16-11-2016, 11:29 AM
ಪುತ್ತೂರು ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಯ 161 ನೇ ಜನ್ಮದಿನಾಚರಣೆಯ ಪ್ರಯುಕ್ತ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಉಚಿತವಾಗಿ 6 ಫ್ಯಾನ್ಗಳನ್ನು 16-09-2016 ರಂದು ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು. ದಿನಾಂಕ 3-11-2016 ರಂದು ಪುತ್ತೂರು ಘಟಕದ ವತಿಯಿಂದ ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾದ ಯಕ್ಷಿತ್ನ ಮನೆಗೆ ತೆರಳಿ ರೂ. 5,000/-ದ ಮೊತ್ತದ ಚೆಕ್ಕನ್ನು ವಿತರಿಸುತ್ತಿರುವುದು. ಈ ಸಂದರ್ಭದಲ್ಲಿ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ನಿಕಟಪೂರ್ವ ಅಧ್ಯಕ್ಷ ಶಶಿಧರ ಕಿನ್ನಿಮಜಲು, ಕಾರ್ಯದರ್ಶಿ ಉದಯ ಕೋಲಾಡಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್, […]
Read More
10-11-2016, 10:26 AM
ಯುವವಾಹಿನಿ ಕಂಕನಾಡಿ ಘಟಕ ಆಶ್ರಯದಲ್ಲಿ ಘಟಕದ ಕ್ರಿಯಾಶೀಲ ಸದಸ್ಯರ ತಂಡವು ವೈವಿಧ್ಯಮಯವಾಗಿ ರಚಿಸಿದ ಗೂಡುದೀಪವು ನೀರುಮಾರ್ಗದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಯೋಜಿಸಿದ್ದ ಗೂಡು ದೀಪ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದಿರುತ್ತದೆ ಹಾಗೂ ನಮ್ಮ ಕುಡ್ಲ ವಾರ್ತಾ ವಾಹಿನಿಯು ಆಯೋಜಿಸಿದ್ದ ಗೂಡುದೀಪ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿರುತ್ತದೆ.
Read More
01-11-2016, 10:31 AM
ವಿದ್ಯೆಯು ಮಗುವಿಗೆ ಜ್ಞಾನ ಸಂಪಾದನೆಯ ಜೊತೆಗೆ ಬದುಕುವ ಕಲೆಯನ್ನು ಕಲಿಸುವ ಕಲೆಯಾಗಬೇಕು. ಅದೇ ರೀತಿ ಇಂದು ಮಕ್ಕಳಿಗೆ ಮೌಲ್ಯ ಶಿಕ್ಷಣದ ಅನಿವಾರ್ಯವಿದೆ. ಇದರ ಜೊತೆಗೆ ಕಲಿತ ಶಾಲೆ, ಶಿಕ್ಷಕರು, ತಾಯಿನಾಡಿನ ಬಗೆಗೆ ಗೌರವಾದರಣೆಯನ್ನು ಹೊಂದಬೇಕಾಗಿದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಪದ್ಮನಾಭ ಮರೋಳಿ ಹೇಳಿದರು. ಅವರು ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಪಡುಬಿದ್ರಿ ಇಲ್ಲಿ ನಡೆದ ಮಕ್ಕಳ ಹಬ್ಬ-2016 […]
Read More
01-11-2016, 5:50 AM
ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಕೋಲಾಡಿ ಬಟನ್ಸ್ ಮಾಲಕ ಉದಯ ಕುಮಾರ್ರವರು ಕೊಡುಗೆಯಾಗಿ ನೀಡಿದ ಸುಮಾರು 18,000 ರೂ. ವೆಚ್ಚದ ಟೆಬಲ್ಗಳನ್ನು ಪುತ್ತೂರು ಬಿಲ್ಲವ ಸಂಘಕ್ಕೆ ಹಸ್ತಾಂತರಿಸಲಾಯಿತು.
