ಯುವವಾಹಿನಿ (ರಿ) ಸುರತ್ಕಲ್ ಘಟಕ
ಮಹಿಳಾ ದಿನಾಚರಣೆ
11/03/2025 ರಂದು ಮಹಿಳಾ ಮಂಡಲ ಸುರತ್ಕಲ್ ಇಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯಾದ ಶ್ರೀಮತಿ ಅನುರಾಧ ರಾಜೀವ್ ಇವರನ್ನು ಸನ್ಮಾನಿಸಲಾಯಿತು. ನಂತರ ಇವರು ಮಾತನಾಡಿ ಸಂಸಾರವೆಂಬ ಸಾಗಿಸಿ ಸುರಕ್ಷಿತವಾಗಿ ದಡ ತಲುಪಿಸುವ ಪ್ರತೀಯೊಂದು ಹೆಣ್ಣು ಮಗಳೂ ಕೂಡಾ ಸರ್ವ ಶ್ರೇಷ್ಠಳೆ ಎಂದು ತಿಳಿಸಿದರು. ಅದೇ ರೀತಿ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂಧರ್ಭದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಬಗೆಗೆ ಮಾಹಿತಿ ನೀಡುವ ಸಣ್ಣ ಪ್ರಹಸನ ವನ್ನು ಮಹಿಳಾ ಸದಸ್ಯರು ನೀಡುವುದರ ಮೂಲಕ ಜಾಗೃತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಘಟಕದ ಸರ್ವ ಸದಸ್ಯರು ಕೂಡಾ ಭಾಗವಹಿಸಿದ್ದರು. ಶ್ರೀಮತಿ ಮಾಲತಿ ಪದ್ಮನಾಭ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಸ್ವಾತಿ ದೀಪಕ್ ರವರು ವಂದನಾರ್ಪಣೆ ಮಾಡಿದರು. ಶ್ರೀಮತಿ ಗಾಯತ್ರಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು.


