24-12-2023, 5:25 PM
ಬಂಟ್ವಾಳ : ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ ಸಂಘಟನಾ ಕ್ಷೇತ್ರದ ಸಾಧಕ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಧಾರ್ಮಿಕ ಕ್ಷೇತ್ರದ ಸಾಧಕ ಮನೋಜ್ ಕಟ್ಟೆಮಾರ್, ಸಾಂಸ್ಕೃತಿಕ ಕ್ಷೇತ್ರದ ಸಾಧಕಿ ಅಕ್ಷತಾ ಇವರಿಗೆ ಯುವವಾಹಿನಿ ಯುವಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘಟನಾ ಕ್ಷೇತ್ರದ ಸಾಧಕರು ಶ್ರೀನಿವಾಸ ಪೂಜಾರಿ ಮೆಲ್ಕಾರ್ ಗುರುಜ್ಯೋತಿ ಶಾಮಿಯಾನ ಸಂಸ್ಥೆಯನ್ನು ಹುಟ್ಟಿ ಹಾಕಿ ಸತತ 25 ವರ್ಷಗಳಿಂದ ಮುನ್ನಡೆಸಿಕೊಂಡು ಬರುವುದರ ಜೊತೆಗೆ ಬಂಟ್ವಾಳ ಯುವಸಂಗಮದ ಸ್ಥಾಪಕ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ವಿವಿಧ ಹುದ್ದೆ ಅಲಂಕರಿಸಿ ಸರ್ಕಾರಿ ಶಾಲಾಮಕ್ಕಳಿಗೆ […]
Read More
24-12-2023, 5:22 PM
ಬಂಟ್ವಾಳ: ಬಂಟ್ವಾಳದ ಬೆಂಜನಪದವು ಶುಭಲಕ್ಷೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ ನಾರ್ದನ್ ಸ್ಕೈ ಪ್ರಾಪಟೀಸ್ ನಿರ್ದೇಶಕಿ ಕೃತಿನ್ ಅಮೀನ್ ಇವರು ಯುವಸಿಂಚನ ವಾರ್ಷಿಕ ವಿಶೇಷಾಂಕದ ಅನಾವರಣ ಮಾಡಿದರು. ಸಮಾವೇಶದ ಜನಸ್ತೋಮದ ನಡುವಣ ಬಂಟ್ವಾಳ ಅತಿಥ್ಯ ಘಟಕದ ಸಹಯೋಗದ ಸದಸ್ಯರ ಭವ್ಯ ಸ್ವಾಗತದೊಂದಿಗೆ ವಾದ್ಯ ಕೊಂಬುಗಳ ಅಬ್ಬರದ ನಿನಾದಗಳು, ಜ್ಯೋತಿ ರೂಪಕವಾಗಿ ಬೆಳಗುತ್ತಿದ್ದ ಜೋಡಿ ದೀಪಗಳು, ಪೂರ್ಣ ಕಳಸ ಹಾಗೇ ವಿವಿಧ ಹೂಗಳಿಂದ ತುಂಬಿದ್ದ ಬೃಹತ್ ಹರಿವಾಣದೊಳಗೆ ಸಜ್ಜಾಗಿದ್ದ ವರ್ಣಮಯ ಯುವಸಿಂಚನ ಹೊತ್ತಗೆಯನ್ನು ಸಮವಸ್ತ್ರಧಾರಿ ನಾರಿಮಣಿಗಳ […]
Read More
24-12-2023, 12:04 PM
ಬಂಟ್ವಾಳ : ದಿನಾಂಕ 24 ಡಿಸೆಂಬರ್ 2023 ರಂದು ಬೆಂಜನಪದವು ಶುಭಲಕ್ಷ್ಮೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ಸಜಿಪ ಮುನ್ನೂರು ಮೂರ್ತೆದಾರ ಸೇವಾ ಸಹಕಾರಿ ಸಂಘಕ್ಕೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ 2023 ಮಡಿಲೇರಿಸುವ ಶುಭ ಘಳಿಗೆ ಓದಗಿಬಂತು. ಹಿಂದುಳಿದ ವರ್ಗಗಳ ಹಾಗೂ ಮೂರ್ತೆದಾರರ ಆರ್ಥಿಕ ಬೆಳವಣಿಗೆ, ಮಹಿಳಾ ಸಬಲೀಕರಣ ಹಾಗೂ ಸಮಾಜದ ಅಶಕ್ತ ಕುಟುಂಬಗಳನ್ನು ಗುರುತಿಸಿ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ವಿದ್ಯಾ ನಿಧಿ ದತ್ತುಸ್ವೀಕಾರ, ಹೀಗೆ ಹತ್ತು ಹಲವು ಮಜಲುಗಳ […]
Read More
24-12-2023, 11:27 AM
ಬಂಟ್ವಾಳ : ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಅನನ್ಯ ಸೇವೆ ಹಾಗೂ ಕಂಕನಾಡಿ ಗರಡಿ ಕ್ಷೇತ್ರ ಅಧ್ಯಕ್ಷರಾಗಿ ನಿಸ್ವಾರ್ಥವಾಗಿ ಸಲ್ಲಿಸಿದ ಸೇವೆಯು ಗರಡಿಯ ಮೂಲ ಬೆಳವಣಿಗೆಗೆ ಕಾರಿಣಿಕರ್ತರೆಂದು ಗುರುತಿಸಿ ಬಂಟ್ವಾಳದ ಬೆಂಜನಪದವು ಶುಭಲಕ್ಷೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ 2023 ನೇ ಸಾಲಿನ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾರಂಭದ ಉದ್ಘಾಟಕರಾದ ಪದ್ಮರಾಜ್.ಆರ್, ಕೇಂದ್ರ ಸಮಿತಿ ಅಧ್ಯಕ್ಷರು ರಾಜೇಶ್.ಬಿ, ನಾರ್ದನ್ ಸ್ಲೈ ನಿರ್ದೇಶಕರಾದ ಕೃತೀನ್ ಅಮೀನ್, ರಾಣಿ ಅಬ್ಬಕ್ಕ […]
