14-09-2025, 5:19 PM
ದಿನಾಂಕ :10/08/2025 ನೇ ಭಾನುವಾರ ವಿಟ್ಲದ ಅರಮನೆ ಗದ್ದೆಯಲ್ಲಿ ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ಮರುವಾಳ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಬಿಲ್ಲವ ಸಂಘ ವಿಟ್ಲ ಇದರ ಅಧ್ಯಕ್ಷರಾದ ಜಯಪ್ರಕಾಶ್ ವಿಟ್ಲ ಇವರು ನೆರವೇರಿಸಿದರು, ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಹಿಂದೂ ಮುಖಂಡ ಶ್ರೀ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ ರಾಜಾರಾಮ್ ಕೆ ಬಿ ಸಹಿತ ಹಲವಾರು ಗಣ್ಯರು […]
Read More
14-09-2025, 5:07 PM
ದಿನಾಂಕ 09- 09- 2025 ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯುವಾಹಿನಿಯು ಹಮ್ಮಿಕೊಳ್ಳುತ್ತಿರುವ ಶಿವಗಿರಿ ಯಾತ್ರೆಯಿಂದ ಅನೇಕರಿಗೆ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಹಾಗೂ ಅವರು ಸಮಾಜದಲ್ಲಿ ತಂದ ಬದಲಾವಣೆಗಳನ್ನು ತಿಳಿಯುವಂತಾಗಿದೆ. ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ ಎಂಬ ಗುರುಗಳ ಸಂದೇಶವನ್ನು ಅನುಸರಿಸಿ ವಿದ್ಯೆ ಕಲಿಸಿದ ಶಿಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಸಾಹಿತಿ, ಯುವ ವಕೀಲರಾದ ಮನೋಜ್ ಕುಮಾರ್ ವಾಮಂಜೂರು ಮಾತನಾಡಿ ವಿವೇಕಾನಂದರವರನ್ನು ಇಡಿ […]
Read More
14-09-2025, 5:00 PM
ಸುಧಾಕರ ಪೂಜಾರಿ ಕೇಪು ಇವರ ಮನೆಯಲ್ಲಿ ದುರ್ಗಾ ಪೂಜೆಯ ಪ್ರಯುಕ್ತ ಘಟಕದ ವತಿಯಿಂದ ಭಜನೆಯನ್ನು ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
Read More
14-09-2025, 4:52 PM
ಸಂಪ್ರದಾಯದ ಹಿಂದೆ ಗುಟ್ಟಾಗಿರುವ ವೈಜ್ಞಾನಿಕ ಅರಿವು. ಆಟಿ ತಿಂಗಳು ಶುದ್ಧತೆಯ, ಶಾಂತಿಯ ಹಾಗೂ ತಾಳ್ಮೆಯ ಸಮಯವಾಗಿದೆ. ಇದರ ಆಚರಣೆಗಳು ಶರೀರ ಶುದ್ಧಿಕರಣ, ಮನಸ್ಸು ಸ್ಥಿರಗೊಳಿಸುವಿಕೆ, ಹಾಗೂ ಪರಿಸರ ಸಂರಕ್ಷಣೆಯತ್ತ ಗಮನ ಸೆಳೆಯುತ್ತವೆ. ಪ್ರಾಚೀನ ಸಂಪ್ರದಾಯಗಳ ಹಿಂದೆ ಗುಟ್ಟಾಗಿರುವ ವೈಜ್ಞಾನಿಕ ಅರಿವು ಈ ಮೂಲಕ ತೋರುತ್ತದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.. ಅವರು ಘಟಕದ ವತಿಯಿಂದ ಭಾನುವಾರ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು […]
