
ನಿಯಮಾವಳಿ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ, 2026ರ ಆಗಸ್ಟ್ 23ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಯುವವಾಹಿನಿ ಭಜನಾ ಸ್ಪರ್ಧೆ–2026ರ ನಿಯಮಾವಳಿ ಈ ಕೆಳಗಿನಂತಿದೆ.
🔹 ಅರ್ಹತೆ ಮತ್ತು ಸದಸ್ಯತ್ವ
1) ಇದು ಯುವವಾಹಿನಿಯ ಅರ್ಹ ಸದಸ್ಯರಿಗೆ ಮಾತ್ರ ಸೀಮಿತವಾದ ಅಂತರ್‌ಘಟಕ ಭಜನಾ ಸ್ಪರ್ಧೆಯಾಗಿದೆ.
2) ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸದಸ್ಯರು ನಿಗದಿತ ಅವಧಿಯೊಳಗೆ ವಾರ್ಷಿಕ ಸದಸ್ಯತ್ವ ಶುಲ್ಕ ಪಾವತಿಸಿ, ಕೇಂದ್ರ ಸಮಿತಿಯಿಂದ ಅನುಮೋದನೆಗೊಂಡ ಸದಸ್ಯತ್ವ ಸಂಖ್ಯೆ ಹೊಂದಿರುವ ಅರ್ಹ ಸದಸ್ಯರಾಗಿರಬೇಕು.
3) ಘಟಕದಲ್ಲಿ ಸದಸ್ಯತ್ವ ಶುಲ್ಕ ಪಾವತಿಸಿದ್ದರೂ, ಕೇಂದ್ರ ಸಮಿತಿಯಿಂದ ಸದಸ್ಯತ್ವ ಸಂಖ್ಯೆ ರಚನೆಯಾಗದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
4) ಕೇಂದ್ರ ಸಮಿತಿ ನೀಡಿರುವ ಅರ್ಹ ಸದಸ್ಯರ ಪಟ್ಟಿಯಲ್ಲಿರುವ ಸದಸ್ಯರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸದಸ್ಯರು ತಮ್ಮ ಸದಸ್ಯತ್ವದ ಸ್ಥಿತಿಯನ್ನು samparka.yuvavahini.in ಸಂಪರ್ಕ ಜಾಲತಾಣದಲ್ಲಿ ಮೊಬೈಲ್ ಸಂಖ್ಯೆ ಹಾಗೂ OTP ಮೂಲಕ ಪರಿಶೀಲಿಸಿಕೊಳ್ಳಬಹುದು.
5) ಸದಸ್ಯರು ತಾವು ಸದಸ್ಯತ್ವ ಹೊಂದಿರುವ ಘಟಕದ ಮೂಲಕ ಮಾತ್ರ ಸ್ಪರ್ಧಿಸಬೇಕು.
6) ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು.
7) ಅರ್ಹ ಸದಸ್ಯತ್ವವನ್ನು ಪರಿಶೀಲಿಸಿದ ಬಳಿಕ ಕೇಂದ್ರ ಸಮಿತಿಯು ಸ್ಪರ್ಧಾಳು ಸದಸ್ಯರಿಗೆ ಅಳಿಸಲಾಗದ ಗುರುತು ನೀಡುತ್ತದೆ. ಸ್ಪರ್ಧೆಯ ಯಾವುದೇ ಹಂತದಲ್ಲಿ ಗುರುತು ಇಲ್ಲದ ಅಥವಾ ಪರಿಶೀಲನೆಗೆ ಸಹಕರಿಸದ ಸ್ಪರ್ಧಿಯನ್ನು ಅನರ್ಹಗೊಳಿಸಲಾಗುವುದು.
🔹 ನೋಂದಣಿ ಮತ್ತು ವೇಳಾಪಟ್ಟಿ
8) ಘಟಕಗಳು ಸ್ಪರ್ಧೆಗೆ ಹೆಸರು ನೊಂದಾವಣೆ ಮಾಡಲು ಕೊನೆಯ ದಿನಾಂಕ 01.08.2026 ಸಂಜೆ ಗಂಟೆ 5ರ ಒಳಗಡೆ, ಸಮಯ ಮೀರಿದ ಬಳಿಕ ಯಾವುದೇ ಕಾರಣಕ್ಕೂ ಸ್ಪರ್ಧೆಗೆ ಹೆಸರು ನೋಂದಾಯಿಸಲು ಘಟಕಗಳಿಗೆ ಅವಕಾಶ ಇರುವುದಿಲ್ಲ.
