ಬಜ್ಪೆ: ವಿದ್ಯೆ ಉದ್ಯೋಗ ಸಂಪರ್ಕವೆನ್ನುವ ಮಹತ್ತರವಾದ ಆಶಯವನ್ನಿರಿಸಿಕೊಂಡು, ಸಮಾಜಮುಖಿಯಾಗಿ ಕಾರ್ಯೋನ್ಮುಖವಾಗಿರುವ ಯುವವಾಹಿನಿ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲೂ ತನ್ನನ್ನು ಬಹುವಾಗಿ ಅನ್ವಯಿತಗೊಳಿಸಿಕೊಂಡಿರುವ ಕಾರಣವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮಡಿಗೇರಿಸಿಕೊಂಡಿರುವುದು ಕಡಿಮೆ ಸಾಧನೆಯೇನಲ್ಲ. ಯುವವಾಹಿನಿ ಕೇಂದ್ರ ಸಮಿತಿಯ ಪಡಿನೆಳಲಲ್ಲಿ ತನ್ನ ಪ್ರತಿಭೆಯನ್ನು ವಿಸ್ತಾರಗೊಳಿಸಿಕೊಂಡಿರುವ ಘಟಕಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಯುವವಾಹಿನಿ(ರಿ.) ಬಜ್ಪೆ ಘಟಕದ ಆಶ್ರಯದಲ್ಲಿ ದಿನಾಂಕ. 14.07.2018 ರಂದು ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ(SEZ) ಇದರ ಸಹಭಾಗಿತ್ವದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್(ರಿ) ಉಡುಪಿ, ಡಾ. ಪಿ ದಯಾನಂದ್ ಪೈ ಮತ್ತು ಪಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್(ರಿ) ಸೆಂಚುರು ಬಿಲ್ಡರ್ಸ್ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಘಟಕ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಸುಂಕದಕಟ್ಟ್, ಬಜ್ಪೆಇವರುಗಳ ಸಹಯೋಗದೊಂದಿಗೆ ಕಣ್ಣಿನ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವು ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ಬಹಳ ಯಶಸ್ವಿಯಾಗಿ ನೆರವೇರಿತು.
ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಮಂಗಲೂರು SEZ ನಿಯಮಿತ ಇದರ ಮುಖ್ಯ ನಿರ್ವಹನಾಧಿಕಾರಿಯವರಾದ ಶ್ರೀ ಸೂರ್ಯನಾರಾಯಣ ಇವರು ಇಂದು ಸ್ಪಷ್ಟ ಸಂಕಲ್ಪವನ್ನು ವೈಯುಕ್ತಿಕವಾಗಿ ಪಾಲಿಸುವುದರ ಜೊತೆಗೆ ಇಂತಹ ಘಟಕ, ಸಂಘ ಸಂಸ್ಥೆ, ಯೋಜನೆಗಳ ಮೂಲ್ಕ ವಾಪ್ತವಾಗಿಸುವುದು ಇಂದು ತೀರಾ ಅಗತ್ಯವಾಗಿದೆ. ಅದರಲ್ಲೂ ಕಣ್ಣಿನಂತಹ ಸೂಕ್ಷ್ಮ ಮತ್ತು ವಿಶೇಷ ಅಂಗಗಳ ಬಗ್ಗೆ ನಾವು ತುಂಬಾ ಜಾಗೃತೆ ವಹಿಸಬೇಕೆನ್ನುತ್ತಾ, ಶಿಬಿರ ಯಶಸ್ವಿಯಾಗಲೆಂದು ಹಾರೈಸಿದರು.
