08-02-2026, 9:30 PM
ಪಡುಬಿದ್ರಿ : ದಿನಾಂಕ 08/02/2026 ರಂದು ಶ್ರೀ ಸಾರಂತಾಯ ಗರೋಡಿ ಉಲ್ಲಾಯ ದೈವಸ್ಥಾನ, ಸಸಿಹಿತ್ಲು ಇದರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಸದಸ್ಯರು ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ವಯಂಸೇವೆಯಲ್ಲಿ ತೊಡಗಿಸಿಕೊಂಡರು. ನೆರೆದಿದ್ದ ಭಕ್ತಜನರಿಗೆ ಅನ್ನ ಬಡಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ದೈವಸ್ಥಾನದ ಆಡಳಿತ ಮಂಡಳಿಯ ಪ್ರಶಂಸೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಘಟಕದ ವತಿಯಿಂದ ದೇಣಿಗೆಯನ್ನು ಸಂಗ್ರಹಿಸಿ ದೇವಸ್ಥಾನಕ್ಕೆ ಒಪ್ಪಿಸಲಾಯಿತು.
Read More
01-02-2026, 9:00 PM
ಪಡುಬಿದ್ರೆ/ಮಂಗಳೂರು : ಮಹಿಳಾ ಸಬಲೀಕರಣಕ್ಕೆ ಕ್ರೀಡೆಯನ್ನೇ ವೇದಿಕೆಯಾಗಿಸಿಕೊಂಡು, ಮಹಿಳಾ ಶಕ್ತಿಯನ್ನು ಸಮಾಜದ ಮುಂದಿಡುವ ಶ್ಲಾಘನೀಯ ಕಾರ್ಯವನ್ನು ಯುವವಾಹಿನಿ (ರಿ.) ಪಡುಬಿದ್ರೆ ಘಟಕ ಯಶಸ್ವಿಯಾಗಿ ನೆರವೇರಿಸಿದೆ. ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ಸ್ಥಳೀಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ “ಬಿಲ್ಲವ ಪ್ರೀಮಿಯರ್ ಲೀಗ್ (BPL) – 2026” ಮಹಿಳಾ ಕ್ರಿಕೆಟ್ ಪಂದ್ಯಾಟವು ಕೇವಲ ಕ್ರೀಡಾಕೂಟವಲ್ಲದೆ, ಸಂಘಟನೆ, ಏಕತೆ ಹಾಗೂ ಸಬಲೀಕರಣದ ಜೀವಂತ ಸಂದೇಶವಾಗಿ ಮೂಡಿಬಂದಿತು. ಪ್ರಮುಖವಾಗಿ ಯುವವಾಹಿನಿಯ ಮಹಿಳಾ ಸದಸ್ಯರಿಂದಲೇ ಆಯೋಜಿಸಲ್ಪಟ್ಟ ಈ […]
Read More
31-01-2026, 10:00 AM
ಪಡುಬಿದ್ರಿ: ಕ್ರೀಡೆ ಸಂಘಟನೆಗೆ ಏಕತೆಗೆ ಅತ್ಯುತ್ತಮ ಆಯ್ಕೆ. ಕ್ರೀಡೆ ಮೂಲಕ ಮಹಿಳಾ ಸಬಲೀಕರಣದತ್ತ ಹೆಜ್ಜೆ ಇಟ್ಟ ಯುವವಾಹಿನಿಯ ಪ್ರಯತ್ನ ಶ್ಲಾಘನೀಯ ಎಂದು ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ತಿಳಿಸಿದರು. ಅವರು ಯುವವಾಹಿನಿ ಪಡುಬಿದ್ರಿ ಘಟಕದ ವತಿಯಿಂದ ಆಯೋಜಿಸಲ್ಪಟ್ಟ ಬಿಲ್ಲವಾಸ್ ವುಮನ್ಸ್ ಪ್ರೀಮಿಯರ್ ಲೀಗ್- 2026 ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿದ ಅಂತಾರಾಷ್ಟ್ರೀಯ ಕ್ರೀಡಾಪಟು ಕು| ರಕ್ಷಾ ರೆಂಜಾಳ ಮಾತನಾಡಿ, ಇಂತಹ ವಿನೂತನ […]
Read More
23-01-2026, 4:58 PM
ಪಡುಬಿದ್ರಿ : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಸಾರಥ್ಯದಲ್ಲಿ 2026ರ ಜನವರಿ 31 ಹಾಗೂ ಫೆಬ್ರವರಿ 01ರಂದು ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬಿಲ್ಲವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲ್ಪಟ್ಟಿದ್ದು, ಇದರ ಅಂಗವಾಗಿ ಟೈಟಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಗುರುದೇವರ ಸ್ಮರಣೆಯೊಂದಿಗೆ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ (ರಿ.) ಅಡ್ವೆ ಘಟಕದ ಅಧ್ಯಕ್ಷರಾದ ಪ್ರಸಾದ್ ಪಲಿಮಾರು ಅವರು ಮಾತನಾಡಿ, ಯುವವಾಹಿನಿ (ರಿ.) […]
Read More
06-01-2026, 3:08 PM
