05-04-2026, 9:00 PM
ಮಂಗಳೂರು: ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ವತಿಯಿಂದ ಲೋಬೋಸ್ ರಿವರ್ ವ್ಯೂಗೆ ಏಪ್ರಿಲ್ 5, 2026ರಂದು ಒಂದು ದಿನದ ಕಿರು ಪ್ರವಾಸವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಈ ಪ್ರವಾಸದಲ್ಲಿ ಘಟಕದ ಸದಸ್ಯರು, ಅವರ ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಸೇರಿ ಸುಮಾರು 80 ಮಂದಿ ಭಾಗವಹಿಸಿ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ಬೋಟ್ನಲ್ಲಿ ಸಂಚರಿಸುತ್ತಾ ಪ್ರಕೃತಿಯ ಮನಮೋಹಕ ಸೌಂದರ್ಯವನ್ನು ಕಣ್ತುಂಬಿಕೊಂಡು ಎಲ್ಲರೂ ಮನಸಾರೆ ಆನಂದಿಸಿದರು.ಬೋಟ್ ಸಿಬ್ಬಂದಿಗಳಿಂದ ವಿವಿಧ ಆಟೋಟ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದು, […]
Read More
14-03-2026, 2:00 PM
ಮಂಗಳೂರು : ಮಹಿಳಾ ದಿನಾಚರಣೆಯ ಸಂಭ್ರಮವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನವೂ ಸಂತೋಷ, ಸಂಭ್ರಮ ಹಾಗೂ ಸಕಾರಾತ್ಮಕ ಚಿಂತನೆಗಳೊಂದಿಗೆ ಆಚರಿಸಬೇಕಾಗಿದೆ ಎಂದು ರೂವಾರಿ.ಕಾಮ್ ಡಿಜಿಟಲ್ ಪತ್ರಿಕೆಯ ಪ್ರಧಾನ ಸಂಪಾದಕಿ ರತ್ನಾವತಿ ಜೆ. ಬೈಕಾಡಿ ಅಭಿಪ್ರಾಯಪಟ್ಟರು. ಅವರು ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಮಾರ್ಚ್ 14, 2026 ರಂದು ಸಂಜೆ 5 ಗಂಟೆಗೆ ಯುವವಾಹಿನಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು “ಇತರರು ಏನು ಹೇಳುತ್ತಾರೆ” ಎಂಬ ಕೀಳರಿಮೆಯನ್ನು ತೊರೆದು, […]
Read More
08-03-2026, 9:15 PM
ಮಂಗಳೂರು: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಏಳು ದಿನಗಳ ರಾಜಸ್ಥಾನ ಪ್ರವಾಸವು ಅತ್ಯಂತ ಯಶಸ್ವಿಯಾಗಿ ಹಾಗೂ ಸ್ಮರಣೀಯವಾಗಿ ಸಂಪನ್ನಗೊಂಡಿತು. ಪ್ರವಾಸದ ಹಾದಿ ಮತ್ತು ಪ್ರಮುಖ ಕ್ಷಣಗಳು:ಮಾರ್ಚ್ 2, 2026 ರಂದು ಆರಂಭವಾದ ಈ ಪ್ರವಾಸದಲ್ಲಿ ಒಟ್ಟು 24 ಸದಸ್ಯರ ತಂಡ ಭಾಗವಹಿಸಿತ್ತು. ಬೊಳ್ಳಿ ಟೂರಿಸಂ ಸಹಯೋಗದೊಂದಿಗೆ ಆಯೋಜಿಸಲಾದ ಈ ಪ್ರವಾಸದ ಪ್ರಮುಖ ಹಂತಗಳು ಇಲ್ಲಿವೆ:ಜೈಪುರ ದರ್ಶನ: ಮಂಗಳೂರಿನಿಂದ ಬೆಂಗಳೂರು ಮೂಲಕ ವಿಮಾನದ ಮೂಲಕ ಜೈಪುರ ತಲುಪಿದ ತಂಡವು, ಅಲ್ಲಿನ ಐತಿಹಾಸಿಕ ಹವಾ […]
Read More
28-02-2026, 9:00 PM
ಮಂಗಳೂರು: ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ (ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ) ಇಲ್ಲಿ ನಡೆದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ, ದಿನಾಂಕ 28-02-2026 ರಂದು ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಕ್ಷೇತ್ರದ ದರ್ಶನ ಮತ್ತು ಪ್ರಸಾದ ಸ್ವೀಕಾರ ಕಾರ್ಯಕ್ರಮ ನಡೆಯಿತು. ಜಾತ್ರಾ ಮಹೋತ್ಸವದ ಪುಣ್ಯ ಕಾಲದಲ್ಲಿ ಘಟಕದ ಸದಸ್ಯರೆಲ್ಲರೂ ಒಟ್ಟಾಗಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ನೀಡಲಾಗುವ ಬ್ರಹ್ಮ ಬೈದರ್ಕುಲು ಹಾಗೂ […]
Read More
21-02-2026, 12:38 PM
ಮಂಗಳೂರು: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ “ನಮ್ಮ ನಡಿಗೆ – ಶ್ರೀಗುರುವಿನೆಡೆಗೆ” ಎಂಬ ವಿಶೇಷ ಸಂಕಲ್ಪದೊಂದಿಗೆ ಶನಿವಾರದಂದು ತೀರ್ಥಾಟನೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಯೋಜಿಸಲಾಯಿತು. ಭವ್ಯ ಸ್ವಾಗತ ಮತ್ತು ಮೆರವಣಿಗೆ: ದಿನಾಂಕ 21-02-2026ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸಿದ ಶಿವಗಿರಿ ಪೀಠಾಧಿಪತಿಗಳನ್ನು ಮಹಿಳಾ ಘಟಕದ ವತಿಯಿಂದ ಭವ್ಯವಾಗಿ ಬರಮಾಡಿಕೊಳ್ಳಲಾಯಿತು. ಅಲ್ಲಿಂದ ಪೀಠಾಧಿಪತಿಗಳ ನೇತೃತ್ವದಲ್ಲಿ ಯಾತ್ರೆಯು ಕುದ್ರೋಳಿ ಕ್ಷೇತ್ರದತ್ತ ಸಾಗಿತು.ಧಾರ್ಮಿಕ ಕಾರ್ಯಕ್ರಮಗಳು: ಕ್ಷೇತ್ರಕ್ಕೆ ಆಗಮಿಸಿದ ಯಾತ್ರಿಗಳು […]
