ನಮ್ಮ ಮನೆ ಹಬ್ಬ ದೀಪಾವಳಿ ಕತ್ತಲಿನಿಂದ ಬೆಳಕಿನೆಡೆಗೆ ಕಾರ್ಯಕ್ರಮವು ಘಟಕದ ಕೋಶಾಧಿಕಾರಿ ಇಂದಿರ ರವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಭಾಷ್ ರವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ, ಯುವವಾಹಿನಿ ಕೂಳೂರು ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ. ಯು ಅಮೀನ್, ಮಾರ್ಗದರ್ಶಕರಾದ ಗಿರಿಧರ ಸನಿಲ್, ಕಾರ್ಯಕ್ರಮದ ಸಂಚಾಲಕರಾದ ಇಂದಿರ ಮತ್ತು ಅವರ ಪತಿ ಸುರೇಶ್ ಹಾಗೂ ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ಉಪಸ್ಥಿತರಿದ್ದರು. ಅಧ್ಯಕ್ಷರು ಎಲ್ಲರನ್ನೂ ಹೂ ನೀಡಿ ಸ್ವಾಗತಿಸಿದರು. ಮುಖ್ಯ ಅತಿಥಿ ಸುಭಾಷ್ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವವಾಹಿನಿ ಕೂಳೂರು ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಘಟಕದ ಸದಸ್ಯರಾದ ವಿಘ್ನೇಶ್ ಬೋಳೂರು ರವರು ದೀಪಾವಳಿ ಹಬ್ಬದ ವಿಶೇಷತೆ ಬಗ್ಗೆ, ಬಲಿಪಾಡ್ಯಮಿ ವಿಶೇಷತೆ, ಬಲಿ ಚಕ್ರವರ್ತಿ, ಕೃಷ್ಣನ ವಾಮನಾವತಾರ ಇದೆಲ್ಲದರ ಬಗ್ಗೆ ಸಭೆಗೆ ಸಂಪೂರ್ಣ ಮಾಹಿತಿ ನೀಡಿದರು. ಅಧ್ಯಕ್ಷರು ಮಾತನಾಡಿ ಸರಳತೆಗೆ ಮಹತ್ವ ಕೊಟ್ಟು ಈ ಕಾರ್ಯಕ್ರಮ ಆಯೋಜಿಸಿದ್ದು, ಸದಸ್ಯರ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ ಎಂದರು. ನಂತರ ಕಾರ್ಯಕ್ರಮದ ಸಂಚಾಲಕರಾದ ಇಂದಿರಾ ಮತ್ತು ಅವರ ಪತಿ ಸುರೇಶ್ ರವರನ್ನು ಅಭಿನಂದಿಸಲಾಯಿತು. ನಂತರ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆ ಹಾಗೂ ಗೂಡು ದೀಪ ಸ್ಪರ್ಧೆ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ನಂತರ ಬಹುಮಾನ ವಿತರಣೆ ಮಾಡಲಾಯಿತು.
ಮಧುಶ್ರೀ ಪ್ರಶಾಂತ್ ಹಾಗೂ ನಯನ ರಮೇಶ್ ಪ್ರಾರ್ಥಿಸಿದರು. ಶೈಲೇಶ್ ಕುಮಾರ್ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕರಾದ ಇಂದಿರಾ ಸುರೇಶ್ ವಂದಿಸಿದರು.
ನಂತರ ಘಟಕದ ಸದಸ್ಯರಿಂದ ರಸಮಂಜರಿ ನಡೆಯಿತು. ಎಲ್ಲರಿಗೂ ಬೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.