ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಉಡುಪಿ ಘಟಕದ ಆಶ್ರಯದಲ್ಲಿ “ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರಧಾನ ಸಮಾರಂಭ” ಯುವವಾಹಿನಿಯ ಸಭಾಂಗಣದಲ್ಲಿ ದಿನಾಂಕ 13/10/2019 ರಂದು ಜರಗಿತು.
ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಖ್ಯಾತ ಹಿರಿಯ ಲೇಖಕಿ ಯಶವಂತಿ ಎಸ್ ಸುವರ್ಣ, ನಕ್ರೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಪಿ ಎನ್ ಅಚಾರ್ಯ ಕೊಡಂಕೂರು ಇವರಿಗೆ ಉಡುಪಿ ತುಳುಕೂಟದ ಗೌರವಾಧ್ಯಕ್ಷ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ಪ್ರಧಾನ ಮಾಡಿದರು. ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್ ಮತ್ತು ಅಮಿತಾಂಜಲಿ ಕಿರಣ್ ರವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು & ಸ್ನಾತಕೋತ್ತರ ಅದ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ದುಗ್ಗಪ್ಪ ಕಜೆಕಾರ್ ಅಭಿನಂದನಾ ಭಾಷಣ ಮಾಡಿ, ತುಳು ಭಾಷೆ ಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಸಂಘಟಿತ ಹೋರಾಟ ಅಗತ್ಯ ಎಂದರು.ನಾರಾಯಣ ಗುರು ಒಂದು ಜಾತಿಗೆ ಸೀಮಿತ ವಾಗಿಲ್ಲ, ಅವರು ಹಿಂದುಳಿದ ವರ್ಗದ ಗುರು, ಈ ಪ್ರಶಸ್ತಿಗೆ ಅರ್ಹರಾದವರನ್ನೆ ಆರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಬನ್ನಂಜೆ ಬಾಬು ಅಮೀನ್ ಮಾತನಾಡಿ ಕಳೆದ 9 ವರ್ಷಗಳಿಂದ ಈ ಪ್ರಶಸ್ತಿಯನ್ನು ದಾನಿಗಳ ನೆರವಿನಿಂದ ನಡೆಸಿಕೊಂಡು ಬರುತ್ತಿದ್ದೇವೆ, ಯುವವಾಹಿನಿಯ ಬಗ್ಗೆ ನನಗೆ ತುಂಬಾ ಒಳ್ಳೆಯ ಬಾಂಧವ್ಯ ಇದೆ, ಇನ್ನು ಮುಂದೆಯೂ ಯುವವಾಹಿನಿಯ ಮುಖಾಂತರ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮುದ್ದು ಮುಡುಬೆಳ್ಳೆ ಪ್ರಸ್ತಾವಿಸಿ, ಯುವವಾಹಿನಿ ಆರಂಭದಿಂದಲೂ ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದರು. ಯುವವಾಹಿನಿಯ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರೂ,ಉಡುಪಿ ಘಟಕದ ಸಲಹೆಗಾರರಾದ ಸಂತೋಷ್ ಕುಮಾರ್ ಶುಭ ಹಾರೈಸಿದರು. ಉಡುಪಿ ಘಟಕಾಧ್ಯಕ್ಷರಾದ ಶ್ರೀ ನಾರಾಯಣ ಬಿ ಎಸ್ ಮಾತನಾಡಿ , ಬನ್ನಂಜೆಯವರು ತುಳು ಭಾಷೆ ಮತ್ತು ಜಾನಪದ ವಿದ್ವಾಂಸರಾಗಿದ್ದು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನಮ್ಮ ಯುವವಾಹಿನಿಯ ವತಿಯಿಂದ ಕೊಡಲು ತುಂಬಾ ಹೆಮ್ಮೆಯೆನಿಸುತ್ತದೆ ಎಂದರು. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಗಣ್ಯರನ್ನು ಗುರುತಿಸಲಾಯಿತು.
ಸಮಾರಂಭದಲ್ಲಿ ರೂಬಿಕ್ ಆರ್ಟ್ ಮೂಲಕ ಬನ್ನಂಜೆ ಬಾಬು ಅಮೀನ್ ರವರ ಚಿತ್ರ ಮಾಡಿದ ಸದಸ್ಯರಾದ ಮಹೇಶ್‌ರವರನ್ನು ಸನ್ಮಾನಿಸಲಾಯಿತು. ಕೋಶಾಧಿಕಾರಿ ಭಾರತಿ ಭಾಸ್ಕರ ಸುವರ್ಣ, ಮಹಿಳಾ ಸಂಚಾಲಕಿ ಶಕುಂತಳಾ ಸುಕೇಶ್ ಉಪಸ್ಥಿತರಿದ್ದರು.ಮಾಜಿ
ಅಧ್ಯಕ್ಷರಾದ ಭಾಸ್ಕರ ಸುವರ್ಣ ಸ್ವಾಗತಿಸಿದರು.
ದಯಾನಂದ್ ಉಪ್ಪೂರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮಹಾಬಲ ಅಮೀನ್ ವಂದಿಸಿದರು.