
29-08-2018, 3:04 PM
ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 29/08/2018 ರಂದು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ। ಸೌಮ್ಯಾ ಇವರು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು . ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಸಲಹೆಗಾರರಾದ ನೇಮಿರಾಜ್, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ , ಬ್ರಹ್ಮಶ್ರೀ ನಾರಾಯಣ ಗುರು […]
Read More

27-08-2018, 3:36 PM
ಬಜಪೆ : ಯುವವಾಹಿನಿ (ರಿ) ಬಜಪೆ ಘಟಕದ ಸದಸ್ಯರಾದ ಕುಮಾರಿ ಗ್ರೀಷ್ಮ ಇವರ ಸಂಗೀತ ಕ್ಷೇತ್ರದ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ದಿನಾಂಕ 27.08.2018 ರಂದು ಬ್ರಹ್ಮಶ್ರೀ ನಾರಾಯಣಗುರುವರ್ಯರ ೧೬೪ ನೆೇ ಜನ್ಮ ದಿನಾಚರಣೆಯು ಶುಭ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಪೆರ್ಮುದೆ ಇದರ ಆಶ್ರಯದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಪೆರ್ಮುದೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Read More

19-08-2018, 2:49 PM
ಕೆಂಜಾರು- ಕರಂಬಾರು : ಯುವವಾಹಿನಿ(ರಿ.) ಕೆಂಜಾರು- ಕರಂಬಾರು ಘಟಕ ಹಾಗೂ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ಮುಕ್ಕ ಇವರ ಜಂಟಿ ಆಶ್ರಯದಲ್ಲಿ ಶ್ರೀ ದೇವಿ ಭಜನಾ ಮಂದಿರ ಕೆಂಜಾರು-ಕರಂಬಾರು ಇದರ ಸಭಾಭವನದಲ್ಲಿ ದಿನಾಂಕ 19.08.2018 ರಂದು ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀಯುತ ಸೇಸಪ್ಪ ಅಮೀನ್ ರವರು ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂದಿರದ ಗೌರವ ಅಧ್ಯಕ್ಷ ರಾದ ವಿಶ್ವಾನಂದ ಶೆಟ್ಟಿ,ಗೌರವ ಸಲಹೆಗಾರರಾದ ಜಗನ್ನಾಥ ಸಾಲ್ಯಾನ್ ,ಶ್ರೀನಿವಾಸ್ […]
Read More

19-08-2018, 1:27 PM
ಹಳೆಯಂಗಡಿ : ಬ್ರಹ್ಮಶ್ರೀ ನಾರಾಯಣ ಗುರುಗಳ164ನೇ ಜನ್ಮ ದಿನದ ಪ್ರಯುಕ್ತ ಜರಗಿಸಲಾದ ವಾರ್ಷಿಕ ಕ್ರೀಡಾಕೂಟವನ್ನು ದಿನಾಂಕ 19-08-2018 ರಂದು ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಮತ್ತು ಯುವವಾಹಿನಿ (ರಿ) ಹಳೆಯಂಗಡಿಯ ಸಂಯುಕ್ತ ಆಶ್ರಯದಲ್ಲಿ ಸಂಘದ ವಠಾರದಲ್ಲಿ ಉದ್ಯಮಿ ಸದಾಶಿವ ಎನ್.ಎಸ್ ಕೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಗೌರವಾಧ್ಯಕ್ಷ ಗಣೇಶ್ ಬಂಗೇರ, ಅಧ್ಯಕ್ಷರಾದ ಚಂದ್ರಶೇಖರ ನಾನಿಲ್,ಯುವವಾಹಿನಿ ಅಧ್ಯಕ್ಷ ಹೇಮನಾಥ ಬಿ.ಕರ್ಕೇರ ನಿಕಟಪೂರ್ವ ಅಧ್ಯಕ್ಷ ಶರತ್ ಕುಮಾರ್, ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಸುವರ್ಣ ಪ್ರಧಾನ ಕಾರ್ಯದರ್ಶಿ […]
Read More

