Yuvavahini

ಸಸಿಹಿತ್ಲು

ಸ್ವಯಂಸೇವೆ ಹಾಗೂ ಅನ್ನದಾನಕ್ಕೆ ದೇಣಿಗೆ ಸಮರ್ಪಣೆ

ಸಸಿಹಿತ್ಲು ಅ 18 : ಮಂಗಳೂರು ದಸರಾ ಮಹೋತ್ಸವ–2026ರ ಅಂಗವಾಗಿ ಯುವವಾಹಿನಿ (ರಿ.) ಸಸಿಹಿತ್ಲು ಘಟಕದ ವತಿಯಿಂದ ದಿನಾಂಕ 18-10-2026ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಕ್ರಿಯ ಸಹಕಾರದೊಂದಿಗೆ ಸ್ವಯಂಸೇವಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗಾಗಿ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಲಾದ ₹8,000/- (ಎಂಟು ಸಾವಿರ ರೂಪಾಯಿ) ದೇಣಿಗೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ […]

Read More

ಸದಸ್ಯರ ವಾರ್ಷಿಕ ಕುಟುಂಬ ಸ್ನೇಹ ಮಿಲನ “ಸಂಭ್ರಮ – 2026”

ಸಸಿಹಿತ್ಲು : ಯುವವಾಹಿನಿ (ರಿ.) ಸಸಿಹಿತ್ಲು ಘಟಕದ ಸದಸ್ಯರ ವಾರ್ಷಿಕ ಕುಟುಂಬ ಸ್ನೇಹ ಮಿಲನ ಕಾರ್ಯಕ್ರಮ “ಸಂಭ್ರಮ – 2026” ದಿನಾಂಕ 05-04-2026 ರಂದು ಸಸಿಹಿತ್ಲುವಿನ ಪಂಚಪುಷ್ಪ ನಿವಾಸದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ನಾಲ್ಕು ಕರೆಯ ಹಿರಿಯ ಗುರಿಕಾರರಾದ ದಯಾನಂದ್ ಅವರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು ಸಸಿಹಿತ್ಲು ಘಟಕವು ಹಮ್ಮಿಕೊಳ್ಳುತ್ತಿರುವ ವಿನೂತನ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿ […]

Read More

ಸಸಿಹಿತ್ಲು: ಬ್ರಹ್ಮಕಲಶೋತ್ಸವದಲ್ಲಿ ಯುವವಾಹಿನಿ ಸೇವೆ

ಸಸಿಹಿತ್ಲು: ಯುವವಾಹಿನಿ (ರಿ.) ಸಸಿಹಿತ್ಲು ಘಟಕವು ದಿನಾಂಕ 08-03-2026 ರಂದು ಶ್ರೀ ಭಗವತಿ ದೇವಸ್ಥಾನ ಸಸಿಹಿತ್ಲಿನಲ್ಲಿ ನಡೆದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿತು. ಈ ಸಂದರ್ಭದಲ್ಲಿ ಯುವವಾಹಿನಿ ಘಟಕದ ಸದಸ್ಯರು ಭಕ್ತಿಭಾವದಿಂದ ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಜೊತೆಗೆ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಸಮಿತಿಯ ಮುಖ್ಯ ಜವಾಬ್ದಾರಿಯನ್ನು ಸಹ ಘಟಕವು ಹೊತ್ತುಕೊಂಡು ಯಶಸ್ವಿಯಾಗಿ ನಿರ್ವಹಿಸಿತು.ಈ ಸೇವಾ ಕಾರ್ಯವು ಯುವವಾಹಿನಿ ಘಟಕದ ಸಂಘಟನಾ ಸಾಮರ್ಥ್ಯ ಹಾಗೂ ಸಮಾಜಸೇವೆಯ ಬದ್ಧತೆಯನ್ನು ಪ್ರತಿಬಿಂಬಿಸಿದೆ.

Read More

ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂದರ್ಭ ಸೇವೆ

ಸಸಿಹಿತ್ಲು : ಯುವವಾಹಿನಿ (ರಿ.) ಸಸಿಹಿತ್ಲು ಘಟಕದ ಸದಸ್ಯರು ದಿನಾಂಕ 04.02.2026 ರಿಂದ 08.02.2026ರವರೆಗೆ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ, ಸಸಿಹಿತ್ಲು ಇಲ್ಲಿ ನಡೆದ ಹಸಿರು ಹೊರೆಕಾಣಿಕೆ, ನೇಮೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು. ಐದು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರ ವ್ಯವಸ್ಥೆ, ಅನ್ನಸಂತರ್ಪಣೆ, ಶಿಸ್ತು ನಿರ್ವಹಣೆ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳಲ್ಲಿ ಸದಸ್ಯರು ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಯುವವಾಹಿನಿ ಸದಸ್ಯರು ಶ್ರದ್ಧಾಭಕ್ತಿಯಿಂದ ಸೇವೆ ಸಲ್ಲಿಸಿ ದೈವಸ್ಥಾನದ ಆಡಳಿತ […]

