ಬಜಪೆ : ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಬಜಪೆ ಕರಂಬಾರು ಹಾಗೂ ಯುವವಾಹಿನಿ (ರಿ) ಬಜಪೆ ಘಟಕದ ಅಶ್ರಯದಲ್ಲಿ ಬಿಸುಪರ್ಬ – 2019 , ಕಾರ್ಯಕ್ರಮವನ್ನು ದಿನಾಂಕ 14.04.2019 ರಂದು ನಾರಾಯಣ ಗುರು ಬಿಲ್ಲವ ಸಂಘ ಬಜಪೆ ಇಲ್ಲಿ ಅಚರಿಸಲಾಯಿತು .
ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೂಜೆಯಿಂದ ಪ್ರಾರಂಭವಾದ ಕಾರ್ಯಕ್ರಮವು ,ಮಂದಿರದಿಂದ ಕಣಿ ವಸ್ತುಗಳ ಮೆರವಣಿಗೆಯೊಂದಿಗೆ ಸಭಾಭವನಕ್ಕೆ ಸಾಗಿ ಸಭಾ ಕಾರ್ಯಕ್ರಮವನ್ನ ಮಂಗಳೂರು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಪದ್ಮನಾಭ ಬಿ .ಅಡ್ಕಬಾರೆ , ಬಜಪೆ ಇವರು ತುಳಸಿ ಕಟ್ಟೆಗೆ ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಬ್ಬ ಹರಿದಿನಗಳ ಮಹತ್ವವನ್ನು ಅರಿತುಕೊಂಡು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನ ಯುವವಾಹಿನಿ ಬಜಪೆ ಘಟಕ ಮಾಡುವುದು ಶ್ಲಾಘನೀಯ ಎಂದು ಹೇಳಿದರು .
ವಿಶೇಷ ಉಪನ್ಯಾಸಕರಾಗಿ ಬಂದಿರುವ ಕೆ .ಕೆ .ಪೇಜಾವರ ಇವರು ಬಿಸು ಹಬ್ಬದ ಮಹತ್ತ್ವವನ್ನು ಅರ್ಥಪೂರ್ಣವಾಗಿ ತಿಳಿಸಿದರು .ಅತಿಥಿಗಳಾಗಿ ವಿಜಯಕುಮಾರ್ ಮಾಲಕರು ಸಿಟಿ ಕ್ಯಾಟರರ್ಸ್ ಸುರತ್ಕಲ್, ನಿವಿತ್ ರಾಜ್ ಯೆಯ್ಯಾಡಿ, ಬಜಪೆ ಘಟಕದ ಸಲಹೆಗಾರರಾದ ಪರಮೇಶ್ವರ ಪೂಜಾರಿ ಉಪಸ್ಥಿತರಿದ್ದರು. ಘನ ಉಪಸ್ಥಿತರಾಗಿ ಬಂದಿರುವ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು ಇವರು ಬಜಪೆ ಘಟಕ ನಡೆದು ಬಂದ ಕಾರ್ಯವೈಖರಿಯನ್ನು ಶ್ಲಾಘಿಸಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿರುವ ಸಂದ್ಯಾ ಕುಳಾಯಿ ಬಿಸು ಹಬ್ಬಕ್ಕೆ ಎಲ್ಲರಿಗು ಶುಭಾಶಯ ಕೋರಿದರು .ಸಂಗೀತ ಕ್ಷೇತ್ರದಲ್ಲಿ ಅರಳುವ ಪ್ರತಿಭೆ ಗ್ರೀಷ್ಮಾ ಎಕ್ಕಾರು, ನೃತ್ಯ ಲೋಕದ ಸಾಧಕಿ ನಿಕಿತಾ ಎಂ .ಕೆ ,ಶಿಕ್ಷಣ ಕ್ಷೆತ್ರದ ಸಾಧಕಿ ಮಧುರ ಆರ್, ಇವರನ್ನು ಸನ್ಮಾನಿಸಲಾಯಿತು .
ಕುಮಾರಿ ಅನನ್ಯ ಪ್ರಾರ್ಥನೆ ಮಾಡಿದರು. ನಿ .ಪೂ .ಅಧ್ಯಕ್ಷರಾದ ದೇವರಾಜ ಅಮಿನ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಅಶೊಕ್ ಕುಮಾರ್, ಮಹಿಳಾ ಸಂಘಟಕಿ ಉಶಾ ಶಿವಾನಂದ್ ,ಹಾಗೂ ಸದಸ್ಯೆ ಆಶಾ ಇವರು ಸನ್ಮಾನ ಪತ್ರ ವಾಚಿಸಿದರು .ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು . ಕಾರ್ಯದರ್ಶಿ ರೋಹಿತ್ ದನ್ಯವಾದಗೈದರು .ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಂಡರ್ ಗೈಸ್ ಡ್ಯಾನ್ಸ್ ಅಕಾಡೆಮಿ ಬಜಪೆ ಇವರಿಂದ ನೃತ್ಯ ಕಾರ್ಯಕ್ರಮ ಜರಗಿತು .