
08-11-2026, 8:00 PM
ಪಣಂಬೂರು–ಕುಳಾಯಿ ನ 08 : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ನವೆಂಬರ್ 8ರಂದು ಘಟಕದ ಸಲಹೆಗಾರರಾದ ಸುಜಾತ ಕುಳಾಯಿ ಅವರ ಮನೆಯಲ್ಲಿ ತುಡರ್ ಪರ್ಬ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಘಟಕದ ಅಧ್ಯಕ್ಷರಾದ ಸುನಿಲ್ ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ಸಾಂಪ್ರದಾಯಿಕವಾಗಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ ಮನೆಯ ಮುಂಭಾಗದಲ್ಲಿ ಹಣತೆಗಳನ್ನು ಬೆಳಗಿಸುವ ಮೂಲಕ ದೀಪಾವಳಿಯ ಬೆಳಕಿನ ಹಬ್ಬಕ್ಕೆ ಚಾಲನೆ ನೀಡಲಾಯಿತು. ಬಳಿಕ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಸದಸ್ಯರಿಗಾಗಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿದ್ದು, ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು. […]
Read More

01-11-2026, 3:00 PM
ಉಡುಪಿ ನ 01 : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ ನವೆಂಬರ್ 1ರಂದು ಉಡುಪಿಯ ಯಕ್ಷಕಲಾರಂಗದಲ್ಲಿ ನಡೆದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಅಂತರ್ಘಟಕ ಕಿರುಚಿತ್ರ ಸ್ಪರ್ಧೆ ‘ಯುವಸಿನಿದನಿ–2026’ ಯಶಸ್ವಿಯಾಗಿ ಸಂಪನ್ನಗೊಂಡಿತು. ಸ್ಪರ್ಧೆಯಲ್ಲಿ ಯುವವಾಹಿನಿ ಕೂಳೂರು ಘಟಕದ ‘ಬದ್ಕ್ ಮಾಯೆ’ ಕಿರುಚಿತ್ರವು ಪ್ರಥಮ ಸ್ಥಾನ ಪಡೆದು ಶ್ರೇಷ್ಠ ಕಿರುಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬಜಪೆ ಘಟಕದ ‘ಬದಲಾವಣೆ’ ದ್ವಿತೀಯ ಹಾಗೂ ಬೆಳ್ತಂಗಡಿ ಘಟಕದ ‘ಮೈಮೆ’ ಕಿರುಚಿತ್ರ ತೃತೀಯ ಸ್ಥಾನ ಗಳಿಸಿತು. […]
Read More

20-10-2026, 7:00 PM
ಮಂಗಳೂರು, ಅ. 20: ಮಂಗಳೂರು ದಸರಾ ಮಹೋತ್ಸವ–2026ರ ಅಂಗವಾಗಿ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ಅಕ್ಟೋಬರ್ 20ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಕ್ರಿಯ ಸಹಕಾರದೊಂದಿಗೆ ಸ್ವಯಂಸೇವಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗಾಗಿ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಲಾದ ₹15,000/- ದೇಣಿಗೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು […]
Read More

20-10-2026, 7:00 PM
ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ಮನೆಮನೆ ಭಜನಾ ಕಾರ್ಯಕ್ರಮದ ಅಂಗವಾಗಿ ದಿನಾಂಕ 20-10-2026ರ ಮಂಗಳವಾರ ಸಂಜೆ ಕೋಡಿಕಲ್ನ ಶ್ರೀ ಜಗದಂಬ ದೇವಸ್ಥಾನದ ಮೀನಾ ಪೂಜಾರ್ತಿ ಅವರ ಮನೆಯಲ್ಲಿ ಭಜನಾ ಸೇವೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಭಜನೆಯ ಮೂಲಕ ಭಕ್ತಿ, ಆಧ್ಯಾತ್ಮಿಕತೆ ಹಾಗೂ ಗುರುತತ್ವದ ಮಹತ್ವವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಭಕ್ತಿಯಿಂದ ಪಾಲ್ಗೊಂಡು ಭಜನಾ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಭಜನಾ ಸೇವೆ ಸಲ್ಲಿಸಿದ ಎಲ್ಲಾ ಸದಸ್ಯರಿಗೂ ಹಾಗೂ ಆತ್ಮೀಯವಾಗಿ ಆತಿಥ್ಯ ನೀಡಿದ ಕುಟುಂಬದವರಿಗೂ […]
Read More

29-09-2026, 6:00 PM
ಮಂಗಳೂರು, ಸೆ. 29: ಯುವವಾಹಿನಿ (ರಿ.) ಕೇಂದ್ರ ಸಮಿತಿ ಆಶ್ರಯದಲ್ಲಿ ಹಾಗೂ ಪಣಂಬೂರ ಕುಳಾಯಿ ಘಟಕದ ಆತಿಥ್ಯದಲ್ಲಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಸಹಯೋಗದೊಂದಿಗೆ ‘ಯುವ ದಿಕ್ಸೂಚಿ–2026’ರ ಮುಂದುವರಿದ ಭಾಗವಾಗಿ IBPS ಪರೀಕ್ಷೆಯ ಇಂಗ್ಲಿಷ್ ವಿಷಯಕ್ಕೆ ಪೂರಕವಾದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಮಂಗಳೂರಿನ ಸ್ಕೌಟ್ ಭವನದ ಸಭಾಂಗಣದಲ್ಲಿ ಆಯೋಜಿಸಲಾಯಿತು. ಬ್ಯಾಂಕ್ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ 17 ಉದ್ಯೋಗಾಕಾಂಕ್ಷಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಕೆನರಾ ಬ್ಯಾಂಕ್ನ ಹಿರಿಯ ಪ್ರಬಂಧಕಿ ಶಾಂಭವಿ ಪ್ರಭು ಅವರು […]
Read More

