ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದಿಂದ ಅಂಗೈಯಲ್ಲಿ ಆರೋಗ್ಯ ಕಾರ್ಯಕ್ರಮವು ದಿನಾಂಕ 24.06.2018 ರಂದು ಕೂಳೂರು ನಾರಾಯಣಗುರು ಸೇವಾ ಸಂಘದಲ್ಲಿ ಜರುಗಿತು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಮಂಗಳೂರು ವಲಯದ ಶಿಕ್ಷಕರಾದ ಜನಾರ್ದನ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅಂಗೈಯಲ್ಲಿ ಆರೋಗ್ಯ ಕಾರ್ಯಾಗಾರ ನಡೆಸಿಕೊಟ್ಟರು.ದೇಹದ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಅಂಗೈ ಮೂಲಕ ಚಿಕಿತ್ಸೆ ನೀಡುವ ಬಗ್ಗೆ ಪ್ರಾಯೋಗಿಕವಾಗಿ ವಿವರಿಸಿದರು.
ಯುವವಾಹಿನಿ ಕೂಳೂರು ಘಟಕದ ಉಪಾಧ್ಯಕ್ಷ ಭಾಸ್ಕರ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅಧ್ಯಕ್ಷ ಜಯಾನಂದ ಅಮೀನ್ ಉಪಸ್ಥಿತರಿದ್ದರು, ಜತೆ ಕಾರ್ಯದರ್ಶಿ ಲತೀಶ್ ಪೂಜಾರಿ ಅತಿಥಿ ಗಳನ್ನು ಪರಿಚಯಿಸಿದರು. ಕೋಶಾಧಿಕಾರಿ ಮಧುಶ್ರೀ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು, ಆರೋಗ್ಯ ನಿರ್ದೇಶಕ ಜಗದೀಶ್ ಸುವರ್ಣ ವಂದಿಸಿದರು.