9) ಭಜನಾ ಸ್ಪರ್ಧೆಯ ವೇಳಾಪಟ್ಟಿಯ ಕ್ರಮಾಂಕವನ್ನು ದಿನಾಂಕ 18.08.2026ರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚೀಟಿ ಎತ್ತುವ ಮೂಲಕ (ಲಾಟ್ಸ್) ಅಂತಿಮಗೊಳಿಸಿ, ಬಳಿಕ ಸಂಬಂಧಿಸಿದ ಎಲ್ಲಾ ಘಟಕಗಳಿಗೆ ಅಧಿಕೃತವಾಗಿ ತಿಳಿಸಲಾಗುವುದು.
10) ಕೇಂದ್ರ ಸಮಿತಿಯ ಕಲೆ ಮತ್ತು ಸಾಹಿತ್ಯ ನಿರ್ದೇಶಕರಲ್ಲಿ ಅಧೀಕೃತವಾಗಿ ಹೆಸರು ನೊಂದಾವಣೆ ಮಾಡತಕ್ಕದ್ದು
11) ಯಾವುದೇ ಕಾರಣಕ್ಕೂ ಸ್ಪರ್ಧೆಯ ಸಮಯ ಬದಲಾವಣೆಗೆ ಅವಕಾಶ ಇರುವುದಿಲ್ಲ.
12) ನಿಗದಿತ ಸಮಯಕ್ಕೆ ಹಾಜರಾಗದ ಸ್ಪರ್ಧಾ ಘಟಕವನ್ನು ಅನರ್ಹಗೊಳಿಸಲಾಗುವುದು.
13) ಸ್ಪರ್ಧೆಯು ನಿಗದಿತ ವೇಳೆಗೆ ಆರಂಭವಾಗುತ್ತದೆ.
14) ಸ್ಪರ್ಧೆಯ ಸಮಯದಲ್ಲಿ ಯುವವಾಹಿನಿ ಗುರುತಿನ ಚೀಟಿ (ID Card) ಧರಿಸುವುದು ಕಡ್ಡಾಯವಲ್ಲ. ಆದರೆ, ಕೇಂದ್ರ ಸಮಿತಿ ನೀಡುವ ಅಳಿಸಲಾಗದ ಗುರುತು ಇಲ್ಲದ ಸ್ಪರ್ಧಿಗಳಿಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ.
15) ಎಲ್ಲಾ ಘಟಕಗಳು ಕೇಂದ್ರ ಸಮಿತಿ ನೀಡುವ ಮಾದರಿಯಲ್ಲಿ ಸದಸ್ಯತ್ವ ಸಂಖ್ಯೆಯೊಂದಿಗೆ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ದಿನಾಂಕ15.08.2026ರ ಒಳಗೆ ಕೇಂದ್ರ ಸಮಿತಿಯ ಕಲೆ ಮತ್ತು ಸಾಹಿತ್ಯ ನಿರ್ದೇಶಕರಿಗೆ ಸಲ್ಲಿಸಬೇಕು.
🔹 ವಾದ್ಯೋಪಕರಣ ಮತ್ತು ತಾಂತ್ರಿಕ ವ್ಯವಸ್ಥೆ
16) ಪ್ರದರ್ಶನದ ವೇಳೆ ಸಂಘಟಕರು ಒದಗಿಸಿದ ಧ್ವನಿ ವ್ಯವಸ್ಥೆ ಅಥವಾ ವಾದ್ಯೋಪಕರಣಗಳಲ್ಲಿ ತಾಂತ್ರಿಕ ದೋಷ ಉಂಟಾದಲ್ಲಿ, ಅದರ ಕಾರಣದಿಂದ ಯಾವುದೇ ಅಂಕ ಕಡಿತಗೊಳಿಸಲಾಗುವುದಿಲ್ಲ.
17) ಅಗತ್ಯವಿರುವ ತಂಡಗಳಿಗೆ ಹಾರ್ಮೋನಿಯಂ ಹಾಗೂ ತಬಲಾ ವಾದ್ಯಗಳನ್ನು ಸಂಘಟಕರು ಒದಗಿಸುತ್ತಾರೆ.
18) ಹಾರ್ಮೋನಿಯಂ ಹಾಗೂ ತಬಲಾ ವಾದನ ಕಡ್ಡಾಯವಲ್ಲ. ಅವುಗಳನ್ನು ನಿರ್ವಹಿಸಲು ಸ್ಪರ್ಧಿಗಳು ಇಲ್ಲದಿದ್ದರೂ ಅಂಕ ಕಡಿತಗೊಳಿಸಲಾಗುವುದಿಲ್ಲ.
