
ಬಂಟ್ವಾಳ, ಆ. 3: ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿರುವ ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ರಾಮಚಂದ್ರ ಸಾಲ್ಯಾನ್ ಅವರಿಗೆ ಸೇವಾ ಯೋಜನೆಯಡಿ ₹25,000 ಮೊತ್ತದ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.
ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಈ ಸೇವಾ ಯೋಜನೆಯನ್ನು ರೂಪಿಸಲಾಗಿದ್ದು, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ಸಮ್ಮುಖದಲ್ಲಿ ನೆರವಿನ ಮೊತ್ತವನ್ನು ಫಲಾನುಭವಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಮಾರ್ಗದರ್ಶಕರಾದ ಭುವನೇಶ್ ಪಚ್ಚಿನಡ್ಕ ಚಕ್ ಹಸ್ತಾಂತರ ಮಾಡಿದರು ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷರಾದ ಕಿರಣ್‌ರಾಜ್ ಪೂಂಜರೆಕೋಡಿ, ಕಾರ್ಯದರ್ಶಿ ಗೀತಾ ಜಗದೀಶ್ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು
ಈ ಸೇವಾ ಕಾರ್ಯಕ್ಕೆ ಉದಾರ ಮನಸ್ಸಿನಿಂದ ಸಹಕರಿಸಿದ ದಾನಿಗಳು, ಸದಸ್ಯರು ಹಾಗೂ ಹಿತೈಷಿಗಳಿಗೆ ಯುವವಾಹಿನಿ (ರಿ.) ಬಂಟ್ವಾಳ ಘಟಕವು ಕೃತಜ್ಞತೆ ಸಲ್ಲಿಸಿದೆ. ಸಮಾಜದ ಸಹಕಾರದಿಂದ ಇನ್ನಷ್ಟು ಅಗತ್ಯವಿರುವ ಕುಟುಂಬಗಳಿಗೆ ಇಂತಹ ಸೇವಾ ಯೋಜನೆಗಳನ್ನು ತಲುಪಿಸುವ ಸಂಕಲ್ಪವನ್ನು ಘಟಕ ವ್ಯಕ್ತಪಡಿಸಿದೆ.


