ಘಟಕದ ಆಶ್ರಯದಲ್ಲಿ ಮಹಿಳಾ ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಆತಿಥ್ಯದಲ್ಲಿ ದಿನಾಂಕ 02.08.2025ನೇ ಶನಿವಾರದಂದು ಆಟಿದ ಕಮ್ಮೆನ ಕಾರ್ಯಕ್ರಮವು ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ನೆರವೇರಿಸಿ ಶುಭ ಹಾರೈಸಿದರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಘಟಕದ ಸಲಹೆಗಾರರಾದ ಸುಧಾಮಣಿ ಆರ್ ಮಾತನಾಡಿ ಆಟಿ ತಿಂಗಳ ವಿಶೇಷತೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಮತಿ ಲೀಲಾವತಿ ಪಣಕಜೆ, ಘಟಕದ ಕಾರ್ಯದರ್ಶಿ ಮಧುರ ರಾಘವ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಘಟಕದ ಸದಸ್ಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕುಮಾರಿ ಶ್ರುತ ಮುಂಡೂರು ಗಾದೆ ಮಾತುಗಳನ್ನು ತಿಳಿಸಿದರು. ಘಟಕದ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಸಂಚಾಲಕರಾದ ಅಶೋಕ ಕಲ್ಮಂಜ ಸ್ವಾಗತಿಸಿ, ಶ್ವೇತಾ ಯುವರಾಜ್ ಮಣಿಕೆ ನಿರೂಪಿಸಿ, ಲೀಲಾವತಿ ಪಣಕಜ ಧನ್ಯವಾದವಿತ್ತರು. ಕಾರ್ಯಕ್ರಮದ ನಂತರ ಘಟಕದ ಸದಸ್ಯರು ತಯಾರಿಸಿದ ಆಟಿ ತಿಂಗಳ ಸುಮಾರು 30 ಬಗೆಯ ವಿವಿಧ ತಿಂಡಿ ತಿನಿಸುಗಳೊಂದಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.


