ಮಂಗಳೂರು: ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಉರ್ವಾ ಹೊಗೆಬೈಲ್, ಮಂಗಳೂರು ಇವರ ವತಿಯಿಂದ ಆಯೋಜಿಸಲಾಗಿರುವ 48 ದಿನಗಳ ಸಂಧ್ಯಾ ಭಜನಾ ಸೇವೆಯ ಅಂಗವಾಗಿ, ದಿನಾಂಕ 15-08-2026ರಂದು ಸಂಜೆ 6.30ರಿಂದ 8.00 ಗಂಟೆಯವರೆಗೆ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಭಜನಾ ಸೇವೆ ನಡೆಯಿತು.

ಮಹಿಳಾ ಘಟಕದ ಸದಸ್ಯೆಯರು ಭಕ್ತಿಭಾವದಿಂದ ವಿವಿಧ ಭಜನೆಗಳನ್ನು ಹಾಡಿ, ಶ್ರೀ ದೇವಿಯ ಸನ್ನಿಧಿಯಲ್ಲಿ ಭಜನಾ ಸೇವೆಯನ್ನು ಸಲ್ಲಿಸಿದರು. ಭಜನೆಯ ಬಳಿಕ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಕಸ್ತೂರಿ ಮಹೇಶ್ ಹಾಗೂ ಸದಸ್ಯೆಯರು ಉಪಸ್ಥಿತರಿದ್ದು, ಭಕ್ತಿಭಾವದಿಂದ ಭಜನಾ ಸೇವೆಯಲ್ಲಿ ಭಾಗವಹಿಸಿದರು.