Read More

ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷರಾಗಿ ವೀಣಾ ಮನೋಜ್

ಸಸಿಹಿತ್ಲು : ಯುವವಾಹಿನಿ (ರಿ.) ಸಸಿಹಿತ್ಲು ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ವೀಣಾ ಮನೋಜ್ ಅವರನ್ನು ಆಯ್ಕೆ ಮಾಡಲಾಗಿದೆ. 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು : ವೀಣಾ ಮನೋಜ್ ಉಪಾಧ್ಯಕ್ಷರು : ರೀತಾ ಸಂದೇಶ್ ಕಾರ್ಯದರ್ಶಿ : ಶ್ರೀನಿಧಿ ಕೋಶಾಧಿಕಾರಿ : ನೀತಾ ಸಮಾಜ ಸೇವಾ ನಿರ್ದೇಶಕರು : ಚಂದ್ರಶೇಖರ್ ಸಾಂಸ್ಕೃತಿಕ ನಿರ್ದೇಶಕರು : ಸೃಷ್ಠಿ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಸುಭಾಸ್ ಉದ್ಯೋಗ ಮತ್ತು […]

Read More

ಯುವ ಜನರ ಪರಿರ್ತನೆಗೆ ಯುವವಾಹಿನಿ ಅಗತ್ಯ ಪ್ರಕಾಶ್ ಕುಮಾರ್ ಅಭಿಮತ

  ಸಸಿಹಿತ್ಲು :- ಸಮಾಜದ ಯುವ ಜನತೆಯ ಅಮೂಲಾಗ್ರ ಪರಿವರ್ತನೆ ಪ್ರಸ್ತುತ ದಿನದಲ್ಲಿ ತೀರಾ ಅಗತ್ಯವಾಗಿದೆ, ಇಂತಹ ಪರಿವರ್ತನೆಯು ಯುವವಾಹಿನಿಯಂತಹ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಇದರ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ಬಿಎನ್.ತಿಳಿಸಿದರು. ಅವರು ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ (ರಿ.) ಸಸಿಹಿತ್ಲು ಘಟಕದ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಉದ್ಯೋಗ ಸಂಪರ್ಕ […]

Read More

ಶ್ರೀ ಕೃಷ್ಣ ವೇಷ ಸ್ಪರ್ಧೆ

ಸಸಿಹಿತ್ಲು : ಯುವವಾಹಿನಿ (ರಿ) ಸಸಿಹಿತ್ಲು ಘಟಕ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುಟಾಣಿಗಳಿಗಾಗಿ ಬಂಗಾರ ಬಹುಮಾನದ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರಾದ ಪ್ರಕಾಶ್ ಕುಮಾರ್ ಬಿ.ಎನ್ ದೀಪ ಬೆಳಗಿಸಿ ಕಾರ್ಯಕ್ರಮ.ಉದ್ಘಾಟಿಸಿದರು. ಎ.ಜೆ ಡೆನ್ಟಲ್ ಸೈನ್ಸ್ ಕಾಲೇಜಿನ ಪ್ರಾಧ್ಯಾಪಕರಾದ ರಿತೇಶ್, ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸಂಜ್ಯೋತಿ ಶೇಖಾ, ನಾರಾಯಣಗುರು ಮಹಿಳಾ ಸಮಿತಿ ಅಧ್ಯಕ್ಷೆ ಶುಭಾ ಪ್ರೇಮನಾಥ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ […]

