ಬಂಟ್ವಾಳ : ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಅನನ್ಯ ಸೇವೆ ಹಾಗೂ ಕಂಕನಾಡಿ ಗರಡಿ ಕ್ಷೇತ್ರ ಅಧ್ಯಕ್ಷರಾಗಿ ನಿಸ್ವಾರ್ಥವಾಗಿ ಸಲ್ಲಿಸಿದ ಸೇವೆಯು ಗರಡಿಯ ಮೂಲ ಬೆಳವಣಿಗೆಗೆ ಕಾರಿಣಿಕರ್ತರೆಂದು ಗುರುತಿಸಿ ಬಂಟ್ವಾಳದ ಬೆಂಜನಪದವು ಶುಭಲಕ್ಷೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ 2023 ನೇ ಸಾಲಿನ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾರಂಭದ ಉದ್ಘಾಟಕರಾದ ಪದ್ಮರಾಜ್.ಆರ್, ಕೇಂದ್ರ ಸಮಿತಿ ಅಧ್ಯಕ್ಷರು ರಾಜೇಶ್.ಬಿ, ನಾರ್ದನ್ ಸ್ಲೈ ನಿರ್ದೇಶಕರಾದ ಕೃತೀನ್ ಅಮೀನ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರು ಡಾ।ತುಕಾರಾಮ ಪೂಜಾರಿ, ಉದ್ಯಮಿಗಳಾದ ನಿರ್ಮಲ್ ಜಗನ್ನಾಥ ಬಂಗೇರ, ನಟೇಶ್ ಪೂಜಾರಿ, ಲೋಕೇಶ್ ಪೂಜಾರಿ ಕಲ್ಲಡ್ಕ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಕುದನೆ, ವಾರ್ಷಿಕ ಸಮಾವೇಶದ ನಿರ್ದೇಶಕರಾದ ಭುವನೇಶ್ ಪಚ್ಚಿನಡ್ಕ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲ,ನೂತನ ಅಧ್ಯಕ್ಷರಾದ ಹರೀಶ್.ಕೆ.ಪೂಜಾರಿ, ನೂತನ ಪ್ರಧಾನ ಕಾರ್ಯದರ್ಶಿ ಜಗದೀಶ್‌ಚಂದ್ರ ಡಿ.ಕೆ ಹಾಗೂ ಯುವವಾಹಿನಿಯ 33 ಘಟಕಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ಕೊಂಬು ವಾದ್ಯಗಳ ಹಿಮ್ಮೇಳದ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಂಡು, ಶ್ರೀಯುತರು ನಡೆದ ಬಂದ ಹಾದಿಯ ರೂಪುರೇಷೆ ಸಾಧನಾ ಪರಿಚಯವನ್ನು ಸಾಕ್ಷ್ಯ ಚಿತ್ರದ ಮೂಲಕ, ಮೈಸೂರು ಪೇಟ, ಜರಿತಾರಿ ಶಾಲು, ಅತ್ಯಾಕರ್ಷಕ ಸ್ಮರಣಿಕೆ ಹಾಗೂ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ 2023 ಪತ್ರ ನೀಡಿ ಗೌರವ ಆದರಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.