Yuvavahini

ಸಂಸ್ಕೃತಿ

ಬಡವರ ಮನೆಗೆ ಬೆಳಕು ಮೂಡಿಸಿದ ಕೂಳೂರು ಘಟಕ

ಕೂಳೂರು : ಬೆಳಕಿನ ಒಂದು ಸೆಲೆ ಸಾಕು ಬದುಕಿನಲ್ಲಿ ಜೀವನೋತ್ಸಾಹ ತುಂಬಲು .ಹಣತೆಯ ಬೆಳಕಿನಲ್ಲಿ ಒಬ್ಬರ ಕಷ್ಟ, ನೋವು,ನಲಿವನ್ನು ಕ್ಷಣಕಾಲ ಕಂಡು ಅರ್ಥೈಸಿಕೊಳ್ಳಲು ಇದೊಂದು ಸದಾವಕಾಶ ಎನ್ನುವಂತೆ ಶ್ರೀ ಗುರುವರ್ಯರ ಆಶೀರ್ವಾದದೊಂದಿಗೆ, ಕೂಳೂರು ಘಟಕದ ಆಶಯದಂತೆ ದೀಪಾವಳಿ ಹಬ್ಬದಂದು ಇಡೀ ಜಗತ್ತೇ ಬೆಳಕಿನಲ್ಲಿ ಜಗಮಗಿಸುವಾಗ ಕೆಲವೊಂದು ಮನೆಯಲ್ಲಿ ಹಣತೆ ಹಚ್ಚಲು ಸಾಧ್ಯವೇ ಇಲ್ಲ ಎನ್ನುವ ದಯನೀಯ ಕುಟುಂಬಗಳು ನಮ್ಮ ಸಮಾಜದಲ್ಲಿ ಇರುವುದನ್ನು ಗುರುತಿಸಿ ಅವರಿಗೆ ಒಂದು ತಿಂಗಳ ದಿನಬಳಕೆಯ ಎಲ್ಲ ಸಾಮಗ್ರಿಗಳನ್ನು ಒದಗಿಸಿಕೊಟ್ಟು ದೀಪಾವಳಿಯ ಅರ್ಥಪೂರ್ಣ ಆಚರಣೆಯಲ್ಲಿ […]

Read More

ದೀಪಾವಳಿ ಒರ್ಲ ಪೊರ್ಲು

ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ವತಿಯಿಂದ ದಿನಾಂಕ 04/11/2018 ರಂದು ದೀಪಾವಳಿ ಪ್ರಯುಕ್ತ ” ದೀಪಾವಳಿ ಒರ್ಲ ಪೊರ್ಲು ” ಕಾರ್ಯಕ್ರಮ ಆಚರಿಸಲಾಯಿತು. ನಳಿನಿ ಟೀಚರ್ ರವರು ಕಾರ್ಯಕ್ರಮ ಉದ್ಘಾಟಿಸಿ ದೀಪಾವಳಿ ಆಚರಣೆ ಬಗ್ಗೆ ಮಾತನಾಡಿದರು. ನರಕಚತುರ್ದಶಿ, ಎಣ್ಣೆ ಸ್ನಾನ, ತುಳಸೀ ಪೂಜೆ, ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ, ಗೋಪೂಜೆ , ಗೂಡುದೀಪ, ಮುಂತಾದ ಎಲ್ಲಾ ವಿಷಯಗಳ ಬಗ್ಗೆ ತಿಳಿಸಿದರು. ಘಟಕದ ಸಲಹೆಗಾರರಾದ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರು ದೀಪಾವಳಿಯ […]

