ಕೆಂಜಾರು- ಕರಂಬಾರು : ಯುವವಾಹಿನಿ(ರಿ.) ಕೆಂಜಾರು- ಕರಂಬಾರು ಘಟಕ ಹಾಗೂ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ಮುಕ್ಕ ಇವರ ಜಂಟಿ ಆಶ್ರಯದಲ್ಲಿ ಶ್ರೀ ದೇವಿ ಭಜನಾ ಮಂದಿರ ಕೆಂಜಾರು-ಕರಂಬಾರು ಇದರ ಸಭಾಭವನದಲ್ಲಿ ದಿನಾಂಕ 19.08.2018 ರಂದು ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀಯುತ ಸೇಸಪ್ಪ ಅಮೀನ್ ರವರು ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂದಿರದ ಗೌರವ ಅಧ್ಯಕ್ಷ ರಾದ ವಿಶ್ವಾನಂದ ಶೆಟ್ಟಿ,ಗೌರವ ಸಲಹೆಗಾರರಾದ ಜಗನ್ನಾಥ ಸಾಲ್ಯಾನ್ ,ಶ್ರೀನಿವಾಸ್ ಕಾಲೇಜಿನ ದಂತ ತಜ್ಙ ಡಾ. ಕೃಪಾಲ್ ರೈ ಉಪಸತ್ಥಿರಿದ್ದರು. ಡಾ.ಕೃಪಾಲ್ ರೈ ನಮ್ಮ ನಿತ್ಯಜೀವನದಲ್ಲಿ ಹಲ್ಲುಗಳ ಆರೋಗ್ಯದ ಬಗ್ಗೆ ನಮಗಿರಬೇಕಾದ ಕಾಳಜಿ ಹಾಗೂ ದಂತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಘಟಕದ ಅಧ್ಯಕ್ಷರಾದ ಗಣೇಶ ಅರ್ಬಿ ಅದ್ಯಕ್ಷತೆ ವಹಿಸಿದ್ದರು. ಘಟಕದ ಸಂಘಟನಾ ಕಾರ್ಯದರ್ಶಿ ಸಂದೀಪ್ ಶಿಬಿರದ ಸಂಚಾಲಕತ್ವ ವಹಿಸಿದ್ದರು. ಸಮಾಜ ಸೇವೆ ನಿರ್ದೇಶಕಿ ಸುಜಾತ ಶೇಖರ್ ಪ್ರಾಸ್ತಾವಿಕ ಭಾಷಣಗೈದರು. ಕಾರ್ಯದರ್ಶಿ ಜೀತೇಶ್ ಸಾಲ್ಯಾನ್ ನಿರೂಪಿಸಿ ವಂದಿಸಿದರು. ಒಟ್ಟು 78 ಜನ ಈ ಶಿಬಿರದ ಪ್ರಯೋಜನ ಪಡೆದರು.