Read More
14-09-2025, 4:40 PM
ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಮತ್ತು ತುಳು ಸಿರಿ ಚಾವಡಿ – 2025 ಕಾರ್ಯಕ್ರಮವು ದೈವಜ್ಞ ಸಭಾಭವನ ಜಾಲಹಳ್ಳಿಯಲ್ಲಿ 24 ಆಗಸ್ಟ್ 2025ರ ಭಾನುವಾರ ನೆರವೇರಿತು. ಬೆಳಿಗ್ಗೆ 9.30ಕ್ಕೆ ಗುರುಭಜನೆ ಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀ ನಾರಾಯಣಗುರುಗಳ ಪ್ರತಿಮೆಗೆ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ವೈದಿಕ ರೀತಿಯಲ್ಲಿ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಸಲಾಯಿತು. ನಂತರ ಯುವವಾಹಿನಿಯ ನಾಲ್ಕು ತಂಡಗಳಾದ ಯುವ ಬಿರುವೆರ್, ಯುವ ತುಡರ್, ಯುವ ಚಾಲೆಂಜರ್ಸ್ ಮತ್ತು ಯುವ ಪವರ್ ತಂಡದ […]
Read More
14-09-2025, 4:05 PM
ನಾರಾಯಣಗುರುಗಳ ಸಂದೇಶ ಪ್ರಸ್ತುತ ಕಾಲಘಟ್ಟದಲ್ಲಿ ದೀಪಸ್ತಂಭದಂತೆ ಸಮಾಜವನ್ನು ಬೆಳಗಿಸುತ್ತಿದೆ : ಲಕ್ಷ್ಮಣ್ ಕುಲಾಲ್ ಅಗ್ರಬೈಲು ಪ್ರಸ್ತುತ ಸಮಾಜದಲ್ಲಿ ಧಾರ್ಮಿಕ ಭೇದಭಾವ, ಜಾತಿ ವೈಷಮ್ಯ, ಆರ್ಥಿಕ ಅಸಮಾನತೆ, ಮತ್ತು ಸಾಮಾಜಿಕ ಅಸ್ಥಿರತೆ ಹೆಚ್ಚುತ್ತಿದೆ. ಇಂತಹ ಸಂದರ್ಭಗಳಲ್ಲಿ ನಾರಾಯಣಗುರುಗಳ ಸಮಾನತೆಯ ಸಂದೇಶ ಒಂದು ದೀಪಸ್ತಂಭವಾಗಿ ಕಾರ್ಯನಿರ್ವಹಿಸಿ ಸಮಾಜವನ್ನು ಬೆಳಗಿಸುತ್ತಿದೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲು ತಿಳಿಸಿದರು ಅವರು ಯುವವಾಹಿನಿ ಬಂಟ್ಟಾಳ ತಾಲೂಕು ಘಟಕದ ಸದಸ್ಯ ಶ್ರವಣ್ ಕೊಟ್ಯಾನ್ ಬಿ.ಸಿರೋಡ್ ರವರ ಮನೆಯಲ್ಲಿ ನಡೆದ […]
Read More
07-07-2025, 5:21 AM
ದಿನಾಂಕ 15/04/2025 ರಂದು ಯುವವಾಹಿನಿ ಸಭಾಂಗಣದಲ್ಲಿ ಬಿಸು ಪರ್ಬ ಕಾರ್ಯಕ್ರಮ ನಡೆಯಿತು.. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಹಿರಿಯ ಯೋಗ ಶಿಕ್ಷಕರಾದ ಶ್ರೀಮತಿ ಕನಕಕ್ಕ ಬಿಸು ಹಬ್ಬ ಆಚರಣೆಯ ಕುರಿತು ಉಪನ್ಯಾಸ ನೀಡಿದರು.ಪ್ರಳಯದ ನಂತರ ನಶಿಸಿ ಹೋದ ಪ್ರಪಂಚವನ್ನು ಬ್ರಹ್ಮ ದೇವರು ಮರು ಸೃಷ್ಟಿಸಿದ ದಿನವನ್ನು ಯುಗದ ಆದಿ ಅಂದರೆ ಯುಗಾದಿ ಎಂದು ಕರೆಯುತ್ತೇವೆ. ಹಿಂದಿನ ಕಾಲದಲ್ಲಿ ಹಿರಿಯರು ಬಿಸು ಹಬ್ಬವನ್ನು ಯಾವ ರೀತಿಯಾಗಿ ಆಚರಣೆ ಮಾಡುತ್ತಿದ್ದರು ಎಂಬುದನ್ನು ಶ್ರೀಮತಿ ಕನಕ ವಿವರವಾಗಿ ತಿಳಿಸಿದರು.ಈ ಸಂದರ್ಭದಲ್ಲಿ […]
