ಯುವವಾಹಿನಿ ಉಡುಪಿ ಘಟಕದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 165 ನೇ ಜನ್ಮದಿನದ ಆಚರಣೆಯನ್ನು ಘಟಕದ ಸಭಾಂಗಣದಲ್ಲಿ ನಡೆಸಲಾಯಿತು. ಅಲೆವೂರು ಭಾಸ್ಕರ ಪೂಜಾರಿ ಇವರು ವಿಧಿವತ್ತಾಗಿ ಗುರುಪೂಜೆಯನ್ನು ನೆರವೇರಿಸಿದರು. ಅಧ್ಯಕ್ಷರಾದ ನಾರಾಯಣ ಬಿ. ಎಸ್ ರವರು ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಮತ, ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ್ದಾರೆ,ಅವರ ಆದರ್ಶಗಳನ್ನು ಪಾಲಿಸಿದರೆ ಜೀವನದಲ್ಲಿ ಒಳಿತಾಗುತ್ತದೆ ಎಂದರು.ಘಟಕದ ಸಲಹೆಗಾರರಾದ ಸಂತೋಷ್ ಕುಮಾರ್ ಮಾತನಾಡಿ ಯುವವಾಹಿನಿಯ ಆಸ್ತಿಯಾಗಿದ್ದು, ದೇವರ ಪಾದ ಸೇರಿದ ತಮ್ಮಯ ಸರ್ ಗೆ ನಾರಾಯಣ ಗುರು ಜಯಂತಿಯ ಶುಭ ದಿನದಂದು ನುಡಿನಮನ ಸಲ್ಲಿಸಿದರು,ನಂತರ ಎಲ್ಲಾ ಸದಸ್ಯರು ಒಂದು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ನಾರಾಯಣ ಗುರು ಜಯಂತಿ ಆಚರಣೆ ಅಂಗವಾಗಿ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು. ಕಾರ್ಯದರ್ಶಿ ಮಹಾಬಲ ಅಮಿನ್ ರವರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.