🔹 ಮೌಲ್ಯಮಾಪನದ ಮಾನದಂಡಗಳು
19) ಕೆಳಕಂಡ ಅಂಶಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುವುದು:
ರಾಗ
ತಾಳ
ಹೊಂದಾಣಿಕೆ
ಪ್ರಸ್ತುತಿ
ಭಜನೆಯ ಆರಂಭ ಮತ್ತು ಅಂತ್ಯ
ಭಜನೆಯ ಆಯ್ಕೆ
ಸಮವಸ್ತ್ರ
ಒಟ್ಟು ಪರಿಣಾಮ
🔹 ಸ್ಪರ್ಧೆಯ ನಿರ್ವಹಣೆ
20) ತಂಡದ ಸದಸ್ಯರು ಪ್ರದರ್ಶನಕ್ಕೆ 10 ನಿಮಿಷಗಳ ಮೊದಲು ವೇದಿಕೆಯ ಎಡಭಾಗದಲ್ಲಿ ಸಿದ್ಧರಾಗಿರಬೇಕು.
21) ಪ್ರತಿ ತಂಡದಲ್ಲಿ ಕನಿಷ್ಠ 8 ಹಾಗೂ ಗರಿಷ್ಠ 12 ಸ್ಪರ್ಧಿಗಳಿಗೆ ಅವಕಾಶವಿರುತ್ತದೆ.
22) ಭಜನೆಯನ್ನು ಒಬ್ಬರೇ ಮುನ್ನಡೆಸುವಂತಿಲ್ಲ. ಕನಿಷ್ಠ ಮೂರು ಮಂದಿ ನೇತೃತ್ವ ವಹಿಸಬೇಕು.
23) ಭಜನೆಯ ಸಾಹಿತ್ಯದಲ್ಲಿ ಯಾವುದೇ ಲೋಪ, ಬದಲಾವಣೆ ಅಥವಾ ರಿಮಿಕ್ಸ್ ಶೈಲಿಗೆ ಅವಕಾಶವಿಲ್ಲ.
24) ಕನ್ನಡ ಹಾಗೂ ತುಳು ಭಾಷೆಯ ಭಜನೆಗಳನ್ನು ಮಾತ್ರ ಹಾಡಬೇಕು. ಭಜನೆಯು ಭಜನಾ ಸಂಪ್ರದಾಯಕ್ಕೆ ಅನುಗುಣವಾಗಿರಬೇಕು
25) ಸ್ಪರ್ಧೆಯು ಕುಳಿತು ಭಜನೆ ಮಾದರಿಯಲ್ಲಿ ಮಾತ್ರ ನಡೆಯುತ್ತದೆ. ಇತರ ಯಾವುದೇ ರೀತಿಯ ಪ್ರಸ್ತುತಿಗೆ ಅವಕಾಶ ಇರುವುದಿಲ್ಲ.
26) ಪ್ರತಿ ತಂಡಕ್ಕೆ ಗರಿಷ್ಠ 12 ನಿಮಿಷಗಳ ಪ್ರದರ್ಶನ ಸಮಯ ನೀಡಲಾಗುತ್ತದೆ. ಸಮಯ ಮೀರಿದಲ್ಲಿ ಅಂಕ ಕಡಿತಗೊಳ್ಳುತ್ತದೆ.
27) ವೇದಿಕೆ ಸಿದ್ಧತೆಗೆ 1 ನಿಮಿಷ ಹಾಗೂ ಪ್ರದರ್ಶನದ ನಂತರ ವೇದಿಕೆ ತೆರವುಗೊಳಿಸಲು 1 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
28) ಸೂಚನಾ ಗಂಟೆ ಬಾರಿಸಿದ ಕ್ಷಣದಿಂದಲೇ ಪ್ರದರ್ಶನದ ಸಮಯ ಆರಂಭವಾಗುತ್ತದೆ.
29) ಪ್ರದರ್ಶನದ ಬಳಿಕ ವೇದಿಕೆಯ ಬಲಭಾಗದಿಂದಲೇ ನಿರ್ಗಮಿಸಬೇಕು.
🔹 ಸಾಮಾನ್ಯ ನಿಯಮಗಳು
30) ಓರ್ವ ಸ್ಪರ್ಧಿಗೆ ಒಂದಕ್ಕಿಂತ ಹೆಚ್ಚು ತಂಡಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
31) ಭಜನಾ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
32) ಕೊನೆಯ ಕ್ಷಣದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಹಕ್ಕನ್ನು ಕೇಂದ್ರ ಸಮಿತಿ ಕಾಯ್ದಿರಿಸಿದೆ.
33) ಸಂಘಟಕರು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ.
34) ಸಮಯಪಾಲನೆ ಅಥವಾ ತೀರ್ಪುಗಾರರ ತೀರ್ಪಿನ ಕುರಿತು ಅನಗತ್ಯ ಆಕ್ಷೇಪ ವ್ಯಕ್ತಪಡಿಸುವ ಘಟಕವನ್ನು ಸ್ಪರ್ಧೆಯಿಂದ ಅಮಾನತುಗೊಳಿಸುವ ಹಕ್ಕನ್ನು ಕೇಂದ್ರ ಸಮಿತಿ ಕಾಯ್ದಿರಿಸಿದೆ.
