11-11-2018, 4:27 PM
ಕಟಪಾಡಿ : ಯುವವಾಹಿನಿ(ರಿ) ಕಟಪಾಡಿ ಘಟಕದಿಂದ ದಿನಾಂಕ 19.11.2018 ರಂದು ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ದೀಪಾವಳಿ ಮತ್ತು ಕ್ಷೇತ್ರದ ಭಜನಾ ಸಪ್ತಾಹದ ಪ್ರಯುಕ್ತ ಗೂಡುದೀಪ ಸ್ಪರ್ಧೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಿತೇಶ್ ಬಿ. ಕೋಟ್ಯಾನ್ ವಹಿಸಿದರು. ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷ ರತ್ನಾಕರ್ ಆಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷರಾದ ಅಶೋಕ್ ಎಮ್. ಸುವರ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್, ಹಾಗೂ ಸದಸ್ಯರು, […]
Read More
08-11-2018, 4:49 PM
ಕುಪ್ಪೆಪದವು : ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ದಿನಾಂಕ 08-11-2018 ರಂದು ಬೆಳಿಗ್ಗೆ 9.00 ಗಂಟೆಗೆ ದೀಪಾವಳಿ ಹಬ್ಬದ ಪ್ರಯುಕ್ತ, ನಮ್ಮ ನಡೆ ಬೇಸಾಯದ ಕಡೆ ಎಂಬ ಚಿಂತನೆಯಲ್ಲಿ ಪ್ರಾರಂಭವಾಗಿ ನಾಗಂಡದಿಯ ಗದ್ದೆಯಲ್ಲಿ ನಿರೀಕ್ಷಿತ ಸಮೃದ್ಧ ಬತ್ತದ ಫಸಲನ್ನು ಪಡೆದು, ದಾನ್ಯಲಕ್ಮಿ ಮತ್ತು ಗೋ ಮಾತೆಯ ಪೂಜೆಯನ್ನು ಷೋಡೋಪಚಾರಿ ವಿದಿ ವಿಧಾನಗಳಿಂದ ಮಹಿಳೆಯರ ನೇತೃತ್ವದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಈ ಧಾರ್ಮಿಕ ಸಂಪ್ರದಾಯದ ಮೂಲಕ ಯಶಸ್ವಿಯಾಗಿ ನಡೆಸಿಕೊಟ್ಟರು. ಅಲ್ಲದೆ ಕೃಷಿ […]
Read More
07-11-2018, 2:59 PM
ಉಪ್ಪಿನಂಗಡಿ : ಯುವವಾಹಿನಿ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಯುವತುಡರ್ -2018 ಕಾರ್ಯಕ್ರಮವು ಘಟಕದ ಉಪಾಧ್ಯಕ್ಷರಾದ ಚಂದ್ರಶೇಖರ ಕೆ. ಸನಿಲ್ ಇವರ ಮನೆ “ಯಮುನಾ” ಇಲ್ಲಿ ದಿನಾಂಕ ೦೭. ೧೧. ೨೦೧೮ ರಂದು ನಡೆಯಿತು. ಘಟಕದ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು ಭಾಗವಹಿಸಿ ಮಾತನಾಡಿ ದೀಪಾವಳಿಯು ತುಳುನಾಡಿನ ವಿಶಿಷ್ಟ ಹಬ್ಬವಾಗಿದ್ದು, ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಪಸರಿಸುವ ಸಂಸ್ಕೃತಿಗಳ ಪ್ರತೀಕವಾದ ದೀಪಾವಳಿಯು ಎಲ್ಲರ ಬದುಕಿನಲ್ಲಿ ದೀಪದಂತೆ ಬೆಳಗಲಿ ಎಂದು ಶುಭ […]
Read More
06-11-2018, 5:05 PM