Read More
01-02-2026, 1:00 PM
ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಆಯೋಜಿಸಲಾದ 100ನೇ ಉಚಿತ ಆರೋಗ್ಯ ಶಿಬಿರದ ಸಂದರ್ಭದಲ್ಲಿ ಸಮಾಜಸೇವೆಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕವನ್ನು ಗೌರವಿಸಲಾಯಿತು, ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರು ಗೌರವ ಸ್ವೀಕರಿಸಿದರು. ಸಾರ್ವಜನಿಕ ಆರೋಗ್ಯ ಜಾಗೃತಿ, ಸೇವಾಭಾವನೆ ಮತ್ತು ಮಹಿಳಾ ಸಬಲೀಕರಣದ ದಿಸೆಯಲ್ಲಿ ಯುವವಾಹಿನಿ ಮಹಿಳಾ ಘಟಕದ ಕೊಡುಗೆಯನ್ನು ಗುರುತಿಸಿ ನೀಡಲಾದ ಈ ಗೌರವವು ಸಂಘಟನೆಯ ಸೇವಾ ಪಯಣಕ್ಕೆ ಮತ್ತಷ್ಟು ಪ್ರೇರಣೆಯಾಯಿತು.
Read More
10-01-2026, 1:09 PM
ಮಂಗಳೂರು : ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆಗಳು, ಸೈಬರ್ ಅಪರಾಧಗಳ ವಿಧಗಳು ಮತ್ತು ಅವುಗಳಿಂದ ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ನಾವು ಜಾಗ್ರತರಾಗಬೇಕಿದೆ. ನಶೆಯ ದುಷ್ಪರಿಣಾಮಗಳು ಹಾಗೂ ನಶಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರದ ಮಹತ್ವವನ್ನು ತಿಳಿಯಬೇಕಿದೆ. ಜಾಗೃತಿ, ಜವಾಬ್ದಾರಿ ಮತ್ತು ಸಹಕಾರವೇ ಸುರಕ್ಷಿತ ಹಾಗೂ ಆರೋಗ್ಯಕರ ಸಮಾಜದ ಮೂಲಮಂತ್ರವೆಂದು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ತಿಪ್ಪಾ ರೆಡ್ಡಿ ಇವರು ತಿಳಿಸಿದರು. ಅವರು ದಿನಾಂಕ 10.01.2026 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ.) ಮಂಗಳೂರು ಮಹಿಳಾ […]
Read More
04-01-2026, 7:01 AM
ದೈವ ದಶಕಂ ಕನ್ನಡ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಯುವವಾಹಿನಿ ಮಹಿಳಾ ಘಟಕದ ಭಾಗವಹಿಕೆ ಮಂಗಳೂರು: ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ಆಶ್ರಯದಲ್ಲಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆತಿಥ್ಯದಲ್ಲಿ, ಕ್ಷೇತ್ರದ ಸಭಾಂಗಣದಲ್ಲಿ ದಿನಾಂಕ 04-01-2026ರಂದು ಪೂಜ್ಯ ನಾರಾಯಣ ಗುರುಗಳು ರಚಿಸಿದ “ದೈವ ದಶಕಂ” ಕೃತಿಯ ಕನ್ನಡ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದ ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಸದಸ್ಯರು […]
Read More
12-12-2025, 5:57 AM
ದಿನಾಂಕ 22/11/2025 ಯುವವಾಹಿನಿ ಸಭಾಂಗಣ ಶ್ರೀಮತಿ ನೈನಾ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವು ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷರು ಬಂದಿರುವ ಎಲ್ಲರನ್ನು ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ರಾಕೇಶ್ ಅವರು ತನ್ನ ಪ್ರಸ್ತಾವಿಕ ನುಡಿಯಲ್ಲಿ ಯುವವಾಹಿನಿಯ ಮಹಿಳಾ ಘಟಕ ಹಿಂದಿನಿಂದ ಇಂದಿನವರಗೆ ನಡೆದು ಬಂದ ಹಾದಿಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಶ್ರೀಮತಿ ನಮಿತಾ ಶ್ಯಾಮ, ಸಲಹಾ ಸಮಿತಿ ಸದಸ್ಯರು, ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವ ವಿದ್ಯಾನಿಲಯ. ಅವರು ದೀಪ […]
Read More