
25-09-2026, 8:00 PM
ಬಂಟ್ವಾಳ ಸೆ 25 : “ನಾರಾಯಣಗುರುಗಳು ಪ್ರತಿಪಾದಿಸಿದ ಅದ್ವೈತ ತತ್ವ ಕೇವಲ ವಿಚಾರದ ಮಟ್ಟದಲ್ಲಿ ಉಳಿಯದೆ, ‘ಮಾನವರು ಸಮಾನರು’ ಎಂಬ ಮಾನವೀಯ ಸಂದೇಶದ ರೂಪದಲ್ಲಿ ಸಮಾಜದಲ್ಲಿ ಅನುಷ್ಠಾನಗೊಂಡಿತು. ಮಾನವ ವಿಚಾರದಲ್ಲಿ ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸುವುದೇ ಧರ್ಮಗಳ ಮೂಲ ಆಶಯವಾಗಿದೆ. ಹಿಂದುಳಿದ ಸಮಾಜದಲ್ಲಿ ಆತ್ಮವಿಶ್ವಾಸ ಹಾಗೂ ಹೋರಾಟದ ಕಿಚ್ಚನ್ನು ಮೂಡಿಸಿ, ಸಾಮಾಜಿಕ ಪರಿವರ್ತನೆಗೆ ದಾರಿ ತೋರಿದ ಮಹಾನ್ ಚಿಂತಕರೇ ನಾರಾಯಣಗುರುಗಳು” ಎಂದು ಉಪನ್ಯಾಸಕ ಹರೀಶ್ ಎಸ್. ಕೋಟ್ಯಾನ್ ತಿಳಿಸಿದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಸದಸ್ಯರಾದ ಪ್ರಕಾಶ್ […]
Read More

18-09-2026, 8:00 PM
ಕಟ್ಟೆಮಾರ್, ಸೆ. 18: ಅಸಮಾನತೆ, ಅಜ್ಞಾನ, ಮೂಢನಂಬಿಕೆ ಹಾಗೂ ಸಾಮಾಜಿಕ ಅನ್ಯಾಯಗಳಿಂದ ಮನುಷ್ಯನಿಗೆ ಮುಕ್ತಿ ದೊರೆಯುವುದೇ ನಿಜವಾದ ಸ್ವಾತಂತ್ರ್ಯ ಎಂಬ ವಿಶಾಲ ಚಿಂತನೆಗೆ ಶ್ರೀ ನಾರಾಯಣಗುರುಗಳು ತಮ್ಮ ಜೀವನದ ಮೂಲಕ ದಾರಿ ತೋರಿಸಿದರು ಎಂದು ಬರಹಗಾರ್ತಿ ಅರ್ಚನಾ ಎಂ. ಬಂಗೇರ ಹೇಳಿದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ, ಮನೋಜ್ ಕಟ್ಟೆಮಾರ್ ಅವರ ಸಾನಿಧ್ಯದಲ್ಲಿ ನಡೆದ ‘ಗುರುತತ್ವವಾಹಿನಿ’ ಮಾಲಿಕೆ–78ರಲ್ಲಿ ಗುರುಸಂದೇಶ ನೀಡಿದ ಅವರು, ನಾರಾಯಣಗುರುಗಳ ಚಿಂತನೆಗಳು ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗಿವೆ ಎಂದರು. ಶಿಕ್ಷಣದಿಂದ […]
Read More

09-09-2026, 8:00 PM
ದಡ್ಡಲಕಾಡು ಸೆ 09 : ನಾರಾಯಣಗುರುಗಳ ಸಂದೇಶಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಸಮಾಜದಲ್ಲಿ ಗುರುತತ್ವದ ಅರಿವು ಮೂಡಿಸುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯವಾಗಿದೆ. ದಾಸ ಪರಂಪರೆಯ ಭಜನಾ ಸಂಕೀರ್ತನೆಯ ಮೂಲಕ ಗುರುತತ್ವವಾಹಿನಿ ಕಾರ್ಯಕ್ರಮವು ಅದ್ಭುತ ಯಶಸ್ಸು ಕಂಡಿದೆ ಎಂದು ಸಜಿಪಮೂಡ ಈಶ್ವರಮಂಗಲ ಸದಾಶಿವ ದೇವಸ್ಥಾನದ ಅಧ್ಯಕ್ಷ ಗಿರೀಶ್ ಪೆರ್ವ ಹೇಳಿದರು.ಅವರು ಸೆಪ್ಟೆಂಬರ್ 9ರಂದು ದಡ್ಡಲಕಾಡು ದೇವೀನಗರದ ಚೈತ್ರಾ ವಿಠ್ಠಲ ಪೂಜಾರಿ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ–77ರಲ್ಲಿ ಗುರುಸಂದೇಶ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ […]
Read More