ಮೂಲ್ಕಿ: ನಾರಾಯಣಗುರುಗಳ ತತ್ವ ಆದರ್ಶದಂತೆ ಇಂದು ಬಿಲ್ಲವ ಸಮಾಜವು ಸಂಘಟನತ್ಮಕವಾಗಿ ಬೆಳೆಯುವುದರೊಂದಿಗೆ ಸಮಾಜದಲ್ಲಿ ಕರಾವಳಿಯ ಸಂಪ್ರದಾಯವನ್ನು ಸಂಸ್ಥೆಯ ಮೂಲಕ ಉಳಿಸುವ ಪ್ರಯತ್ನ ಶ್ಲಾಘನೀಯವಾಗಿದೆ. ಯುವ ಸಮಾಜವನ್ನು ಕಟ್ಟಿ ಬೆಳೆಸುವ ಜವಬ್ದಾರಿಯನ್ನು ನಾರಾಯಣಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ಉಡುಪಿಯ ಕಿರಿಯ ಕಾನೂನು ಅಧಿಕಾರಿ ಮುಮ್ತಾಜ್ ಹೇಳಿದರು. ಅವರು ಮೂಲ್ಕಿ ಯುವವಾಹಿನಿ ಘಟಕದ ವತಿಯಿಂದ ದಿನಾಂಕ 06.11.2018 ರಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ 16ನೇ ವರ್ಷದ ತುಳುವೆರೆ ತುಡಾರ ಪರ್ಬವನ್ನು ಉದ್ಘಾಟಿಸಿ ಮಾತನಾಡಿದರು. ಮೂಲ್ಕಿ ಕೊಸೆಸಾಂ […]
Read More
06-11-2018, 3:36 PM
ಕೂಳೂರು : ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ‘ಕತ್ತಲಿನಿಂದ ಬೆಳಕಿನೆಡೆಗೆ- ನಮ್ಮ ಮನೆ ಹಬ್ಬ ದೀಪಾವಳಿ’ ಯನ್ನು ದಿನಾಂಕ 06/11/2018 ರಂದು ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಘಟಕದ ಕುಟುಂಬ ಸಂಪರ್ಕ ನಿರ್ದೇಶಕರಾದ ರೇಣುಕಾ ತಾರನಾಥ್ ಅವರ ಸಂಚಾಲಕತ್ವದಲ್ಲಿ ಅವರ ಮನೆಯಲ್ಲಿ 90 ಮಂದಿ ಸದಸ್ಯರ ಉಪಸ್ಥಿತಿಯೊಂದಿಗೆ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ವಹಿಸಿದ್ದರು .ಮುಖ್ಯ ಅತಿಥಿಯಾಗಿ ಯುವವಾಹಿನಿ(ರಿ) ಕೇಂದ್ರ […]
Read More
05-11-2018, 3:29 PM
ಕೂಳೂರು : ಬೆಳಕಿನ ಒಂದು ಸೆಲೆ ಸಾಕು ಬದುಕಿನಲ್ಲಿ ಜೀವನೋತ್ಸಾಹ ತುಂಬಲು .ಹಣತೆಯ ಬೆಳಕಿನಲ್ಲಿ ಒಬ್ಬರ ಕಷ್ಟ, ನೋವು,ನಲಿವನ್ನು ಕ್ಷಣಕಾಲ ಕಂಡು ಅರ್ಥೈಸಿಕೊಳ್ಳಲು ಇದೊಂದು ಸದಾವಕಾಶ ಎನ್ನುವಂತೆ ಶ್ರೀ ಗುರುವರ್ಯರ ಆಶೀರ್ವಾದದೊಂದಿಗೆ, ಕೂಳೂರು ಘಟಕದ ಆಶಯದಂತೆ ದೀಪಾವಳಿ ಹಬ್ಬದಂದು ಇಡೀ ಜಗತ್ತೇ ಬೆಳಕಿನಲ್ಲಿ ಜಗಮಗಿಸುವಾಗ ಕೆಲವೊಂದು ಮನೆಯಲ್ಲಿ ಹಣತೆ ಹಚ್ಚಲು ಸಾಧ್ಯವೇ ಇಲ್ಲ ಎನ್ನುವ ದಯನೀಯ ಕುಟುಂಬಗಳು ನಮ್ಮ ಸಮಾಜದಲ್ಲಿ ಇರುವುದನ್ನು ಗುರುತಿಸಿ ಅವರಿಗೆ ಒಂದು ತಿಂಗಳ ದಿನಬಳಕೆಯ ಎಲ್ಲ ಸಾಮಗ್ರಿಗಳನ್ನು ಒದಗಿಸಿಕೊಟ್ಟು ದೀಪಾವಳಿಯ ಅರ್ಥಪೂರ್ಣ ಆಚರಣೆಯಲ್ಲಿ […]
Read More
04-11-2018, 4:27 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ವತಿಯಿಂದ ದಿನಾಂಕ 04/11/2018 ರಂದು ದೀಪಾವಳಿ ಪ್ರಯುಕ್ತ ” ದೀಪಾವಳಿ ಒರ್ಲ ಪೊರ್ಲು ” ಕಾರ್ಯಕ್ರಮ ಆಚರಿಸಲಾಯಿತು. ನಳಿನಿ ಟೀಚರ್ ರವರು ಕಾರ್ಯಕ್ರಮ ಉದ್ಘಾಟಿಸಿ ದೀಪಾವಳಿ ಆಚರಣೆ ಬಗ್ಗೆ ಮಾತನಾಡಿದರು. ನರಕಚತುರ್ದಶಿ, ಎಣ್ಣೆ ಸ್ನಾನ, ತುಳಸೀ ಪೂಜೆ, ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ, ಗೋಪೂಜೆ , ಗೂಡುದೀಪ, ಮುಂತಾದ ಎಲ್ಲಾ ವಿಷಯಗಳ ಬಗ್ಗೆ ತಿಳಿಸಿದರು. ಘಟಕದ ಸಲಹೆಗಾರರಾದ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರು ದೀಪಾವಳಿಯ […]
