ಪಿನ೦ಗಡಿ ಘಟಕ ಮತ್ತು ಸ್ಥಳೀಯ ಸ೦ಘ ಸಂಸ್ಥೆಗಳ ಸ೦ಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದ೦ತ ಚಿಕಿತ್ಸಾ ಶಿಬಿರವು ಯೆನಪೋಯ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಯೆನಪೋಯ ದ೦ತ ಮಹಾ ವಿದ್ಯಾಲಯ ದೇರಳಕಟ್ಟೆ ಇಲ್ಲಿಯ ತಜ್ನ ವೈದ್ಯರ ತ೦ಡದೊ೦ದಿಗೆ ದಿನಾಂಕ 18/02/2018 ರಂದು ಸ.ಹಿ.ಪ್ರಾ. ಶಾಲೆ ಹಿರೇಬ೦ಡಾಡಿಯಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಪ್ಪಿನ೦ಗಡಿ ಸಹಸ್ರಲಿ೦ಗೇಶ್ವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಸದಸ್ಯರು, ಹಿರೇಬ೦ಡಾಡಿ ಗ್ರಾ. ಪ೦ ಸದಸ್ಯರಾದ ಪ್ರಕಾಶ್ ರೈಯವರು ದೀಪ ಬೆಳಗಸಿ ಉದ್ಘಾಟಿಸಿ […]
Read More
18-02-2018, 12:03 PM
ಕಾಪು : ಉಡುಪಿ ಜಿಲ್ಲೆ ಸ್ವಚ್ಚತೆಯಲ್ಲಿ ಪ್ರಥಮ, ಹಾಗೂ ಕಾಪು ಪುರಸಭೆ ದ್ವಿತೀಯ ಸ್ಥಾನವನ್ನು ಗಳಿಸಿದ್ದು ನಮ್ಮ ಜಿಲ್ಲೆಯ ಜನ ಸ್ವಚ್ಚತೆಯಲ್ಲಿ ಬದ್ಧತೆ ಹೊಂದಿದವರಾಗಿದ್ದಾರೆ. ಯುವಕರು ಈ ನಿಟ್ಟಿನಲ್ಲಿ ಇಂತಹ ಶಿಬಿರಗಳನ್ನು ನಡೆಸುವುದಯ ಶ್ಲಾಘನೀಯ ಎಂದು ಕಾಪು ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದರು. ಅವರು ದಿನಾಂಕ 18.02.2018 ನೇ ಆದಿತ್ಯವಾರ ಯುವವಾಹಿನಿ (ರಿ) ಕಾಪು ಘಟಕದ ಆಶ್ರಯದಲ್ಲಿ ಕರಾವಳಿ ಪ್ರೇಂಡ್ಸ್ ಎರ್ಮಾಳ್, ಎಸ್ ಎನ್ ಜಿ ಸ್ಪೋರ್ಟ್ಸ್ ಕ್ಲಬ್ ಎರ್ಮಾಳ್, ಸ್ವರ್ಣ ಸೌಹಾರ್ದ ಕ್ರೆಡಿಟ್ […]
Read More
12-11-2017, 4:51 AM
ಯುವವಾಹಿನಿ (ರಿ) ಉಡುಪಿ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಕೆಮ್ತೂರು,ಸಾಧನಾ ಯುವಕ ಮಂಡಲ ಹಾಗೂ ಸಾಧನಾ ಯುವತಿ ಮಂಡಲ ಇದರ ಜಂಟಿ ಆಶ್ರಯದಲ್ಲಿ, ದಿನಾಂಕ 12.11.2017 ರಂದು ಸೂಪರ್ ಸ್ಪೆಷ್ಯಾಲಿಟಿ ಆರೋಗ್ಯ ಶಿಬಿರವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಕೆಮ್ತೂರು, ಉಡುಪಿ ಇಲ್ಲಿ ಜರುಗಿತು . ಯುವವಾಹಿನಿ(ರಿ) ಉಡುಪಿ ಘಟಕವು ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಿಬಿರವನ್ನು ದೀಪ ಬೆಳಗುವುದರ ಮೂಲಕ […]
Read More
22-10-2017, 4:15 PM
ಆಧುನಿಕ ಜೀವನ ಶೈಲಿಯಿಂದ ನಾವು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ತೀರಾ ಅಗತ್ಯ, ಸ್ವಯಂಪ್ರೇರಿತ ರಕ್ತದಾನ ಮಾಡಿದ ಕಟಪಾಡಿ ಯುವವಾಹಿನಿ ಯುವಕರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ತಿಳಿಸಿದರು. ದಿನಾಂಕ 22.10.2017 ರಂದು ಯುವವಾಹಿನಿ(ರಿ) ಕಟಪಾಡಿ ಘಟಕದ ಆಶ್ರಯದಲ್ಲಿ ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ, ವೇದವ್ಯಾಸ ಭಜನಾ ಮಂದಿರ ಅಂಬಾಡಿ, ಬಿಲ್ಲವ ಒಕ್ಕೂಟ ಪಡುಏನಗುಡ್ಡೆ, ರಿಕ್ಷಾ ಚಾಲಕ ಮಾಲಕರ ಸಂಘ ಕಟಪಾಡಿ […]
