
19-07-2026, 2:00 PM
ಕೊಲ್ಯ ಜುಲೈ19 : ಯುವವಾಹಿನಿ (ರಿ) ಕೊಲ್ಯ ಘಟಕದ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುಪೂಜೆಯೊಂದಿಗೆ ಘಟಕದ ಅಧ್ಯಕ್ಷ ನಿತಿನ್ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 19.07.2026ರಂದು ನಡೆಯಿತು ಕಾರ್ಯಕ್ರಮವನ್ನು ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ) ಕೊಲ್ಯ–ಸೋಮೇಶ್ವರದ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಕಳೆದ ಒಂದು ವರ್ಷದ […]
Read More

19-07-2026, 9:00 AM
ನಿಯಮಾವಳಿ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ, 2026ರ ಆಗಸ್ಟ್ 23ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಯುವವಾಹಿನಿ ಭಜನಾ ಸ್ಪರ್ಧೆ–2026ರ ನಿಯಮಾವಳಿ ಈ ಕೆಳಗಿನಂತಿದೆ. 🔹 ಅರ್ಹತೆ ಮತ್ತು ಸದಸ್ಯತ್ವ1) ಇದು ಯುವವಾಹಿನಿಯ ಅರ್ಹ ಸದಸ್ಯರಿಗೆ ಮಾತ್ರ ಸೀಮಿತವಾದ ಅಂತರ್‌ಘಟಕ ಭಜನಾ ಸ್ಪರ್ಧೆಯಾಗಿದೆ.2) ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸದಸ್ಯರು ನಿಗದಿತ ಅವಧಿಯೊಳಗೆ ವಾರ್ಷಿಕ ಸದಸ್ಯತ್ವ ಶುಲ್ಕ ಪಾವತಿಸಿ, ಕೇಂದ್ರ ಸಮಿತಿಯಿಂದ ಅನುಮೋದನೆಗೊಂಡ ಸದಸ್ಯತ್ವ ಸಂಖ್ಯೆ […]
Read More

16-07-2026, 6:00 PM
ಕುಪ್ಪೆಪದವು, ಜುಲೈ 16: ಯುವವಾಹಿನಿ (ರಿ.) ಕುಪ್ಪೆಪದವು–ಎಡಪದವು ಘಟಕದ ಸಕ್ರಿಯ ಸದಸ್ಯೆ ಹರೀನಾಕ್ಷಿ ಅವರು ಆಕಸ್ಮಿಕವಾಗಿ ಬಿದ್ದು ಕಾಲಿನ ಮೂಳೆ ಮುರಿತಕ್ಕೊಳಗಾದ ಹಿನ್ನೆಲೆಯಲ್ಲಿ, ಘಟಕದ ವತಿಯಿಂದ ಆರೋಗ್ಯ ನಿಧಿಯಡಿ ಧನಸಹಾಯವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಘಟಕದ ಪದಾಧಿಕಾರಿಗಳು, ಸದಸ್ಯರ ಸಂಕಷ್ಟದ ಸಂದರ್ಭದಲ್ಲಿ ಯುವವಾಹಿನಿ ಸದಾ ಅವರೊಂದಿಗೆ ನಿಲ್ಲುವ ಬದ್ಧತೆಯನ್ನು ಹೊಂದಿದ್ದು, ಆರೋಗ್ಯ ನಿಧಿಯಂತಹ ಯೋಜನೆಗಳು ಸದಸ್ಯರಿಗೆ ನೆರವಾಗುವ ಮಹತ್ವದ ಉಪಕ್ರಮಗಳಾಗಿವೆ ಎಂದು ತಿಳಿಸಿದರು. ಹರೀನಾಕ್ಷಿ ಅವರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸಿದರು. ಧನಸಹಾಯ ವಿತರಣೆಯ […]
Read More

16-07-2026, 4:00 PM
ಬೆಳ್ತಂಗಡಿ, ಜುಲೈ 16: “ಯುವವಾಹಿನಿಯು ಕೇವಲ ಒಂದು ಸಂಘಟನೆಯಲ್ಲ; ಸಮಾಜವನ್ನು ಬೆಸೆಯುವ ಮಹತ್ವದ ಶಕ್ತಿಯಾಗಿದೆ” ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು. ಅವರು ಬೆಳ್ತಂಗಡಿಯ ಶ್ರೀ ಗುರು ಸಾನಿಧ್ಯ ಸಭಾಂಗಣದಲ್ಲಿ ನಡೆದ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆ, ಉದ್ಯೋಗ ಮತ್ತು ಸಂಪರ್ಕ ಎಂಬ ಧ್ಯೇಯಗಳೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಯುವವಾಹಿನಿ, ಉತ್ತಮ ನಾಯಕರನ್ನು ಸಮಾಜಕ್ಕೆ ನೀಡುವ ಮೂಲಕ ಮಾದರಿ […]
Read More

