Yuvavahini

ಘಟಕಗಳು

ಪಡುಬಿದ್ರಿ : ಬ್ರಹ್ಮಶ್ರೀ ನಾರಾಯಣ ಗುರುವರ್ಯರ 164ನೇ ಜನ್ಮದಿನೋತ್ಸವ

ಪಡುಬಿದ್ರಿ : ಬ್ರಹ್ಮಶ್ರೀ ನಾರಾಯಣ ಗುರುವರ್ಯರ 164ನೇ ಜನ್ಮದಿನೋತ್ಸವವು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ 27-08-2018 ರಂದು ನಡೆಯಿತು. ಶ್ರೀ ನಾರಾಯಣ ಗುರುಮೂರ್ತಿಯ ಶೋಭಾಯಾತ್ರೆಯು ಯುವವಾಹಿನಿ (ರಿ) ಘಟಕದ ಮಾಜಿ ಕಾರ್ಯದರ್ಶಿ ಹಾಗೂ ಪ್ರಸ್ತುತ ಮಹಿಳಾ ಸಂಘಟನಾ ನಿರ್ದೇಶಕರಾದ ಶ್ರೀಮತಿ ಚಿತ್ರಾಕ್ಷಿ ಕೆ ಕೋಟ್ಯಾನ್ ಇವರ ಮನೆಯಿಂದ ಹೊರಡಿತು. ಮಹಾಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಡುಬಿದ್ರಿ ಘಟಕದ ಸದಸ್ಯೆ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ ಕುಮಾರಿ ಶ್ರಾವ್ಯ ರವಿರಾಜ್ ಇವರನ್ನು ಸನ್ಮಾನಿಸಲಾಯಿತು. ಈ […]

Read More

ಬ್ರಹ್ಮ ಶ್ರೀ ನಾರಾಯಣ ಗುರುಗಳ 164ನೇ ಜನ್ಮ ದಿನಾಚರಣೆ

ಮಾಣಿ : ಯುವವಾಹಿನಿ (ರಿ.)ಮಾಣಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆಯನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.ಇದರ ಉಧ್ಘಾಟನೆಯನ್ನು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಮತ ಶೆಟ್ಟಿÀ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಯುವವಾಹಿನಿ(ರಿ.) ಮಾಣಿ ಘಟಕದ ಅಧ್ಯಕ್ಷರಾದ ರಾಜೇಶ್ ಪೂಜಾರಿ ಬಾಬನಕಟ್ಟೆ ಯವರು ವಹಿಸಿಕೊಂಡು ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು . ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ(ರಿ.) ಮಾಣಿ […]

Read More

ಕೊಲ್ಯ : ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 164 ನೇ ಜನ್ಮ ಜಯಂತ್ಯುತ್ಸವ ಆಚರಣೆ

ಕೊಲ್ಯ : ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಸೋಮೇಶ್ವರ, ಯುವವಾಹಿನಿ (ರಿ) ಕೊಲ್ಯ ಘಟಕ ಹಾಗೂ ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಇದರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 164 ನೇ ಜನ್ಮ ಜಯಂತ್ಯುತ್ಸವ ಆಚರಣೆ ಕೇರಳದಲ್ಲಿ ಸಾಕ್ಷರತೆ ಇಂದು ನೆಲೆಯೂರಲು ಬ್ರಹ್ಮ ಶ್ರೀ ನಾರಾಯಣ ಗುರುಗಳು ಜನಸಾಮಾನ್ಯರಿಗೆ ನೀಡಿದ ಜ್ಞಾನವೇ ಕಾರಣವಾಗಿದೆ.ಜನರಲ್ಲಿ ಆಧ್ಯಾತ್ಮದ ಚಿಂತನೆ ಮೂಡಿಸುತ್ತಾ ದೇವರ ಭಯದೊಂದಿಗೆ ಜ್ಞಾನವನ್ನು ಮೂಡಿಸಿದ ಮಹಾತ್ಮರು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. […]

Read More

ಬ್ರಹ್ಮಶ್ರೀ ನಾರಯಣ ಗುರು ಜಯಂತಿ ಆಚರಣೆ

ಅಡ್ವೆ : ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ದಿನಾಂಕ 27/8/2018 ರಂದು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬ್ರಹ್ಮಶ್ರೀ ನಾರಯಣ ಗುರುಗಳ 164 ನೇ ಜಯಂತಿಯನ್ನು ಭಜನಾ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಈ ಭಜನಾ ಕಾರ್ಯಕ್ರಮವನ್ನು ಘಟಕದ ಸದಸ್ಯರು ಹಾಗೂ ಶ್ರೀ ಅಮೃತವರ್ಷಿಣಿ ಮಹಿಳಾ ವೃಂದದ ಸದಸ್ಯರು ಸೇರಿ ನಡೆಸಿಕೊಟ್ಟರು. ತದನಂತರ ಪ್ರತೀ ವರ್ಷ ಬ್ರಹ್ಮಶ್ರೀ ನಾರಯಣ ಗುರು ಜಯಂತಿಯಂದು ನಡೆಸಿಕೊಂಡು ಬರುತ್ತಿರುವ ಊರಿನ ಹಿರಿಯರೊಬ್ಬರಿಗೆ ಸಮರ್ಪಿಸುವ “ಗುರುವಂದನೆ” ಯನ್ನು ಈ ಬಾರಿ ಸುಮಾರು 50 […]

