15-05-2026, 9:00 PM
ಕೂಳೂರು, ಮೇ 15: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಆಯೋಜಿಸಲಾದ 66ನೇ ಮನೆ-ಮನೆ ಭಜನೆ ಕಾರ್ಯಕ್ರಮವು 15-05-2026 ರಂದು ಘಟಕದ ಮಾರ್ಗದರ್ಶಕರಾದ ಜಯಾನಂದ ಅಮೀನ್ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನೆರವೇರಿತು.ಕಾರ್ಯಕ್ರಮದಲ್ಲಿ ನಡೆದ ಭಜನಾ ಸಂಕೀರ್ತನೆಯಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿ ಭಕ್ತಿಗೀತೆಗಳ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಿಸಿದರು. ಈ ಸಂದರ್ಭದಲ್ಲಿ ಆತಿಥ್ಯ ವಹಿಸಿದ್ದ ಜಯಾನಂದ ಅಮೀನ್ ದಂಪತಿಗಳನ್ನು ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಗೀತಾ ವಸಂತ್ ಅವರು ಶಾಲು ಹೊದಿಸಿ, […]
Read More
12-05-2026, 9:00 PM
ವಿಟ್ಲ : ದಿನಾಂಕ 12/05/2026 ಮಂಗಳವಾರದಂದು ಯುವವಾಹಿನಿ ಘಟಕದ ವತಿಯಿಂದ ಹೊನ್ನಾವರದಲ್ಲಿರುವ ಜಾಲಿ ಆಂಡ್ ಜಾಲಿ ವಾಟರ್ ಪಾರ್ಕ್‌ಗೆ ಮನರಂಜನಾ ಪ್ರವಾಸವನ್ನು ಆಯೋಜಿಸಲಾಯಿತು. ಈ ಪ್ರವಾಸದಲ್ಲಿ ಘಟಕದ ಅಧ್ಯಕ್ಷರು, ಕಾರ್ಯಕಾರಿಣಿ ಸದಸ್ಯರು ಸೇರಿದಂತೆ ಒಟ್ಟು 41 ಮಂದಿ ಭಾಗವಹಿಸಿದ್ದರು. ಬೆಳಗ್ಗಿನಿಂದಲೇ ಉತ್ಸಾಹಭರಿತವಾಗಿ ಆರಂಭವಾದ ಈ ಪ್ರವಾಸದಲ್ಲಿ ಸದಸ್ಯರು ವಿವಿಧ ಜಲಕ್ರೀಡೆಗಳು ಹಾಗೂ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷವನ್ನು ಹಂಚಿಕೊಂಡರು. ಪ್ರವಾಸದ ಅವಧಿಯು ಸ್ನೇಹ, ಸಹಕಾರ ಮತ್ತು ಸಂಘಟನಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಂತಾಗಿತ್ತು. ಎಲ್ಲಾ ಸದಸ್ಯರು ಸಂತೋಷ ಹಾಗೂ […]
Read More
12-05-2026, 1:00 PM
ಮೂಡಬಿದಿರೆ : ಯುವವಾಹಿನಿ (ರಿ.) ಮೂಡಬಿದಿರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್ (BVT) ಮಣಿಪಾಲ ಹಾಗೂ ನೋಮಿ ಯೋಜನೆ ಪ್ರಾಯೋಜಕತ್ವದಲ್ಲಿ, ವಿಚೀಸ್ ಕೌಶಲ್ಯ ಕೇಂದ್ರ ಮೂಡುಬಿದಿರೆ ಇವರ ಸಹಕಾರದೊಂದಿಗೆ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾದ 15 ದಿನಗಳ ‘ಉಚಿತ ಫ್ಯಾಷನ್ ಡಿಸೈನ್ ತರಬೇತಿ’ ಕಾರ್ಯಕ್ರಮವು ದಿನಾಂಕ 12.05.2026 ರ ಮಂಗಳವಾರದಂದು ಇಲ್ಲಿನ ಸಮಾಜ ಮಂದಿರದಲ್ಲಿ ದೀಪ ಪ್ರಜ್ವಲನೆಗಳೊಂದಿಗೆ ಸಡಗರದಿಂದ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವವಾಹಿನಿ (ರಿ.) ಮೂಡಬಿದಿರೆ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಅವರು, “ಇಂದಿನ ದಿನಗಳಲ್ಲಿ ಮಹಿಳೆಯರು […]
Read More
11-05-2026, 9:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 11-05-2026 ರಂದು ಸಂಜೆ 5.30 ಗಂಟೆಗೆ ಶ್ರೀ ತ್ರಯಂಬಕ ಭಜನಾ ಮಂಡಳಿ ಸುರತ್ಕಲ್ ಇವರ ಸಹಯೋಗದೊಂದಿಗೆ ನಡೆಯಿತು. ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
Read More
10-05-2026, 7:00 PM
