ಸುರತ್ಕಲ್ : ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ ದಿನಾಂಕ 06-01-2026ರಂದು ಮನೆ–ಮನೆ ಭಜನಾ ಸೇವೆಯನ್ನು ಘಟಕದ ಅಧ್ಯಕ್ಷರಾದ ವಾಣಿ ಗಣೇಶ್ ಅವರ ಮನೆಯಲ್ಲಿ ಭಕ್ತಿಭಾವದಿಂದ ನಡೆಸಲಾಯಿತು.

ಈ ಭಜನಾ ಸೇವೆಯಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ, ಧಾರ್ಮಿಕ ವಾತಾವರಣವನ್ನು ನಿರ್ಮಿಸಿದರು. ಕಾರ್ಯಕ್ರಮವು ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಚೈತನ್ಯವನ್ನು ಮೂಡಿಸುವ ಉದ್ದೇಶದಿಂದ ಯಶಸ್ವಿಯಾಗಿ ನೆರವೇರಿತು