01-09-2026, 8:30 PM
ಸಜಿಪ, ಸೆಪ್ಟೆಂಬರ್ 1 : ಬ್ರಹ್ಮಶ್ರೀ ನಾರಾಯಣಗುರುಗಳು ಅಜ್ಞಾನ, ಅಸಮಾನತೆ ಹಾಗೂ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿ, ಜ್ಞಾನ, ಸಮಾನತೆ ಮತ್ತು ಮಾನವೀಯತೆಯ ಬೆಳಕನ್ನು ಸಮಾಜಕ್ಕೆ ನೀಡಿದ ಮನುಕುಲದ ದಿವ್ಯಜ್ಯೋತಿಯಾಗಿದ್ದಾರೆ ಎಂದು ಬರಹಗಾರ್ತಿ ಹಾಗೂ ನಿರೂಪಕಿ ರೇಣುಕಾ ಕಣಿಯೂರು ಹೇಳಿದರು. ಸಜಿಪ ದೇರಾಜೆಯ ಗಾಯತ್ರಿ ದಿನೇಶ್ ಪೂಜಾರಿ ಅವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ‘ಗುರುತತ್ವವಾಹಿನಿ’ 76ನೇ ಮಾಲಿಕೆಯಲ್ಲಿ ಗುರುಸಂದೇಶ ನೀಡಿದ ಅವರು, ನಾರಾಯಣಗುರುಗಳು ಶಿಕ್ಷಣವೇ ಸಾಮಾಜಿಕ ಪ್ರಗತಿಯ ಪ್ರಮುಖ ಸಾಧನವೆಂದು ಸಾರಿದ್ದರು. ಜ್ಞಾನ, […]
Read More

28-08-2026, 8:00 PM
ಸಜಿಪ, ಆಗಸ್ಟ್ 27 : “ಜ್ಞಾನದ ಬೆಳಕು ಜಗತ್ತಿನ ಬೆಳಕು” ಎಂದು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು, ಶಿಕ್ಷಣದ ಮೂಲಕ ಅಜ್ಞಾನ, ಅಂಧಕಾರ ಹಾಗೂ ಅಸಮಾನತೆಯನ್ನು ದೂರಮಾಡುವ ಮಾರ್ಗವನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಜ್ಞಾನದಿಂದ ವ್ಯಕ್ತಿಯ ಉನ್ನತಿಯೊಂದಿಗೆ ಸಮಾಜದ ಪ್ರಗತಿಯೂ ಸಾಧ್ಯವಾಗುತ್ತದೆ. ಆದ್ದರಿಂದ ನಾರಾಯಣ ಗುರುಗಳ ಜ್ಞಾನ ಮತ್ತು ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವವಾಹಿನಿ (ರಿ.) ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಕುಸುಮಾಕರ ಕುಂಪಲ ತಿಳಿಸಿದರು. ಅವರು ಸಜಿಪ ಬ್ರಹ್ಮಶ್ರೀ ನಾರಾಯಣಗುರು ಜ್ಞಾನ ಮಂದಿರದಲ್ಲಿ […]
Read More

28-08-2026, 10:00 AM
ಬಂಟ್ವಾಳ ಅಗಸ್ಟ್ 28 : ಬ್ರಹ್ಮಶ್ರೀ ನಾರಾಯಣಗುರುಗಳು ಸಾರಿದ ಸಮಾನತೆ ಹಾಗೂ ಮಾನವ ಧರ್ಮದ ಪರಿಪಾಲನೆಯ ಮೂಲಕ ಸಮಾಜದಲ್ಲಿದ್ದ ಅಸ್ಪೃಶ್ಯತೆ ಮತ್ತು ಜಾತಿಭೇದಗಳನ್ನು ಹೋಗಲಾಡಿಸುವ ಮಹತ್ವದ ಕಾರ್ಯವನ್ನು ಮಾಡಿದರು ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ಹೇಳಿದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ‘ಗುರುಸ್ಮರಣೆ’ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಅವರು ಮಾತನಾಡಿದರು. ನಾರಾಯಣಗುರುಗಳ ತತ್ವ, ಆದರ್ಶ ಹಾಗೂ ಮಾನವೀಯ ಸಂದೇಶಗಳು ಇಂದಿಗೂ […]
Read More

20-08-2026, 8:00 PM
ಬಿ.ಸಿ.ರೋಡು : ನಾರಾಯಣ ಗುರುಗಳು ಯಾವುದೇ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಜಾತಿ-ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವುದು ಅವರ ಆಶಯವಾಗಿತ್ತು. ಸಂಘಟನೆಯಿಲ್ಲದೆ ಯಾವುದೇ ಸಮುದಾಯದ ಪ್ರಗತಿ ಸಾಧ್ಯವಿಲ್ಲ ಎಂಬುದು ನಾರಾಯಣ ಗುರುಗಳ ಸಂದೇಶವಾಗಿತ್ತು ಎಂದು ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ ಹೇಳಿದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ನಡೆದ ಗುರುತತ್ವವಾಹಿನಿ ಮಾಲಿಕೆ 74 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಘಟನೆ ಹಾಗೂ ಸಾಮೂಹಿಕ ಪ್ರಯತ್ನಗಳ ಮೂಲಕ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಮತ್ತಷ್ಟು ವೇಗ […]
Read More