Read More
30-10-2016, 6:01 AM
ದಿನಾಂಕ 30-10-2016 ರಂದು ಮೂಲ್ಕಿ ಘಟಕದ ವತಿಯಿಂದ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ 14 ನೇ ವರ್ಷದ ತುಳುವೆರೆ ತುಡರ್ ಪರ್ಬ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಸಂಘ ಮುಲ್ಕಿ ಇದರ ಅಧ್ಯಕ್ಷ ಗೋಪಿನಾಥ ಪಡಂಗ, ಶ್ರೀ ಹೊಳೆ ಬದಿ ಮಸೀದಿ ಇದರ ಅಧ್ಯಕ್ಷ ಅಬ್ಬಾಸ್ ಹಾಜಿ, ರೋಟರಿ ವಿದ್ಯಾಸಂಸ್ಥೆ ಮೂಡಬಿದ್ರೆ ಇದರ ಪ್ರಾಂಶುಪಾಲರಾದ ವಿನ್ಸೆಂಟ್ ಡಿ’ ಕೋಸ್ತಾ ಭಾಗವಹಿಸಿದ್ದರು. ಅತಿಥಿ ಗಣ್ಯರೆಲ್ಲ ಸೇರಿ […]
Read More
30-10-2016, 5:28 AM
ದಿನಾಂಕ 30-10-2106 ರಂದು ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ನಮ್ಮ ಮನೆ ಹಬ್ಬ ದೀಪಾವಳಿ ಎಂಬ ವಿನೂತನ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವು ಘಟಕದ ಸದಸ್ಯ ಭಾಸ್ಕರ್ ಕೋಟ್ಯಾನ್ರವರ ಸಂಚಾಲಕತ್ವದಲ್ಲಿ ಅವರ ಮನೆಯಲ್ಲಿ ಘಟಕದ ಅಧ್ಯಕ್ಷ ಐ. ಸುಜಿತ್ರಾಜ್ ಹಾಗೂ ಸರ್ವಸದಸ್ಯರ ಉಪಸ್ಥಿತಿಯೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು. ಭಾಸ್ಕರ್ ಕೋಟ್ಯಾನ್ರವರ ಹೆತ್ತವರಾದ ಸದಾಶಿವ ಅಮೀನ್ ಮತ್ತು ಶ್ರೀಮತಿ ಜಾನಕಿ ಇವರ ಉಪಸ್ಥಿತಿಯಲ್ಲಿ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿತೇಶ್ ಎಕ್ಕಾರ್ ಇವರು ದೀಪಾವಳಿ ಹಬ್ಬದ […]
Read More
23-10-2016, 5:54 AM
ದಿನಾಂಕ 23-10-2016 ರಂದು ಕೂಳೂರು ಘಟಕದ ವತಿಯಿಂದ ಕೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಸಭಾಂಗಣದಲ್ಲಿ ಘಟಕದ ಸದಸ್ಯರಿಗಾಗಿ ಒಂದು ದಿನದ ಸಾರ್ವಜನಿಕ ಸಂವಹನ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ 2.30 ರ ತನಕ ಜರಗಿದ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜೇಸೀ ಅಂತಾರಾಷ್ಟ್ರೀಯ ತರಬೇತುದಾರ ರಾಮಚಂದ್ರ ರಾವ್ರವರು ಸದಸ್ಯರು ಸಭೆಯಲ್ಲಿ ಮಾತನಾಡುವಾಗ ಯಾವ ರೀತಿ ಪೂರ್ವ ತಯಾರಿ ಮಾಡಬೇಕು, ಯಾವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂಬ ವಿಷಯವನ್ನು ತಿಳಿಸಿದರು. ನಂತರ ೨೫ ಮಂದಿಯ ಗುಂಪನ್ನು ಎರಡು ತಂಡಗಳಾಗಿ ವಿಂಗಡಿಸಿ […]