Read More
15-11-2024, 3:59 PM
ಹೆಜಮಾಡಿ : ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ನವೆಂಬರ್ 13 ರಂದು ತುಳುವೆರೆ ತುಳಸಿ ಪರ್ಬ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷೆ ದೀಪಾ ದಿನೇಶ್ ವಹಿಸಿದರು. ಮುಖ್ಯ ಅತಿಥಿಯಾಗಿ ಯುವವಾಹಿನಿ (ರಿ ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಉದಯ ಅಮೀನ್ ಮಟ್ಟು, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರು ಮೋಹನ್ ದಾಸ್ ಹೆಜಮಾಡಿ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರರು ದಯಾನಂದ ಹೆಜಮಾಡಿ, […]
Read More
13-11-2024, 5:42 PM
ಮೂಡುಬಿದಿರೆ: ಹಣತೆಯು ತಾನು ಬೆಳಕು ಚೆಲ್ಲುವ ಜೊತೆಗೆ ಇತರ ಹಣತೆಗಳನ್ನೂ ಬೆಳಗಿಸಿ ಬೆಳಕನ್ನು ಆಚರಿಸುವ ಪ್ರಕ್ರಿಯೆಯಲ್ಲಿ ಜೀವನ ಸಾರ್ಥಕ್ಯ ಸಾರುತ್ತದೆ. ನಾವೂ ಲೋಕದ ಅಭ್ಯುದಯಕ್ಕಾಗಿ ಕೊಡುಗೆ ನೀಡುವ ದೀಪಗಳಾಗಬೇಕಾಗಿದೆ. ಗಂಧದಂತೆ ಸವೆಸಿಕೊಂಡು ತ್ಯಾಗಿಯಾಗಿ ಪರಿಮಳಿಸಬೇಕಾಗಿದೆ ಎಂದು ಎಸ್.ಎನ್.ಎಂ ಪಾಲಿಟೆಕ್ನಿಕ್ ಉಪನ್ಯಾಸಕ ಡಾ. ಎಸ್.ಪಿ.ಗುರುದಾಸ್ ಅಭಿಪ್ರಾಯಪಟ್ಟರು. ಸಮಾಜ ಮಂದಿರ ಸಭಾ (ರಿ) ಮೂಡುಬಿದಿರೆ ಮತ್ತು ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ 3ನೇ ವರ್ಷದ ಬೆದ್ರ ಗೂಡುದೀಪ ಮತ್ತು ರಂಗೋಲಿ […]
Read More
06-11-2022, 4:50 PM
ಮಂಗಳೂರು:- ಸ್ವಾತಂತ್ರ್ಯ ಅಮೃತ ಮಹೋತ್ಸವ 2022ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮಂಗಳೂರು ಘಟಕವು, ಘಟಕದ ಸದಸ್ಯರಿಗೆ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ದಿನಾಂಕ 06 ನವೆಂಬರ್ 2022ರ ಭಾನುವಾರದಂದು ಯುವವಾಹಿನಿ ಸಭಾಂಗಣದಲ್ಲಿ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸಂಗೀತ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಎರಡನೇ ಉಪಾಧ್ಯಕ್ಷರಾದ ಹರೀಶ್ ಕೆ. ಪೂಜಾರಿಯವರು ಮಾತನಾಡುತ್ತಾ ಸದಸ್ಯರಲ್ಲಿರುವ ಸೂಕ್ತ ಪ್ರತಿಭೆಗಳ ಅನಾವರಣಕ್ಕೆ ಇಂಥ ಕಾರ್ಯಕ್ರಮಗಳು ಮಾದರಿ ಎಂದು ಅಭಿಪ್ರಾಯಪಟ್ಟರು. ಸಂಗೀತ ಸ್ಪರ್ಧೆಯಲ್ಲಿ 9 […]
Read More