ಯುವವಾಹಿನಿ (ರಿ) ಬೆಳುವಾಯಿ ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ರವಿ ಬಂಗೇರ ಆಯ್ಕೆಯಾದರು. ದಿನಾಂಕ 24.09.2017 ರಂದು ಬೆಳುವಾಯಿ ಷನ್ಮುಖಾನಂದ ಸಭಾಗೃಹದಲ್ಲಿ ಜರುಗಿದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಕಾರ್ಯದರ್ಶಿಯಾಗಿ ಅನುಷಾ ಎಸ್.ಪೂಜಾರಿ, ಉಪಾಧ್ಯಕ್ಷರಾಗಿ ಶರತ್ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ಸುರೇಖಾ ಚಂದ್ರಶೇಖರ್, ಕೋಶಾಧಿಕಾರಿ ಯಾಗಿ ಅಶೋಕ್ ಕುಮಾರ್, ಸಂಘಟನಾ ಕಾರ್ಯದರ್ಶಿ ಯಾಗಿ ನಿತಿನ್ ಬೆಳುವಾಯಿ, ಸೂರಜ್ ಬೆಳುವಾಯಿ, ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರಾಗಿ ಸಂತೋಷ್ ನಿಡ್ಡೋಡಿ, ಸಂಜಯ್ ಪೂಜಾರಿ, ಸಮಾಜ ಸೇವಾ ನಿರ್ದೇಶಕರಾಗಿ ಮನೋಹರ್ ಬೆಳುವಾಯಿ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಸಚಿನ್ ಪೂಜಾರಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾಗಿ ಗಣೇಶ್ ಸುವರ್ಣ, ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ ರಾಜೇಶ್ ಪೂಜಾರಿ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಸುದೀಶ್ , ದಿವಾಕರ್ ಸನಿಲ್, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಮಮತಾ ಜಯಂತ್, ವಿದ್ಯಾನಿಧಿ ನಿರ್ದೇಶಕರಾಗಿ ಸನ್ಮತ್ ಎನ್.ಸುವರ್ಣ ಹಾಗೂ ವಿಠಲ ಎಮ್.ಪೂಜಾರಿ ಆಯ್ಕೆಯಾಗಿದ್ದಾರೆ