16-08-2026, 3:00 PM
ಬಂಟ್ವಾಳ ಅಗಸ್ಟ್ 16: ಯುವವಾಹಿನಿ (ರಿ.) ಬಂಟ್ವಾಳ ಘಟಕದ ಪ್ರತಿಷ್ಠಿತ“ಆಟಿ ಡೊಂಜಿ ಕೂಟ” ದ ಸಮಾರೋಪ ಸಮಾರಂಭವು ಜನಪದ ನೃತ್ಯ ವೈಭವ, ಚೆನ್ನಮಣೆ ಸ್ಪರ್ಧೆ ಹಾಗೂ ಪ್ರತಿಭಾ ಪುರಸ್ಕಾರಗಳೊಂದಿಗೆ ಸಂಭ್ರಮದಿಂದ ನಡೆಯಿತು. ಸಮಾರೋಪದ ಅಂಗವಾಗಿ ನಡೆದ ಜನಪದ ನೃತ್ಯ ವೈಭವ ಪ್ರೇಕ್ಷಕರ ಗಮನ ಸೆಳೆಯಿತು. ಬಂಟ್ವಾಳ ತಾಲೂಕಿನ ವಿವಿಧ ಬಿಲ್ಲವ ಸಂಘಗಳ ತಂಡಗಳು ವೈವಿಧ್ಯಮಯ ಜನಪದ ನೃತ್ಯ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸ್ಪರ್ಧೆಯಲ್ಲಿ ಬೈದಶ್ರೀ ಬಿಲ್ಲವ ಸಂಘ, ಬಡೆಕೊಟ್ಟು–ಮಣಿನಾಲ್ಕೂರು ತಂಡ ಪ್ರಥಮ ಸ್ಥಾನ, ಬ್ರಹ್ಮಶ್ರೀ […]
Read More

16-08-2026, 11:00 AM
ಬಂಟ್ವಾಳ, ಆಗಸ್ಟ್ 16: “ಯುವವಾಹಿನಿ ಕೇವಲ ಒಂದು ಸಂಘಟನೆಯಲ್ಲ; ಅದು ಯುವಶಕ್ತಿಯನ್ನು ಸಮಾಜಸೇವೆಯ ಶಕ್ತಿಯಾಗಿ ಪರಿವರ್ತಿಸುತ್ತಿರುವ ಒಂದು ಚಳವಳಿ. ಯುವಕರನ್ನು ಒಗ್ಗೂಡಿಸಿ ಶಿಕ್ಷಣ, ಆರೋಗ್ಯ, ಸಮಾಜಸೇವೆ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯವಾಗಿದೆ. ಯುವವಾಹಿನಿ ಯುವ ಜನಾಂಗದ ಕಣ್ಮಣಿಯಾಗಿ, ಸಮಾಜದ ಆಶಾಕಿರಣವಾಗಿ ಬೆಳೆದು ನಿಂತಿದೆ” ಎಂದು ಉದ್ಯಮಿ ಪ್ರಕಾಶ್ ಕುಂಪಲ ಹೇಳಿದರು. ಅವರು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಬಿ.ಸಿ.ರೋಡ್ನ ನಾರಾಯಣಗುರು ಸಭಾಭವನದಲ್ಲಿ ನಡೆದ […]
Read More

15-08-2026, 9:25 AM
ಬಂಟ್ವಾಳ, ಆಗಸ್ಟ್ 15: ಸ್ವಾತಂತ್ರ್ಯವೆಂದರೆ ಕೇವಲ ಪರಕೀಯ ಆಡಳಿತದಿಂದ ಮುಕ್ತಿ ಹೊಂದುವುದಲ್ಲ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು, ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸುವುದು, ಪರಿಸರವನ್ನು ಕಾಪಾಡುವುದು, ಸಾಮಾಜಿಕ ಸಾಮರಸ್ಯವನ್ನು ಬೆಳೆಸುವುದು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಭಾರತವನ್ನು ನಿರ್ಮಿಸುವುದೇ ನಿಜವಾದ ದೇಶಭಕ್ತಿ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾದ ಜಯಪ್ರಕಾಶ್ ಜೆ. ಎಸ್. ಹೇಳಿದರು. ಅವರು ಆಗಸ್ಟ್ 15ರಂದು ಯುವವಾಹಿನಿ (ರಿ.) ಬಂಟ್ವಾಳ ಘಟಕ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ […]
Read More