ಕುಪ್ಪೆಪದವು : “ನಾರಾಯಣ ಗುರುಗಳ ತತ್ವದಂತೆ ‘ವಿದ್ಯೆ–ಉದ್ಯೋಗ–ಸಂಪರ್ಕ’ ಎಂಬ ಧ್ಯೇಯೋದ್ದೇಶದೊಂದಿಗೆ ರಾಜ್ಯವ್ಯಾಪಿ ಬೆಳೆಯುತ್ತಿರುವ ಯುವವಾಹಿನಿ ಸಂಸ್ಥೆಯು, ಯುವಶಕ್ತಿಯನ್ನು ಸಮಾಜಸೇವೆಯತ್ತ ಕೊಂಡೊಯ್ಯುತ್ತಿರುವುದು ಹೆಮ್ಮೆಯ ವಿಚಾರ,” ಎಂದು ಶಾಸಕರಾದ ವೈ ಭರತ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಯುವವಾಹಿನಿ (ರಿ.) ಕುಪ್ಪೆಪದವು-ಎಡಪದವು ಘಟಕದ ವತಿಯಿಂದ ವಿದ್ಯಾನಿಧಿ ಸಹಾಯಾರ್ಥವಾಗಿ ಕಿಲೆಂಜಾರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಘಟಕವು ಯುವಜನರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ ಎಂದು ಅವರು ಶ್ಲಾಘಿಸಿದರು. ಪಂದ್ಯಕೂಟವನ್ನು ಕಿಲೆಂಜಾರು ಅರಮನೆ […]
Read More
09-05-2026, 9:00 PM
ಹೆಜಮಾಡಿ: ಯುವವಾಹಿನಿ (ರಿ.) ಹೆಜಮಾಡಿ ಘಟಕ ಹಾಗೂ ಹೆಜಮಾಡಿ ಬಿಲ್ಲವರ ಸಂಘದ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಶನಿಪೂಜೆ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಭಕ್ತಿಭಾವ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಹಾಗೂ ಕೋಶಾಧಿಕಾರಿಯಾದ ಸತೀಶ್ ಕಿಲ್ಪಾಡಿ ಅವರು ಭಾಗವಹಿಸಿ ಶುಭ ಹಾರೈಸಿದರು. ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಂಘಟನಾ ಚಟುವಟಿಕೆಗಳನ್ನು ಬಲಪಡಿಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು. ಸಾರ್ವಜನಿಕ ಶನಿಪೂಜೆಯಲ್ಲಿ […]
Read More
09-05-2026, 8:00 PM
ಹೆಜಮಾಡಿ : ಯುವವಾಹಿನಿ(ರಿ.) ಹೆಜಮಾಡಿ ಘಟಕದ ಆಶ್ರಯದಲ್ಲಿ ಹರೀಶ್ ಶಾಂತಿ ಹೆಜಮಾಡಿ ಇವರ ಪೌರೋಹಿತ್ಯದಲ್ಲಿ 28 ನೇ ವರ್ಷದ ಸಾರ್ವಜನಿಕ ಶನಿಪೂಜೆ ಮತ್ತು ಭಾಸ್ಕರ್. ಕೆ. ಪಡುಬಿದ್ರಿ ಇವರ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ಹೆಜಮಾಡಿ ನಾರಾಯಣಗುರು ಮಂದಿರದಲ್ಲಿ ದಿನಾಂಕ:09-05-2026 ರಂದು ಆದಿತ್ಯವಾರ ಜರಗಿತು.ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಮತ್ತು ಕೋಶಾಧಿಕಾರಿ ಸತೀಶ್ ಕಿಲ್ಪಾಡಿ ಉಪಸ್ಥಿತರಿದ್ದರು.
Read More
04-05-2026, 9:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 04-05-2026 ರಂದು ಸಂಜೆ 5.30 ಗಂಟೆಗೆ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಕುತ್ತಾರು ಮಂಗಳೂರು ಇವರ ಸಹಯೋಗದೊಂದಿಗೆ ನಡೆಯಿತು. ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
Read More
28-04-2026, 8:00 PM
ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಸುಂಕದಕಟ್ಟೆ, ಬಜಪೆ ಇಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಭಜನಾ ಸಂಕೀರ್ತನೆ ಕಾರ್ಯಕ್ರಮವು ಭಕ್ತಿ ಭಾವದಿಂದ ನೆರವೇರಿತು. ದಿನಾಂಕ 28-04-2026, ಮಂಗಳವಾರ ಸಂಜೆ 5.00ರಿಂದ 8.00 ಗಂಟೆಯವರೆಗೆ ನಡೆದ ಭಜನಾ ಸಂಕೀರ್ತನೆಯಲ್ಲಿ ಘಟಕದ ಸದಸ್ಯರು ಭಕ್ತಿಪೂರ್ವಕವಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ, ಭಜನಾ ಸಂಚಾಲಕರಾದ ದಿವ್ಯ ಸುನಿಲ್, ಸಹ ಸಂಚಾಲಕರಾದ ವಿನೋದ ಪೂಜಾರಿ, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದು […]
Read More
27-04-2026, 9:00 PM
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 27-04-2026 ರಂದು ಸಂಜೆ 5.30 ಗಂಟೆಗೆ ಯುವವಾಹಿನಿ (ರಿ.) ಸುರತ್ಕಲ್ ಘಟಕ ಇವರ ಸಹಯೋಗದೊಂದಿಗೆ ನಡೆಯಿತು. ಮಂಗಳೂರು ಹಾಗೂ ಸುರತ್ಕಲ್ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Read More