🔹 ಅನರ್ಹತೆ
35) ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿರುವುದು ಪತ್ತೆಯಾದಲ್ಲಿ ಅಂತಹ ಸ್ಪರ್ಧಿ ಅಥವಾ ಘಟಕವನ್ನು ಯಾವುದೇ ಪೂರ್ವ ಸೂಚನೆ ಇಲ್ಲದೆ ಅನರ್ಹಗೊಳಿಸಲಾಗುವುದು.
🔹 ವಿಶೇಷ ಪುರಸ್ಕಾರಗಳು
36) ಭಜನಾ ಸ್ಪರ್ಧೆಯ ಸಂದರ್ಭದಲ್ಲಿ ಕೆಳಗಿನ ವಿಭಾಗಗಳಲ್ಲಿ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸುವವರಿಗೆ ವಿಶೇಷ ಪುರಸ್ಕಾರ ನೀಡಲಾಗುವುದು:
- ಉತ್ತಮ ಭಜಕ
- ಉತ್ತಮ ತಬಲಾ ವಾದಕ
- ಉತ್ತಮ ಹಾರ್ಮೋನಿಯಂ ವಾದಕ
ಅದೇ ರೀತಿ, ಸ್ಪರ್ಧೆಯ ದಿನದಂದು ಶಿಸ್ತು, ಸಮಯಪಾಲನೆ, ಸಮನ್ವಯ ಹಾಗೂ ಉತ್ತಮ ಸಂಘಟನೆಯೊಂದಿಗೆ ಭಾಗವಹಿಸುವ ಘಟಕಕ್ಕೆ ವಿಶೇಷ ಪುರಸ್ಕಾರ ನೀಡಲಾಗುವುದು. ಈ ವಿಭಾಗಗಳ ಮೌಲ್ಯಮಾಪನವನ್ನು ಕೇಂದ್ರ ಸಮಿತಿಯ ತಂಡವು ಸ್ಪರ್ಧೆಯ ದಿನ ದಿನವಿಡೀ ಗೌಪ್ಯವಾಗಿ ನಡೆಸಲಿದ್ದು, ಮೌಲ್ಯಮಾಪನದ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಿ ವಿಶೇಷ ಪುರಸ್ಕಾರವನ್ನು ನೀಡಲಾಗುವುದು. ಎಲ್ಲಾ ಘಟಕಗಳು ಉತ್ತಮ ಶಿಸ್ತು, ಸಮಯಪಾಲನೆ ಹಾಗೂ ಸಂಘಟನಾ ಬದ್ಧತೆಯೊಂದಿಗೆ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಲಾಗಿದೆ.
🔹 ಅಂತಿಮ ನಿಯಮಗಳು
37) ಸ್ಪರ್ಧೆಯ ಸುಸೂತ್ರ ನಿರ್ವಹಣೆಗೆ ರಚಿಸಲಾದ ಕೇಂದ್ರ ಸಮಿತಿಯ ನಿರ್ವಹಣಾ ಸಮಿತಿಯ ಸೂಚನೆಗಳನ್ನು ಎಲ್ಲ ಘಟಕಗಳು ಕಡ್ಡಾಯವಾಗಿ ಪಾಲಿಸಬೇಕು.
🔹 ಸಂಪರ್ಕ ಮಾಹಿತಿ
38) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅಶೋಕ್ ಕುಮಾರ್ ಪಡ್ಪು – ಅಧ್ಯಕ್ಷರು : ಮೊ.: 9449538751
ರೇಖಾ ಗೋಪಾಲ್ – ಪ್ರಧಾನ ಕಾರ್ಯದರ್ಶಿ : ಮೊ.: 9620013221
ರಂಜನ್ ಕೆ. ಕೋಟ್ಯಾನ್ – ನಿರ್ದೇಶಕರು : ಮೊ.: 7019820933
ಸುನೀಲ್ ಸಾಲ್ಯಾನ್ ಅಧ್ಯಕ್ಷರು, ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕ : ಮೊ.: 9945403680
ಮನವಿ : ನಿಯಮಗಳನ್ನು ಪಾಲಿಸುವ ಮೂಲಕ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಪ್ರೀತಿಯ ಆತಿಥ್ಯವನ್ನು ಸ್ವೀಕರಿಸಿ, ಯುವವಾಹಿನಿ ಭಜನಾ ಸ್ಪರ್ಧೆ – 2026ರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಕಳಕಳಿಯ ಮನವಿಯಾಗಿದೆ.
✍️ ಪ್ರಧಾನ ಕಾರ್ಯದರ್ಶಿ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು.







