14-09-2025, 5:29 PM
ದಿನಾಂಕ 23.08.2025 ರಂದು ಅನುದಾನಿತ ಕಳುವಾರು ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ, ಚೇಳ್ಯಾರು ಕಾಲೊನಿ ಇಲ್ಲಿ ಘಟಕದ ವತಿಯಿಂದ ವನಮಹೋತ್ಸವ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಘಟಕದ ಹಲವು ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಅನೇಕ ಸಸಿಗಳನ್ನು ವಿದ್ಯಾರ್ಥಿಗಳು, ಘಟಕದ ಅಧ್ಯಕ್ಷರು, ಸದಸ್ಯರು ಹಾಗೂ ಅಧ್ಯಾಪಕರೆಲ್ಲರೂ ಸೇರಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅದೇ ಸಂಧರ್ಭದಲ್ಲಿ ಅಧ್ಯಾಪಕರಿಗೆ ಹಾಗೂ […]
Read More
13-08-2025, 2:33 PM
ಯುವವಾಹಿನಿ (ರಿ) ಸುರತ್ಕಲ್ ಘಟಕ ಮಹಿಳಾ ದಿನಾಚರಣೆ 11/03/2025 ರಂದು ಮಹಿಳಾ ಮಂಡಲ ಸುರತ್ಕಲ್ ಇಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯಾದ ಶ್ರೀಮತಿ ಅನುರಾಧ ರಾಜೀವ್ ಇವರನ್ನು ಸನ್ಮಾನಿಸಲಾಯಿತು. ನಂತರ ಇವರು ಮಾತನಾಡಿ ಸಂಸಾರವೆಂಬ ಸಾಗಿಸಿ ಸುರಕ್ಷಿತವಾಗಿ ದಡ ತಲುಪಿಸುವ ಪ್ರತೀಯೊಂದು ಹೆಣ್ಣು ಮಗಳೂ ಕೂಡಾ ಸರ್ವ ಶ್ರೇಷ್ಠಳೆ ಎಂದು ತಿಳಿಸಿದರು. ಅದೇ ರೀತಿ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂಧರ್ಭದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಬಗೆಗೆ ಮಾಹಿತಿ ನೀಡುವ […]
Read More
14-07-2025, 3:40 AM
ಯುವವಾಹಿನಿ (ರಿ) ಸುರತ್ಕಲ್ ಘಟಕದ 2025 -26 ನೇ ಸಾಲಿನ ಪದಗ್ರಹಣ ‘ಸಾರಥ್ಯ- 2025’ ಸಮಾರಂಭವು ದಿನಾಂಕ 19.01.2025 ರಂದು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಗೃಹ ಕುಳಾಯಿಯಲ್ಲಿ ನಡೆಯಿತು. ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೂಜೆಯ ಮುಖೇನಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅನಂತರ ಘಟಕದ ಸದಸ್ಯರ ನೃತ್ಯ ವೈವಿದ್ಯ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸ೦ಘ ಕುಳಾಯಿ ಯ ಮಾಜಿ ಉಪಾಧ್ಯಕ್ಷರಾದ ಚಂದ್ರಹಾಸ ಮೂಡುಬೆಟ್ಟು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ […]
Read More
22-09-2024, 4:24 AM
ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 170ನೇ ಜಯಂತಿಯ ಪ್ರಯುಕ್ತ ಶ್ರೀ ಗುರುಸ್ಮರಣೆ ಕಾರ್ಯಕ್ರಮವು ದಿನಾಂಕ 22-09-2024ರ ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00ರ ವರೆಗೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಕಾಟಿಪಳ್ಳದಲ್ಲಿ ನಡೆಯಿತು. ಬೆಳಿಗ್ಗೆ 8.30 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಂದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಜನಾ ಸ್ಪರ್ಧೆಯನ್ನು ಪ್ರಾರಂಭ ಮಾಡಲಾಯಿತು. ತೀರ್ಪುಗಾರರಾಗಿ ಶ್ರೀ ದೀನ್ ರಾಜ್ ಪೆರ್ಮುದೆ ಮತ್ತು ಕುಮಾರಿ ವೈಶಾಲಿ ಡಿ ಬಂಗೇರ ಉಡುಪಿ […]
Read More
05-08-2024, 1:00 PM
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 05-08-2024ರ ಸೋಮವಾರದಂದು ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ವಿಜಯ್ .ಎಸ್. ಕುಕ್ಯಾನ್ ರವರ ಸಂಚಾಲಕತ್ವದಲ್ಲಿ ಯುವವಾಹಿನಿ ಸಾಪ್ತಾಹಿಕ ಸಂಕೀರ್ತನಾ ಸರಣಿ ಕಾರ್ಯಕ್ರಮ ನಡೆಯಿತು. ಯುವವಾಹಿನಿ (ರಿ) ಸುರತ್ಕಲ್ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಸಾಪ್ತಾಹಿಕ ಸಂಕೀರ್ತನಾ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಹಾರ್ಮೋನಿಯಂ ಶ್ರೀ ಯುವರಾಜ್ ಬೊಳ್ಳಾಜೆ ನುಡಿಸಿದರು. ಮಂಗಳೂರು ಘಟಕದ ಅಧ್ಯಕ್ಷರಾದ ನಾಗೇಶ್ ರವರು ಸಾಪ್ತಾಹಿಕ ಸಂಕೀರ್ತನೆಯಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು. ದೇವರ ಆಶೀರ್ವಾದ […]
Read More
12-05-2024, 3:48 PM
ಮಂಗಳೂರು: ಯುವವಾಹಿನಿ(ರಿ.) ಸುರತ್ಕಲ್ ಘಟಕದ ವತಿಯಿಂದ ದಿನಾಂಕ 12-05-2024 ರಂದು ಭಾನುವಾರ ಒಂದು ದಿನದ ಕಿರು ಪ್ರವಾಸವನ್ನು ಬ್ರಹ್ಮವರದ ರಿಲ್ಯಾಕ್ಸ್ ಲೇಸರ್ ಪಾರ್ಕ್ ಗೆ ಹಮ್ಮಿಕೊಳ್ಳ ಲಾಗಿತ್ತು. ಬಿಡುವಿಲ್ಲದ ಜೀವನದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ರಿಲ್ಯಾಕ್ಸ್ ಲೇಸರ್ ಪಾರ್ಕಿನಲ್ಲಿ ರೋಮಾಂಚನಕಾರಿಯಾಗಿ ಸಮಯ ಕಳೆಯಲು, ಮುಂಜಾನೆ 6 ಗಂಟೆಗೆ ಸುರತ್ಕಲ್ ನಿಂದ ಬಸ್ಸು ತೆರಳಿತು. ಸದಸ್ಯರೆಲ್ಲರ ಪರಿಚಯದೊಂದಿಗೆ ಪ್ರಯಾಣ ಶುರು ಮಾಡಿ, ಮೊದಲಿಗೆ ಕಾಪು ಮಾರಿಯಮ್ಮ ದೇಗುಲ ದರ್ಶನದೊಂದಿಗೆ ಪಯಣ ಮುಂದುವರೆಸಿ, ಉಡುಪಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದೇವರ […]
Read More
07-01-2024, 10:00 AM