Read More
24-12-2023, 10:08 AM
ಮೂರು ಸ್ತಂಭಗಳಂತೆ ಯುವವಾಹಿನಿಯ ಮೂಲ ಪರಿಕಲ್ಪನೆಯ ವಿದ್ಯೆ, ಉದ್ಯೋಗ, ಸಂಪರ್ಕದ ನೆಲೆಯಲ್ಲಿ ಸದೃಢಗೊಂಡ ಆತ್ಮವಿಶ್ವಾಸದ ಭರವಸೆಯ ಬೆಳಕಿನ ಮೂರು ಹಸ್ತಕೃತಿಗಳು ಪರಿಭ್ರಮಿಸುವ ವಿಶ್ವದ ಭೂಪಟದಲ್ಲಿ ಜಗದ ಅಂಧಕಾರ ತಮವನ್ನು ಕಳೆದು ಸುಜ್ಞಾನದ ದೀವಿಗೆ ಬೆಳಗಿ ಪಸರಿಸಿದ ವಿಶ್ವಗುರು ಪರಮಪೂಜ್ಯ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಸರ್ವರು ಏಕತಾಭಾವದಿ ಒಗ್ಗಟ್ಟಾಗಿ ಸಮಾಜ ಶ್ರೇಯೋನ್ನಾತಿಗೆ ಶ್ರಮಿಸೋಣ ಎನ್ನುವ ತವಕದ ಹೆಬ್ಬಯಕೆಯ ಒಂದು ವಿಭಿನ್ನ ಕಲ್ಪನಾತೀತ ಫಲಶ್ರುತಿಗೆ. ನೈಜತೆಯ ದರ್ಶನ … ಯುವವಾಹಿನಿ ಪ್ರತಿರೂಪದ ಕೈಕನ್ನಡಿಯಂತಿರುವ ಧ್ಯೇಯವನ್ನು ಶಕ್ತಿಯುತವಾಗಿ ಕಟ್ಟಬೇಕೆಂದು […]
Read More
24-12-2023, 9:00 AM
ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಯುವವಾಹಿನಿಯಿಂದ ಆಗುತ್ತಿದೆ ನಾವೆಲ್ಲರೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳ ಹಾದಿಯಲ್ಲಿ ಮುನ್ನಡೆಯಬೇಕಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು. ಅವರು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆತಿಥ್ಯದಲ್ಲಿ ಜರುಗಿದ ಯುವವಾಹಿನಿಯ […]
Read More
25-12-2022, 5:06 AM
ಮಂಗಳೂರು :- ರಾಜ್ಯಾದ್ಯಂತ 33 ಘಟಕಗಳು ಹಾಗೂ ಮೂರು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ 2022-23ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ. ಅವರು ಡಿ.25 ರಂದು ಮುಲ್ಕಿ ಯಲ್ಲಿ ನಡೆದ ಯುವವಾಹಿನಿಯ 35 ನೇ ವಾರ್ಷಿಕ ಸಮಾವೇಶದಲ್ಲಿ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಹರೀಶ್ ಕೆ. ಪೂಜಾರಿ ಮಂಗಳೂರು, ಲೋಕೇಶ್ ಕೋಟ್ಯಾನ್ ಕೂಳೂರು , ಪ್ರಧಾನ ಕಾರ್ಯದರ್ಶಿಯಾಗಿ ಕುಸುಮಾಕರ ಕುಂಪಲ , ಕೋಶಾಧಿಕಾರಿಯಾಗಿ ಎಂ […]
Read More
01-11-2022, 2:50 PM
ಬಂಟ್ವಾಳ :- ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷರು, ಸಮಾಜ ಸೇವಕರಾದ ಪಚ್ಚಿನಡ್ಕ ಸೇಸಪ್ಪ ಕೊಟ್ಯಾನ್ ಇವರನ್ನು ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರರುಗಳು, ಘಟಕದ ಮಾಜಿ ಅಧ್ಯಕ್ಷರುಗಳು ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.
Read More
30-10-2022, 2:52 PM
ಬಂಟ್ವಾಳ :- ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಹಾಗೂ ಬಂಟ್ವಾಳ ತಾಲ್ಲೂಕು ಬಿಲ್ಲವ ಸಂಘದ ನೇತ್ರತ್ವದಲ್ಲಿ ದಿನಾಂಕ 30 ಅಕ್ಟೋಬರ್ 2022 ರಂದು ಲೋಕಕಲ್ಯಾಣಾರ್ಥವಾಗಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಬಿ.ಸಿ ರೋಡ್ ನಿಂದ ಪೋಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಹಾಗೂ ಘಟಕದ ಮಾಜಿ ಅಧ್ಯಕ್ಷರು, ಘಟಕದ ಅಧ್ಯಕ್ಷರು ,ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Read More