ಸಮಾಜದಲ್ಲಿ ಇಂದು ಕಣ್ಣಿನ ಸುರಕ್ಷತೆಯ ಬಗ್ಗೆ ಹೆಚ್ಚು ಕಾಲಜಿ ವಹಿಸಬೇಕಾಗಿದೆ. ಯುವವಾಹಿನಿ ಇಂತಹ ಸಮಾಜಿಕ ಜವಬ್ದಾರಿಯನ್ನು ಶ್ರೀ ಗುರುವರ್ಯರ ಆಶೀರ್ವಾದದ ಬಲದಿಂದ ಮೂರು ದಶಕಗಳ ಕಾಲದಿಂದ ಪ್ರಾಮಾಣಿಕವಾಗಿ ನಡೆಸಿಕೊಂಡು ಬಂದೊದೆ ಎನ್ನುತ್ತಾ ಒಟ್ಟು ಶಿಬಿರ ಯಶಸ್ವಿಯಾಗಲೆಂದು ಹಾರೈಸಿದರು. ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ನಾರಾಯಣ ಪೂಜಾರಿ, ನೇತ್ರ ವೈದ್ಯರುಗಳಾದ ಡಾ. ಶಿಬನ್ ಗಿರೀಶ್. ಡಾ. ಪ್ರಿಯಾ, ಶ್ರೀ ವಿನೋಧರ ಪೂಜಾರಿ, ಶ್ರೀ ದೀಪಕ್ ಕೋಟ್ಯಾನ್ ಬಜ್ಪೆ ಘಟಕದ ಆರೋಗ್ಯ ನಿರ್ದೇಶಕರಾದ ರಮೇಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಶ್ರೀ ದೇವರಾಜ್ ಅಮೀನ್ ಸಭಾಧ್ಯಕ್ಷತೆ ವಹಿಸಿದ್ದರು. ಬಳಿಕ ಕಣ್ಣಿನ ತಪಾಸಣಾ ಶಿಬಿರದ ಪ್ರಯೋಜನ ಪಡೆಯಲು ಆಗಮಿಸಿದ ಸಾರ್ವಜನಿಕರಿಗೆ ಉಚಿತವಾಗಿ ಸೇವೆಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಕಣ್ಣಿನ ಗ್ಲುಕೋಮ ಕಾಯಿಲೆ ಬಗ್ಗೆ ಡಾ. ಪ್ರಿಯ ಇವರು ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿ
ಈ ಕಾಯಿಲೆಯಿಂದ ಕಣ್ಣನ್ನು ರಕ್ಷಿಸಿಕೊಳ್ಳುವಂತೆ ತಳಿ ಹೇಳಿದರು. ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲತಾ. ಕೆ ಇವರು ಈ ಸಂದರ್ಭದಲ್ಲಿ ಯುವವಾಹಿನಿಯ ಕೆಲಸ ಕಾರ್ಯಗಳನ್ನು ಬಹುವಾಗಿ ಶ್ಲಾಘಿಸಿದರು ಮತ್ತು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರು ಹಾಗು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಖ್ಯಾತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್ ಇವರ ನೇತೃತ್ವದ ತಂಡ ಚಿಕಿತ್ಸಾ ತಪಾಸಣಾ ಶಿಬಿರವನ್ನು ಯಶಸ್ವಿಗೊಳಿಸಿತು. ಈ ಶಿಬಿರದ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರವಹಿಸಿದ ಶ್ರೀ ಗೋಪಾಲಕೃಷ್ಣ ಕೆ. ಇವರು ಈ ಸಂದರ್ಭದಲ್ಲಿ ಜೊತೆಗಿದ್ದರು.
ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯುವವಾಹಿನಿ ಸದಸ್ಯರು, ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕು ಸಕ್ರೀಯವಾಗಿ ಪಾಲ್ಗೊಂಡರು.
ಒಟ್ಟು ಕಾರ್ಯಕ್ರಮವನ್ನು ಶ್ರೀ ವಿಶ್ವನಾಥ ಪೂಜಾರಿ ರೆಂಜಾಳ ಸ್ವಾಗಾತಿಸಿ ನಿರೂಪಿಸಿದರು. ಘಟಕದ ಆರೋಗ್ಯ ನಿರ್ದೇಶಕರಾದ ಶ್ರೀ ರಮೇಶ್ ಕೋಟ್ಯಾನ್ ವಂದಿಸಿದರು.
ಈ ಶಿಬಿರದಲ್ಲಿ ಸುಮಾರು 233 ನೇತ್ರ ತಪಾಸಣೆ ಮಾಡಲಾಯಿತು ಮತ್ತು 23 ಶಿಬಿರಾರ್ಥಿಗಳಿಗೆ ಶಸ್ತ್ರ ಚಿಕಿತ್ಸೆಗೆ ಪ್ರಸಾದ್ ನೇತ್ರಾಲಯಕ್ಕೆ ಶಿಫಾರಸು ಮಾಡಲಾಯಿತು.