ಮಂಗಳೂರು :- ರಾಜ್ಯಾದ್ಯಂತ 33 ಘಟಕಗಳು ಹಾಗೂ ಮೂರು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ 2022-23ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ. ಅವರು ಡಿ.25 ರಂದು ಮುಲ್ಕಿ ಯಲ್ಲಿ ನಡೆದ ಯುವವಾಹಿನಿಯ 35 ನೇ ವಾರ್ಷಿಕ ಸಮಾವೇಶದಲ್ಲಿ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಉಪಾಧ್ಯಕ್ಷರಾಗಿ ಹರೀಶ್ ಕೆ. ಪೂಜಾರಿ ಮಂಗಳೂರು, ಲೋಕೇಶ್ ಕೋಟ್ಯಾನ್ ಕೂಳೂರು , ಪ್ರಧಾನ ಕಾರ್ಯದರ್ಶಿಯಾಗಿ ಕುಸುಮಾಕರ ಕುಂಪಲ , ಕೋಶಾಧಿಕಾರಿಯಾಗಿ ಎಂ ಕೆ ಪ್ರಸಾದ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಪೂಜಾರಿ ಪಣಂಬೂರು ಕುಳಾಯಿ, ಯುವಸಿಂಚನ ಪತ್ರಿಕಾ ಕಾರ್ಯನಿರ್ವಾಹಕ ಸಂಪಾದಕರಾಗಿ ಜಗದೀಶ್ಚಂದ್ರ ಡಿ.ಕೆ ಮೂಡಬಿದಿರೆ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕರಾಗಿ ಭಾಸ್ಕರ ಕೋಟ್ಯಾನ್ ಕೂಳೂರು, ಪ್ರಚಾರ ನಿರ್ದೇಶಕರಾಗಿ ಹರೀಶ್ ವಿ ಪಚ್ಚನಾಡಿ, ಮಹಿಳಾ ಸಂಘಟನಾ ನಿರ್ದೇಶಕಿಯಾಗಿ ವಿದ್ಯಾರಾಕೇಶ್ , ನಾರಾಯಣ ಗುರುಗಳ ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾಗಿ ಹರೀಶ್ ಪೂಜಾರಿ ಬಾಕಿಲ ಮಾಣಿ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಭಾಸ್ಕರ್ ಸಸಿಹಿತ್ಲು, ಕ್ರೀಡಾ ನಿರ್ದೇಶಕರಾಗಿ ಶಿವ ಪ್ರಸಾದ್ ನೂಚಿಲ , ಆರೋಗ್ಯ ನಿರ್ದೇಶಕರಾಗಿ ಡಾ.ಆಶಿತ್ ಎಂ ವಿ , ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ದೇವರಾಜ್ ಅಮೀನ್ ಬಜಪೆ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ನವಾನಂದ ಮೂಡಬಿದಿರೆ, ಸಮಾಜ ಸೇವಾ ನಿರ್ದೇಶಕರಾಗಿ ಬಾಬು ಪೂಜಾರಿ ಪುತ್ತೂರು, ಸಾಂಸ್ಕೃತಿಕ ನಿರ್ದೇಶಕರಾಗಿ ಲೋಕೇಶ್ ಸುವರ್ಣ ಬಂಟ್ವಾಳ, ವಾರ್ಷಿಕ ಸಮಾವೇಶ ನಿರ್ದೇಶಕರಾಗಿ ಭುವನೇಶ್ ಪಚ್ವಿನಡ್ಕ ಬಂಟ್ವಾಳ, ಸಾಮಾಜಿಕ ಜಾಲತಾಣ ಸಂಪಾದಕರಾಗಿ ಕಿಶನ್ ಪೂಜಾರಿ ಬೆಂಗಳೂರು, ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಶೇಖರ ಕೆ.ಸನಿಲ್ ಉಪ್ಪಿನಂಗಡಿ , ರಾಜು ಪೂಜಾರಿ ಯಡ್ತಾಡಿ, ಭರತೇಶ್ ಅಮೀನ್ ಮುಲ್ಕಿ, ಉದಯ ಪಣಂಬೂರು, ರಾಘವೇಂದ್ರ ಬೆಂಗಳೂರು, ಗಣೇಶ್ ಸಾಲಿಯಾನ್ ಕಾರ್ಕಳ, ಯಶವಂತ ಬೆಳ್ಚಡ ಕೆಂಜಾರು ಕರಂಬಾರು, ಸುನೀತಾ ಗೋಪಾಲ್ ಮಂಗಳೂರು , ಪ್ರವೀಣ್ ಪೂಜಾರಿ ಉಡುಪಿ, ಕಿಶೋರ್ ಸುರತ್ಕಲ್, ಅರುಣ್ ಕೋಟ್ಯಾನ್ ವೇಣೂರು, ತಿಮ್ಮಯ್ಯ ಕುಪ್ಪೆಪದವು, ಯಶೋಧ ಪಡುಬಿದ್ರಿ, ಅಶೋಕ್ ಬಜ್ಪೆ, ಪ್ರವೀಣ್ ಓಂಕಲ್ ಕಡಬ, ನಯನಾ ಸುರೇಶ್ ಕಂಕನಾಡಿ.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ರವರು ಪ್ರಮಾಣ ಪತ್ರ ಹಾಗೂ ಹೂ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು . ಯುವವಾಹಿನಿ ಕೇಂದ್ರ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ ರವರು ಪದಾದಿಕಾರಿಗಳನ್ನು ಸಭೆಗೆ ಪರಿಚಯಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಇಂಧನ , ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ವಿ. ಸುನೀಲ್ ಕುಮಾರ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷರಾದ ಸೂರ್ಯಕಾಂತ್ ಜೆ ಸುವರ್ಣ, ಶ್ರೀ ನಾರಾಯಣ ಗುರು ಕಾಲೇಜು ಕುದ್ರೋಳಿ ಇದರ ಉಪನ್ಯಾಸಕರಾದ ಕೇಶವ ಬಂಗೇರ , ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮನಾಥ್ ಕೋಟ್ಯಾನ್, ಚಲನಚಿತ್ರ ನಟ ರಾಹುಲ್ ಅಮೀನ್ , ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಸಮಾವೇಶ ನಿರ್ದೇಶಕರಾದ ಹರೀಂದ್ರ ಸುವರ್ಣ, ಸಮಾವೇಶ ಸಂಚಾಲಕರಾದ ಭಾರತಿ ಭಾಸ್ಕರ ಕೋಟ್ಯಾನ್ ಮತ್ತು ಎಲ್ಲಾ 33 ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.