ಮೂರು ಸ್ತಂಭಗಳಂತೆ ಯುವವಾಹಿನಿಯ ಮೂಲ ಪರಿಕಲ್ಪನೆಯ ವಿದ್ಯೆ, ಉದ್ಯೋಗ, ಸಂಪರ್ಕದ ನೆಲೆಯಲ್ಲಿ ಸದೃಢಗೊಂಡ ಆತ್ಮವಿಶ್ವಾಸದ ಭರವಸೆಯ ಬೆಳಕಿನ ಮೂರು ಹಸ್ತಕೃತಿಗಳು ಪರಿಭ್ರಮಿಸುವ ವಿಶ್ವದ ಭೂಪಟದಲ್ಲಿ ಜಗದ ಅಂಧಕಾರ ತಮವನ್ನು ಕಳೆದು ಸುಜ್ಞಾನದ ದೀವಿಗೆ ಬೆಳಗಿ ಪಸರಿಸಿದ ವಿಶ್ವಗುರು ಪರಮಪೂಜ್ಯ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಸರ್ವರು ಏಕತಾಭಾವದಿ ಒಗ್ಗಟ್ಟಾಗಿ ಸಮಾಜ ಶ್ರೇಯೋನ್ನಾತಿಗೆ ಶ್ರಮಿಸೋಣ ಎನ್ನುವ ತವಕದ ಹೆಬ್ಬಯಕೆಯ ಒಂದು ವಿಭಿನ್ನ ಕಲ್ಪನಾತೀತ ಫಲಶ್ರುತಿಗೆ.
ನೈಜತೆಯ ದರ್ಶನ … ಯುವವಾಹಿನಿ ಪ್ರತಿರೂಪದ ಕೈಕನ್ನಡಿಯಂತಿರುವ ಧ್ಯೇಯವನ್ನು ಶಕ್ತಿಯುತವಾಗಿ ಕಟ್ಟಬೇಕೆಂದು ನಿದರ್ಶಿಸಿದ ಸುಂದರಮಯ ದೃಶ್ಯಾವಳಿ..ಈ ದೃಶ್ಯಪರಿಕರದ ಮೂಲ ರೂವಾರಿಗೊಂದು ಯುವವಾಹಿನಿ ವಾರ್ಷಿಕ ಸಮಾವೇಶದ ಅಭಿಮಾನಿಗಳ ಶಭಾಷ್ ಗಿರಿಯ ಪುಷ್ಷಾರ್ಚನೆ…ಪದಪುಂಜದ ಸರಮಾಲೆ…ಅರ್ಪಣೆ
ಬರಹ : ಅರ್ಚನಾ ಎಂ. ಬಂಗೇರ