Read More

ಶ್ರೀ ನಾರಾಯಣಗುರು ಸಂದೇಶಯಾತ್ರೆ’

ಮಂಗಳೂರು : ದ. ಕ. ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯತು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣಾನಾಥ ಕ್ಷೇತ್ರದ ಸಹಯೋಗದೊಂದಿಗೆ ದಿನಾಂಕ 27 ಅಗೋಸ್ಟ್ 2018 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜನ್ಮ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವಾಹನ ಜಾಥಾ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ‘ಶ್ರೀ ನಾರಾಯಣಗುರು ಸಂದೇಶಯಾತ್ರೆ’ ವಾಹನ ಜಾಥಾ ಮೆರವಣಿಗೆಯನ್ನು ಮಂಗಳೂರಿನ ಉರ್ವಾಸ್ಟೋರ್ ನಲ್ಲಿರುವ ಯುವವಾಹಿನಿ ಕಛೇರಿಯ ಮುಂಭಾಗದಲ್ಲಿ ಕುದ್ರೋಳಿ […]

Read More

ಗುರುಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ,

ಕಂಕನಾಡಿ :  ಅಜ್ಞಾನ ವೆಂಬ ಕತ್ತಲನ್ನು ಹೋಗಲಾಡಿಸಿ ಸುಜ್ಞಾನವನ್ನು ನೀಡುವುದೇ ನಿಜವಾದ ಜ್ಞಾನ. ಅಂತಹ ಜ್ಞಾನವನ್ನು ಜಗತ್ತಿಗೆ ನೀಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಸಂದೇಶ, ತತ್ವಗಳು ನಮಗೆ ಸ್ಫೂರ್ತಿ ದಾಯಕ. ಗುರುಗಳ ತತ್ವಾದರ್ಶಗಳನ್ನು ಅನುಷ್ಠಾನಗೊಳಿಸಿ ಮಾನವ ಕುಲವನ್ನು ಉನ್ನತಿ ಯೆಡೆಗೆ ಸಾಗಿಸಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸ ದೊಂದಿಗೆ ಮಾನವ ಮೌಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಾಲಿಗ್ರಾಮ ಡಿವೈನ್ ಪಾರ್ಕ್ ಟ್ರಸ್ಟ್(ರಿ) ಇದರ ಪದಾಧಿಕಾರಿ ಡಿ.ಎಸ್. ಯಶವಂತ್ ತಿಳಿಸಿದರು. ಅವರು ದಿನಾಂಕ 27-08-2018ರ ಸೋಮವಾರ ದಂದು ಯುವವಾಹಿನಿ(ರಿ.) ಕಂಕನಾಡಿ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ […]

Read More

ಸಂಗೀತ ಕ್ಷೇತ್ರದ ಸಾಧಕಿ ಗ್ರೀಷ್ಮಾಇವರಿಗೆ ಅಭಿನಂದನೆ

ಬಜಪೆ : ಯುವವಾಹಿನಿ (ರಿ) ಬಜಪೆ ಘಟಕದ ಸದಸ್ಯರಾದ ಕುಮಾರಿ ಗ್ರೀಷ್ಮ ಇವರ ಸಂಗೀತ ಕ್ಷೇತ್ರದ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ದಿನಾಂಕ 27.08.2018 ರಂದು ಬ್ರಹ್ಮಶ್ರೀ ನಾರಾಯಣಗುರುವರ್ಯರ ೧೬೪ ನೆೇ ಜನ್ಮ ದಿನಾಚರಣೆಯು ಶುಭ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಪೆರ್ಮುದೆ ಇದರ ಆಶ್ರಯದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಪೆರ್ಮುದೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ನಾರಾಯಣ ಗುರುಗಳ ಚಿಂತನೆ ಹಾಗೂ ತತ್ವಾದರ್ಶ ಸಾರ್ವಕಲಿಕ ಸತ್ಯ : ಸಂದೀಪ್

