ಬಂಟ್ವಾಳ : ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ ಸಂಘಟನಾ ಕ್ಷೇತ್ರದ ಸಾಧಕ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಧಾರ್ಮಿಕ ಕ್ಷೇತ್ರದ ಸಾಧಕ ಮನೋಜ್ ಕಟ್ಟೆಮಾರ್, ಸಾಂಸ್ಕೃತಿಕ ಕ್ಷೇತ್ರದ ಸಾಧಕಿ ಅಕ್ಷತಾ ಇವರಿಗೆ ಯುವವಾಹಿನಿ ಯುವಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘಟನಾ ಕ್ಷೇತ್ರದ ಸಾಧಕರು ಶ್ರೀನಿವಾಸ ಪೂಜಾರಿ ಮೆಲ್ಕಾರ್ ಗುರುಜ್ಯೋತಿ ಶಾಮಿಯಾನ ಸಂಸ್ಥೆಯನ್ನು ಹುಟ್ಟಿ ಹಾಕಿ ಸತತ 25 ವರ್ಷಗಳಿಂದ ಮುನ್ನಡೆಸಿಕೊಂಡು ಬರುವುದರ ಜೊತೆಗೆ ಬಂಟ್ವಾಳ ಯುವಸಂಗಮದ ಸ್ಥಾಪಕ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ವಿವಿಧ ಹುದ್ದೆ ಅಲಂಕರಿಸಿ ಸರ್ಕಾರಿ ಶಾಲಾಮಕ್ಕಳಿಗೆ ಉಚಿತ ಸಮವಸ್ತ್ರ, ಮೂಲಭೂತ ಸಹಾಯ ಕಟ್ಟಡ, ಶೌಚಾಲಯ ವಿದ್ಯಾನಿಧಿ,ಉದ್ಯೋಗ ಮೇಳ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆಯ ಜನಜಾಗೃತಿ ಹೀಗೆ ಸಾಮಾಜಿಕವಾಗಿ, ಯುವಜನತೆಯನ್ನು ಹುರಿದುಂಬಿಸಿ ಯಶಸ್ವಿ ಸಂಘಟನಕಾರರಾಗಿ, ನಿಸ್ವಾರ್ಥ ಸೇವಾ ಮಾಣಿಕ್ಯದಾತರು ಆಗಿರುತ್ತಾರೆ.
ಸಾಮಾಜಿಕ ಕ್ಷೇತ್ರದ ಸಾಧಕರು ದೈವಾಂಶ ಸಂಭೂತ ಮನೋಜ್ ಕಟ್ಟೆಮಾರ್
ದೈವ ಪ್ರೇರಿತ ಅಭಯದ ನುಡಿಯ ಜೊತೆಗೆ ಸಮಾಜದ ನೊಂದವರ ಪಾಲಿನ ಆಶಾಕಿರಣ ವಾಗಿ ಮಂತ್ರದೇವತಾ ಜನಸೇವಾ ಟ್ರಸ್ಟ್ ನ ಮೂಲಕ ಅತಿಥಿ ಶಿಕ್ಷಕರಿಗೆ ಗೌರವಧನ ಸಹಾಯ, ವಿದ್ಯಾನಿಧಿ, ಶಾಲಾಕಾಲೇಜಿಗೆ ವಸತಿ ನಿವೇಶನ, ಬಡರೋಗಿಗಳಿಗೆ ಆರ್ಥಿಕ ನೆರವು ಬಡಕುಟುಂಬಗಳ ವಯಸ್ಕರಿಗೆ ಉಚಿತ ಕಲ್ಯಾಣ
ಅಪರೂಪದ ಮಿಮಿಕ್ರಿ ಕಲಾವಿದೆ ಅಕ್ಷತಾ
ಯಶಸ್ವಿ ಮಿಮಿಕ್ರಿ ಕಲಾವಿದೆಯಾಗಿ ಮಿಮಿಕ್ರಿ ಕುರಿತಾದ ಕಾರ್ಯಗಾರ, ಗಾಯನ, ಮೈಮ್ ಆಕ್ಟ್, ನಾಟಕ, ನೃತ್ಯ,ಯಕ್ಷಗಾನ, ಆನ್ ದಿ ವೇ ಶಿಕ್ಷಣ ಅಭಿಯಾನ 2022 ಬೊಂಬೆಯಾಟದ ಕುರಿತಾದ ಯಶಸ್ವಿ ಕಾರ್ಯಗಾರದಲ್ಲಿ ತೊಡಗಿಸಿಕೊಂಡ ಅಸಾಧಾರಣ ಪ್ರತಿಭಾವಂತೆ ಅಂತರ್ ರಾಷ್ಟ್ರ ಮಟ್ಟದಲ್ಲೂ ಸನ್ಮಾನ ಮುಡಿಗೇರಿಸಿಕೊಂಡ ಪ್ರತಿಭೆ ಹೀಗೆ ಮೂವರ ಸಾಧಕರ ಸೇವೆಯನ್ನು ಪರಿಗಣಿಸಿ ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶದಲ್ಲಿ 2023 ನೇ ಸಾಲಿನ ಯುವವಾಹಿನಿ ಯುವ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾರಂಭದ ಉದ್ಘಾಟಕರಾದ ಪದ್ಮರಾಜ್ ಆರ್., ಕೇಂದ್ರ ಸಮಿತಿ ಅಧ್ಯಕ್ಷರು ರಾಜೇಶ್ ಬಿ., ನಾರ್ದನ್ ಸ್ಲೈ ನಿರ್ದೇಶಕರಾದ ಕೃತೀನ್ ಅಮೀನ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರು ಡಾ।ತುಕಾರಾಮ ಪೂಜಾರಿ, ಉದ್ಯಮಿಗಳಾದ ನಿರ್ಮಲ್ ಜಗನ್ನಾಥ ಬಂಗೇರ, ನಟೇಶ್ ಪೂಜಾರಿ, ಲೋಕೇಶ್ ಪೂಜಾರಿ ಕಲ್ಲಡ್ಕ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಕುದನೆ, ವಾರ್ಷಿಕ ಸಮಾವೇಶದ ನಿರ್ದೇಶಕರಾದ ಭುವನೇಶ್ ಪಚ್ಚಿನಡ್ಕ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲ, ನೂತನ ಅಧ್ಯಕ್ಷರಾದ ಹರೀಶ್.ಕೆ.ಪೂಜಾರಿ, ನೂತನ ಪ್ರಧಾನ ಕಾರ್ಯದರ್ಶಿ ಜಗದೀಶ್‌ಚಂದ್ರ ಡಿ.ಕೆ ಹಾಗೂ ಯುವವಾಹಿನಿಯ 33 ಘಟಕಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ಕೊಂಬು ವಾದ್ಯಗಳ ಹಿಮ್ಮೇಳದ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಂಡು, ಶ್ರೀಯುತರು ನಡೆದ ಬಂದ ಹಾದಿಯ ರೂಪುರೇಷೆ ಸಾಧನಾ ಪರಿಚಯವನ್ನು ಸಾಕ್ಷ್ಯ ಚಿತ್ರದ ಮೂಲಕ, ಮೈಸೂರು ಪೇಟ, ಜರಿತಾರಿ ಶಾಲು, ಅತ್ಯಾಕರ್ಷಕ ಸ್ಮರಣಿಕೆ ಹಾಗೂ ಯುವ ಸಾಧನಾ ಪ್ರಶಸ್ತಿ 2023 ಪತ್ರ ನೀಡಿ ಗೌರವ ಆದರಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.