19-08-2018, 1:16 PM
ಹೆಜಮಾಡಿ : ಯುವವಾಹಿನಿ (ರಿ.) ಹೆಜಮಾಡಿ ಘಟಕದ ಆಶ್ರಯದಲ್ಲಿ ಬೃಹ್ಮಶ್ರಿ ನಾರಾಯಣ ಗುರುಗಳ 164ನೇ ಜಯಂತಿಯ ಅಂಗವಾಗಿ ದಿನಾಂಕ 19/08/2018 ರ ಆದಿತ್ಯವಾರದಂದು ಹೆಜಮಾಡಿ ಬಿಲ್ಲವರ ನಾಲ್ಕು ಕರೆಯ ಹತ್ತು ಸಮಸ್ತರಿಗೆ ಹಾಗೂ ಸಾರ್ವಜನಿಕರಿಗೆ ದಿ. ಸೋಮಪ್ಪ ಪೂಜಾರಿಯವರ ಗದ್ದೆಯಲ್ಲಿ ಜರಗಿದ ಕೆಸರು ಗದ್ದೆ ಕ್ರೀಡಾಕೂಟವನ್ನು ಯುವವಾಹಿನಿ ಹಳೆಯಂಗಡಿ ಘಟಕದ ಅಧ್ಯಕ್ಷ ದಿನೇಶ್ ಹೆಜಮಾಡಿ ಇವರ ಅಧ್ಯಕ್ಷತೆಯಲ್ಲಿ ಶ್ರೀ ಬ್ರಹ್ಮ ಬೈದರ್ಕಲ ಗರಡಿ ಹೆಜಮಾಡಿಯ ಪ್ರಧಾನ ಅರ್ಚಕರಾದ ಶೀ ಗುರುರಾಜ್ ಅಮೀನ್ ರವರು ಜ್ಯೋತಿ ಬೆಳಗಿಸಿ […]
Read More

19-08-2018, 8:24 AM
ಕಟಪಾಡಿ : ಯುವವಾಹಿನಿ (ರಿ) ಕಟಪಾಡಿ ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭವು ದಿನಾಂಕ 19.08.2018 ರಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಸಭಾಭವನದಲ್ಲಿ ನಡೆಯಿತು. ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಅಶೋಕ್ ಎಮ್.ಸುವರ್ಣ ಸಮಾರಂಭ ಉದ್ಘಾಟಿಸಿದರು. 2018-19 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದ ಯುವವಾಹಿನಿ ಕೇಂದ್ರ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ ಮನುಷ್ಯರಲ್ಲಿ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಸಮಯ ಪ್ರಜ್ಞೆ ,ಪರೋಪಕಾರ ದಂತಹ ಗುಣಗಳು ಮೇಳೈಸಿದಾಗ ಸ್ವಸ್ಥ ಸಮಾಜದ ನಿರ್ಮಾಣ […]
Read More

13-08-2018, 4:25 PM
ಪಡುಬಿದ್ರಿ : ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಅನಾರೋಗ್ಯದಿಂದ ಬಳಲುತ್ತಿರುವ, ನಮ್ಮ ಘಟಕದ ಸದಸ್ಯರಾದ ನಂದಿಕೂರಿನ ಹೇಮಂತ್ ರವರ ತಾಯಿ ಜಯಂತಿಯವರಿಗೆ ಯುವವಾಹಿನಿ (ರಿ.) ಪಡುಬಿದ್ರಿ ಘಟಕದಿಂದದಿನಾಂಕ 13.08.2018 ರಂದು ರೂ.10,600 ಧನಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿಯ ಅಧ್ಯಕ್ಷರಾದ ದೀಪಕ್ ಕೆ. ಬೀರ, ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಎಸ್. ಪೂಜಾರಿ, ಮಾಜಿ ಅಧ್ಯಕ್ಷರಾದ ಅಶೋಕ್ ಪಾದೆಬೆಟ್ಟು, ಕಾರ್ಯದರ್ಶಿ ಶೈಲಜ, ಪಡುಬಿದ್ರಿ ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಅರುಣ್ ನಂದಿಕೂರು ಉಪಸ್ಥಿತರಿದ್ದರು.
Read More

