ಸಸಿಹಿತ್ಲು : ಯುವವಾಹಿನಿ (ರಿ.) ಸಸಿಹಿತ್ಲು ಘಟಕದ ಸದಸ್ಯರ ವಾರ್ಷಿಕ ಕುಟುಂಬ ಸ್ನೇಹ ಮಿಲನ ಕಾರ್ಯಕ್ರಮ “ಸಂಭ್ರಮ – 2026” ದಿನಾಂಕ 05-04-2026 ರಂದು ಸಸಿಹಿತ್ಲುವಿನ ಪಂಚಪುಷ್ಪ ನಿವಾಸದಲ್ಲಿ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ನಾಲ್ಕು ಕರೆಯ ಹಿರಿಯ ಗುರಿಕಾರರಾದ ದಯಾನಂದ್ ಅವರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು ಸಸಿಹಿತ್ಲು ಘಟಕವು ಹಮ್ಮಿಕೊಳ್ಳುತ್ತಿರುವ ವಿನೂತನ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಸಿಹಿತ್ಲು ಘಟಕಕ್ಕೆ ನಿಯೋಜಿಸಲ್ಪಟ್ಟ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಗಣೇಶ್ ಕೆ. ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಅಗ್ಗಿದಕಳಿಯ–ಸಸಿಹಿತ್ಲು ಇದರ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್. ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರತಿವರ್ಷದ ಸಂಪ್ರದಾಯದಂತೆ ಗ್ರಾಮದ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಪ್ರಕಾಶ್ ಕುಮಾರ್ ಬಿ.ಎನ್., ಹಿರಿಯ ಗುರಿಕಾರ ದಯಾನಂದ್ ಎಸ್., ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಸಿಹಿತ್ಲು ಇದರ ಮಾಜಿ ಕೋಶಾಧಿಕಾರಿ ವಸಂತ್ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ವಿವಿಧ ಪದಾಧಿಕಾರಿಗಳು, ವಿವಿಧ ಘಟಕಗಳ ಸದಸ್ಯರು, ಸಸಿಹಿತ್ಲು ಘಟಕದ ಎಲ್ಲಾ ಮಾಜಿ ಅಧ್ಯಕ್ಷರುಗಳು ಹಾಗೂ ಹೊಸ ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಘಟಕದ ಅಧ್ಯಕ್ಷೆ ವೀಣಾ ಮನೋಜ್ ಅವರು ಅತಿಥಿಗಳು ಹಾಗೂ ಸದಸ್ಯರನ್ನು ಸ್ವಾಗತಿಸಿದರು. ಕಾರ್ಯದರ್ಶಿಯವರು ಧನ್ಯವಾದ ಸಮರ್ಪಿಸಿದರು. ಶೈಲೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಘಟಕದ ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿ ತಂದ ವಿವಿಧ ಬಗೆಯ ಸಾಂಪ್ರದಾಯಿಕ ಮತ್ತು ರುಚಿಕರ ಆಹಾರ ಪದಾರ್ಥಗಳನ್ನು ಅತಿಥಿಗಳು ಹಾಗೂ ಸದಸ್ಯರಿಗೆ ಬಡಿಸಲಾಯಿತು. ಈ ವಿಶೇಷತೆಯು ಕುಟುಂಬ ಸದಸ್ಯರ ನಡುವಿನ ಆತ್ಮೀಯತೆ, ಸಹಭಾಗಿತ್ವ ಹಾಗೂ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಸದಸ್ಯರು ಹಾಗೂ ಕುಟುಂಬದವರ ಸಕ್ರಿಯ ಭಾಗವಹಿಸುವಿಕೆಯಿಂದ “ಸಂಭ್ರಮ – 2026” ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.