27-09-2026, 3:00 PM
ಮಂಗಳೂರು, ಸೆ. 27 : ಯುವವಾಹಿನಿ (ರಿ.) ಸಂಸ್ಥೆಯ ಮುಖವಾಣಿ ‘ಯುವಸಿಂಚನ’ ಪತ್ರಿಕೆಯ ಸೆಪ್ಟೆಂಬರ್ ತಿಂಗಳ ಸಂಚಿಕೆಯ 4,250 ಪ್ರತಿಗಳ ಪೋಸ್ಟಿಂಗ್ ಕಾರ್ಯವು ಯುವವಾಹಿನಿ ಶಕ್ತಿನಗರ, ಪಣಂಬೂರು–ಕುಳಾಯಿ ಹಾಗೂ ಕೊಲ್ಯ ಘಟಕಗಳ ಸದಸ್ಯರ ಸಹಕಾರದೊಂದಿಗೆ ನಡೆಯಿತು. ‘ಯುವಸಿಂಚನ’ ಪತ್ರಿಕೆಯ ಪ್ರತಿಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ ಸದಸ್ಯರು ಹಾಗೂ ಹಿತೈಷಿಗಳಿಗೆ ತಲುಪಿಸುವ ಉದ್ದೇಶದಿಂದ ನಡೆದ ಪೋಸ್ಟಿಂಗ್ ಕಾರ್ಯದಲ್ಲಿ ಮೂರು ಘಟಕಗಳ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು. ಪತ್ರಿಕೆಯ ಪ್ರತಿಗಳ ವಿಂಗಡಣೆ, ವಿಳಾಸ ಪರಿಶೀಲನೆ, ಪ್ಯಾಕಿಂಗ್ ಹಾಗೂ ಪೋಸ್ಟಿಂಗ್ ಸೇರಿದಂತೆ ವಿವಿಧ […]
Read More

18-09-2026, 5:00 PM
ಪಣಂಬೂರು ಕುಳಾಯಿ ಸೆ 18 : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ “ಸ್ವಚ್ಛ ಸಾಗರ್ – ಸುರಕ್ಷಿತ ಸಾಗರ್ ಅಭಿಯಾನ – 2026”ರ ಅಂಗವಾಗಿ ಬೀಚ್ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಅಭಿಯಾನದ ಅಂಗವಾಗಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಬೀಚ್ ಪರಿಸರವನ್ನು ಸ್ವಚ್ಛಗೊಳಿಸಿದರು. ಈ ಮೂಲಕ ಕಡಲತೀರದ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈಜೋಡಿಸಿದರು. ಸ್ವಚ್ಛ ಹಾಗೂ ಸುರಕ್ಷಿತ ಕಡಲತೀರ ನಿರ್ಮಾಣದ […]
Read More

07-09-2026, 8:00 PM
ಮಂಗಳೂರು ಸೆ 07 : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಘಟಕದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 7, 2026ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಶಿಕ್ಷಕರಿಗಾಗಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿದ್ದು, ಶಿಕ್ಷಕರು ಉತ್ಸಾಹ ಹಾಗೂ ಸಂತೋಷದಿಂದ ಪಾಲ್ಗೊಂಡರು. ಕಾರ್ಯಕ್ರಮವು ಶಿಕ್ಷಕರಲ್ಲಿ ಆತ್ಮೀಯತೆ ಹಾಗೂ ಸ್ನೇಹಭಾವವನ್ನು ಹೆಚ್ಚಿಸುವಂತೆ ಸೊಗಸಾಗಿ ಮೂಡಿಬಂದಿತು. ನಂತರ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಮರೋಳಿ ಅವರು ಶಿಕ್ಷಕರ ದಿನಾಚರಣೆಯ ಮಹತ್ವ ಹಾಗೂ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ […]
Read More

23-08-2026, 8:00 PM
ಮಂಗಳೂರು ಅಗಸ್ಟ್ 23 : ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ ನಡೆದ “ಮಾಧವ ಕೀರ್ತನೋತ್ಸವ–2026” ಅಂತರ್ ಘಟಕ ಭಜನಾ ಸ್ಪರ್ಧೆಯು ಅಗಸ್ಟ್ 23ರಂದು ಸಮಾರೋಪ ಸಮಾರಂಭವು ಸಂಜೆ 5.30ಕ್ಕೆ ಗಣ್ಯರು, ಕೇಂದ್ರ ಸಮಿತಿ ಹಾಗೂ ಘಟಕದ ಪದಾಧಿಕಾರಿಗಳು, ತೀರ್ಪುಗಾರರು, ಸ್ಪರ್ಧಾಳುಗಳು ಮತ್ತು ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಸ್ವಾಗತಿಸಿದರು. ಸುರೇಶ್ ಪೂಜಾರಿ […]
Read More