ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಲ್ಲಿ ದೇಹದ ಸಮತೋಲನದಿಂದ ದಿನಪೂರ್ತಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಸೂಕ್ತ ವೈದ್ಯರಲ್ಲಿ ನಡೆಸಿಕೊಂಡು ರೋಗ ಬರುವ ಮೊದಲೇ ಆರೋಗ್ಯದ ಬಗ್ಗೆ ತಿಳಿದುಕೊಳ್ಳಿರಿ ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಸಮಿತಿಯ ಅಧಿಕಾರಿ ರಮೇಶ್ ಬಂಗೇರ ಹೇಳಿದರು.
ಅವರು ದಿನಾಂಕ 24.09.2017 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಯುವವಾಹಿನಿ ಹಳೆಯಂಗಡಿ ಘಟಕದ ಆಶ್ರಯದಲ್ಲಿ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ,ಲಯನ್ಸ್, ಲಿಯೋ ಮತ್ತು ಪೂಜಾ ಫ಼್ರೆಂಡ್ಸ್‌ನ ಹಾಗೂ ಮುಕ್ಕದ ಶ್ರೀನಿವಾಸ್ ಇನ್ಸ್‌ಸ್ಟಿಟ್ಯೂಟ್ ಆಫ಼್ ಡೆಂಟಲ್ ಸೈನ್ಸ್ ವಿಭಾಗ ಇದರ ಸಹಯೋಗದೊಂದಿಗೆ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು . ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಜಿ. ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ್ ಇನ್ಸ್‌ಸ್ಟಿಟ್ಯೂಟ್ ಆಫ಼್ ಡೆಂಟಲ್ ಸೈನ್ಸ್ ವಿಭಾಗದ ಡಾ.ವಿದ್ಯಾ ಭಟ್ ದಂತ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ವಾಸು ನಾಯಕ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಹಳೆಯಂಗಡಿ ಘಟಕದ , ಕಾರ್ಯದರ್ಶಿ ಚಂದ್ರಿಕಾ ಕೋಟ್ಯಾನ್, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಕುಡ್ಪಿ ಅರವಿಂದ ಶೆಣೈ , ಪೂಜಾ ಫ಼್ರೆಂಡ್ಸ್‌ನ ಗೌರವಾಧ್ಯಕ್ಷ ಕೃಷ್ಣ ಕೋಟ್ಯಾನ್, ಅಧ್ಯಕ್ಷ ನಾಗರಾಜ್ ಕುಲಾಲ್, ಮತ್ತಿತರರು ಉಪಸ್ಥಿತರಿದ್ದರು. ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಹಿಮಕರ್ ಸುವರ್ಣ ಸ್ವಾಗತಿಸಿ, ನಿರೂಪಿಸಿದರು. ಯುವವಾಹಿನಿ ಹಳೆಯಂಗಡಿ ಘಟಕದ ಅಧ್ಯಕ್ಷರಾದ ಶರತ್ ಕುಮಾರ್ ವಂದಿಸಿದರು.