ಸುರತ್ಕಲ್: ಯುವಜನತೆಗೆ ದಿನನಿತ್ಯದ ಬದುಕಿನ ಬಾಳ ಬುಟ್ಟಿಯಲ್ಲಿ ನಾರಾಯಣ ಗುರುವರ್ಯರ ಜೀವನಚರಿತ್ರೆಯ ಆದರ್ಶ ಸಂದೇಶಗಳು ದಾರಿದೀಪವಾಗಿರಬೇಕು ಹಾಗೂ ಪರರಿಗೆ ಸದಾ ಒಳಿತನ್ನು ಬಯಸುವಂತಿರಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಪದವಿಪೂರ್ವ ಕಾಲೇಜು ಕಾಟಿಪಳ್ಳದ ಪ್ರಾಂಶುಪಾಲರಾದ ಉಮೇಶ್ ಎಂ. ಕರ್ಕೇರರರು ಹೇಳಿದರು. ಅವರು ಯುವವಾಹಿನಿ(ರಿ.) ಸುರತ್ಕಲ್ ಘಟಕದ 2023-2024ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವನ್ನು ದಿನಾಂಕ 07-01-2024 ರಂದು ದೇವಾಡಿಗ ಸಭಾಭವನ ಹೊಸಬೆಟ್ಟುವಿನಲ್ಲಿ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷರಾದ ತಾರ ಅಶೋಕ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. […]
Read More
18-12-2022, 3:40 PM
ಮಂಗಳೂರು:- ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್ ಲಿಮಿಟೆಡ್ (ಎಂಸಿಎಫ್), ಪಣಂಬೂರು ಸಾರಥ್ಯದಲ್ಲಿ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ ದೇರಳಕಟ್ಟೆ, ಧೂಮಾವತಿ ಫ್ರೆಂಡ್ಸ್ ಸರ್ಕಲ್ ಕೃಷ್ಣಾಪುರ ಮತ್ತು ಯುವವಾಹಿನಿ ಸುರತ್ಕಲ್ ಘಟಕದ ಸಹಯೋಗದಲ್ಲಿ ದಿನಾಂಕ 18 ಡಿಸೆಂಬರ್ ಭಾನುವಾರದಂದು ನೇತ್ರ ತಪಾಸಣಾ ಉಚಿತ ಶಿಬಿರ ನಡೆಯಿತು. ಎಂಸಿಎಫ್‌ನ ಸಿಎಂ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಸಾರಾಳ ಧೂಮಾವತಿ ದೈವಸ್ಥಾನ ಅಧ್ಯಕ್ಷ ಹರೀಶ್ ಸುವರ್ಣ ಶಿಬಿರವನ್ನು ಉದ್ಘಾಟಿಸಿದರು. ಧೂಮಾವತಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅರುಣ್ ಅಂಚನ್, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ […]
Read More
27-07-2022, 4:43 PM
ಸುರತ್ಕಲ್ :- ಯುವವಾಹಿನಿ ಸುರತ್ಕಲ್ ವತಿಯಿಂದ 27 ಜುಲೈ 2022 ರಂದು ‘ಹಾವು- ನಾವು- ಪರಿಸರ’ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಯಿತು. ಸ್ನೇಕ್‌ಕಿರಣ್ ಕಾರ್ಯಕ್ರಮ ನಡೆಸಿಕೊಟ್ಟರು. ಸ್ನೇಕ್‌ಕಿರಣ್‌ರವರು ಪರಿಸರದ ಬಗೆಗೆ ಅರಿವು ಮೂಡಿಸಿ, ಪರಿಸರದಲ್ಲಿ ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳ ಪಾತ್ರ, ಪರಿಸರವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವ ಕ್ರಿಮಿಕೀಟಗಳು ಯಾವ ರೀತಿಯ ಪಾತ್ರವಹಿಸಿಕೊಂಡಿರುತ್ತದೆ ಎಂಬುವುದನ್ನು ತಿಳಿಸಿಕೊಟ್ಟರು. ಹಲವಾರು ವಿಧಗಳ ಹಾವುಗಳ ಬಗೆಗೆ ಪರಿಚಯ ಮಾಡಿಸಿ, ಅವುಗಳ ಸಂತಾನೋತ್ಪತ್ತಿ ಯಾವ ರೀತಿಯಾಗಿರುತ್ತದೆ ಮತ್ತು ಮನುಷ್ಯನಿಗೆ ಕಚ್ಚಿದಲ್ಲಿ ಯಾವ ರೀತಿಯ ಪರಿಣಾಮವಾಗಬಹುದು ಎಂಬುವುದನ್ನು […]
Read More