ಹಳೆಯಂಗಡಿ : ಯುವಪೀಳಿಗೆಯನ್ನು ಮುಖ್ಯವಾಹಿನಿಗೆ ಕರೆತರಲು, ಸಮಾಜದ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘಟನೆಯು ಸಹಕಾರಿಯಾಗಿದೆ. . ತುಳುನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಿ ಬೆಳೆಸಲು ಹಿರಿಯರ ಮಾರ್ಗದರ್ಶನದಲ್ಲಿ ನಂಬಿಕೆಯನ್ನು ಪ್ರೋತ್ಸಾಹಿಸುವ ಕಾರ್ಯ ನಾವೆಲ್ಲರೂ ಸೇರಿ ಮಾಡಬೇಕು ಎಂದು ಕರ್ನಾಟಕ ಧಾರ್ಮಿಕ ಪರಿಷತ್ ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ವಠಾರದಲ್ಲಿ ದಿನಾಂಕ 12.08.2018 ರಂದು ತುಳು ಸಂಸ್ಕ್ರತಿಯನ್ನು ಬಿಂಬಿಸುವ ಆಟಿದ ಐಸ್ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಯಶವಂತ ಪೂಜಾರಿ ಅವರು ತೆಂಗಿನ ಕಣಜವನ್ನು ಅರಳಿಸುವ ಮೂಲಕ ಉದ್ಘಾಟಿಸಿ, ಸಂಘಟನೆಗಳು ಬೆಳೆಯುವಂತೆ ಯುವಕರನ್ನು ಸನ್ಮಾರ್ಗದಲ್ಲಿ ಸಾಗಲು ಯುವವಾಹಿನಿ ಉತ್ತಮ ವೇದಿಕೆಯಾಗಿದೆ. ಯುವ ಜನರನ್ನು ಗುರುತಿಸಿ ಅವರ ಬಗ್ಗೆ ಕಾಳಜಿ ವಹಿಸಿ ಎಂದರು.
ಮೌಢ್ಯದೂರ:
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಗೋಪಾಲ್ ಅಂಚನ್ ಆಟಿದ ವಿಷಯದಲ್ಲಿ ಮಾತನಾಡಿ, ಪ್ರಕೃತಿಯೊಂದಿಗೆ ಹಸಿವು, ಹೆದರಿಕೆ, ಚಿಕಿತ್ಸಕ ದೃಷ್ಟಿಯಿಂದ ಆಷಾಢ ಮಾಸವನ್ನು ಹಿರಿಯರು ಅನುಭವಿಸಿದ್ದಾರೆ. ವೈದ್ಯಕೀಯ ಪದ್ದತಿಗಳನ್ನು ಅಂದಿನ ತಿನಿಸಿನಲ್ಲಿ ಅನುಸರಿಸುತ್ತಿದ್ದರು. ಇದರಲ್ಲಿ ನಂಬಿಕೆಯೊಂದಿಗೆ ಮೌಢ್ಯನನ್ನು ದೂರ ಮಾಡುವ ಗುಣವಿದೆ ಎಂದರು
ಪಶು ಚಿಕಿತ್ಸಕ ಫೆಲಿಕ್ಸ್ ಡೇಸಾ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ ಅಧ್ಯಕ್ಷತೆ ವಹಿಸಿದ್ದರು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ(ರಿ) ಹಳೆಯಂಗಡಿ ಘಟಕವು ಜಂಟಿಯಾಗಿ ಸಂಯೋಜಿಸಿತ್ತು.
ಚಂದ್ರಶೇಖರ್ ನಾನಿಲ್, ಗಣೇಶ್ ಜಿ. ಬಂಗೇರ, ಜಯ ಜಿ. ಸುವರ್ಣ, ಮೋಹನ್ ಎಸ್. ಸುವರ್ಣ, ಯುವವಾಹಿನಿ(ರಿ.) ಹಳೆಯಂಗಡಿ ಘಟಕದ ಅಧ್ಯಕ್ಷ ಹೇಮನಾಥ್ ಬಿ. ಕರ್ಕೇರ, ಶರತ್ ಪಿ. ಸಾಲ್ಯಾನ್ ಉಪಸ್ಥಿತರಿದ್ದರು. ಜನಪದ ಸಂಶೋಧಕ ಡಾ| ಗಣೇಶ್ ಅಮಿನ್ ಸಂಕಮಾರ್ ಪ್ರಸ್ತಾವನೆಗೈದರು. ಭಾಸ್ಕರ್ ಸಾಲ್ಯಾನ್ ಸನ್ಮಾನ ಪತ್ರ ವಾಚಿಸಿದರು, ರಮೇಶ್ ಬಂಗೇರ ವಂದಿಸಿದರು, ಹಿಮಕರ್ ಸುವರ್ಣ ಕಲ್ಲಾಡಿ ಮತ್ತು ಬ್ರಿಜೇಶ್ ಕುಮಾರ್ ನಿರೂಪಿಸಿದರು.
.