ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 29/08/2018 ರಂದು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ। ಸೌಮ್ಯಾ ಇವರು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು . ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಸಲಹೆಗಾರರಾದ ನೇಮಿರಾಜ್, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ , ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಅಧ್ಯಕ್ಷರಾದ ಜಯಾನಂದ್ ಅಮೀನ್, ಗೋಪಾಲಕೃಷ್ಣ ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ಗಿರಿಧರ ಸನಿಲ್, ಜೊತೆ ಕಾರ್ಯದರ್ಶಿ, ಲತೀಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಡಾ. ಸೌಮ್ಯ ಇವರ ಕಿರುಪರಿಚಯವನ್ನು ದೀಕ್ಷಿತ್ ಸಭೆಯ ಮುಂದಿಟ್ಟರು. ಡಾ। ಸೌಮ್ಯಾ ಇವರು ಕಣ್ಣಿನ ಆರೋಗ್ಯದ ಬಗ್ಗೆ ಮಾತನಾಡಿ ಅವರು ಕಣ್ಣಿಗೆ ಯಾವುದೇ ರೀತಿಯ ತೊಂದರೆ ಆದರೂ ತಕ್ಷಣ ಕಣ್ಣಿನ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು. ವೆಲ್ಡಿಂಗ್ ಕೆಲಸ ಮಾಡುವವರು ಕಡ್ಡಾಯವಾಗಿ ಸೇಫ್ಟಿ ಕನ್ನಡಕ ಧರಿಸಲೇಬೇಕು ಹಾಗೂ ಕಣ್ಣಿನ ಎಲರ್ಜಿ ಇರುವವರು ಹೊರಗಡೆ ಹೋಗುವಾಗ ಕಪ್ಪು ಕನ್ನಡಕ ಧರಿಸಬೇಕು ಎಂದರು. ನಂತರ ಕಣ್ಣಿನ ಪೊರೆ, ಮಧುಮೇಹ ಕಾಯಿಲೆಯಿಂದ ಕಣ್ಣಿಗೆ ಆಗುವ ತೊಂದರೆ ಬಗ್ಗೆ ಮಾಹಿತಿ ನೀಡಿದರು. ನೇತ್ರದಾನದ ಕುರಿತು ಮಾತನಾಡಿ, ನೇತ್ರದಾನವೇ ಶ್ರೇಷ್ಠ ದಾನ ಎಂದರು. ಕಣ್ಣಿನ ರಕ್ತದೊತ್ತಡದ ಬಗ್ಗೆ ಮಾತನಾಡಿ, ಇದರಿಂದ ಗ್ಲೂಕೊಮ ಆಗುವ ಸಾಧ್ಯತೆ ಇದೆ ಎಂದರು. ಕೋಶಾಧಿಕಾರಿ ಮಧುಶ್ರೀ ಪ್ರಶಾಂತ್ ವಂದಿಸಿದರು.