Read More

ಕುಟುಂಬ ಭಾಂದವ್ಯ ಸಡಿಲ : ಡಾ.ಮಧುಮಾಲ ಖೇದ

ಮೂಡಬಿದಿರೆ : ತುಳುನಾಡಿನ ಕೌಟುಂಬಿಕ ಭಾಂದವ್ಯ ಅತ್ಯಂತ ಶಕ್ತಿಯುತ ಆದರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಕೌಟುಂಬಿಕ ಭಾಂದವ್ಯವಾಗಲಿ, ನೆರೆ ಮನೆಯ ಸಂಬಂಧಗಳಲ್ಲಿ ದಿನೇ ದಿನೇ ಕುಸಿಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಯಂತ್ರ ಮತ್ತು ವಾಣಿಜ್ಯ ಪರತೆ ಮನುಷ್ಯನ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ, ಇದು ಅನೇಕ ಅತೃಪ್ತಿ ಮತ್ತು ಅತಂಕಕ್ಕೆ ಕಾರಣವಾಗುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ತಿಳಿಸಿದರು. ಅವರು ಸಿದ್ದಕಟ್ಟೆ ಸಮೀಪದ ಪಡು ಪಾಲ್ಜಲ್ ಗುತ್ತು […]

Read More

ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ಭಜನಾ ಕಾರ್ಯಕ್ರಮ

ಶಕ್ತಿನಗರ : ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ದಿನಾಂಕ 30/09/2018 ರಂದು ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ ಪ್ರಯುಕ್ತ ಭಜನಾ ಕಾರ್ಯಕ್ರಮ ಜರುಗಿತು.  ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಕಿಶೋರ್ ಕೆ ಬಿಜೈ ಇವರಿಂದ ಭಜನಾ ಕಾರ್ಯಕ್ರಮವು ಉದ್ಘಾಟನೆಗೊಂಡು ನಂತರ ಘಟಕದ ಸದಸ್ಯರಿಂದ ಭಜನಾ ಕಾರ್ಯಕ್ರಮವು ನಡೆಯಿತು. ಸತ್ಯಜಿತ್ ಸುರತ್ಕಲ್ (ಅಧ್ಯಕ್ಷರು,ಯುವಮೋರ್ಚ ಬಿಜೆಪಿ) , ಸೂರಜ್ ಕುಮಾರ್ ಕಲ್ಯ(ಟ್ರಸ್ಟಿ ವಿಕಾಸ್ ಪಿಯು ಕಾಲೇಜ್), ಯುವವಾಹಿನಿ(ರಿ.)ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ ರಾಜೀವ ಪೂಜಾರಿ, ಕೇಂದ್ರ ಸಮಿತಿಯ ಮಾಜಿ […]

Read More

ಭಜನೆ ಆತ್ಮ ಶುದ್ಧೀಕರಣದ ಸನ್ಮಾರ್ಗ : ವೇದವ್ಯಾಸ ಕಾಮತ್

ಮಂಗಳೂರು : ಭಜನೆಯಿಂದ ಪ್ರಗತಿ, ಕ್ಷಮತೆ, ಶಿಸ್ತು, ಕ್ರಿಯಾಶೀಲತೆ, ಕೌಶಲ, ಸಾಧನೆ ಹೆಚ್ಚಾಗುತ್ತದೆ. ಭಕ್ತಿಯ ಅಂತರಗಂಗೆ ಭಜನೆ ಮೂಲಕ ಜಲಪಾತವಾಗಿ ಧುಮುಕುತ್ತದೆ. ನಿಷ್ಕಲ್ಮಶ ಪ್ರೀತಿಯಿಂದ, ಮುಗ್ದ ಭಕ್ತಿಯಿಂದ ಭಜನೆ ಹಾಡಿದರೆ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಭಜನಾ ಸಂಸ್ಕೃತಿಯ ಪುನರುತ್ಥಾನದೊಂದಿಗೆ ಭಜಕರು ನವಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು , ಭಜನೆ ಆತ್ಮ ಶುದ್ಧೀಕರಣದ ಸನ್ಮಾರ್ಗ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು. ಅವರು ದಿನಾಂಕ 23.09.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ […]

