ಯುವವಾಹಿನಿ ಡೆನ್ನಾನ ಡೆನ್ನನ – 2022 ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಯುವವಾಹಿನಿ ಬೆಳ್ತಂಗಡಿ ಘಟಕ
21-08-2022, 2:48 PM
21-08-2022, 8:23 AM
ಕಟಪಾಡಿ :- ಯುನೈಟೆಡ್ ಕಿಂಗ್ಡಮ್ ನ ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ವೇಯ್ಟ್ ಲಿಪ್ಟ್ ವಿಭಾಗದಲ್ಲಿ ದೇಶಕ್ಕೆ ಚೊಚ್ಚಲ ಪದಕ ಪಡೆದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಗುರುರಾಜ್ ಪೂಜಾರಿ ಇವರನ್ನು ಯುವವಾಹಿನಿ ಸಂಸ್ಥೆಯ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಗ್ರಹದಲ್ಲಿ ಜರಗಿದ ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಉಡುಪಿ ಘಟಕದ ಆತಿಥ್ಯದಲ್ಲಿ ಜರಗಿದ ಅಂತರ್ ಘಟಕ ಡೆನ್ನಾನ ಡೆನ್ನನ 2022 ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಇಂಧನ ಮತ್ತು ಕನ್ನಡ […]
21-08-2022, 8:12 AM
ಕಟಪಾಡಿ :- ನಮ್ಮ ನಡವಳಿಕೆಯನ್ನು ರೂಪಿಸಲು ಸಾಂಸ್ಕೃತಿಕ ಚಟುವಟಿಕೆಗಳು ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಭಾಷೆ , ಸಂಸ್ಕೃತಿಯ ಒಡನಾಟದಿಂದ ಉತ್ತಮ ನಡವಳಿಕೆ ಮೂಡಲು ಸಾಧ್ಯ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜವನ್ನು ತಿದ್ದಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವುದು ಸಾಧ್ಯ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಹಾಗೂ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ […]
17-07-2022, 4:25 PM
ಕಾರ್ಕಳ:- ದಿನಾಂಕ 17 ಜುಲೈ 2022ನೇ ಆದಿತ್ಯವಾರ ಯುವವಾಹಿನಿ(ರಿ.) ಕಾರ್ಕಳ, ಮೂಡಬಿದ್ರಿ, ಉಡುಪಿ ಘಟಕಗಳ ಜಂಟಿ ಆಶ್ರಯದಲ್ಲಿ “ಯುವ ಸಮ್ಮಿಲನ ಕಾರ್ಯಕ್ರಮ ” ಆನೆಕೆರೆ ಶ್ರೀ ಕೃಷ್ಣ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಉದ್ಯಮಿಗಳಾಗಿರುವ ಡಿ. ಆರ್. ರಾಜು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಕಳ ಘಟಕದ ಅಧ್ಯಕ್ಷರಾದ ತಾರಾನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು , […]
14-06-2022, 3:06 PM
ಉಡುಪಿ :- ದಿನಾಂಕ 14 ಜೂನ್ 2022 ರಂದು ಉಡುಪಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ ತಲೆಗೊಂದು ಸೂರು ಕಾರ್ಯಕ್ರಮದಡಿಯಲ್ಲಿ ಈ ಬಾರಿ ತೀರ ಅವಶ್ಯಕತೆ ಇರುವ ಒಂದು ಬಡ ಕುಟುಂಬದ ಮನೆಯ ಮೇಲ್ಚಾವಣಿಯ ದುರಸ್ತಿ ಕಾರ್ಯ ಹಾಗೂ ವಿದ್ಯುತ್ ಪುನರ್ ನವೀಕರಣ ಹಾಗೂ ಪೇಂಟಿಂಗ್ ಕಾರ್ಯಕ್ರಮವು ಪೂರ್ಣಗೊಂಡಿದ್ದು ದಿನಾಂಕ 14 ಜುನ್ 2022 ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರು ,ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
13-10-2019, 6:28 AM
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಉಡುಪಿ ಘಟಕದ ಆಶ್ರಯದಲ್ಲಿ “ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರಧಾನ ಸಮಾರಂಭ” ಯುವವಾಹಿನಿಯ ಸಭಾಂಗಣದಲ್ಲಿ ದಿನಾಂಕ 13/10/2019 ರಂದು ಜರಗಿತು. ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಖ್ಯಾತ ಹಿರಿಯ ಲೇಖಕಿ ಯಶವಂತಿ ಎಸ್ ಸುವರ್ಣ, ನಕ್ರೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಪಿ ಎನ್ ಅಚಾರ್ಯ ಕೊಡಂಕೂರು ಇವರಿಗೆ ಉಡುಪಿ ತುಳುಕೂಟದ ಗೌರವಾಧ್ಯಕ್ಷ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ಪ್ರಧಾನ ಮಾಡಿದರು. […]