Read More

ನರೇಶ್ ಕುಮಾರ್ ಸಸಿಹಿತ್ಲು

ಅದು 1983 ರ ಸೆಪ್ಟೆಂಬರ್ 29 ಶ್ರೀಮತಿ ಪುಷ್ಪ ಮತ್ತು ಗೋಪಾಲ್ ಕುಕ್ಯಾನ್ ದಂಪತಿ ಮಗನಾಗಿ ಕಡಲ ತಡಿಯ ಸುಂದರ ದ್ವೀಪ ಪ್ರದೇಶ ಸಸಿಹಿತ್ಲು ಎಂಬ ಗ್ರಾಮದಲ್ಲಿ ಜನಿಸಿದ ಕುವರನೆ ಯುವವಾಹಿನಿಯ 32ನೇ ನಾಯಕ ನರೇಶ್ ಕುಮಾರ್ ಸಸಿಹಿತ್ಲು ವೃತ್ತಿಯಲ್ಲಿ ಆರೋಗ್ಯ ಇಲಾಖೆಯ ಯೋಜನೆ ಯಿಂದರ ವ್ಯವಸ್ಥಾಪಕರಾಗಿರುವ ನರೇಶ್ ಕುಮಾರ್ ಅವರು, ಪ್ರವೃತ್ತಿಯಲ್ಲಿ ಲೇಖಕ, ನಾಟಕಕಾರ, ನಿರ್ದೇಶಕ, ನೃತ್ಯಪಟುವಾಗಿ ಗುರುತಿಸಿಕೊಂಡವರು. ಮೂಲ ಜಾನಪದ ಕುಣಿತಗಳ ಅಧ್ಯಯನ, ತರಭೇತಿ ಮತ್ತು ಪ್ರದರ್ಶನದ ವಿಶೇಷ ಆಸಕ್ತಿ ಹೊಂದಿರುವ ಇವರು, ನೇಪಾಳ, […]

Read More

ಮೂಡಿಗೆರೆ ಪ್ರಕೃತಿಯ ಮಡಿಲಲ್ಲಿ ನಾಲ್ಕು ಘಟಕಗಳ ಸಮ್ಮಿಲನ

ಸಸಿಹಿತ್ಲು : ಯುವವಾಹಿನಿ (ರಿ) ಸಸಿಹಿತ್ಲು ಘಟಕ ಹಮ್ಮಿಕೊಂಡಿದ್ದ ಕಾಡಿನ ನಡುವೆ ಒಂದು ದಿನದ ಚಾರಣ ದಲ್ಲಿ ನಾಲ್ಕು ಘಟಕ.ಸಮ್ಮಿಲನ ಗೊಂಡಿದ್ದು ಪರಿಚಯ ಮತ್ತು ಆತ್ಮೀಯತೆಗೆ ಕಾರಣವಾಗಿದೆ. ಮುಂಜಾನೆಯ ಹೊತ್ತು ಯುವವಾಹಿನಿ ಸಸಿಹಿತ್ಲು ಘಟಕದ ಸದಸ್ಯರನ್ನು ಬೆಳ್ತಂಗಡಿ ಘಟಕದ ಸದಸ್ಯರು ಬೆಳ್ತಂಗಡಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲಿಂದ ಆರಂಭಗೊಂಡ ಚಾರಣ ಮತ್ತೂರು ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಮುಂದುವರಿಯಿತು. ಚಾರ್ಮಾಡಿಯಲ್ಲಿ ಚಾರಣ, ಸ್ನಾನ ಬಳಿಕ ಮೂಡಿಗೆರೆ ಕಾಮತ್ ರೆಸಾರ್ಟ್ ನಲ್ಲಿ ಸ್ನೇಹಮಿಲನ.ನಡೆಯಿತು. ಈ ಸಂದರ್ಭದಲ್ಲಿ ನೂತನವಾಗಿ ರಚನೆಯಾದ ಯುವವಾಹಿನಿ […]

Read More

ವಿಶುಕುಮಾರ್ 4 ಕಾದಂಬರಿಗಳನ್ನು ಮರುಮುದ್ರಣಗೊಳಿಸಿದ ಯುವವಾಹಿನಿ

ಮಂಗಳೂರು : ಹಿರಿಯ ಸಾಹಿತಿ, ನಟ, ನಿರ್ದೇಶಕ ದಿ.ವಿಶುಕುಮಾರ್ ಅವರ 16 ಕಾದಂಬರಿಗಳು ಹಾಗೂ 12 ನಾಟಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜನಮಾನಸದಿಂದ ದೂರವಾಗುತ್ತಿರುವ ಅವುಗಳನ್ನು ಮತ್ತೆ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ ಸಂಸ್ಥೆಯು ಮೊದಲ ಹಂತದಲ್ಲಿ 4 ಕಾದಂಬರಿಗಳನ್ನು ಮರುಮುದ್ರಣ ಗೊಳಿಸಿ ದಿನಾಂಕ17.02.2019 ರಂದು ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಳಿಸಿದೆ. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ

ಯುವವಾಹಿನಿ ಕ್ರೀಡೋತ್ಸವ–2026 : ಪಣಂಬೂರು ಕುಳಾಯಿ ಘಟಕಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ...

Sunday, 11-10-2026
ಕ್ರೀಡಾ ಸ್ಫೂರ್ತಿ, ಶಿಸ್ತು ಹಾಗೂ ಸಂಘಟನಾ ಶಕ್ತಿಯ ಅನಾವರಣ

ಯುವವಾಹಿನಿ ಕ್ರೀಡೋತ್ಸವ–2026ಕ್ಕೆ ಸಂಭ್ರಮದ ತೆರೆ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ...

Sunday, 04-10-2026
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
error: Content is protected !!