ಪರಸ್ಪರ ಪ್ರೀತಿ, ವಿಶ್ವಾಸದ ಮೂಲಕ ಬಲಿಷ್ಠ ಸಮಾಜ ನಿರ್ಮಾಣದ ನಮ್ಮ ಹಿರಿಯರ ಕನಸು ಮಾಡುವಲ್ಲಿ ಯುವವಾಹಿನಿ ಕಳೆದ 30 ವರ್ಷಗಳಿಂದ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಹಿರಿಯ ಪತ್ರಕರ್ತರು ಹಾಗೂ ರಂಗ ನಿರ್ದೇಶಕರಾದ ಪರಮಾನಂದ ಸಾಲ್ಯಾನ್ ತಿಳಿಸಿದರು.
ದಿನಾಂಕ 24.09.2017 ರಂದು ಬೆಳುವಾಯಿ ಷಣ್ಮುಖಾನಂದ ಸಭಾಗೃಹದಲ್ಲಿ ಜರುಗಿದ ಯುವವಾಹಿನಿ (ರಿ) ಬೆಳುವಾಯಿ ಘಟಕದ 2017-18ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹೊಸ ಚಿಂತನೆಗಳು, ಕ್ರಿಯಾಶೀಲ ಯೋಜನೆ, ಯೋಚನೆಯ ಮೂಲಕ ಯುವವಾಹಿನಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದ ಯಶವಂತ ಪೂಜಾರಿ ತಿಳಿಸಿದರು.
ನಾಯಕತ್ವ ರೂಪಿಸುವುದು, ವ್ಯಕ್ತಿತ್ವದ ವಿಕಸನ ಯುವವಾಹಿನಿಯ ನಿರಂತರ ಪ್ರಕ್ರಿಯೆ ಎಂದು ಯುವವಾಹಿನಿ ಬೆಳುವಾಯಿ ಘಟಕದ ಸಲಹೆಗಾರರಾದ ಸಾಧು ಪೂಜಾರಿ ಅಭಿಪ್ರಾಯ ಪಟ್ಟರು.ಯುವವಾಹಿನಿ ಬೆಳುವಾಯಿ ಘಟಕದ ಅಧ್ಯಕ್ಷರಾದ ಪ್ರದೀಪ್ ಸುವರ್ಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಳುವಾಯಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ರಾಜೇಶ್ ಸುವರ್ಣ,ಯುವವಾಹಿನಿ ಬೆಳುವಾಯಿ ಘಟಕದ ಸ್ಥಾಪಕ ಅಧ್ಯಕ್ಷರಾದ ಸನ್ಮತ್ ಎನ್.ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಿಲ್ ಕೆ.ಅಂಚನ್,ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಕಾರ್ಯಕ್ರಮದ ಸಂಚಾಲಕರಾದ ಮಮತಾ ಜಯಂತ್, ಕಾರ್ಯದರ್ಶಿ ಶರತ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾದ ರವಿ ಬಂಗೇರ ಎಲ್ಲರ ಸಹಕಾರ ಯಾಚಿಸಿದರು, ಕಳೆದ ಒಂದು ವರ್ಷದಲ್ಲಿ ಯುವವಾಹಿನಿ ಬೆಳುವಾಯಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಪ್ರದೀಪ್ ಸುವರ್ಣ ಇವರನ್ನು ಅಭಿನಂದಿಸಲಾಯಿತು. ನೂತನ
ಜತೆ ಕಾರ್ಯದರ್ಶಿ ಸುರೇಖಾ ಚಂದ್ರಶೇಖರ್ ಸ್ವಾಗತಿಸಿದರುನೂತನ ಕಾರ್ಯದರ್ಶಿ ಅನೂಷಾ ಎಸ್.ಪೂಜಾರಿ ಧನ್ಯವಾದ ನೀಡಿದರು, ನಿತಿನ್ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.
All the best in new team beluvai CHAPTER
ನೂತನ ಪದಾಧಿಕಾರಿಗಳಳಿಗೆ ಅಭಿನಂದನೆಗಳು.
Lets work together for better tomarrow