21/9/2025 ಭಾನುವಾರದಂದು
ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.)
ಹಾಗೂ ಘಟಕದ
ಜಂಟಿ ಆಶ್ರಯದಲ್ಲಿ
ಬೈದೆರ್ಲೆ ಗರಡಿ* ಬೊಕ್ಕ ಆರಾಧನೆ
ಕೋಟಿ ಚೆನ್ನಯೆರ್ನ ಬದ್ಕ್ ಬೊಕ್ಕ ಆದರ್ಶ
ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಕಾರ್ಯಕ್ರಮವು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ವೈ ಸುಧೀರ್ ಕುಮಾರ್ ಎಲ್ಲರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿ, ಗುರು ತತ್ವ ಸಂದೇಶದ ಅನುಸಾರ ಜನರಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಲೋಕೇಶ್ ಕೋಟ್ಯಾನ್ ಮಾತನಾಡಿ ಅರ್ಥಪೂರ್ಣವಾದ ಸಮಾಧಿ ದಿನ ಆಚರಣೆ ಕಾರ್ಯಕ್ರಮ ಆಯೋಜಿಸಿರುವುದರ ಬಗ್ಗೆ ಶ್ಲಾಘಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಾಂಡು ಪೂಜಾರಿ ಕೆಳಾರ್ಕಳ ಬೆಟ್ಟು ಶತಮಾನಗಳ ಹಿಂದೆ ಈ ನೆಲದಲ್ಲಿ ಹುಟ್ಟಿ ಬಾಳಿದ ಕಾರಣಿಕ ಪುರುಷರಾದ ಕೋಟಿ ಚೆನ್ನಯ್ಯರ ಜೀವನದ ಬಗ್ಗೆ ಮಾತನಾಡಿ, ಅವರು ಪಾಲಿಸಿದ ಸತ್ಯ ಆದರ್ಶಗಳ ಬಗ್ಗೆ ಸವಿಸ್ತಾರವಾಗಿ ವಿಶ್ಲೇಷಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ಅರವಿಂದ ಕೋಟ್ಯಾನ್ ಕಲ್ಲುಗುಡ್ಡೆ ಯವರು ಗರಡಿ ಆರಾಧನಾ ಪದ್ಧತಿಗಳ ಕುರಿತು ಮಾತನಾಡಿ
ಇಂದಿನ ಯುವಜನತೆ, ಗರಡಿ ಮತ್ತು ಕೋಟಿ ಚೆನ್ನಯ್ಯರ ಆರಾಧನೆಯ ಕಡೆ ಒಲವು ತೋರಬೇಕು ಮತ್ತು ಗರಡಿಯ ಆರಾಧನೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದೆ ಸಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗರಡಿಯ ಕೆಲಸ ಕಾರ್ಯದ ಬಗ್ಗೆ ತಿಳಿದಿರುವ ಅನುಭವಿಗಳ ಕೊರತೆ ಆಗಬಹುದು ಎಂದು ಆತಂಕ ವ್ಯಕ್ತ ಪಡಿಸಿದರು.
ವಿಚಾರ ಮಂಡನೆಯ ನಂತರ, ಪ್ರಶ್ನೋತ್ತರ ಸಮಯದಲ್ಲಿ ಸಭಿಕರೊಂದಿಗೆ ಗರಡಿ ಆಚರಣೆಗಳ ಕುರಿತಾದ ಪ್ರಶ್ನೆ/ಸಂದೇಹಗಳ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಘಟಕದ ಅಧ್ಯಕ್ಷರಾದ ಶ್ರೀ ವಿಧಿತ್ ಪೂಜಾರಿ ಕರ್ನಿರೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಘಟಕದ ಸದಸ್ಯರಾದ ಸುಜಾತ ಹರೀಶ್ ಹಾಗೂ ಸುಗಂಧಿ ಶ್ಯಾಮ್ ಪ್ರಾರ್ಥಿಸಿದರು.
ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀ ಹರೀಶ್ ಕೋಟ್ಯಾನ್ ಉಳ್ಳೂರು ಪ್ರಸ್ತಾವಿಕ ಮಾತುಗಳನ್ನಾಡಿದರು.
ನಿಶ್ಮಿತಾ ಪಿ. ಎಚ್ ಮತ್ತು ರವಿರಾಜ್ ಎನ್. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಘಟಕದ ಕಾರ್ಯದರ್ಶಿ ಭಾಸ್ಕರ್ ಏನ್. ಅಂಚನ್ ಸರ್ವರಿಗೂ ವಂದಿಸಿದರು.