Read More
23-10-2016, 5:38 AM
ಬೆಳಕಿನ ಒಂದು ಸೆಲೆ ಸಾಕು ಬದುಕಿನಲ್ಲಿ ಜೀವನೋತ್ಸಾಹ ತುಂಬಲು. ಹಣತೆಯ ಬೆಳಕಿನಲ್ಲಿ ಒಬ್ಬರ ಕಷ್ಟ, ನೋವು, ನಲಿವನ್ನು ಕ್ಷಣಕಾಲ ಕಂಡು ಅರ್ಥೈಸಿಕೊಳ್ಳಲು ಇದೊಂದು ಸದಾವಕಾಶ ಎನ್ನುವಂತೆ ಶ್ರೀಗುರು ವರ್ಯರ ಆಶೀರ್ವಾದದೊಂದಿಗೆ, ಕೂಳೂರು ಘಟಕದ ಆಶಯದಂತೆ ದೀಪಾವಳಿ ಹಬ್ಬದಂದು ಇಡೀ ಜಗತ್ತೇ ಬೆಳಕಿನಲ್ಲಿ ಜಗಮಗಿಸುವಾಗ ಕೆಲವೊಂದು ಮನೆಯಲ್ಲಿ ಹಣತೆ ಹಚ್ಚಲು ಸಾಧ್ಯವೇ ಇಲ್ಲ ಎನ್ನುವ ದಯನೀಯ ಕುಟುಂಬಗಳು ನಮ್ಮ ಸಮಾಜದಲ್ಲಿ ಇದ್ದಾವೆ. ಅಂಥವರನ್ನು ಗುರುತಿಸಿ ಅವರಿಗೆ ಒಂದು ತಿಂಗಳ ದಿನಬಳಕೆಯ ಎಲ್ಲಾ ಸಾಮಾಗ್ರಿಗಳನ್ನು ಒದಗಿಸಿಕೊಟ್ಟು ದೀಪಾವಳಿಯ ಅರ್ಥಪೂರ್ಣ ಆಚರಣೆಯಲ್ಲಿ […]
Read More
22-10-2016, 5:52 AM
ದಿನಾಂಕ 22-10-2016 ರಂದು ಕಂಕನಾಡಿ ಘಟಕದ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಗು ರಿಶಿತ್ ಕುಮಾರ್ ಅವರಿಗೆ ಧಾನಿಗಳ ಸಹಕಾರದಿಂದ ಒಟ್ಟು ಮಾಡಿದ ರೂ. 17,000/-ದ ಚೆಕ್ನ್ನು ಘಟಕಾಧ್ಯಕ್ಷರು ವಿತರಿಸುತ್ತಿರುವುದು.
Read More
05-10-2016, 5:48 AM
ದಿನಾಂಕ 5-10-2016 ರಂದು ಕೂಳೂರು ಘಟಕದ ವತಿಯಿಂದ ಕೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಸಭಾಂಗಣದಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಶಿಬಿರ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞರಾದ ಡಾ. ಸದಾನಂದ ಪೂಜಾರಿಯವರು ಭಾಗವಹಿಸಿ ಮೂತ್ರರೋಗಗಳ ಬಗ್ಗೆ, ಕಿಡ್ನಿ ವಿಫಲತೆಯ ಕಾರಣಗಳು ಹಾಗೂ ಮೂತ್ರರೋಗವನ್ನು ಯಾವ ರೀತಿಯಲ್ಲಿ ತಡೆಗಟ್ಟಬಹುದು ಎಂಬ ಸಂಪೂರ್ಣ ಅರಿವನ್ನು ಸಭೆಗೆ ನೀಡಿದರು. ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಸಂಜೀವ ಪೂಜಾರಿಯವರನ್ನು ಸಭೆಯಲ್ಲಿ ವಂದಿಸಲಾಯಿತು. ಆರೋಗ್ಯ […]
Read More