ಬಂಟ್ವಾಳ: ಶೋಷಿತ ಕುಟುಂಬದಲ್ಲಿ ಹುಟ್ಟಿ ತನ್ನ ಪರಿಶ್ರಮದಿಂದಲೇ ಸಂತನಾಗಿ ಬೆಳೆದು ಸಮಾಜzಲ್ಲಿ ಬೇರೂರಿದ್ದ ಎಲ್ಲಾ ಅನಿಷ್ಠ ಪದ್ದತಿಗಳ ವಿರುದ್ದ ಅಹಿಂಸಾ ಮಾರ್ಗದಲ್ಲೇ ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಹಾಗೂ ತತ್ವಾದರ್ಶ ಸಾರ್ವಕಲಿಕ ಸತ್ಯ ಎಂದು ಪತ್ರಕರ್ತ ಸಂದೀಪ್ ಸಾಲ್ಯಾನ್ ಹೇಳಿದರು. ಅವರು ದಿನಾಂಕ 27.08.2018 ರಂದು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲೆಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುವರ್ಯರ 164 ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. […]

Read More

ಯುವವಾಹಿನಿ(ರಿ)ಕುಪ್ಪೆಪದವು ಘಟಕದ ವತಿಯಿಂದ ಗುರುವಂದನೆ

ಕುಪ್ಪೆಪದವು: ಯುವವಾಹಿನಿ(ರಿ) ಕುಪ್ಪೆಪದವು ಘಟಕದ ವತಿಯಿ0ದ ಗುರುವಂದನಾ ಕಾರ್ಯಕ್ರಮವು ದಿನಾ0ಕ 27/08/2018 ರ0ದು ನಾರಾಯಣ ಗುರು ಮ0ದಿರದಲ್ಲಿ ನೇರವೇರಿತು. ನಾರಾಯಣ ಗುರು ಪ್ರತಿಮೆಗೆ ಹೂ,ಪುಷ್ಪಗಳಿ0ದ ಅಲ0ಕರಿಸಿ,ಹಣ್ಣು ಹ0ಪಲು ನೈವೇದ್ಯವನ್ನು ಸಮರ್ಪಿಸಿ,ದೀಪವನ್ನು ಬೆಳಗಿಸಿ,ಆರತಿ ಎತ್ತಿ,ಸರಳ ಮ0ತ್ರೋಚ್ಛಾರದಿ0ದ ಅರ್ಚನೆಯನ್ನು ಪುರುಷೋತ್ತಮ್. ಕೆ.ಇವರ ಮಾರ್ಗದರ್ಶನದ ಮೂಲಕ ನೆರವೇರಿತು. ಈ ಕಾರ್ಯಕ್ರಮಕ್ಕೆ ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ,ಉಪಾಧ್ಯಕ್ಷರುರಾದ ಅಜೇಯ್ ಅಮೀನ್ ಇವರು ನೇತೃತ್ವವಹಿಸಿಕೊಂಡರು.ಅಲ್ಲದೆ ಹಿರಿಯರಾದ ಉಮೇಶ್ ಅಮೀನ್ ನಾಗ0ದಡಿ,ಲಿ0ಗಪ್ಪ ಕೋಟ್ಯಾನ್ ಹಾಗೂ ಎಲ್ಲಾ ಪದಾದಿಕಾರಿಗಳು,ಸದಸ್ಯರು, ಊರಿನ ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ […]

Read More

ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯತಿ ಆಚರಣೆ

ಸುಳ್ಯ : ಯುವವಾಹಿನಿ ಸುಳ್ಯ ಘಟಕ ಹಾಗೂ ಸುಳ್ಯ ತಾಲೂಕು ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯತಿಯನ್ನು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು. ಅದ್ಯಕ್ಷತೆಯನ್ನು ಸುಳ್ಯ ತಾಲೂಕು ಪಂಚಾಯತ್ ಅದ್ಯಕ್ಷ ಚನಿಯ ಕಲ್ತಡ್ಕ ವಹಿಸಿದ್ದರು.ಬೆಳ್ಳಾರೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕಾಂತಮಂಗಲ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು,ವೇದಿಕೆಯಲ್ಲಿ ಸುಳ್ಯ ನ.ಪಂ.ಅದ್ಯಕ್ಷೆ ಶೀಲಾವತಿಮಾಧವ,ಸುಳ್ಯ ತಾ ಬಿಲ್ಲವ ಸಂಘದ ಅದ್ಯಕ್ಷ ವಿಠಲದಾಸ್ ಬೆಳ್ಳಾರೆ,ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026 ಎಪ್ರಿಲ್ 19
ಸ್ಥಳ : ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ

ದಿನಾಂಕ : 2026 ಎಪ್ರಿಲ್ 19
ಸ್ಥಳ : ಸ್ಪರ್ಶ ಕಲಾ ಮಂದಿರ ಬಿ.ಸಿ.ರೋಡ್

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಡೆನ್ನಾನ ಡೆನ್ನನ 2026

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!