Read More
28-10-2018, 3:06 PM
ಮೂಡಬಿದಿರೆ : ತುಳುನಾಡಿನ ಕೌಟುಂಬಿಕ ಭಾಂದವ್ಯ ಅತ್ಯಂತ ಶಕ್ತಿಯುತ ಆದರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಕೌಟುಂಬಿಕ ಭಾಂದವ್ಯವಾಗಲಿ, ನೆರೆ ಮನೆಯ ಸಂಬಂಧಗಳಲ್ಲಿ ದಿನೇ ದಿನೇ ಕುಸಿಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಯಂತ್ರ ಮತ್ತು ವಾಣಿಜ್ಯ ಪರತೆ ಮನುಷ್ಯನ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ, ಇದು ಅನೇಕ ಅತೃಪ್ತಿ ಮತ್ತು ಅತಂಕಕ್ಕೆ ಕಾರಣವಾಗುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ತಿಳಿಸಿದರು. ಅವರು ಸಿದ್ದಕಟ್ಟೆ ಸಮೀಪದ ಪಡು ಪಾಲ್ಜಲ್ ಗುತ್ತು […]
Read More
30-09-2018, 4:19 PM
ಶಕ್ತಿನಗರ : ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ದಿನಾಂಕ 30/09/2018 ರಂದು ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ ಪ್ರಯುಕ್ತ ಭಜನಾ ಕಾರ್ಯಕ್ರಮ ಜರುಗಿತು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಕಿಶೋರ್ ಕೆ ಬಿಜೈ ಇವರಿಂದ ಭಜನಾ ಕಾರ್ಯಕ್ರಮವು ಉದ್ಘಾಟನೆಗೊಂಡು ನಂತರ ಘಟಕದ ಸದಸ್ಯರಿಂದ ಭಜನಾ ಕಾರ್ಯಕ್ರಮವು ನಡೆಯಿತು. ಸತ್ಯಜಿತ್ ಸುರತ್ಕಲ್ (ಅಧ್ಯಕ್ಷರು,ಯುವಮೋರ್ಚ ಬಿಜೆಪಿ) , ಸೂರಜ್ ಕುಮಾರ್ ಕಲ್ಯ(ಟ್ರಸ್ಟಿ ವಿಕಾಸ್ ಪಿಯು ಕಾಲೇಜ್), ಯುವವಾಹಿನಿ(ರಿ.)ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ ರಾಜೀವ ಪೂಜಾರಿ, ಕೇಂದ್ರ ಸಮಿತಿಯ ಮಾಜಿ […]
Read More
23-09-2018, 7:40 AM
ಮಂಗಳೂರು : ಭಜನೆಯಿಂದ ಪ್ರಗತಿ, ಕ್ಷಮತೆ, ಶಿಸ್ತು, ಕ್ರಿಯಾಶೀಲತೆ, ಕೌಶಲ, ಸಾಧನೆ ಹೆಚ್ಚಾಗುತ್ತದೆ. ಭಕ್ತಿಯ ಅಂತರಗಂಗೆ ಭಜನೆ ಮೂಲಕ ಜಲಪಾತವಾಗಿ ಧುಮುಕುತ್ತದೆ. ನಿಷ್ಕಲ್ಮಶ ಪ್ರೀತಿಯಿಂದ, ಮುಗ್ದ ಭಕ್ತಿಯಿಂದ ಭಜನೆ ಹಾಡಿದರೆ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಭಜನಾ ಸಂಸ್ಕೃತಿಯ ಪುನರುತ್ಥಾನದೊಂದಿಗೆ ಭಜಕರು ನವಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು , ಭಜನೆ ಆತ್ಮ ಶುದ್ಧೀಕರಣದ ಸನ್ಮಾರ್ಗ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು. ಅವರು ದಿನಾಂಕ 23.09.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ […]
Read More