ಪಡುಬಿದ್ರಿ : ಯುವವಾಹಿನಿ (ರಿ.), ಪಡುಬಿದ್ರಿ ಘಟಕದ ವತಿಯಿಂದ ಆಹ್ವಾನಿತ ತಂಡಗಳ ಮಹಿಳಾ ಕ್ರಿಕೆಟ್ ಪಂದ್ಯಾವಳಿ “ಬಿಲ್ಲವ ಪ್ರೀಮಿಯರ್ ಲೀಗ್ (BPL)–2026” ಅನ್ನು 2026ರ ಜನವರಿ 31 ಮತ್ತು ಫೆಬ್ರವರಿ 1ರಂದು ರಾಜೀವ್ ಗಾಂಧಿ ಕ್ರೀಡಾಂಗಣ, ಹೆಜಮಾಡಿದಲ್ಲಿ ಆಯೋಜಿಸಲಾಗಿದೆ. ಕ್ರೀಡೆಯ ಮೂಲಕ ಸಂಘಟನೆ, ಏಕತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು ಈ ಪಂದ್ಯಾಕೂಟದ ಮುಖ್ಯ ಉದ್ದೇಶವಾಗಿದ್ದು, ಈ ಸಂದರ್ಭದಲ್ಲಿ ಪ್ರತಿಭಾವಂತ ಆಟಗಾರ್ತಿಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಗುವುದು. ಪಂದ್ಯಾಕೂಟದ ವಿಜೇತರಿಗೆ ಒಟ್ಟು ₹1,75,000 […]
Read More
12-12-2025, 6:24 AM
16/11/2025 ಭಾನುವಾರ ಸ್ಥಳ.ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ ಕುತ್ಯಾರು ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ವಿಧಿತ್ ಪೂಜಾರಿ ಕರ್ನಿರೆ ವಹಿಸಿದ್ದರು, ಹಾಗೂ ಉದ್ಘಾಟನೆಯನ್ನು ಶಾಲಾ ವಿದ್ಯಾರ್ಥಿ ನಾಯಕ ಶ್ರೀ ಸಾತ್ವಿಕ್ ನೆರವೇರಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ದಿನೇಶ್ ಕುಲಾಲ್, ಬಿಲ್ಲವ ಸಮಾಜ ಸೇವಾ ಸಂಘ ಮುದರಂಗಡಿ ಇದರ ಪೂರ್ವಾಧ್ಯಕ್ಷರಾದ ಶ್ರೀ ಕೃಷ್ಣ ಪೂಜಾರಿ ಕೇಂಜ, ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ ಕುತ್ಯಾರು ಇಲ್ಲಿನ […]
Read More
01-12-2025, 2:38 PM
ಯುವವಾಹಿನಿ (ರಿ.) ಪಡುಬಿದ್ರಿ ಘಟಕ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಪಡುಬಿದ್ರಿ ಶಾಖೆ ಹಾಗೂ ಲಯನ್ಸ್ ಕ್ಲಬ್ ಪಡುಬಿದ್ರಿ ಇದರ ಜಂಟಿ ಸಹಯೋಗದೊಂದಿಗೆ ದಿನಾಂಕ 02/11/2025 ಭಾನುವಾರ ದಂದು ಉಚಿತ ನೇತ್ರ ತಪಾಸಣಾ ಶಿಬಿರ ವು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇದರ ವೈದ್ಯಕೀಯ ತಂಡದೊಂದಿಗೆ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಇಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಚಿತ್ತರಂಜನ್ ಬೋಳಾರ್ ನೆರವೇರಿಸಿದರು. […]
Read More
19-10-2025, 2:48 PM
21/9/2025 ಭಾನುವಾರದಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಘಟಕದ ಜಂಟಿ ಆಶ್ರಯದಲ್ಲಿ ಬೈದೆರ್ಲೆ ಗರಡಿ* ಬೊಕ್ಕ ಆರಾಧನೆ ಕೋಟಿ ಚೆನ್ನಯೆರ್ನ ಬದ್ಕ್ ಬೊಕ್ಕ ಆದರ್ಶ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಕಾರ್ಯಕ್ರಮವು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ವೈ ಸುಧೀರ್ ಕುಮಾರ್ ಎಲ್ಲರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿ, ಗುರು ತತ್ವ ಸಂದೇಶದ ಅನುಸಾರ ಜನರಲ್ಲಿ […]
Read More
19-10-2025, 2:40 PM
ದಿನಾಂಕ 28/09/25 ರಂದು ಮಂಗಳೂರು ದಸರಾ ಪ್ರಯುಕ್ತ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಘಟಕದ ವತಿಯಿಂದ ಒಂದು ದಿನದ ಸ್ವಯಂ ಸೇವೆಯಲ್ಲಿ ಭಾಗವಹಿಸಲಾಯಿತು .
Read More
16-09-2025, 7:04 PM
ನಾರಾಯಣ ಗುರು ಮಂದಿರದಲ್ಲಿ ಭಜನಾ ಸೇವೆ ನೀಡುವುದು ವಾಡಿಕೆ, ಅದೇ ರೀತಿಯಾಗಿ ದಿನಾಂಕ 04/09/25 ಗುರುವಾರ ರಂದು ಸಂಜೆ 6:0 ಗಂಟೆಗೆ ಸರಿಯಾಗಿ ಘಟಕದ ವತಿಯಿಂದ ಭಜನಾ ಸೇವೆ ಜರುಗಿತು. ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರು ದೇವರ ಕೃಪೆಗೆ ಪಾತ್ರರಾದರು. ಭಜನಾ ಸೇವೆಗೆ ಆಗಮಿಸಿದ ಎಲ್ಲರಿಗೂ ಪ್ರಸಾದ ಹಾಗೂ ಫಲಾಹಾರ ನೀಡಲಾಯಿತು.
Read More