12-08-2018, 5:02 PM
ಅಡ್ವೆ: ಹಿಂದಿನ ಕಾಲದ ಪದ್ದತಿಯನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ದಂತಹ ಕಾರ್ಯಕ್ರಮಗಳು ಇದೀಗ ಆಟಿ ತಿಂಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದೆ. ಈಗಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ತುಳುನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಜೀವ ತುಂಬುತ್ತಿದ್ದು, ಮುಂದಿನ ಪೀಳಿಗೆಗಳು ನಮ್ಮ ಕೃಷಿ ಬದುಕನ್ನು ಟಿವಿ ಪರದೆ ಮೇಲೆ ನೋಡುವಂತಾಗದಿರಲಿ ಎಂದು ಸಾಹಿತಿ, ಹೆಜಮಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ವಾಮನ ಕೋಟ್ಯಾನ್ ನಡಿಕುದ್ರು ನುಡಿದರು. ಅವರು ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ […]
Read More

12-08-2018, 3:50 PM
ಹಳೆಯಂಗಡಿ : ಯುವಪೀಳಿಗೆಯನ್ನು ಮುಖ್ಯವಾಹಿನಿಗೆ ಕರೆತರಲು, ಸಮಾಜದ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘಟನೆಯು ಸಹಕಾರಿಯಾಗಿದೆ. . ತುಳುನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಿ ಬೆಳೆಸಲು ಹಿರಿಯರ ಮಾರ್ಗದರ್ಶನದಲ್ಲಿ ನಂಬಿಕೆಯನ್ನು ಪ್ರೋತ್ಸಾಹಿಸುವ ಕಾರ್ಯ ನಾವೆಲ್ಲರೂ ಸೇರಿ ಮಾಡಬೇಕು ಎಂದು ಕರ್ನಾಟಕ ಧಾರ್ಮಿಕ ಪರಿಷತ್ ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ವಠಾರದಲ್ಲಿ ದಿನಾಂಕ 12.08.2018 ರಂದು ತುಳು ಸಂಸ್ಕ್ರತಿಯನ್ನು ಬಿಂಬಿಸುವ ಆಟಿದ ಐಸ್ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಂಗಳೂರು […]
Read More

12-08-2018, 2:40 PM
. ಬಜ್ಪೆ: ವ್ಯವಸಾಯ ಮತ್ತು ಕೃಷಿಯೊಂದಿಗೆ ಆಟಿ ತಿಂಗಳಿಗೆ ಅತೀ ಹತ್ತಿರದ ಸಂಭಂದವಿದೆ. ಆಹಾರ ಅನುಷ್ಠಾನಗಳಲ್ಲಿ ಪ್ರತಿ ತಿಂಗಳಿಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಪ್ರಕೃತಿ, ಭೂಮಿ ಮತ್ತು ನಮ್ಮ ಈ ಜೀವ, ದೇಹದ ನಡುವೆ ಅತೀಯಾದ ಸಂಭಂದವಿರುವುದು ಆಟಿ ತಿಂಗಳಲ್ಲಿ. ಈ ತಿಂಗಳಲ್ಲಿ ನಾವೇನನ್ನ ಆಹಾರ ಪಥ್ಯಗಳಾಗಿ ಸ್ವೀಕರಿಸುತ್ತೇವೆ, ಪ್ರಕೃತಿ ಭೂಮಿಗೂ ಅದನ್ನು ಉಣಬಡಿಸಿ ಸಮ ತೋಲನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಈ ಹಿಂದಿನ ದಿನ ಮಾನಗಳಲ್ಲಿ ಅವಶ್ಯವಾಗಿ ಆಟಿ ತಿಂಗಳಲ್ಲಿ ಸೇವಿಸಬೇಕಾದ ಆಹಾರವು ಔಷಧವಾಗಿ ಇಡೀ […]
Read More