Read More

ಆಚರಣೆ ಆರಾಧನೆಗಳಲ್ಲಿ ಮನುಷ್ಯ ಸಂಬಂಧವನ್ನು ಕಾಪಾಡುವ, ನಿಸರ್ಗವನ್ನು ಗೌರವಿಸುವ ಜೀವನಾದರ್ಶಗಳಿವೆ : ಮಧುಮಾಲ

ಮಂಗಳೂರು : ಜಾಗತೀಕರಣದ ಪ್ರಭಾವ ಇಂದು ಎಲ್ಲೆಡೆ ವ್ಯಾಪಿಸುತ್ತಿದೆ. ಬದಲಾವಣೆ ಎಂಬುದು ಜೀವಂತ ಸಮಾಜದ ಲಕ್ಷಣ ಎಂಬುದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕು ಆದರೆ ಈ ಬದಲಾವಣೆಯ ಗತಿ ನಮ್ಮ ದೇಸಿ ನುಡಿ-ಸಂಸ್ಕೃತಿಯ ಬುಡ ಅಲುಗಾಡಿಸುವಂತಾಗಬಾರದು ಹೊಸತನ್ನು ಸ್ವೀಕರಿಸುತ್ತಲೇ ಈ ನೆಲದ ಜೀವನಮೌಲ್ಯ-ಕಲಾಮೌಲ್ಯಗಳು ಉಳಿಯುವಂತಾಗಬೇಕು. ತುಳುನಾಡಿನ ಹಬ್ಬ, ಆಚರಣೆ ಆರಾಧನೆಗಳಲ್ಲಿ ಮನುಷ್ಯ ಸಂಬಂಧವನ್ನು ಕಾಪಾಡುವ, ನಿಸರ್ಗವನ್ನು ಗೌರವಿಸುವ ಜೀವನಾದರ್ಶಗಳಿವೆ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಮಧುಮಾಲ ತಿಳಿಸಿದರು. ಅವರು ದಿನಾಂಕ 15.09.2018 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ […]

Read More

ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳು ಇದೀಗ ಹಬ್ಬದ ವಾತವರಣವನ್ನು ಸೃಷ್ಟಿಸಿದೆ- ವಾಮನ ಕೋಟ್ಯಾನ್

ಅಡ್ವೆ: ಹಿಂದಿನ ಕಾಲದ ಪದ್ದತಿಯನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ದಂತಹ ಕಾರ್ಯಕ್ರಮಗಳು ಇದೀಗ ಆಟಿ ತಿಂಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದೆ. ಈಗಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ತುಳುನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಜೀವ ತುಂಬುತ್ತಿದ್ದು, ಮುಂದಿನ ಪೀಳಿಗೆಗಳು ನಮ್ಮ ಕೃಷಿ ಬದುಕನ್ನು ಟಿವಿ ಪರದೆ ಮೇಲೆ ನೋಡುವಂತಾಗದಿರಲಿ ಎಂದು ಸಾಹಿತಿ, ಹೆಜಮಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ವಾಮನ ಕೋಟ್ಯಾನ್ ನಡಿಕುದ್ರು ನುಡಿದರು. ಅವರು ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ […]

Read More

ಯುವಪೀಳಿಗೆಯನ್ನು ಮುಖ್ಯವಾಹಿನಿಗೆ ಕರೆತನ್ನಿ: ಪದ್ಮನಾಭ ಕೋಟ್ಯಾನ್

ಹಳೆಯಂಗಡಿ : ಯುವಪೀಳಿಗೆಯನ್ನು ಮುಖ್ಯವಾಹಿನಿಗೆ ಕರೆತರಲು, ಸಮಾಜದ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘಟನೆಯು ಸಹಕಾರಿಯಾಗಿದೆ. . ತುಳುನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಿ ಬೆಳೆಸಲು ಹಿರಿಯರ ಮಾರ್ಗದರ್ಶನದಲ್ಲಿ ನಂಬಿಕೆಯನ್ನು ಪ್ರೋತ್ಸಾಹಿಸುವ ಕಾರ್ಯ ನಾವೆಲ್ಲರೂ ಸೇರಿ ಮಾಡಬೇಕು ಎಂದು ಕರ್ನಾಟಕ ಧಾರ್ಮಿಕ ಪರಿಷತ್ ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ವಠಾರದಲ್ಲಿ ದಿನಾಂಕ 12.08.2018 ರಂದು ತುಳು ಸಂಸ್ಕ್ರತಿಯನ್ನು ಬಿಂಬಿಸುವ ಆಟಿದ ಐಸ್ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಂಗಳೂರು […]