13-09-2019, 9:10 AM
ಯುವವಾಹಿನಿ ಉಡುಪಿ ಘಟಕದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 165 ನೇ ಜನ್ಮದಿನದ ಆಚರಣೆಯನ್ನು ಘಟಕದ ಸಭಾಂಗಣದಲ್ಲಿ ನಡೆಸಲಾಯಿತು. ಅಲೆವೂರು ಭಾಸ್ಕರ ಪೂಜಾರಿ ಇವರು ವಿಧಿವತ್ತಾಗಿ ಗುರುಪೂಜೆಯನ್ನು ನೆರವೇರಿಸಿದರು. ಅಧ್ಯಕ್ಷರಾದ ನಾರಾಯಣ ಬಿ. ಎಸ್ ರವರು ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಮತ, ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ್ದಾರೆ,ಅವರ ಆದರ್ಶಗಳನ್ನು ಪಾಲಿಸಿದರೆ ಜೀವನದಲ್ಲಿ ಒಳಿತಾಗುತ್ತದೆ ಎಂದರು.ಘಟಕದ ಸಲಹೆಗಾರರಾದ ಸಂತೋಷ್ ಕುಮಾರ್ ಮಾತನಾಡಿ ಯುವವಾಹಿನಿಯ ಆಸ್ತಿಯಾಗಿದ್ದು, ದೇವರ ಪಾದ ಸೇರಿದ ತಮ್ಮಯ ಸರ್ ಗೆ ನಾರಾಯಣ […]
27-08-2019, 2:32 AM
ಸಾರ್ವಜನಿಕ ಗಣೇಶೋತ್ಸವ ಸಮಿತಿ, ಅಲೆವೂರ್ ಇದರ ಜಿಲ್ಲಾ ಮಟ್ಟದ ಸಂಗೀತ ಮತ್ತು ಚಿತ್ರ ಕಲೆ ಸ್ವರ್ಧೆ ಯುವವಾಹಿನಿ ಉಡುಪಿ ಘಟಕ ಸಹಭಾಗಿತ್ವದಲ್ಲಿ ದಿನಾಂಕ 25/08/2019 ರಂದು ನಡೆಯಿತು. ನಮ್ಮ ಘಟಕದ ಉಪಾಧ್ಯಕ್ಷರಾದ ಜಗದೀಶ್ ಕುಮಾರ್,ನಿಕಟಪೂರ್ವ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್,ಕಾರ್ಯದರ್ಶಿ ಮಹಾಬಲ ಅಮೀನ್ ಕಾರ್ಯಕ್ರಮವನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಬಹಳ ಉತ್ಸಹ ದಿಂದ ಈ ಸ್ವರ್ಧೆಯಲ್ಲಿ ಬಗವಹಿಸಿದರು.ಯುವವಾಹಿನಿ ಉಡುಪಿ ಘಟಕದ ನಿಕಟಪೂರ್ವ ಅಧ್ಯಕ್ಷ ರಾದ ಅಶೋಕ್ […]
07-07-2019, 8:10 AM
ಉಡುಪಿ : ಯುವವಾಹಿನಿ ಉಡುಪಿ ಘಟಕದ ವತಿಯಿಂದ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ದಿನಾಂಕ 7/7/2019 ರಂದು ಘಟಕದ ಸಭಾಂಗಣದಲ್ಲಿ ಘಟಕದ ಅಧ್ಯಕ್ಷರಾದ ನಾರಾಯಣ್ ಬಿ. ಎಸ್. ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಘಟಕದ ಸಲಹೆಗಾರರು, ಕೆಂದ್ರ ಸಮಿತಿಯ ಮಾಜಿಅಧ್ಯಕ್ಷರಾದ ಸಂತೋಷ್ ಕುಮಾರ್ ಸ್ವಾಗತಿಸಿದರು, ಮಾಜಿ ಅಧ್ಯಕ್ಷ ರಾದ ಶಂಕರ್ ಪೂಜಾರಿ ಪ್ರಸ್ತಾವನೆ ಮಾಡಿದರು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರವೀಣ್.ಎಂ. ಪೂಜಾರಿ, ವಕೀಲರು ಹಾಗೂ ಜಿಲ್ಲಾಧ್ಯಕ್ಷರು ಉಡುಪಿ ಬಿಲ್ಲವ ಯುವ ವೇದಿಕೆ(ರಿ) ಉಡುಪಿ ಜಿಲ್ಲೆ ಇವರು ದೀಪ ಬೆಳಗಿಸಿ […]
21-06-2019, 4:00 PM
ಉಡುಪಿ : ಯುವವಾಹಿನಿಯ ಉಡುಪಿ ಘಟಕದ ವತಿಯಿಂದ 5 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಘಟಕದ ಸಭಾಂಗಣದಲ್ಲಿ ದಿನಾಂಕ 21/06/2019 ರಂದು ನಡೆಯಿತು. ಯುವವಾಹಿನಿಯ ಉಡುಪಿ ಘಟಕದ ಅಧ್ಯಕ್ಷರಾದ ನಾರಾಯಣ್ ಬಿ. ಎಸ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಪತಾಂಜಲಿ ಹರಿದ್ವಾರ ಯೋಗ ಶಿಬಿರ” ಉಡುಪಿ ಇದರ ಯೋಗ ಶಿಕ್ಷಕಿ ಅನಿತಾ ಹಾಗೂ ಅವರ ಪತಿ ಯೋಗ ಶಿಕ್ಷಕ ತಿಪ್ಪೆಶ್ ರವರು ಯೋಗದ ಮಹತ್ವವನ್ನು ತಿಳಿಸಿದರು ಹಾಗೂ ಎಲ್ಲಾ ಸದಸ್ಯರಿಗೂ ತರಬೇತಿ ನೀಡಿದರು. ಯೋಗ ಗುರು […]