16-07-2026, 1:00 PM
ಉಪ್ಪಿನಂಗಡಿ, ಜುಲೈ 16: ವಿಶ್ವ ವೈದ್ಯರ ದಿನಾಚರಣೆ-2026ರ ಅಂಗವಾಗಿ ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಉಪ್ಪಿನಂಗಡಿಯ ವಿವಿಧ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಾ. ರಾಜಾರಾಮ್ ಕೆ.ಬಿ., ಡಾ. ರಮ್ಯಾ ರಾಜಾರಾಮ್, ಡಾ. ಎಂ.ಆರ್. ಶೆಣೈ, ಡಾ. ಕೆ.ಜಿ. ಭಟ್, ಡಾ. ಎಂ.ಎನ್. ಭಟ್, ಡಾ. ರಘು, ಡಾ. ಸದಾನಂದ ಕುಂದರ್, ಡಾ. ಆಶಿತ್ ಎಂ.ವಿ., ಡಾ. ಶ್ವೇತಾ ಆಶಿತ್, […]
Read More

16-07-2026, 11:00 AM
ಮೂಡುಬಿದಿರೆ, ಜುಲೈ 16: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಯುವವಾಹಿನಿ ಕ್ರೀಡೋತ್ಸವ–2026ರ ಯಶಸ್ವಿ ಆಯೋಜನೆ ಕುರಿತು ಸಮಾಲೋಚನಾ ಸಭೆ ಇಂದು ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರನ್ನು ಭೇಟಿ ಮಾಡಿ ನಡೆಸಲಾಯಿತು. ಸಭೆಯಲ್ಲಿ ಕ್ರೀಡೋತ್ಸವದ ರೂಪುರೇಷೆ, ವ್ಯವಸ್ಥಾಪನೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಚರ್ಚಿಸಿ, ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಆಳ್ವಾಸ್ ಫೌಂಡೇಶನ್‌ನ ಸಹಕಾರ ಕೋರಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ […]
Read More

15-07-2026, 6:00 PM
ಅಜೆಕಾರು, ಜು. 15: ಯುವವಾಹಿನಿ (ರಿ.) ಕಾರ್ಕಳ ಘಟಕವು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಅಜೆಕಾರು ಶ್ರೀರಾಮ ಮಂದಿರದ ಸಭಾಭವನದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಪೊರೆ (ಕಣ್ಣಿನ ಮುತ್ತು) ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು. ಶಿಬಿರದಲ್ಲಿ ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ ಸಾರ್ವಜನಿಕರಿಗೆ ಸಮಗ್ರ ನೇತ್ರ ತಪಾಸಣೆ ನಡೆಸಿ, ಅಗತ್ಯ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡಿತು. ಕಣ್ಣಿನ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ […]
Read More

15-07-2026, 6:00 PM
ಮಾಣಿ, ಜುಲೈ 15: ಇತ್ತೀಚೆಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವವಾಹಿನಿ (ರಿ.) ಮಾಣಿ ಘಟಕದ 2026–27ನೇ ಸಾಲಿನ ಪ್ರಚಾರ ನಿರ್ದೇಶಕರಾದ ಚರಣ್ ಜೆ. ಅನಂತಾಡಿ ಅವರಿಗೆ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ₹75,000 ಧನಸಹಾಯ ಹಸ್ತಾಂತರಿಸಲಾಯಿತು. ಘಟಕದ ಸದಸ್ಯರ ಸ್ವಯಂಪ್ರೇರಿತ ಸಹಕಾರದಿಂದ ಈ ಧನಸಹಾಯವನ್ನು ಸಂಗ್ರಹಿಸಿ, ಅವರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ, ಸಂಕಷ್ಟದ […]
Read More

12-07-2026, 7:00 PM
ಅಡ್ವೆ, ಜು.12: ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಘಟಕದ ಸದಸ್ಯರು ಹಾಗೂ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗಾಗಿ ಅಡ್ವೆಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ದೇವರ ಗದ್ದೆಯಲ್ಲಿ ‘ಕೆಸರ್‌ಡೊಂಜಿ ದಿನ-2026’ ಕಾರ್ಯಕ್ರಮವು ಭಾನುವಾರ ಬೆಳಗ್ಗಿನಿಂದ ಸಂಜೆಯವರೆಗೆ ಅತ್ಯಂತ ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಗಂಧಪ್ರಸಾದ, ತೀರ್ಥ, ಸಿಯಾಳ, ಹಾಲು ಸಮರ್ಪಣೆ ಹಾಗೂ ತೆಂಗಿನಕಾಯಿ ಒಡೆಯುವ […]
Read More

12-07-2026, 1:00 PM
ಉಪ್ಪಿನಂಗಡಿ, ಜು. 12: ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಉಪ್ಪಿನಂಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು. ಶಿಬಿರವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಉಪಯುಕ್ತವಾಗಿದ್ದು, […]
Read More