Read More

ಆಟಿದ ನೆಂಪು ಯುವ ಜನಾಂಗದಲ್ಲಿ ಜಾಗ್ರತಿ ಮೂಡಿಸಿದೆ : ಪ್ರಭಾಕರ ನೀರುಮಾರ್ಗ

. ಬಜ್ಪೆ: ವ್ಯವಸಾಯ ಮತ್ತು ಕೃಷಿಯೊಂದಿಗೆ ಆಟಿ ತಿಂಗಳಿಗೆ ಅತೀ ಹತ್ತಿರದ ಸಂಭಂದವಿದೆ. ಆಹಾರ ಅನುಷ್ಠಾನಗಳಲ್ಲಿ ಪ್ರತಿ ತಿಂಗಳಿಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಪ್ರಕೃತಿ, ಭೂಮಿ ಮತ್ತು ನಮ್ಮ ಈ ಜೀವ, ದೇಹದ ನಡುವೆ ಅತೀಯಾದ ಸಂಭಂದವಿರುವುದು ಆಟಿ ತಿಂಗಳಲ್ಲಿ. ಈ ತಿಂಗಳಲ್ಲಿ ನಾವೇನನ್ನ ಆಹಾರ ಪಥ್ಯಗಳಾಗಿ ಸ್ವೀಕರಿಸುತ್ತೇವೆ, ಪ್ರಕೃತಿ ಭೂಮಿಗೂ ಅದನ್ನು ಉಣಬಡಿಸಿ ಸಮ ತೋಲನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಈ ಹಿಂದಿನ ದಿನ ಮಾನಗಳಲ್ಲಿ ಅವಶ್ಯವಾಗಿ ಆಟಿ ತಿಂಗಳಲ್ಲಿ ಸೇವಿಸಬೇಕಾದ ಆಹಾರವು ಔಷಧವಾಗಿ ಇಡೀ […]

Read More

ಯುವವಾಹಿನಿ ಕೊಲ್ಯ ಘಟಕದಿಂದ ಆಟಿಡೊಂಜಿ ದಿನ

ಕೊಲ್ಯ: ಯುವವಾಹಿನಿ ರಿ ಕೊಲ್ಯ ಘಟಕ, ಬಿಲ್ಲವ ಸೇವಾ ಸಮಾಜ ರಿ ಕೊಲ್ಯ ಸೋಮೇಶ್ವರ ಹಾಗೂ ನಾರಾಯಣಗುರು ಮಹಿಳಾ ಮಂಡಳಿ ಕೊಲ್ಯ ಇದರ ಸಹಯೋಗದೊಂದಿಗೆ ತಾರೀಕು 29-07-2018 ನೇ ಆದಿತ್ಯವಾರದಂದು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನ ಕೊಲ್ಯದಲ್ಲಿ ಜರಗಿತು.ಕಾರ್ಯಕ್ರಮವನ್ನು ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾದ ಶ್ರೀಮತಿ ಸುಧಾಸುರೇಶ್ ರವರು ಸಾಂಪ್ರದಾಯಿಕವಾಗಿ ಉಧ್ಘಾಟಿಸಿ ಆಟಿಯ ಮಹತ್ವ ಹಾಗೂ ವಿಶೇಷತೆಯನ್ನು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ಸೈಂಟ್ ಜೋಸೆಫ್ ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ಚೈತ್ರಾ ಅಲೋಕ್ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!