Read More
08-10-2017, 4:16 AM
ರಕ್ತದಾನ ಮಹಾದಾನ ಶ್ರೇಷ್ಠ ದಾನ ,ಇದು ಮಾನವೀಯತೆಯ ಪ್ರತೀಕ ,ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂಬ ಸಂದೇಶ ಸಾರುತ್ತದೆ , ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಯುವವಾಹಿನಿ ಮಾಣಿ ಘಟಕದ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷರಾದ ಈಶ್ವರ ಪೂಜಾರಿ ತಿಳಿಸಿದರು. ಯುವವಾಹಿನಿ (ರಿ) ಮಾಣಿ ಮತ್ತು ಬಂಟ್ವಾಳ ಘಟಕ, ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲೆ ರಕ್ತನಿಧಿ, ಸರಕಾರಿ ಲೇಡಿಗೋಷನ್ ಆಸ್ಪತ್ರೆ, […]
Read More
02-10-2017, 2:54 AM
ರಕ್ತದಾನ ಅತ್ಯಂತ ಶ್ರೇಷ್ಠ ದಾನ. ರಕ್ತದಾನ ಮೂಲಕ ಅನೇಕರ ಜೀವ ಉಳಿಸುವುದರೊಂದಿಗೆ ದಾನಿಯೂ ಉತ್ತಮ ಆರೋಗ್ಯ ಗಳಿಸಲು ಸಾಧ್ಯ ಎಂದು ಹಳೆಯಂಗಡಿ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚ್ ಸಭಾಪಾಲಕ ಸೆಬೆಸ್ಟಿನ್ ಜತ್ತನ್ ಹೇಳಿದರು. ಯುವವಾಹಿನಿ(ರಿ) ಹಳೆಯಂಗಡಿ ಘಟಕದ ಆಶ್ರಯದಲ್ಲಿ ಲಿಯೋ ಮತ್ತು ಲಯನ್ಸ್ ಕ್ಲಬ್ ಹಳೆಯಂಗಡಿ, , ಜೋರ್ಜ್ ಎ.ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್ ಹಳೆಯಂಗಡಿ, ಹೆಲ್ತ್ ಕೇರ್ ಡಯಾಗ್ನಾಸ್ಟಿಕ್ ಸೆಂಟರ್ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು , ರೆಡ್ ರಿಬ್ಬನ್ ಕ್ಲಬ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು […]
Read More
01-10-2017, 12:33 PM
ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ . ನಾವು ದಾನ ಮಾಡುವ ರಕ್ತದಿಂದ ಜೀವ ಉಳಿಸಬಹುದಾಗಿದೆ ;ರಕ್ತದಾನದಿಂದ ಆರೋಗ್ಯವೂ ಉಲ್ಲಾಸಮಯವಾಗಿರುತ್ತದೆ . ಯುವವಾಹಿನಿ ಪುತ್ತೂರು ಘಟಕವು ಇಂತಹ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಾ ವರ್ಷ 365 ದಿನಗಳಲ್ಲಿ ಕೂಡ ರಕ್ತದ ಅವಶ್ಯಕತೆ ಇದ್ದವರಿಗೆ ಸೂಕ್ತವಾಗಿ ಸ್ಪಂದಿಸುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರು ಹಾಗೂ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷರಾದ ಜಯಂತ ನಡುಬೈಲ್ ತಿಳಿಸಿದರು ದಿನಾಂಕ 01.10.2017 ರಂದು ಯುವವಾಹಿನಿ (ರಿ ) ಪುತ್ತೂರು ಘಟಕದ ಆಶ್ರಯದಲ್ಲಿ […]
Read More